ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌ ಸೋಂಕು ಪತ್ತೆ ; ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

ಬೆಂಗಳೂರು: ಚೀನಾದಲ್ಲಿ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV virus) ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿದ್ದು, ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ದೃಢಪಡಿಸಿದೆ. 3 ತಿಂಗಳ ಶಿಶು ಹಾಗೂ 8 ತಿಂಗಳ ಶಿಶುವಿನಲ್ಲಿ ಎಚ್‌ಎಂಪಿವಿ ಸೋಂಕು ಪತ್ತೆಯಾಗಿದ್ದುಸೂಕ್ತ ಚಿಕಿತ್ಸೆ ನಂತರ ಮೂರು ತಿಂಗಳ ಶಿಶುವನ್ನು … Continued

ಬೆಂಗಳೂರು | ಇಬ್ಬರು ಮಕ್ಕಳನ್ನು ಕೊಂದು ಟೆಕ್ಕಿ ದಂಪತಿ ಆತ್ಮಹತ್ಯೆ..!

ಬೆಂಗಳೂರು: ಸಾಫ್ಟ್‌ವೇರ್ ಸಲಹೆಗಾರ, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಕುಟುಂಬವು ಬೆಂಗಳೂರಿನ ತಮ್ಮ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಪ್ರಕರಣವನ್ನು ಕೊಲೆ-ಆತ್ಮಹತ್ಯೆ ಎಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅನೂಪಕುಮಾರ (38), ಅವರ ಪತ್ನಿ ರಾಖಿ (35), ಅವರ 5 ವರ್ಷದ ಮಗಳು ಅನುಪ್ರಿಯಾ ಮತ್ತು … Continued

ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ ಎಂಪಿ ವೈರಸ್‌ ಪತ್ತೆ; ಪ್ರಯಾಣ ಮಾಡಿದ ಇತಿಹಾಸ ಇಲ್ಲ…

ಬೆಂಗಳೂರು: ಕರ್ನಾಟಕದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್‌ಎಂಪಿವಿ) ಎರಡು ಪ್ರಕರಣಗಳನ್ನು ಆರೋಗ್ಯ ಸಚಿವಾಲಯ ಸೋಮವಾರ ದೃಢಪಡಿಸಿದೆ. ಡಿಸ್ಚಾರ್ಜ್ ಆಗಿರುವ 3 ತಿಂಗಳ ಮಗು ಮತ್ತು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ 8 ತಿಂಗಳ ಮಗು.ಬೆಂಗಳೂರಿನಲ್ಲಿ ಇಂದು, ಸೋಮವಾರ ಎರಡು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV ) ಪ್ರಕರಣಗಳು ವರದಿಯಾಗಿವೆ. ಇದು ಭಾರತದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV)ನ ಮೊದಲ ವರದಿಯಾದ ಪ್ರಕರಣ ಎಂದು … Continued

ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿ ವೈರಸ್‌ ಸೋಂಕು ಪತ್ತೆ

ಬೆಂಗಳೂರು: ಭಾರತದಲ್ಲಿ ಹ್ಯೂಮನ್ ಮೆಟಾ ನ್ಯುಮೋವೈರಸ್ (HMPV) ಪ್ರಕರಣ ಕಂಡುಬಂದಿದ್ದು, ಬೆಂಗಳೂರಿನ 8 ತಿಂಗಳ ಶಿಶುವಿನಲ್ಲಿ ಇದು ಕಂಡುಬಂದಿದೆ ಎಂದು ವರದಿಯಾಗಿದೆ. ಇದು ಭಾರತದಲ್ಲಿ ಕಂಡುಬಂದ ಮೊದಲ ಪ್ರಕರಣ ಎಂದು ಹೇಳಲಾಗಿದೆ. 8 ತಿಂಗಳ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಚ್‌ಎಂಪಿವಿ (HMPV) ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು ಮಗುವಿನ ರಕ್ಷ … Continued

ಬಸ್ ಟಿಕೆಟ್ ದರ ಹೆಚ್ಚಳ ; ಇಂದಿನಿಂದಲೇ (ಜನವರಿ 5) ಜಾರಿ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಟಿಕೆಟ್‌ ದರದಲ್ಲಿ ಶೇ. 15ರಷ್ಟು ಏರಿಕೆ ಮಾಡಿದ್ದು, ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಇಂದು (ಜನವರಿ 5) ಮಧ್ಯರಾತ್ರಿಯಿಂದ ಶೇ 15ರಷ್ಟು ಏರಿಕೆಯ ಪರಿಷ್ಕೃತ ದರ ಅನ್ವಯವಾಗಲಿದೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), … Continued

ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರು ಸಾವು

ಬೆಂಗಳೂರು : ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯ ಬಳಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮೃತ ಸಹೋದರಿಯರನ್ನು ಗೋವಿಂದಪುರದ ನಾಜಿಯಾ ಸುಲ್ತಾನ (30), ನಾಜಿಯಾ ಇರ್ಫಾನ (32) ಎಂದು ಗುರುತಿಸಲಾಗಿದೆ. ಇಂದು ಶನಿವಾರ ಮಧ್ಯಾಹ್ನ ಥಣಿಸಂದ್ರ ಮುಖ್ಯ ರಸ್ತೆಯ ಸರಾಯಿಪಾಳ್ಯದ ಬಳಿ ಬಿಬಿಎಂಪಿ … Continued

ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ

ಬೆಂಗಳೂರು : ಶಾಸಕ ಮುನಿರತ್ನ ಅವರು ದಿ.ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ತಲೆಗೆ ಮೊಟ್ಟೆ ಎಸೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನ ಲಗ್ಗೆರೆ ಬಳಿಯ ಲಕ್ಷ್ಮೀದೇವಿ ನಗರದಲ್ಲಿ ಬುಧವಾರ ಮಧ್ಯಾಹ್ನ 12:30ಕ್ಕೆ ಶಾಸಕ ಮುನಿರತ್ನ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದುಕೊಂಡು … Continued

ಡಿಜಿಟಲ್​ ಅರೆಸ್ಟ್​: ಬೆಂಗಳೂರಿನ ಟೆಕ್ಕಿಗೆ ಬರೋಬ್ಬರಿ 11.8 ಕೋಟಿ ರೂ. ವಂಚನೆ ಮಾಡಿದ ಖದೀಮರು…!

ಬೆಂಗಳೂರು : ಡಿಜಿಟಲ್ ಅರೆಸ್ಟ್ ಮೂಲಕ ನಗರದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರಿಗೆ 11.83 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ. ಈಶಾನ್ಯ ವಿಭಾಗದ ಸೆನ್ ಠಾಣೆಯ ಪೊಲೀಸರು ಪ್ರಕರಣದ ತನಿಖೆಗಾಗಿ ಎರಡು ತಂಡಗಳನ್ನು ರಚಿಸಿದ್ದಾರೆ. ಒಂದು ತಂಡ ಗುಜರಾತಿಗೆ, ಮತ್ತೊಂದು ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಸೈಬರ್ ವಂಚಕರಿಗಾಗಿ ಪತ್ತೆ ಕಾರ್ಯದಲ್ಲಿ ತೊಡಗಿವೆ. ಷೇರು … Continued

ವೀಡಿಯೊ..| ಬೆಂಗಳೂರು ; ಕಾರಿನ ಮೇಲೆ ಕಂಟೈನರ್‌ ಪಲ್ಟಿಯಾಗಿ 6 ಮಂದಿ ಸಾವು ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಕಂಟೈನರ್‌ ಲಾರಿ ಉರುಳಿ ಕಾರಿನಲ್ಲಿದ್ದ ಒಂದೇ ಕುಟುಂಬದ 6 ಮಂದಿ ಮೃತಪಟ್ಟ ದುರ್ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರಿನ ಮೇಲೆ ತುಮಕೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕಂಟೈನರ್​ ಲಾರಿ ಬಿದ್ದಿತ್ತು. ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ … Continued

ಬೆಂಗಳೂರು | ಕಾರಿನ ಮೇಲೆ ಕಂಟೇನರ್​ ಪಲ್ಟಿ: ಕಾರಿನೊಳಗಿದ್ದ 6 ಮಂದಿ ಅಪ್ಪಚ್ಚಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ (ಡಿ. 21) ಚಾಲಕನ ನಿಯಂತ್ರಣ ತಪ್ಪಿ ಲಾರಿ ಕಾರಿನ ಮೇಲೆ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 6 ಮಂದಿ ಸಾವಿಗೀಡಾಗಿದ್ದಾರೆ. ಅ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌.ಪಿ. ಸಿ.ಕೆ.ಬಾಬಾ ಸೇರಿದಂತೆ ಇತರ ಅಧಿಕಾರಿಗಳು ಪೊಲೀಸರು ಧಾವಿಸಿ ಪರಿಶೀಲನೆ … Continued