ಭಾರತದ ನೌಕಾಪಡೆಗೆ ಈಗ ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗು ಐಎನ್‌ಎಸ್ ಧ್ರುವ್ ಬಲ, ಅಮೆರಿಕ-ರಷ್ಯಾ ಸೇರಿ ಐದು ದೇಶಗಳ ಪಟ್ಟಿಗೆ ಸೇರ್ಪಡೆ..!

ನವದೆಹಲಿ: ಭಾರತದ ಮೊದಲ ಉಪಗ್ರಹ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಟ್ರ್ಯಾಕಿಂಗ್ ಹಡಗು – ಐಎನ್‌ಎಸ್ ಧ್ರುವ್ ಅನ್ನು ಭಾರತೀಯ ನೌಕಾಪಡೆಯು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನೌಕಾಪಡೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) … Continued

ಕೋವಿಡ್‌ ಭೀತಿ: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ರದ್ದು

ಇಂದಿನಿಂದ ಆರಂಭವಾಗಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶುಕ್ರವಾರ ಖಚಿತಪಡಿಸಿದೆ ಎಂದು ವರದಿಯಾಗಿದೆ. ಟೀಂ ಇಂಡಿಯಾದ ಮತ್ತೊಬ್ಬ ಸಹಾಯಕ ಸಿಬ್ಬಂದಿ ಗುರುವಾರ ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಆದರೆ … Continued

ಮಮತಾ ವಿರುದ್ಧ ಬಂಗಾಳ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ವಕೀಲೆ, ಪ್ರಿಯಾಂಕಾ ಬಿಜೆಪಿಯಿಂದ ಕಣಕ್ಕೆ

  ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30ರಂದು ನಡೆಯಲಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬ್ರಿವಾಲ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಸೆಪ್ಟೆಂಬರ್ 30 ರಂದು ಉಪಚುನಾವಣೆಗೆ ಹೋಗುವ … Continued

ಭಾರತದಲ್ಲಿ 34,973 ಕೋವಿಡ್‌ ಹೊಸ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 34,973 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಗುರುವಾರಕ್ಕಿಂತ 19.2 ಶೇಕಡಾ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ. ಇದರೊಂದಿಗೆ, ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 3,31,74,954 ಕ್ಕೆ ತಲುಪಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆ ವರೆಗೆ, ಕಳೆದ … Continued

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಎಫ್‌ಐಆರ್ ದಾಖಲು

‘ಬಾರಾಬಂಕಿ: ಅಖಿಲ ಭಾರತ ಮಜ್ಲಿಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ‘ಬಾರಾಬಂಕಿ ಜಿಲ್ಲೆಯಲ್ಲಿ ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಡಳಿತವು ಈ ವರ್ಷದ ಆರಂಭದಲ್ಲಿ ಶತಮಾನದಷ್ಟು ಹಳೆಯ ಮಸೀದಿಯನ್ನು “ಹುತಾತ್ಮ”(“martyred”) ಮಾಡಿತು ಎಂದು ಓವೈಸಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು. ಅವರು ಪ್ರಧಾನಿ ನರೇಂದ್ರ … Continued

ಶಿಕ್ಷಕಿಯರಿಗೆ ಜೀನ್ಸ್, ಬಿಗಿಯುಡುಗೆ, ಶಿಕ್ಷಕರಿಗೆ ಟೀ ಶರ್ಟ್ ನಿಷೇಧಿಸಿದ ಪಾಕ್

ಇಸ್ಲಾಮಾಬಾದ್: ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯುಡುಗೆ ಧರಿಸಬಾರದು ಎಂದು ಪಾಕಿಸ್ತಾನದ ಫೆಡರಲ್ ಡೈರೆಕ್ಟರೇಟ್ ಆಫ್ ಎಜುಕೇಷನ್(ಎಫ್‌ಡಿಇ) ಸೂಚಿಸಿದೆ. ಬೋಧನಾ ವರ್ಗದವರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿರುವ ಎಫ್‌ಡಿಇ, ಪುರುಷ ಶಿಕ್ಷಕರೂ ಜೀನ್ಸ್ ಮತ್ತು ಟಿ-ಶರ್ಟ್ಸ್ ಧರಿಸಬಾರದು ಎಂದು ಎಫ್‌ಡಿಇ ಸೂಚಿಸಿದೆ. ಶಿಕ್ಷಕಿಯರು ಸರಳ ಮತ್ತು ಸಭ್ಯ ರೀತಿಯ ಸಲ್ವಾರ್ ಕಮೀಝ್, ಷರಾಯಿ(ಟ್ರೌಸರ್), ದುಪಟ್ಟಾ/ಶಾಲು ಸಹಿತ ಶರ್ಟ್ಸ್ ಧರಿಸಬೇಕು. … Continued

5ನೇ ಶತಮಾನದ ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉತ್ತರ ಪ್ರದೇಶದಲ್ಲಿ ಪತ್ತೆ

ಆಗ್ರಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಟಾಹ್ ಜಿಲ್ಲೆಯಲ್ಲಿ ಗುಪ್ತರ ಕಾಲದ ದೇವಾಲಯದ ಮೆಟ್ಟಿಲುಗಳ ಮೇಲೆ ‘ಶಂಖಲಿಪಿ’ ಶಾಸನವನ್ನು ಪತತೆ ಮಾಡಿದ್ದು, ಇದು ಚಕ್ರವರ್ತಿ ಕುಮಾರಗುಪ್ತನ ಕಾಲದ್ದು ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಎಎಸ್‌ಐ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ವಸಂತ ಕುಮಾರ್, ಈ ಶಾಸನದಲ್ಲಿ ‘ಶ್ರೀ ಮಹೇಂದ್ರಾದಿತ್ಯ’ ಎಂದು ಬರೆಯಲಾಗಿದೆ, ಇದು ಗುಪ್ತ ವಂಶದ … Continued

ತಮಿಳುನಾಡು ಸೇರಿ 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ, ಲೆ.ಜ. ಗುರ್ಮಿತ್ ಸಿಂಗ್ ಉತ್ತರಾಖಂಡ ರಾಜ್ಯಪಾಲ

ನವದೆಹಲಿ: ಉತ್ತರಾಖಂಡ, ತಮಿಳುನಾಡು, ನಾಗಾಲ್ಯಾಂಡ್, ಪಂಜಾಬ್ ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾದ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಗುರುವಾರ ನೇಮಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಸಿಂಗ್ ಅವರು ಸುಮಾರು ನಾಲ್ಕು ದಶಕಗಳ ಸೇವೆಯ ನಂತರ 2016 ರ ಫೆಬ್ರವರಿಯಲ್ಲಿ ಸೇನೆಯಿಂದ ನಿವೃತ್ತರಾಗಿದ್ದರು.ಉತ್ತರಾಖಂಡ್ ರಾಜ್ಯಪಾಲರಾಗಿದ್ದ ಬೇಬಿ … Continued

ಆಗಸ್ಟ್‌ ನಲ್ಲಿ ನಿರುದ್ಯೋಗ ದರವು 8.3%ಕ್ಕೆ ಏರಿಕೆ, 19 ಲಕ್ಷ ಭಾರತೀಯರಿಗೆ ಉದ್ಯೋಗ ನಷ್ಟ: ಸಿಎಂಐಇ

ನವದೆಹಲಿ: ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ 19 ಲಕ್ಷಕ್ಕೂ ಹೆಚ್ಚು ಜನರು ಆಗಸ್ಟ್‌ನಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡುದ್ದಾರೆ. ಜುಲೈನಲ್ಲಿ ಗಳಿಸಿದ ಕೆಲವು ಲಾಭಗಳನ್ನು ಇದು ಹಿಮ್ಮೆಟ್ಟಿಸಿದೆ. ಏಕೆಂದರೆ ಗ್ರಾಮೀಣ ಮತ್ತು ನಗರ ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಾಗಿದೆ. ಭಾರತದಲ್ಲಿ ಮುಖ್ಯವಾಗಿ ಕೃಷಿ ವಲಯದಲ್ಲಿ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಮತ್ತೆ ಹೆಚ್ಚಾಯಿತು ಮತ್ತು ಜುಲೈನಲ್ಲಿ 7% ಕ್ಕೆ … Continued

ಅಫ್ಘಾನ್ ಬಿಕ್ಕಟ್ಟಿನ ನಡುವೆ ಬ್ರಿಕ್ಸ್‌ 13ನೇ ಶೃಂಗಸಭೆ : ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಯೋಜನೆ ಅಳವಡಿಸಿಕೊಳ್ಳಲಿದೆ ಎಂದ ಮೋದಿ

ನವದೆಹಲಿ: ಬ್ರಿಕ್ಸ್ ಭಯೋತ್ಪಾದನೆ ನಿಗ್ರಹ ಕ್ರಿಯಾ ಯೋಜನೆ ಅಳವಡಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಐದು ರಾಷ್ಟ್ರಗಳ ಗುಂಪಿನ ವಾಸ್ತವ ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಹೇಳಿದರು. ಭಾರತ ಆಯೋಜಿಸಿದ್ದ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಮತ್ತು ಬ್ರೆಜಿಲ್ ನ … Continued