ವಿಶ್ವದ 24 ಸೂಪರ್ ಬಿಲಿಯನೇರ್‌ ಗಳ ಪಟ್ಟಿ ಬಿಡುಗಡೆ ; ಇದರಲ್ಲಿ ಭಾರತದವರು ಯಾರ್ಯಾರಿದ್ದಾರೆ..?

ಇಂದು ಬಿಲಿಯನೇರ್ ಆಗಿರುವುದು ಅಪರೂಪವಲ್ಲ, ಈಗ ಜಗತ್ತಿನ ಅತಿ ಶ್ರೀಮಂತರನ್ನು ಕರೆಯಲು “ಸೂಪರ್ ಬಿಲಿಯನೇರ್ಸ್” ಎಂದು ಮತ್ತೊಂದು ವರ್ಗೀಕರಣ ಮಾಡಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ (WSJ) ಪ್ರಕಾರ, ಈ ವ್ಯಕ್ತಿಗಳು $50 ಬಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ಫೆಬ್ರವರಿಯ ಹೊತ್ತಿಗೆ, ಅವರ ಸಂಪತ್ತು ಎಲ್ಲಾ ಬಿಲಿಯನೇರ್ ಸಂಪತ್ತಿಗಿಂತ 16% ಕ್ಕಿಂತ ಹೆಚ್ಚು ಮತ್ತು ಅವರ ಒಟ್ಟು ನಿವ್ವಳ ಮೌಲ್ಯವು $3.3 ಟ್ರಿಲಿಯನ್ ಆಗಿತ್ತು.
ಸದ್ಯ ಜಾಗತಿಕವಾಗಿ 24 ಸೂಪರ್ ಬಿಲಿಯನೇರ್‌ಗಳಿದ್ದಾರೆ ಮತ್ತು ಇವರಲ್ಲಿ 16 ಮಂದಿ ಸೆಂಟಿ-ಬಿಲಿಯನೇರ್‌ಗಳಾಗಿ ಅರ್ಹತೆ ಪಡೆದಿದ್ದಾರೆ, ಅಂದರೆ ಅವರು ಕನಿಷ್ಠ $100 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ (WSJ) ವಿಶ್ವದ ಟಾಪ್ 24 ಸೂಪರ್ ಬಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲೋನ್ ಮಸ್ಕ್ ಅವರು 419.4 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಟೆಸ್ಲಾ, ಸ್ಪೇಸ್‌ಎಕ್ಸ್, ನ್ಯೂರಾಲಿಂಕ್ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಸೇರಿದಂತೆ ಹಲವಾರು ಉದ್ಯಮಗಳನ್ನು ಹೊಂದಿದ್ದಾರೆ.
ಈ ಪಟ್ಟಿಯಲ್ಲಿ ಭಾರತದ ಉದ್ಯಮಿ ಮುಖೇಶ ಅಂಬಾನಿ ಮತ್ತು ಗೌತಮ್ ಅದಾನಿ ಕೂಡ ಇದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 890.6 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದರೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ $ 60.6 ಶತಕೋಟಿ ಆಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಹಾಸಿಗೆ, ಶೌಚಾಲಯ, ಮೈಕ್ರೋವೇವ್ ಒಲೆ, ಆಹಾರ ತಯಾರಿಕೆ...: ಅಮೆರಿಕದ ಬಿ-2 ಬಾಂಬರ್ ಯುದ್ಧ ವಿಮಾನ ಹಾರುವ ಹೋಟೆಲ್ ಕೂಡ ಹೌದು..!

ಸೂಪರ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್, ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಮತ್ತು ಮೈಕ್ರೋಸಾಫ್ಟ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಸ್ಟೀವ್ ಬಾಲ್ಮರ್ ಕೂಡ ಸೇರಿದ್ದಾರೆ. ಒಟ್ಟು 24 ಸೂಪರ್ ಬಿಲಿಯನೇರ್‌ಗಳಲ್ಲಿ, ಜೂಲಿಯಾ ಕೋಚ್, ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ಮತ್ತು ಆಲಿಸ್ ವಾಲ್ಟನ್ ಈ ಮೂವರು ಮಹಿಳೆಯರು ಮಾತ್ರ ಇದ್ದಾರೆ.
ಸೂಪರ್ ಬಿಲಿಯನೇರ್‌ಗಳ ಸಂಪೂರ್ಣ ಪಟ್ಟಿ
ಎಲೋನ್ ಮಸ್ಕ್ – ಅಂದಾಜು ನಿವ್ವಳ ಮೌಲ್ಯ $419.4 ಬಿಲಿಯನ್ (ಶತಕೋಟಿ)
ಜೆಫ್ ಬೆಜೋಸ್ – ಅಂದಾಜು ನಿವ್ವಳ ಮೌಲ್ಯ $263.8 ಬಿಲಿಯನ್
ಬರ್ನಾರ್ಡ್ ಅರ್ನಾಲ್ಟ್ – ಅಂದಾಜು ನಿವ್ವಳ ಮೌಲ್ಯ $238.9 ಬಿಲಿಯನ್
ಲಾರೆನ್ಸ್ ಎಲಿಸನ್ – ಅಂದಾಜು ನಿವ್ವಳ ಮೌಲ್ಯ $237 ಶತಕೋಟಿ
ಮಾರ್ಕ್ ಜುಕರ್‌ಬರ್ಗ್ – ಅಂದಾಜು ನಿವ್ವಳ ಮೌಲ್ಯ $220.8 ಶತಕೋಟಿ
ಸೆರ್ಗೆ ಬ್ರಿನ್ – ಅಂದಾಜು ನಿವ್ವಳ ಮೌಲ್ಯ $160.5 ಬಿಲಿಯನ್
ಸ್ಟೀವನ್ ಬಾಲ್ಮರ್ – ಅಂದಾಜು ನಿವ್ವಳ ಮೌಲ್ಯ $157.4 ಬಿಲಿಯನ್
ವಾರೆನ್ ಬಫೆಟ್ – ಅಂದಾಜು ನಿವ್ವಳ ಮೌಲ್ಯ $154.2 ಬಿಲಿಯನ್
ಜೇಮ್ಸ್ ವಾಲ್ಟನ್ – ಅಂದಾಜು ನಿವ್ವಳ ಮೌಲ್ಯ $117.5 ಬಿಲಿಯನ್
ಸ್ಯಾಮ್ಯುಯೆಲ್ ರಾಬ್ಸನ್ ವಾಲ್ಟನ್ – ಅಂದಾಜು ನಿವ್ವಳ ಮೌಲ್ಯ $114.4 ಬಿಲಿಯನ್
ಅಮಾನ್ಸಿಯೊ ಒರ್ಟೆಗಾ – ಅಂದಾಜು ನಿವ್ವಳ ಮೌಲ್ಯ $113 ಬಿಲಿಯನ್
ಆಲಿಸ್ ವಾಲ್ಟನ್ – ಅಂದಾಜು ನಿವ್ವಳ ಮೌಲ್ಯ $110 ಬಿಲಿಯನ್
ಜೆನ್ಸನ್ ಹುವಾಂಗ್ – ಅಂದಾಜು ನಿವ್ವಳ ಮೌಲ್ಯ $108.4
ಬಿಲ್ ಗೇಟ್ಸ್ – ಅಂದಾಜು ನಿವ್ವಳ ಮೌಲ್ಯ $106 ಬಿಲಿಯನ್
ಮೈಕೆಲ್ ಬ್ಲೂಮ್‌ಬರ್ಗ್ -ಅಂದಾಜು ನಿವ್ವಳ ಮೌಲ್ಯ $ 103.4 ಬಿಲಿಯನ್
ಲಾರೆನ್ಸ್ ಪೇಜ್ – ಅಂದಾಜು ನಿವ್ವಳ ಮೌಲ್ಯ $100.9 ಬಿಲಿಯನ್
ಮುಖೇಶ್ ಅಂಬಾನಿ – ಅಂದಾಜು ನಿವ್ವಳ ಮೌಲ್ಯ $90.6 ಬಿಲಿಯನ್
ಚಾರ್ಲ್ಸ್ ಕೋಚ್ – ಅಂದಾಜು ನಿವ್ವಳ ಮೌಲ್ಯ $67.4 ಬಿಲಿಯನ್
ಜೂಲಿಯಾ ಕೋಚ್ – ಅಂದಾಜು ನಿವ್ವಳ ಮೌಲ್ಯ $65.1 ಬಿಲಿಯನ್
ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ – ಅಂದಾಜು ನಿವ್ವಳ ಮೌಲ್ಯ $61.9 ಬಿಲಿಯನ್
ಗೌತಮ್ ಅದಾನಿ – ಅಂದಾಜು ನಿವ್ವಳ ಮೌಲ್ಯ $60.6 ಬಿಲಿಯನ್
ಮೈಕೆಲ್ ಡೆಲ್ – ಅಂದಾಜು ನಿವ್ವಳ ಮೌಲ್ಯ $59.8 ಬಿಲಿಯನ್
ಝಾಂಗ್ ಶಾನ್ಶನ್ – ಅಂದಾಜು ನಿವ್ವಳ ಮೌಲ್ಯ $57.7 ಬಿಲಿಯನ್
ಪ್ರಜೋಗೊ ಪಂಗೆಸ್ಟು – ಅಂದಾಜು ನಿವ್ವಳ ಮೌಲ್ಯ $55.4 ಬಿಲಿಯನ್
ವಾಲ್ ಸ್ಟ್ರೀಟ್ ಜರ್ನಲ್ (WSJ) ಪ್ರಕಾರ, ವಿಶ್ವದ ಸೂಪರ್ ಬಿಲಿಯನೇರ್ ಗಳಲ್ಲಿ ಹೆಚ್ಚಿವರು ಟೆಕ್ ಕ್ಷೇತ್ರದ ಉದ್ಯಮಿಗಳಾಗಿದ್ದಾರೆ.

ಪ್ರಮುಖ ಸುದ್ದಿ :-   ಅಮೆರಿಕ ವಾಯು ನೆಲೆ ಮೇಲೆ ಇರಾನ್‌ ಕ್ಷಿಪಣಿ ದಾಳಿ ; ವಾಯ ಪ್ರದೇಶ ಮುಚ್ಚಿದ ಕತಾರ್, ಯುಎಇ, ಬಹ್ರೇನ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement