ಟೈಮ್ಸ್ ನೌ-ಸಿ ವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್: 43.1% ಜನರು ಬಿಜೆಪಿಯತ್ತ ಒಲವು, ಎಸ್‌ಪಿ ಕಡೆಗೆ29.6% ಜನರು.. ಯೋಗಿ ಸರ್ಕಾರದ ವಿರುದ್ಧ ಕೋಪವೂ ಜಾಸ್ತಿ

ಟೈಮ್ಸ್ ನೌ-ಸಿವೊಟರ್ ಉತ್ತರ ಪ್ರದೇಶ ಪೋಲ್ ಟ್ರ್ಯಾಕರ್ ಎ ಉತ್ತರ ಪ್ರದೇಶದ ಅಂಕಗಣಿತವು ಸದ್ಯಕ್ಕೆ ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿದ್ದಂತೆ ಸಮೀಕ್ಷೆಯಲ್ಲಿ ಕಂಡುಬಂದಿದೆ. ಆದರೆ ಬಹುತೇಕರು ಸಮೀಕ್ಷೆಯಲ್ಲಿ ಯೋಗ ಆದಿತ್ಯನಾಥ ಸರ್ಕಾರ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. *ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ಷಮತೆಯಿಂದ 39.5% ರಷ್ಟು ತೃಪ್ತಿ ಹೊಂದಿಲ್ಲ … Continued

ಈಗ ಐಟಿಆರ್ ಫೈಲಿಂಗ್ ಸುಲಭ: ತೆರಿಗೆದಾರರು ಹತ್ತಿರದ ಅಂಚೆ ಕಚೇರಿಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು..!

ನವದೆಹಲಿ: ಇಂಡಿಯಾ ಪೋಸ್ಟ್ (ಭಾರತದ ಅಂಚೆ) ಈಗ ಹತ್ತಿರದ ಅಂಚೆ ಕಚೇರಿ ಸಾಮಾನ್ಯ ಸೇವೆಗಳ ಕೇಂದ್ರಗಳ (ಸಿಎಸ್ಸಿ) ಕೌಂಟರ್‌ಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಪಾವತಿಸುವ ಆಯ್ಕೆಯನ್ನು ನೀಡುತ್ತಿದೆ.ಇದರಿಂದ ದೇಶಾದ್ಯಂತ ಲಕ್ಷಾಂತರ ತೆರಿಗೆದಾರರಿಗೆ ಇದು ಅನುಕೂಲವಾಗಬಹುದು. ಇಂಡಿಯಾ ಪೋಸ್ಟ್ ಟ್ವಿಟರ್‌ನಲ್ಲಿ, ತೆರಿಗೆದಾರರು ಹತ್ತಿರದ ಅಂಚೆ ಕಚೇರಿ ಸಿಎಸ್‌ಸಿ ಕೌಂಟರ್‌ನಲ್ಲಿ ಐಟಿಆರ್ ಸೇವೆಗಳನ್ನು ಸುಲಭವಾಗಿ ಪ್ರವೇಶಿಸಬಹುದು ಎಂದು … Continued

ಮಧ್ಯಪ್ರದೇಶ ಬಾವಿ ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಭೋಪಾಲ್: ಮಧ್ಯಪ್ರದೇಶದ ಭೋಪಾಲನ ವಿದಿಶಾದಲ್ಲಿ ನಡೆದ ಬಾವಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿದಿಶಾ ಜಿಲ್ಲೆಯ ಗಂಜ್ ಬಸೌಡ ಪ್ರದೇಶದಲ್ಲಿ 8 ವರ್ಷದ ಬಾಲಕಿ ಜುಲೈ 15 ರಂದು ಬಾವಿಗೆ ಬಿದ್ದಿದ್ದಳು. ಅವಳನ್ನು ರಕ್ಷಿಸಲು ಕೆಲವರು ಮುಂದಾದ ವೇಳೆ ಬಾವಿ ಕುಸಿದ ಪರಿಣಾಮ … Continued

ಭಾರತದಲ್ಲಿ ಕೊರೊನಾದಿಂದ 560 ಮಂದಿ ಸಾವು

ನವದೆಹಲಿ: ‘ಭಾರತದಲ್ಲಿ ಶನಿವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 38,079 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದೆ.ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,10,64,908ಕ್ಕೆ ಏರಿಕೆಯಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಇದೇ ಸಮಯದಲ್ಲಿ 560 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದ ಒಟ್ಟು ಸಾವಿನ ಸಂಖ್ಯೆಯು 4,13,091ಕ್ಕೆ ಹೆಚ್ಚಿದೆ. ಇನ್ನೊಂದೆಡೆ ಸಕ್ರಿಯ ಪ್ರಕರಣಗಳ … Continued

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಓಪನ್: ೫,೦೦೦ ಜನರಿಗಷ್ಟೇ ಪ್ರವೇಶಕ್ಕೆ ಅವಕಾಶ

ತಿರುವನಂತಪುರ: ತಿಂಗಳದ ಐದು ದಿನಗಳ ಪೂಜೆಗಾಗಿ ಶನಿವಾರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಮುಂಜಾನೆಯಿಂದಲೇ ಭಕ್ತರ ದರ್ಶನಕ್ಕೆ ಮುಕ್ತಗೊಂಡಿದೆ. ಆನ್ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ ೫,೦೦೦ ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ದೇವಾಲಯ ಆವರಣದಲ್ಲಿ ಭಕ್ತರ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಮಾರ್ಗಸೂಚಿ ನೀಡಿದ್ದು, ದೇಗುಲ ಆವರಣದಲ್ಲಿ … Continued

ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳ ಆರಂಭಕ್ಕೆ ಯುಜಿಸಿ ಸೂಚನೆ

ನವದೆಹಲಿ: ರಾಜ್ಯದಲ್ಲಿ ಅಕ್ಟೋಬರ್ 1 ರಿಂದ ಪದವಿ ಕಾಲೇಜುಗಳನ್ನು ಆರಂಭಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ಯುಜಿಸಿ ಮಾರ್ಗಸೂಚಿ ಪ್ರಕಾರ, ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಅಂತಿಮ ವರ್ಷ, ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ ಲೈನ್, ಆಫ್ ಲೈನ್ ಅಥವಾ ಬ್ಲೆಂಡ್ ಮಾಡಿದ ಮೋಡ್ ನಲ್ಲಿ ಆಗಸ್ಟ್ 31 … Continued

ಜಸ್ಟ್​ ಡಯಲ್​ನ ಶೇ.67ರಷ್ಟು ಷೇರು ಖರೀದಿಸುವ ರಿಲಯನ್ಸ್ ರೀಟೇಲ್ ವೆಂಚರ್ಸ್

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿಂದ B2B ಸರ್ಚ್ ಎಂಜಿನ್ ಜಸ್ಟ್​ ಡಯಲ್​ನ ಪ್ರಮುಖ ಷೇರಿನ ಪಾಲಾದ ಶೇ 66.95ರಷ್ಟನ್ನು ಖರೀದಿ ಮಾಡಲಿದೆ. ಜಸ್ಟ್ ಡಯಲ್ ಸ್ಥಾಪಕ ವಿಎಸ್ಎಸ್ ಮಣಿ ಅವರು ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರಿಯಲಿದ್ದಾರೆ. ಜಸ್ಟ್​ ಡಯಲ್​ನಲ್ಲಿ ಶೇ 40.95ರಷ್ಟು ಪಾಲನ್ನು ಆರ್​ಆರ್​ವಿಎಲ್​ ಹೊಂದಿರಲಿದೆ … Continued

ಆರ್‌ಎಎಸ್‌ ಪರೀಕ್ಷೆ ಒಟ್ಟಿಗೆ ಉತ್ತೀರ್ಣರಾದ ಮೂವರು ಸಹೋದರಿಯರು ; ರಾಜಸ್ಥಾನ ರೈತನ ಐವರು ಹೆಣ್ಮಕ್ಕಳೂ ಈಗ ಆರ್‌ಎಎಸ್‌ ಅಧಿಕಾರಿಗಳು..!

ನವದೆಹಲಿ: ರಾಜಸ್ಥಾನದ ಹನುಮಾನ್‌ಗಡದ ಮೂವರು ಸಹೋದರಿಯರಾದ ಅನ್ಶು, ರೀತು ಮತ್ತು ಸುಮನ್ ಅವರು ರಾಜ್ಯದ ಆಡಳಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅವರು ಈ ಮೊದಲು ಇದೇ ಪರೀಕ್ಷೆಯನ್ನುಉತ್ತೀರ್ಣರಾದ ಇಬ್ಬರು ಸಹೋದರಿಯರಾದ ರೋಮಾ ಮತ್ತು ಮಂಜು ಅವರೊಂದಿಗೆ ಸೇರ್ಪಡೆಯಾಗಿದ್ದಾರೆ. ಈಗ, ಎಲ್ಲ ಐವರು ಸಹೋದರಿಯರು, ಸಹದೇವ್ ಸಹಾರನ್ ಎಂಬ ರೈತನ ಮಕ್ಕಳು. ಈಗ ರಾಜಸ್ಥಾನ ಆಡಳಿತ ಸೇವೆ (ಆರ್‌ಎಎಸ್) … Continued

ಕೋವಿಡ್‌-19 ಮೂರನೇ ಅಲೆ ಭಯದ ಮಧ್ಯೆ ಮುಂದಿನ 100 ದಿನಗಳು ನಿರ್ಣಾಯಕ’ ಎಂದ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೋವಿಡ್‌ -19 ರ ಮೂರನೇ ಅಲೆಯ ಭೀತಿಯ ಮಧ್ಯೆ, ಮುಂದಿನ 100 ದಿನಗಳು ನಿರ್ಣಾಯಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ನೀತಿ ಆಯೋಗದ ಸದಸ್ಯ-ಆರೋಗ್ಯದ ಡಾ.ವಿ.ಕೆ.ಪಾಲ್‌ ಮಾತನಾಡಿ, ಒಟ್ಟಾರೆಯಾಗಿ, ಜಗತ್ತು ಮೂರನೇ ಅಲೆಯತ್ತ ಸಾಗುತ್ತಿದೆ ಮತ್ತು ಮೂರನೇ ಅಲೆಯ ಬಗ್ಗೆ ಡಬ್ಲ್ಯೂಎಚ್‌ಒ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು. ಭಾರತೀಯರು ಜವಾಬ್ದಾರರಾಗಿರಬೇಕು … Continued

ನಮಗೆ ಭಯ ಇರದವರು ಬೇಕು, ಹೆದರುವವರು ಆರ್​ಎಸ್​ಎಸ್​​ಗೆ ಹೋಗಬಹುದು’:ಪಕ್ಷ ತೊರೆದವರಿಗೆ ರಾಹುಲ್ ಗಾಂಧಿ ಟಾಂಗ್‌

ನವದೆಹಲಿ: ಭಯ ಇರದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು. ಪಕ್ಷದಲ್ಲಿ ಇರುವುದಕ್ಕೆ ಭಯಪಡುವವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣದ ತಂಡದೊಂದಿಗೆ ನಡೆಸಿದ ಮಾತುಕತೆಯ ವೇಳೆ ಅವರು ಈ ಮಾತನ್ನು ಹೇಳಿದ್ದಾರೆ. ತನ್ಮೂಲಕ, ಕಾಂಗ್ರೆಸ್ ಪಕ್ಷ ತೊರೆದ ಹಾಗೂ ಪಕ್ಷಕ್ಕೆ ಸಮಸ್ಯೆ ಉಂಟಾಗುವಂತೆ ವ್ಯವಹರಿಸುತ್ತಿರುವ ನಾಯಕರಿಗೆ ಕಟು … Continued