ವೀಡಿಯೊ..| 5,000 ಅಮೆರಿಕನ್ ವಜ್ರಗಳು-2 ಕೆಜಿ ಬೆಳ್ಳಿ ಬಳಸಿ ʼರಾಮಮಂದಿರʼ ನೆಕ್ಲೇಸ್ ತಯಾರಿಕೆ : ವಜ್ರದ ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ನೆಕ್ಲೇಸ್ ಸಮರ್ಪಣೆ

ಸೂರತ್: ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಮುನ್ನ ವಜ್ರದ ವ್ಯಾಪಾರಿಯೊಬ್ಬರು ರಾಮಮಂದಿರದ ನೆಕ್ಲೇಸ್ ಅನ್ನು ತಯಾರಿಸಿದ್ದಾರೆ. ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿರುವ ಈ ನೆಕ್ಲೇಸ್ ಅನ್ನು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕೆಜಿ ಬೆಳ್ಳಿಯನ್ನು ಬಳಸಿ ತಯಾರಿಸಲಾಗಿದೆ. ‘ಡೈಮಂಡ್-ಸಿಟಿ’ ಸೂರತ್‌ನಲ್ಲಿ ವಜ್ರದ ವ್ಯಾಪಾರದಿಂದ ನೆಕ್ಲೇಸ್ ಮಾಡಲಾಗಿದೆ. ನೆಕ್ಲೇಸ್ ತಯಾರಿಕೆಯಲ್ಲಿ ಏನು ಬಳಸಲಾಗಿದೆ? ಒಟ್ಟು 40 ಕುಶಲಕರ್ಮಿಗಳು … Continued

ಅಯೋಧ್ಯೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಎಲ್‌ಕೆ ಅಡ್ವಾಣಿ, ಮುರಳಿಮನೋಹರ ಜೋಶಿಗೆ ಮನವಿ: ರಾಮಮಂದಿರ ಟ್ರಸ್ಟ್

ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ಹಿರಿಯರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರ ಆರೋಗ್ಯ ಮತ್ತು ವಯಸ್ಸಿನ ಕಾರಣ ಮುಂದಿನ ತಿಂಗಳು ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎಂದು ದೇವಸ್ಥಾನದ ಟ್ರಸ್ಟ್ ಸೋಮವಾರ ತಿಳಿಸಿದೆ. “ಇಬ್ಬರೂ ಹಿರಿಯರು ಮತ್ತು ಅವರ ವಯಸ್ಸನ್ನು ಪರಿಗಣಿಸಿ, ಅವರನ್ನು ಪಾಲ್ಗೊಳ್ಳದಂತೆ … Continued

ಅಯೋಧ್ಯೆ : ಭಗವಾನ್‌ ಶ್ರೀರಾಮನ ಜೀವನಗಾಥೆ ಸಾರುವ 100 ವಿಗ್ರಹಗಳ ಮೆರವಣಿಗೆಗೆ ಸಜ್ಜು

ಲಕ್ನೋ : ಅಯೋಧ್ಯೆಯ ರಾಮಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಭಗವಾನ್‌ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಮುನ್ನ ಭಗವಾನ್‌ ರಾಮನ ಜೀವನಗಾಥೆ ಸಾರುವ ನೂರು ವಿಗ್ರಹಗಳೊಂದಿಗೆ ಮೆರಮಣಿಗೆ ನಡೆಸಲಾಗುವುದು ಎಂದು ಶಿಲ್ಪಿ ರಂಜಿತ್‌ ಮಂಡಲ್‌ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಜನನದಿಂದ ವನವಾಸದ ವರೆಗಿನ ಜೀವನ, ರಾವಣನ ವಿರುದ್ಧದ ವಿಜಯ ಹಾಗೂ ಅಯೋಧ್ಯೆಗೆ ಹಿಂದಿರುಗಿದ್ದು … Continued

ಅಯೋಧ್ಯೆ ರಾಮಮಂದಿರದ 20 ಅರ್ಚಕರ ಹುದ್ದೆಗಳಿಗೆ 3000 ಅರ್ಜಿಗಳು

ಅಯೋಧ್ಯೆ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ 20 ಅರ್ಚಕರ ಹುದ್ದೆಗೆ ಸುಮಾರು 3,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಚಕರ ನೇಮಕಾತಿಗೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ ಜಾಹೀರಾತು ನೀಡಿತ್ತು. ಅದರಂತೆ 3,000 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ 200 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. … Continued

ಜ.22ರಂದು ರಾಮ ಮಂದಿರ ಉದ್ಘಾಟನೆ : ದೇಶಾದ್ಯಂತ 10 ಕೋಟಿ ಕುಟುಂಬ ಆಹ್ವಾನಿಸಲು ನಿರ್ಧಾರ

ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ 10 ಕೋಟಿ ಕುಟುಂಬಗಳಿಗೆ ಆಹ್ವಾನ ನೀಡುವುದಾಗಿ ಹೇಳಿದೆ. ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಮಹಾಸಚಿವ ಚಂಪತ್ ರಾಯ್ ಅವರು, ಜನವರಿ 22 ರಂದು ದೇವಾಲಯದಲ್ಲಿ ಶ್ರೀರಾಮನ ಮೂರ್ತಿ ಸ್ಥಾಪಿಸಲಾಗುವುದು … Continued

ತನ್ನದೇ ವಿಶ್ವ ದಾಖಲೆ ಮುರಿದ ಅಯೋಧ್ಯೆ : ದೀಪಾವಳಿ ಮುನ್ನಾದಿನ ಏಕಕಾಲದಲ್ಲಿ ಬೆಳಗಿದ 22 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆ ದೀಪಗಳು

ಅಯೋಧ್ಯೆ: ದೀಪಾವಳಿ ಆಚರಣೆಯ ಅಂಗವಾಗಿ 22,23, 000 ದೀಪಗಳನ್ನು (ಮಣ್ಣಿನ ಹಣಣೆ ದೀಪಗಳು) ಬೆಳಗಿಸಿದ ನಂತರ ಅಯೋಧ್ಯೆಯಲ್ಲಿ ದೀಪಾಳಿಯ ದೀಪೋತ್ಸವವು ಮತ್ತೊಮ್ಮೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ವಿಶ್ವದಾಖಲೆ ಮಾಡಿದೆ. ದೀಪೋತ್ಸವದ ಸಮಯದಲ್ಲಿ, ರಾಮ್ ಕಿ ಪೈರಿಯಲ್ಲಿ 24 ಲಕ್ಷ ‘ದಿಯಾಗಳು’ (ಮಣ್ಣಿನ ದೀಪಗಳು) ಬೆಳಗಿವೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭೂತಪೂರ್ವ ಸಂಖ್ಯೆಯ ದೀಪಗಳನ್ನು ಬೆಳಗಿಸುವ … Continued

‘ಅಕ್ಷತೆ ಪೂಜೆ’ಯೊಂದಿಗೆ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಯ ವಿಧಿವಿಧಾನಗಳು ಆರಂಭ

ಅಯೋಧ್ಯೆ : ಇಲ್ಲಿನ ರಾಮ ಮಂದಿರದ ಪ್ರತಿಷ್ಠಾಪನೆಯ ವಿಧಿವಿಧಾನಗಳು ಭಾನುವಾರ ‘ಅಕ್ಷತೆ ಪೂಜೆ’ಯೊಂದಿಗೆ ಆರಂಭಗೊಂಡವು. ‘ಅಕ್ಷತೆ ಪೂಜೆ’ಯನ್ನು ಮಂದಿರದಲ್ಲಿರುವ ‘ರಾಮ ದರ್ಬಾರ್’ ಅಥವಾ ಶ್ರೀರಾಮನ ಆಸ್ಥಾನದಲ್ಲಿ ಸುಮಾರು 100 ಕ್ವಿಂಟಾಲ್ ಧಾನ್ಯದ ಅಕ್ಕಿಯನ್ನು ಅರಿಶಿನ ಮತ್ತು ದೇಸಿ ತುಪ್ಪದೊಂದಿಗೆ ಬೆರೆಸಿ ಪೂಜಿಸಲಾಗುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ದೇಶದ 45 … Continued

ಅಯೋಧ್ಯಾ ರಾಮಮಂದಿರ ನಿರ್ಮಾಣದ ವೀಡಿಯೊ ಬಿಡುಗಡೆ ಮಾಡಿದ ಟ್ರಸ್ಟ್‌ | ವೀಕ್ಷಿಸಿ

ಅಯೋಧ್ಯಾ : ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗುರುವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಯ ವೀಡಿಯೊವನ್ನು ಬಿಡುಗಡೆ ಮಾಡಿದೆ. 2024 ರ ಜನವರಿ 22ರಂದು ಗರ್ಭಗೃಹದಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲು ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ ಒಂದು ದಿನದ ನಂತರ ಈ ವೀಡಿಯೊ ಹಂಚಿಕೊಂಡಿದೆ. X ನಲ್ಲಿ ಬಿಡುಗಡೆಯಾದ ವೀಡಿಯೊವು … Continued

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ: ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಹಾಗೂ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಅವರು ಪ್ರಧಾನಿಯವರನ್ನು ಭೇಟಿಯಾಗಿ 2024ರ ಜನವರಿ 22 ರಂದು ಉತ್ತರ … Continued

ಅಯೋಧ್ಯೆ ರಾಮ ಮಂದಿರ : ಈ ವರ್ಷದ ಮಾರ್ಚ್‌ ವರೆಗೆ 900 ಕೋಟಿ ಖರ್ಚು, ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂ ಇದೆ: ಚಂಪತ್ ರಾಯ್‌

ಅಯೋಧ್ಯೆ : ಫೆಬ್ರವರಿ 5, 2020 ಮತ್ತು ಈ ವರ್ಷದ ಮಾರ್ಚ್ 31 ರ ನಡುವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 900 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಮತ್ತು ಟ್ರಸ್ಟ್ ತನ್ನ ಬ್ಯಾಂಕ್ ಖಾತೆಗಳಲ್ಲಿ 3,000 ಕೋಟಿ ರೂಪಾಯಿಗಳನ್ನು ಹೊಂದಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ … Continued