ಅಂಕೋಲಾ: ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಓರ್ವ ಸಾವು

ಅಂಕೋಲಾ: ಅಂಕೋಲಾ: ಸ್ವಿಪ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದ ನಂತರ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಹಾರವಾಡದ ರೈಲ್ವೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಉಳಿದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ಮಾಹಿತಿ ದೊರಕಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಅಗ್ನಿಶಾಮಕ … Continued

ಅಂಕೋಲಾ: ಮೀನು ಹಿಡಿಯುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೀನುಗಾರ ಸಾವು

ಅಂಕೋಲಾ: ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿ ಮಾಂಗಟೇಶ್ವರ ಗುಡ್ಡದ ಬಳಿ ನಡೆದ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಗಾಬೀತ ಕೇಣಿ ನಿವಾಸಿ ಅಂಕುಶ ರಾಮದಾಸ ಅಂಕೋಲೆಕರ ಎಂದು ಗುರುತಿಸಲಾಗಿದೆ. ಈತ ಸೋಮವಾರ ಸಂಜೆ ಮಾಂಗಟೇಶ್ವರ ಗುಡ್ಡದ ಸಮೀಪ ಕೈ … Continued

ಅಂಕೋಲಾ: ಲಾರಿ-ಬೈಕ್‌ ಡಿಕ್ಕಿ : ಇಬ್ಬರು ಬೈಕ್‌ ಸವಾರರು‌ ಸ್ಥಳದಲ್ಲೇ ಸಾವು

ಅಂಕೋಲಾ: ಬೈಕಿಗೆ ಲಾರಿ ಡಿಕ್ಕಿಯಾಗಿ ಬೈಕಿನಲ್ಲಿ ತೆರಳುತ್ತಿದ್ದ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲ ಬೊಗ್ರಿಬೈಲ್ ಸಮೀಪ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೃತರನ್ನು ಅಗಸೂರಿನ ಬೊಮ್ಮಯ್ಯ ನಾಯಕ ಮತ್ತು ನಾರಾಯಣ ನಾಯಕ ಎಂದು ಗುರುತಿಸಲಾಗಿದೆ. ಬೈಕ್‌ ಗೆ ಡಿಕ್ಕಿಯಾದ ಲಾರಿಯು ಬೈಕ್ ಸವಾರರನ್ನು ಸುಮಾರು ಕೆಲವು ಮೀಟರುಗಳಷ್ಟು ಎಳೆದುಕೊಂಡು … Continued

ಅಂಕೋಲಾ: ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲು

ಅಂಕೋಲಾ: ಜಾನಪದ ಗಾಯಕಿ, ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ (ಮೇ 7) ರಾತ್ರಿ ಕಾರವಾರ ಆಸ್ಪತ್ರೆಯಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಹೇಳಲಾಗಿದೆ. ಉಸಿರಾಟ ಸಮಸ್ಯೆ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಸಮೀಪವರ್ತಿ ಮೂಲಗಳು ತಿಳಿಸಿವೆ. ಕೆಎಂಸಿ … Continued

ಅಂಕೋಲಾ: ಸ್ಕೂಟಿಗೆ ಬೈಕ್‌ ಡಿಕ್ಕಿ-ಹೊಟೇಲ್‌ ಮಾಲಕ ಸಾವು

ಅಂಕೋಲಾ: ಸ್ಕೂಟಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೋರ್ವರು ಮೃತ ಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಳೇಗುಳಿ ಕೃಷ್ಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಂಭವಿಸಿದೆ. ಅವರ್ಸಾ ನಿವಾಸಿ ಹೊಟೇಲ್ ಶಿಲ್ಪಾ ಮಾಲಕ ಗಾಂಧಿ ಶೆಟ್ಟಿ (60) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಅವರ್ಸಾದಿಂದ ಸ್ಕೂಟಿ ಮೇಲೆ ಅಂಕೋಲಾ … Continued

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋದಾಗ ಗಂಗಾವಳಿ ನದಿಯಲ್ಲಿ ಮುಳುಗಿ ಹುಡುಗಿ ಸೇರಿ ಮೂವರು ಸಂಬಂಧಿಗಳು ಸಾವು

ಅಂಕೋಲಾ: ಕಪ್ಪೆ ಚಿಪ್ಪು ತೆಗೆಯಲು ಹೋಗಿ ನೀರು ಪಾಲಾದ ಸಂಬಂಧಿಕರು-ಹುಡುಗಿ ಸೇರಿ ಮೂವರ ಸಾವು ಅಂಕೋಲಾ: ರಜಾ ದಿನದ ಮೋಜಿಗೆಂದು ಗಂಗಾವಳಿ ನದಿಯ ಹಿನ್ನೀರಿನಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋಗಿದ್ದ ಮೂವರು ಕಾಲು ಜಾರಿ ಬಿದ್ದು ನೀರಿನಲ್ಲಿ ಬಿದ್ದು ಮುಳುಗಿ ಮೃತ ಪಟ್ಟ ಘಟನೆ ಹಿಲ್ಲೂರು ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಕಲ್ ಕಡಕಾರ್ ಬಳಿ ಸಂಭವಿಸಿದೆ. … Continued

ಉತ್ತರ ಕನ್ನಡ ಜಿಲ್ಲೆಯ ಇ ಸ್ವತ್ತು ಸಮಸ್ಯೆಗೆ ತಿಂಗಳೊಳಗೆ ಮುಕ್ತಿ: ಕಂದಾಯ ಸಚಿವ ಅಶೋಕ ಭರವಸೆ

ಅಚವೆ (ಅಂಕೋಲಾ) : ಉತ್ತರ ಕನ್ನಡ ಜಿಲ್ಲೆಯಲ್ಲಿ ಗಂಭೀರವಾಗಿರುವ ಇ ಸ್ವತ್ತು ಸಮಸ್ಯೆ ಬಗೆಹರಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಜಿಲ್ಲೆಯ ಈ ಸಮಸೆಯನ್ನ ಉಪಸಮಿತಿ ಮುಂದಿಟ್ಟು ಒಂದು ತಿಂಗಳಲ್ಲಿ ಈ ಸಮಸ್ಯೆಗೆ ಮುಕ್ತಿ ನೀಡಲಾಗುವುದು’ ಎಂದು ಕಂದಾಯ ಸಚಿವ ಅಶೋಕ ಭರವಸೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ … Continued

ಅಂಕೋಲಾ: ಬೆಂಕಿ ಹೊತ್ತಿಕೊಂಡು ಒಣಹುಲ್ಲು ಸಾಗಿಸುತ್ತಿದ್ದ ವಾಹನ ಸುಟ್ಟು ಕರಕಲು, ಚಾಲಕನಿಗೆ ಗಾಯ: ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ತಳಗದ್ದೆಯ ಸಮೀಪ ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನ ಮತ್ತು ಅದರಲ್ಲಿದ್ದ ಒಣಹುಲ್ಲು ಸುಟ್ಟು ಕರಕಲಾದ ಘಟನೆ ಗುರುವಾರ ಮುಂಜಾನೆ ನಡೆದ ಬಗ್ಗೆ ವರದಿಯಾಗಿದೆ. ವಾಹನ ಚಾಲಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಬೊಲೆರೋ ಪಿಕಪ್ ವಾಹನದಲ್ಲಿ ಅಂಕೋಲಾದ ತಳಗದ್ದೆಯಿಂದ ಕುಮಟಾದ ಖಂಡಗಾರಕ್ಕೆ ಭತ್ತದ ಒಣಹುಲ್ಲು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ … Continued

ಅಂಕೋಲಾ ಉದ್ಯಮಿ ಆರ್ ಎನ್. ನಾಯಕ ಹತ್ಯೆ ಪ್ರಕರಣ: ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ಉತ್ತರ ಕನ್ನಡದ ಅಂಕೋಲಾದ ಉದ್ಯಮಿ, ಬಿಜೆಪಿ ಮುಖಂಡ ಆರ್ ಎನ್. ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಮಬಂಧಿಸಿ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ಆಪಾದಿತರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿದ್ದು, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ಮಹತ್ವದ ತೀರ್ಪು ನೀಡಿದೆ. ಭೂಗತ … Continued

ಅಂಕೋಲಾ: ಶಾಲೆಯ ಮೇಲ್ಛಾವಣಿ ಪ್ಲಾಸ್ಟರಿಂಗ್ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆಯ 4 ತರಗತಿ ಕೊಠಡಿಯ ಮೇಲ್ಛಾವಣಿಯ ತಳಬಾಗದ ಕಾಂಕ್ರೀಟ್ ಪದರು ಕುಸಿದು ಬಿದ್ದು ನಾಲ್ಕೈದು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ 12:30ರ ಸಮಯಕ್ಕೆ ಊಟದ ವಿರಾಮ ಇದ್ದ ಸಮಯದಲ್ಲಿ … Continued