ಕರಡಿ ದಾಳಿಗೆ ಅಪ್ಪ-ಮಗ ಸಾವು : ಅರಣ್ಯಾಧಿಕಾರಿ ಮೇಲೆ ಕರಡಿಯ ಭೀಕರ ದಾಳಿ ವೀಡಿಯೊ ವೈರಲ್

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ತಂದೆ-ಮಗನ ಮೇಲೆ ಕೋಪಗೊಂಡ ಕರಡಿ ಮಾರಣಾಂತಿಕವಾಗಿ ದಾಳಿ ಮಾಡಿ ಕೊಂದುಹಾಕಿದೆ. ಸುಕ್ಲಾಲ್ ದರ್ರೋ (45) ಮತ್ತು ಅಜ್ಜು ಕುರೇಟಿ (22) ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಕರಡಿ ದಾಳಯಿಂದ ಸಾವಿಗೀಡಾಗಿದ್ದಾರೆ. ಒಡಿಶಾ-ಛತ್ತೀಸ್‌ಗಢ ಗಡಿಯಲ್ಲಿರುವ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ದಂಗರಕ್ತ ಗ್ರಾಮದ ಬಳಿಯ ಜೆಲಂಕಾಸ ಅರಣ್ಯದಲ್ಲಿ ಈ … Continued

ಯಲ್ಲಾಪುರ : ಬೈಕ್‌ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು ; ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಿಗೆ ಗಂಭೀರ ಗಾಯ

ಯಲ್ಲಾಪುರ : ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದ್ಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ನಡೆದಿದೆ. ಈ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು ಶನಿವಾರ ಬೆಳಿಗ್ಗೆ ಏಳು ಗಂಟೆ ಹೊತ್ತಿಗೆ ಕಾರ್ಯನಿರ್ಮಿತ್ತ ದ್ವಿಚಕ್ರವಾಹನದಲ್ಲಿ ಚಂದ್ಗುಳಿ ಪಂಚಾಯತದ ಸದಸ್ಯ ಹಾಗೂ ಪಿ.ಎಲ್.ಡಿ ಬ್ಯಾಂಕ್ … Continued

ಖಾನಾಪುರ ಅರಣ್ಯದಲ್ಲಿ ಕರಡಿ ದಾಳಿಯಿಂದ ತುಂಡಾಯ್ತು ರೈತನ ಕಾಲು

ಬೆಳಗಾವಿ : ಖಾನಾಪುರ ತಾಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿದೆ. ರೈತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾನ ಗ್ರಾಮದ ಸಖಾರಾಮ ಗಾಂವಕರ (62) ದಾಳಿಗೆ ಒಳಗಾದ ರೈತರಾಗಿದ್ದಾರೆ. ಅವರು ಪತ್ನಿಯೊಂದಿಗೆ ಜಾನುವಾರುಗಳ ಸಮೇತ ತಮ್ಮ ಹೊಲಕ್ಕೆ ಹೊರಟಿದ್ದರು. ದಾರಿಯಲ್ಲಿ ಕರಡಿ ಎದುರಾಗಿದೆ. ಅದನ್ನು ಕಂಡ ಸಖಾರಾಮ … Continued

ಖಾನಾಪುರ : ಮುಂಡವಾಡದಲ್ಲಿ ವ್ಯಕ್ತಿ ಮೇಲೆ ಕರಡಿ ದಾಳಿ

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಮುಂಡವಾಡ ಗೌಳಿವಾಡದ ರೈತರೊಬ್ಬರ ಮೇಲೆ ಭಾನುವಾರ ಜಮೀನಿಗೆ ತೆರಳುತ್ತಿದ್ದ ವೇಳೆ ಎರಡು ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ವಿನೋದ ಜಾಧವ (46) ಎಂಬವರು ಭಾನುವಾರ ಬೆಳಗ್ಗಿನ ಹೊತ್ತು ಎಂದಿನಂತೆ ತಮ್ಮ ಜಮೀನಿಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಕರಡಿಗಳು ದಾಳಿ ಮಾಡಿವೆ ಎಂದು ಹೇಳಲಾಗಿದೆ. ಅವರು ಗಾಯಗೊಂಡ … Continued

ಖಾನಾಪುರ: ದೇವರಾಯಿ ಗ್ರಾಮದ ಬಳಿ ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಕರಡಿ ದಾಳಿ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕು ದೇವರಾಯಿ ಗ್ರಾಮದ ರೈತ ನಾರಾಯಣ ಚೌರಿ (65) ಎಂಬವರ ಮೇಲೆ ಸೋಮವಾರ ಸಂಜೆ ಕರಡಿ ದಾಳಿ ನಡೆಸಿದೆ. ಅವರು ತಮ್ಮ ದನಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿದೆ. ಅವರ ಕೂಗಿಕೊಂಡಿದ್ದು, ಅವರ ಕೂಗು ಕೇಳಿದ ಗ್ರಾಮಸ್ಥರು … Continued