ವೀಡಿಯೊ…| ಬೆಂಗಳೂರಿನ ಬೀದಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ; ನಂತರ ಪರಾರಿ

ಬೆಂಗಳೂರು : ನಡು ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ವೀಡಿಯೊ ಕೂಡ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರನ್ನು ಹಿಂಬಾಲಿಸಿ ಹತ್ತಿರ ಬರುವುದನ್ನು ವೀಡಿಯೊ ತೋರಿಸುತ್ತದೆ, ಆತ ಅವರಲ್ಲಿ ಒಬ್ಬರನ್ನು ತಬ್ಬಿಕೊಳ್ಳಲು ಹಿಡಿದುಕೊಂಡಿದ್ದು ಕ್ಷಣಗಳ ನಂತರ ಓಡಿಹೋಗಿದ್ದಾನೆ. ಘಟನೆ … Continued

ಡೀಸೆಲ್‌ ದರ ಏರಿಕೆ ; ಏ.15ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ

ಬೆಂಗಳೂರು : ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಲಾರಿ ಮಾಲೀಕರು, ಏಪ್ರಿಲ್ 15 ರಂದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಲಾರಿ ಮಾಲೀಕರು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಎಲ್ಲ ಬಗೆಯ … Continued

ಬೆಂಗಳೂರು | ಕೆಲಸ ಸಿಗದ ನಿರಾಸೆಯಲ್ಲಿ ತನ್ನದೇ ಶ್ರದ್ಧಾಂಜಲಿ ಪೋಸ್ಟ್ ಹಂಚಿಕೊಂಡ ಯುವಕ…!

ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೊಬ್ಬ ಮಾಡಿದ ವಿಚಿತ್ರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಉದ್ಯೋಗ ಸಿಗದೆ ಹತಾಶನಾದ ಈ ಯುವಕ ಲಿಂಕ್ಡ್ ಇನ್ ನಲ್ಲಿ ತನ್ನದೇ ಶ್ರದ್ಧಾಂಜಲಿ (obituary) ಪೋಸ್ಟ್ ಹಾಕಿಕೊಂಡಿದ್ದಾನೆ. ಕೆಲಸದ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ ಹಾಗೂ ನಿರುದ್ಯೋಗಿಗಳ ಕರಾಳತೆ ಬಿಚ್ಚಿಟ್ಟಿದ್ದಾನೆ. ಈ ಪೋಸ್ಟ್ ಗೆ ನೆಟ್ಟಿಗರು ನಾನಾ … Continued

4 ತಿಂಗಳಲ್ಲಿ 49 ಕೆಜಿ ಕಳ್ಳ ಸಾಗಾಣೆ ಮಾಡಿದ್ದ ನಟಿ ರನ್ಯಾ ರಾವ್‌ ; 38 ಕೋಟಿ ರೂ. ಹವಾಲಾ ವರ್ಗಾವಣೆಗೆ ಸಹ ಆರೋಪಿಗಳ ಸಹಾಯ…

ಬೆಂಗಳೂರು: ದುಬೈಯಿಂದ ಚಿನ್ನ ಅಕ್ರಮ ಕಳ್ಳ ಸಾಗಣೆ (Gold Smuggling Case) ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಕನ್ನಡ ನಟಿ ರನ್ಯಾ ರಾವ್ (Ranya Rao) ಕುರಿತಾದ ಮತ್ತಷ್ಟು ಸಂಗತಿಗಳು ಹೊರಬಿದ್ದಿವೆ. ಈ ಪ್ರಕರಣದ 3ನೇ ಆರೋಪಿ ಸಾಹಿಲ್ ಜೈನ್ ಎಂಬಾತ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತನಿಖಾಧಿಕಾರಿಗಳ ಮುಂದೆ ಅನೇಕ ಸಂಗತಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು … Continued

ಬೆಂಗಳೂರು | ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿದ ಚಿರತೆ ಕೂಡಿ ಹಾಕಿದ ದಂಪತಿ ; 5 ತಾಸು ಕಾರ್ಯಾಚರಣೆ ನಂತರ ಸೆರೆ

 ಬೆಂಗಳೂರು: ತಮ್ಮ ಮನೆಯೊಳಗೆ ನುಗ್ಗಿದ ಚಿರತೆಯನ್ನು ದಂಪತಿ ಮನೆಯೊಳಗೆ ಕೂಡಿ ಹಾಕಿದ ನಂತರ ತಕ್ಷಣವೇ ಕಟ್ಟಡದಿಂದ ಹೊರಬಂದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಐದು ಗಂಟೆಗಳ ಕಾರ್ಯಾಚರಣೆಯ ನಂತರ ಚಿರತೆಯನ್ನು ಸೆರೆ ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕೊಂಡೊಯ್ಯಲಾಯಿತು. ಬೆಂಗಲೂರು ನಗರದ ಹೊರವಲಯದ ಜಿಗಣಿಯಲ್ಲಿರುವ ಕುಂಟ್ಲು ರೆಡ್ಡಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಮಂಜುನಾಥ … Continued

6 ವಾರಗಳಲ್ಲಿ ಓಲಾ, ಉಬರ್, ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು : ಓಲಾ, ಉಬರ್‌ ಮತ್ತು ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ಆರು ವಾರಗಳಲ್ಲಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ಮಾಡಿದೆ. ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಎಎನ್‌ಐ ಟೆಕ್ನಾಲಜೀಸ್‌ … Continued

ವಿಧಾನಸೌಧದ ಮುಂದೆ ವಿಷ ಸೇವಿಸಲು ಯತ್ನಿಸಿದ ಯುವಕ

ಬೆಂಗಳೂರು: ವಿಧಾನಸೌಧದ ಮುಂದೆಯೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಭದ್ತರಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಂಜಯ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವ ಎಂದು ಹೇಳಲಾಗಿದೆ. ಕೂಡಲೇ ವಿಧಾನಸೌಧ ಠಾಣೆಯ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ಲಾಸ್ಟಿಕ್ ಕವರ್‌ನಲ್ಲಿ ವಿಷದ ಸಣ್ಣ ಬಾಟಲು ಹಾಗೂ ಕೆಲವು … Continued

ಬೆಂಗಳೂರು | ಉದ್ಯಮಿ ಹನಿಟ್ರ್ಯಾಪ್ ಪ್ರಕರಣ ; ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಆರೋಪ ; ಪ್ರಿಸ್ಕೂಲ್ ಶಿಕ್ಷಕಿ, ಇಬ್ಬರ ಬಂಧನ

ಬೆಂಗಳೂರು : ಉದ್ಯಮಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಶಿಶುವಿಹಾರದ ಶಿಕ್ಷಕಿ ಸೇರಿದಂತೆ ಮೂವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ ಶಿಶುವಿಹಾರ (ಪ್ರಿ ಸ್ಕೂಲ್‌)ದ ಮಗುವಿನ ತಂದೆಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 25 ವರ್ಷದ ಶ್ರೀದೇವಿ ರೂಡಗಿ ಮತ್ತು ಗಣೇಶ ಕಾಳೆ (38) … Continued

ಬೆಂಗಳೂರು | ಎಣ್ಣೆ ಪಾರ್ಟಿಗೆ ಬಂದಿದ್ದ ರೌಡಿಶೀಟರ್‌ ನೇಪಾಳಿ ಮಂಜನ ಬರ್ಬರ ಹತ್ಯೆ

ಆನೇಕಲ್: ಕುಖ್ಯಾತ ರೌಡಿ ಶೀಟರ್ (Rowdy Sheeter) ನೇಪಾಳಿ ಮಂಜನನ್ನು ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಘಿದೆ. ಆಹ್ವಾದ ಮೇಲೆ ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ ಆತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯ ಬಳಿಯ ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, ಹಳೆಯ … Continued

ಬೆಂಗಳೂರು | ಬೆಚ್ಚಿ ಬೀಳಿಸುವ ಘಟನೆ : ಪತ್ನಿಯನ್ನು ಕೊಂದು ಸೂಟ್ ಕೇಸಿನಲ್ಲಿ ತುಂಬಿ ಆಕೆಯ ತವರು ಮನೆಗೆ ಫೋನ್‌ ಕರೆ ಮಾಡಿ ಪರಾರಿಯಾದ ಗಂಡ..

ಬೆಂಗಳೂರು: ಗೌರಿ ಖೇಡೇಕರ ಅಲಿಯಾಸ್ ಗೌರಿ ಅನಿಲ ಸಾಂಬ್ರೇಕರ (32) ಎಂಬ ಮಹಿಳೆಯನ್ನು ಆಕೆಯ ಪತಿ ರಾಕೇಶ ರಾಜೇಂದ್ರ ಖೇಡೇಕರ (36) ಎಂಬಾತ ದೊಡ್ಡಕಮ್ಮನಹಳ್ಳಿಯ ತಮ್ಮ ಮನೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ನಂತರ ಆರೋಪಿ ರಾಕೇಶ ಆಕೆಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾನೆ. ಮತ್ತು … Continued