ರಾಹುಲ್ ಗಾಂಧಿ ಶ್ರೀರಾಮನ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದ ನಾನಾ ಪಟೋಲೆ ; ಇದು “ಅತಿರೇಕದ ಚಮಚಾಗಿರಿ” ಎಂದ ಬಿಜೆಪಿ

ನವದೆಹಲಿ : ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಸಿರುವುದು ಇದೀಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಪಟೋಲೆ ಅವರ ಈ ಹೇಳಿಕೆಯನ್ನು ಬಿಜೆಪಿ “ಅತಿರೇಕದ ಚಮಚಾಗಿರಿ” (Sycophancy Pro Max) ಎಂದು ಟೀಕಿಸಿದೆ. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯಾದ ನಂತರ ರಾಹುಲ್ ಗಾಂಧಿ ಅವರು ಅಲ್ಲಿಗೆ ಭೇಟಿ ನೀಡದಿರುವ … Continued

ವೀಡಿಯೊಗಳು…| ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ ; ರಾಮ ಮಂದಿರ ಶಿಖರದ ಮೇಲೆ ಕೇಸರಿ ಧ್ವಜ ಹಾರಿಸಿದ ಪ್ರಧಾನಿ ಮೋದಿ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಶ್ರೀರಾಮ ಮಂದಿರದ ಗೋಪುರದ (ಶಿಖರ) ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕೇಸರಿ ಧ್ವಜವನ್ನು ಹಾರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯದ ಪೂರ್ಣಗೊಳಿಸುವಿಕೆಯನ್ನು ಘೋಷಿಸಿದ್ದಾರೆ. ಪ್ರಧಾನಮಂತ್ರಿಗಳ ಕಚೇರಿ (PMO) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, 10 ಅಡಿ ಎತ್ತರ ಮತ್ತು 20 ಅಡಿ ಉದ್ದವಿರುವ ಈ … Continued

ಅಯೋಧ್ಯೆಯಲ್ಲಿ ಭವ್ಯ ‘ಧರ್ಮ ಧ್ವಜ’ ಸಮಾರಂಭಕ್ಕೆ ಸಿದ್ಧತೆ ಪೂರ್ಣ ; ನಾಳೆ (ನ.25) ಪ್ರಧಾನಿ ಮೋದಿ ಧ್ವಜಾರೋಹಣ

ಅಯೋಧ್ಯೆ: ಭವ್ಯ ರಾಮ ಮಂದಿರದಲ್ಲಿ ಮಂಗಳವಾರ (ನವೆಂಬರ್ 25) ನಡೆಯಲಿರುವ ಮಹತ್ವದ ‘ಧರ್ಮ ಧ್ವಜ’ (ಕೇಸರಿ ಬಾವುಟ) ಸಮಾರಂಭಕ್ಕಾಗಿ ಅಯೋಧ್ಯೆ ನಗರವು ಅಂತಿಮ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಸಮಾರಂಭವು ರಾಮ ಮಂದಿರದ ನಿರ್ಮಾಣ ಕಾರ್ಯದ ಮುಕ್ತಾಯವಾದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಮಂದಿರದ ಗೋಪುರದ … Continued

ಅಯೋಧ್ಯೆ ದೀಪೋತ್ಸವ : ಬೆಳಗಿದ 26.17 ಲಕ್ಷ ದೀಪಗಳು, 2,128 ಜನರಿಂದ ಆರತಿ ; ಎರಡು ವಿಶ್ವ ದಾಖಲೆ ಸೃಷ್ಟಿ

ಅಯೋಧ್ಯೆ: ಸರಯೂ ನದಿಯ ತಟದಲ್ಲಿ ಭಾನುವಾರ ನಡೆದ ದೀಪೋತ್ಸವದ ಸಂಭ್ರಮದಲ್ಲಿ ದೀಪಾವಳಿ ಹಬ್ಬವು ಮತ್ತೊಮ್ಮೆ ದಾಖಲೆ ಸೃಷ್ಟಿಸುವ ವೈಭವಕ್ಕೆ ಸಾಕ್ಷಿಯಾಯಿತು. ಅಯೋಧ್ಯೆಯ ರಾಮ್ ಕಿ ಪೈಡಿ ಮತ್ತು 56 ಘಾಟ್‌ಗಳಲ್ಲಿ ಒಟ್ಟಿಗೆ ಬರೋಬ್ಬರಿ 26.17 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಜೊತೆಗೆ, 2,128 ಮಂದಿ ಏಕಕಾಲದಲ್ಲಿ ‘ಮಹಾ ಆರತಿ’ ಮಾಡುವ ಮೂಲಕ, ಈ ಬಾರಿಯ ದೀಪೋತ್ಸವದಲ್ಲಿ ಎರಡು … Continued

ಕೊಲೆಯಾದ ವ್ಯಕ್ತಿ ಜೀವಂತವಾಗಿ ಪತ್ತೆ…! 3 ವರ್ಷದಿಂದ ಜೈಲಿನಲ್ಲಿದ್ದ ಕೊಲೆ ಆರೋಪಿ ಬಿಡುಗಡೆ…!!

ಬರೇಲಿ : ರೈಲಿನಲ್ಲಿ ಮೊಬೈಲ್ ಕಳ್ಳತನದ ವಿಚಾರಕ್ಕೆ ನಡೆದ ಜಗಳದಲ್ಲಿ ಕೊಲೆಯಾಗಿದ್ದಾರೆ ಎಂದು ಭಾವಿಸಲಾದ ವ್ಯಕ್ತಿಯೊಬ್ಬರು ಇತ್ತೀಚೆಗೆ ಬಿಹಾರದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ….! ಈ ಪ್ರಕರಣದಲ್ಲಿ ಕೊಲೆ ಆಪಾದನೆ ಹೊತ್ತು ಜೈಲು ಸೇರಿದ್ದ ಅಯೋಧ್ಯೆಯ ನಿವಾಸಿಯನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗಿದೆ. ಅಯೋಧ್ಯೆಯ ಖೇಮಸರಾಯ್ ಗ್ರಾಮದ ಮೂಲದ ನರೇಂದ್ರ ದುಬೆ, ಹತ್ತಿರದ ಶಹಜಹಾನ್‌ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ … Continued

ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ ಎಲಾನ್‌ ಮಸ್ಕ್‌ ತಂದೆ ; ಭಾರತ ಅದ್ಭುತ ಎಂದು ಬಣ್ಣನೆ

ಅಯೋಧ್ಯೆ: ವಿಶ್ವದ ಅತಿ ಶ್ರೀಮಂತ ಹಾಗೂ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಆ ಅನುಭವವನ್ನು “ಅದ್ಭುತ” ಮತ್ತು ಅವರು ಮಾಡಿದ “ಅತ್ಯುತ್ತಮ ಕೆಲಸಗಳಲ್ಲಿ” ಒಂದು ಎಂದು ಬಣ್ಣಿಸಿದ್ದಾರೆ. ಅವರು ಹತ್ತಿರದ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. “ಇದು … Continued

ಅಯೋಧ್ಯೆ ರಾಮ ಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ತನಿಖೆಗೆ ಆದೇಶ

ಅಯೋಧ್ಯಾ : ನೂತನವಾಗಿ ನಿರ್ಮಿಸಿ ಕಳೆದ ವರ್ಷ ಉದ್ಘಾಟನೆಗೊಂಡ ಅಯೋಧ್ಯೆಯ ರಾಮ ಮಂದಿರ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿದೆ. ನಂತರ, ದೇವಾಲಯಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಯೋಧ್ಯೆಯ ಸೈಬರ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ದೂರು ಸ್ವೀಕರಿಸಿದ ನಂತರ, ಸೈಬರ್ ಸೆಲ್ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಶ್ರೀ ರಾಮ ಜನ್ಮಭೂಮಿ ತೀರ್ಥ … Continued

ವೀಡಿಯೊ | ರಾಮನವಮಿಯಂದು ಅಯೋಧ್ಯೆ ರಾಮಂದಿರದಲ್ಲಿ ರಾಮಲಲ್ಲಾನ ಹಣೆಗೆ ಸ್ಪರ್ಷಿಸಿದ ʼಸೂರ್ಯ ತಿಲಕʼ : ವೀಕ್ಷಿಸಿ

ಅಯೋಧ್ಯಾ : ಇಂದು ರಾಮನವಮಿಯ ಶುಭ ಸಂದರ್ಭದಲ್ಲಿ, ಉತ್ತರ ಪ್ರದೇಶದ ಪವಿತ್ರ ನಗರವಾದ ಅಯೋಧ್ಯೆ ರಾಮಮಂದಿರವು ರಾಮ ಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವು ನೇರವಾಗಿ ಬೀಳುವ ‘ಸೂರ್ಯ ತಿಲಕ’ ಎಂದು ಕರೆಯಲ್ಪಡುವ ವಿದ್ಯಮಾನದ ಒಂದು ದೈವಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದು ಸಾಂಕೇತಿಕವಾಗಿ ಭಗವಾನ್ ರಾಮನ ಜನ್ಮವನ್ನು ಆಚರಿಸಿತು. ಅಯೋಧ್ಯೆಯ ರಾಮಮಂದಿರದಲ್ಲಿ ಪುರೋಹಿತರು ರಾಮಲಲ್ಲಾನಿಗೆ … Continued

ಮದುವೆಯ ಮೊದಲ ರಾತ್ರಿಯೇ ಶವವಾಗಿ ಪತ್ತೆಯಾದ ನವದಂಪತಿ…!

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯ ಮೊದಲ ರಾತ್ರಿಯಂದು ನವದಂಪತಿ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಆಘಾತಕಾರಿ ಘಟನೆಯಿಂದಾಗಿ ಮದುವೆಯ ಸಂಭ್ರಮವು ಶೋಕಾಚರಣೆಯಾಗಿ ಮಾರ್ಪಟ್ಟಿತು. ಅಯೋಧ್ಯೆ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ಪ್ರದೀಪ ಎಂಬವರು ಶನಿವಾರ ಶಿವಾನಿ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು … Continued

ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ನಿಧನ

ಲಕ್ನೋ: ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು 85 ನೇ ವಯಸ್ಸಿನಲ್ಲಿ ಲಕ್ನೋ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಫೆಬ್ರವರಿ 3 ರಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಾರ್ಶ್ವವಾಯುವಿಗೆ ಒಳಗಾದ ನಂತರ ಅವರನ್ನು ಲಕ್ನೋದ ಎಸ್‌ಜಿಪಿಜಿಐ ಆಸ್ಪತ್ರೆಯ ನ್ಯೂರಾಲಜಿ ವಾರ್ಡ್ ಎಚ್‌ಡಿಯುಗೆ ಸ್ಥಳಾಂತರಿಸಲಾಯಿತು. ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ … Continued