‘ಹಾನಿಯಾಗಿದೆ, ಚುನಾವಣೆಯಲ್ಲಿ ಗೋಚರಿಸುತ್ತದೆ…’: ರಾಮಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ ಬಗ್ಗೆ ಪಕ್ಷದ ನಾಯಕ ದಿಗ್ವಿಜಯ ಸಿಂಗ್‌ ಸಹೋದರ

ಭೋಪಾಲ್‌ : ಅಯೋಧ್ಯೆ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಶಾಸಕ ಮತ್ತು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ತಮ್ಮದೇ ಪಕ್ಷವಾದ ‘ಕಾಂಗ್ರೆಸ್‌ ‘ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಪಕ್ಷದ ಸಲಹೆಗಾರರನ್ನು ಪ್ರಶ್ನಿಸಿದ್ದಾರೆ. ಮಾಜಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸಿಂಗ್ ಅವರು, “… … Continued

ನಾವೂ ಶ್ರೀರಾಮನ ಭಕ್ತರೆ, ಅಯೋಧ್ಯೆಗೆ ನಾನೂ ಹೋಗಿ ಬರ್ತೇನೆ…ಆದರೆ ಜನವರಿ 22ರ ನಂತರ : ಸಿಎಂ ಸಿದ್ದರಾಮಯ್ಯ

ಶಿವಮೊಗ್ಗ : ಜನವರಿ 22ರ ನಂತರ ನಾವು ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶುಕ್ರವಾರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ದೇವರನ್ನು ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀರಾಮಚಂದ್ರನನ್ನು ವಿರೋಧಿಸುವುದಿಲ್ಲ. … Continued

ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ತಾರೆ ಬಿಜೆಪಿ ಹಿರಿಯ ನಾಯಕ ಎಲ್.​ಕೆ. ಅಡ್ವಾಣಿ

ನವದೆಹಲಿ: ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರಿಷ್ಠಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರು ತಿಳಿಸಿದ್ದಾರೆ. 96ರ ಹರೆಯದ ಎಲ್‌ಕೆ ಅಡ್ವಾಣಿ ಅವರು ರಾಮ ಜನ್ಮಭೂಮಿ ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕರಲ್ಲಿ ಅಗ್ರಗಣ್ಯರಾಗಿರುವ ಕಾರಣ ರಾಮಮಂದಿರ … Continued

ಅಯೋಧ್ಯೆ ರಾಮ ಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ : ತನ್ನ ಪಕ್ಷವನ್ನು ಟೀಕಿಸಿದ ಕಾಂಗ್ರೆಸ್ ನಾಯಕ

ನವದೆಹಲಿ : ಅಯೋಧ್ಯೆ ರಾಮ ಮಂದಿರದ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್‌ನ ನಿರ್ಧಾರವನ್ನು ಗುಜರಾತ್‌ ಕಾಂಗ್ರೆಸ್‌ ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ ಅವರು ಬುಧವಾರ ಸಾರ್ವಜನಿಕವಾಗಿ ಟೀಕಿಸಿದ್ದಾರೆ. ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಅರ್ಜುನ್ ಮೊದ್ವಾಡಿಯಾ ಅವರು ಹಿರಿಯ ನಾಯಕ ಜೈರಾಮ ರಮೇಶ ಅವರ ಹೇಳಿಕೆಯ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಅದರ ಜೊತೆಯಲ್ಲಿ ರಾಮ ಮಂದಿರದ … Continued

2100 ಕೆಜಿ ಘಂಟೆ…108 ಅಡಿ ಉದ್ದ ಅಗರಬತ್ತಿ….1100 ಕೆಜಿ ತೂಕದ ದೀಪ….10 ಅಡಿ ಎತ್ತರದ ದೈತ್ಯ ಬೀಗ….ಇದೆ ದೊಡ್ಡ ಪಟ್ಟಿ : ಅಯೋಧ್ಯೆಗೆ ಬರ್ತಿವೆ ನೂರಾರು ಉಡುಗೊರೆಗಳು…!

ನವದೆಹಲಿ: ಜನವರಿ 22 ರಂದು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದ ಮೊದಲು ಅಯೋಧ್ಯೆಯ ರಾಮ ಮಂದಿರಕ್ಕೆ ವಿಶೇಷ ಉಡುಗೊರೆಗಳನ್ನು ಕಳುಹಿಸಲಾಗಿದೆ. ಅದರಲ್ಲಿ 108 ಅಡಿ ಉದ್ದದ ಅಗರಬತ್ತಿ, 2,100 ಕೆಜಿ ಗಂಟೆ, 1,100 ಕೆಜಿ ತೂಕದ ದೈತ್ಯ ದೀಪ, ಚಿನ್ನದ ಪಾದರಕ್ಷೆಗಳು, 10 ಅಡಿ ಎತ್ತರದ ಲಾಕ್ ಮತ್ತು ಕೀ ಮತ್ತು ಎಂಟು ದೇಶಗಳಲ್ಲಿ ಏಕಕಾಲದಲ್ಲಿ ಸಮಯವನ್ನು … Continued

‘ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕ್ರಮ….’ : ‘ಗೌರವಪೂರ್ವಕʼವಾಗಿ ರಾಮಮಂದಿರ ಆಹ್ವಾನ ನಿರಾಕರಿಸಿದ ಕಾಂಗ್ರೆಸ್ ನಾಯಕತ್ವ

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸುವುದಿಲ್ಲ ಎಂದು ಪಕ್ಷದ ಪ್ರಕಟಣೆ ಬುಧವಾರ ತಿಳಿಸಿದೆ. ತನ್ನ ಅಧಿಕೃತ X ಹ್ಯಾಂಡಲ್‌ನಲ್ಲಿ … Continued

ಅಯೋಧ್ಯೆ ರಾಮಮಂದಿರ ಸಮಾರಂಭ : ಜನವರಿ 22 ರಂದು ಉತ್ತರ ಪ್ರದೇಶದ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಲಕ್ನೋ: ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನವರಿ 22 ರಂದು ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವುದರ ಜೊತೆಗೆ ಉದ್ಘಾಟನಾ ಸಮಾರಂಭದ ದಿನದಂದು ರಾಜ್ಯಾದ್ಯಂತ ಮದ್ಯ ಮಾರಾಟ ಮಾಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಆದಿತ್ಯನಾಥ ಅವರು ಜನವರಿ 22 ರಂದು ಎಲ್ಲಾ … Continued

ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಭರ್ಜರಿ ಸಿದ್ಧತೆ : ಇತ್ತೀಚಿನ ವೀಡಿಯೊ ಹಂಚಿಕೊಂಡ ರಾಮ ಜನ್ಮಭೂಮಿ ಟ್ರಸ್ಟ್ | ವೀಕ್ಷಿಸಿ

ನವದೆಹಲಿ : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದೇಶಾದ್ಯಂತ ಕೋಟ್ಯಂತರ ಜನರು ಕಾತರದಿಂದ ಕಾಯುತ್ತಿದ್ದಾರೆ. ಸೋಮವಾರ ದೇವಾಲಯದ ಗರ್ಭಗುಡಿ ಪೂರ್ಣಗೊಂಡಿದ್ದು, ಜನವರಿ 22 ರಂದು ನಡೆಯಲಿರುವ ಮಹಾಮಸ್ತಕಾಭಿಷೇಕ ಸಮಾರಂಭಕ್ಕಾಗಿ ಕಾಯುತ್ತಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಘೋಷಿಸಿದೆ. “500 ವರ್ಷಗಳ ತಪಸ್ಸಿನ ಪರಾಕಾಷ್ಠೆ. ಪ್ರಭು ಶ್ರೀ ರಾಮಲಲ್ಲಾ ಅವರ ಪವಿತ್ರ ಗರ್ಭಗೃಹವು ಪ್ರಪಂಚದಾದ್ಯಂತ ಲಕ್ಷಾಂತರ ರಾಮಭಕ್ತರನ್ನು ಸ್ವಾಗತಿಸಲು … Continued

ಅಯೋಧ್ಯೆ ರಾಮಮಂದಿರದ ವಿಚಾರದಲ್ಲಿ ಶೃಂಗೇರಿ ಮಠದ ವಿರುದ್ಧ ಅಪಪ್ರಚಾರ : ಸ್ಪಷ್ಟನೆ ನೀಡಿದ ಮಠ

ಚಿಕ್ಕಮಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ಶೃಂಗೇರಿ ಶ್ರೀಗಳ ಭಾವಚಿತ್ರ ಹಾಗೂ ಹೆಸರು ಬಳಸಿ ಅಯೋಧ್ಯೆಯ ಪವಿತ್ರ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ವಿರೋಧಿಸುವಂತೆ ಶೃಂಗೇರಿ ಶ್ರೀಗಳು ಹೇಳಿದ್ದಾರೆ ಎಂದು ಅಪಪ್ರಚಾರ ನಡೆದ ಹಿನ್ನೆಲೆಯಲ್ಲಿ ಈ ಬಗ್ಗೆ ಶೃಂಗೇರಿ … Continued

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಸಾರ

ನವದೆಹಲಿ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22 ರಂದು ನಡೆಯುವ ಪ್ರಾಣಪ್ರತಿಷ್ಠೆ ಸಮಾರಂಭದ ನೇರ ಪ್ರಸಾರವನ್ನು ಅಮೆರಿಕದ ನ್ಯೂಯಾರ್ಕ್ ನಗರದ ಐಕಾನಿಕ್ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಐತಿಹಾಸಿಕ ಮತ್ತು ಧಾರ್ಮಿಕವಾಗಿ ಮಹತ್ವದ ಕಾರ್ಯಕ್ರಮವನ್ನು ವಿವಿಧ ಭಾರತೀಯ ರಾಯಭಾರ … Continued