37 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ದೇಶದ ಅತ್ಯಂತ ದೀರ್ಘಾವಧಿ ಕೈದಿ ಸಾಯಿಬಣ್ಣ

 ಬೆಂಗಳೂರು: ನಿಧಾನವಾದ ಹೆಜ್ಜೆಗಳು, ಉದ್ದನೆಯ ಬಿಳಿ ಗಡ್ಡ, ಕಾಲದ ಗುರುತು ಮೂಡಿಸಿರುವ ಬಿಳಿ ಕೂದಲಿನ 72 ವರ್ಷದ ಸಾಯಿಬಣ್ಣ ಎನ್‌. ನಾಟೀಕರ ಅವರು ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ದ್ವಾರದಿಂದ ಹೊರಬಂದರು. ಸುಮಾರು 37 ವರ್ಷಗಳ ಕಾಲ ಜೈಲಿನಲ್ಲಿದ್ದ ಅವರು ಕೊನೆಗೂಜೈಲಿನಿಂದ ಹೊರಬಂದಿದ್ದಾರೆ. ಉತ್ತಮ ನಡವಳಿಕೆ ಹಾಗೂ ಪುನರ್ವಸತಿ ನೀತಿಯಡಿ ಕರ್ನಾಟಕ … Continued

ವಾಣಿಜ್ಯ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದಲೇ ಹೊಸ ದರ ಜಾರಿ

ನವದೆಹಲಿ: ಜುಲೈ 1ರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳಿಂದ ನೆಮ್ಮದಿ ಸುದ್ದಿ ಸಿಕ್ಕಿದೆ. ತೈಲ ಮಾರುಕಟ್ಟೆ ಕಂಪನಿಗಳು (OMCs) 19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹183.50 ಇಳಿಕೆ ಮಾಡಿವೆ. ಜುಲೈ 1ರಿಂದಲೇ ಈ ಹೊಸ ದರಗಳು ಜಾರಿಗೆ ಬಂದಿದೆ.  ಆದರೆ ಗೃಹ … Continued

ಹೆಸರಾಂತ ಚಿತ್ರಕಲಾವಿದ ಕೆ.ಟಿ ಶಿವಪ್ರಸಾದ ನಿಧನ

ಬೆಂಗಳೂರು: ಹೆಸರಾಂತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ (KT Shivaprasad) ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಕೃಷಿ ಕುಟುಂಬದಲ್ಲಿ ಜನಿಸಿದ ಶಿವಪ್ರಸಾದ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಆಸಕ್ತಿ ಇತ್ತು. ಆದರೆ … Continued

ವಿಡಿಯೋ | ಬೆಂಗಳೂರು : ಹೆಲ್ಮೆಟ್ ಇಲ್ಲದೆ ಹೋಗುತ್ತಿದ್ದ ಬೈಕ್ ಸವಾರನ ತಲೆ ಮೇಲೆ ಬಿದ್ದ ಮರದ ಕೊಂಬೆ ; ಗಂಭೀರ ಗಾಯ

ಬೆಂಗಳೂರು: ಮಹಾನಗರದ ರಾಜಾಜಿನಗರದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ, ರಸ್ತೆಯ ಬದಿಯ ಒಣ ಮರದ ಬೃಹತ್ ಕೊಂಬೆಯೊಂದು ಬೈಕ್ ಸವಾರನ ತಲೆಯ ಮೇಲೆ ಬಿದ್ದ ಪರಿಣಾಮ 52 ವರ್ಷದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಈ ಘಟನೆ ಬುಧವಾರ ಸಂಜೆ ನಡೆದಿದೆಎಂದು ಹೇಳಲಾಗಿದೆ. ಈ ಘಟನೆ ರಾಮಮಂದಿರ ರಸ್ತೆಯಲ್ಲಿ ನಡೆದಿದ್ದು, ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ … Continued

ವಿಡಿಯೋ | ಬೆಂಗಳೂರು : ಚಲಿಸುತ್ತಿದ್ದ ಶಾಲಾ ವಾಹನದ ಹಿಂಬಾಗಿಲು ತೆರೆದು ರಸ್ತೆಗೆ ಬಿದ್ದ ಮಕ್ಕಳು….!

ಬೆಂಗಳೂರು: ಶಾಲಾ ಮಕ್ಕಳನ್ನು ಒಯ್ಯುತ್ತಿದ್ದ ಓಮ್ನಿಯ ಹಿಂಬದಿಯ ಬಾಗಿಲು ದಿಢೀರನೆ ತೆರೆದುಕೊಂಡ ಪರಿಣಾಮ ರಸ್ತೆಗೆ ಬಿದ್ದ ಐವರು ಶಾಲಾ ಮಕ್ಕಳಿಗೆ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ ಎಂದುವರದಿಯಾಗಿದೆ. ಮಕ್ಕಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಕೆ.ಆರ್.ಪುರಂನ ಗಾಯತ್ರಿ ಲೇಔಟ್‌ನಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್ … Continued

ವಿಶ್ವದ ಎಲ್ಲ ದೇಶಗಳಿಗೂ ಭೇಟಿ ನೀಡಿ ದಾಖಲೆ ಬರೆದ ಬೆಂಗಳೂರು ಮೂಲದ ಗಿಟಾರ್‌ ವಾದಕ ಬೆನ್ನಿ ಪ್ರಸಾದ…!

ಬೆಂಗಳೂರು ಮೂಲದ ಹೆಸರಾಂತ ಗಿಟಾರ್ ವಾದಕ ಮತ್ತು ಜಾಗತಿಕ ಪ್ರವಾಸಿ ಬೆನ್ನಿ ಪ್ರಸಾದ (Benny Prasad) ಅವರು ತಮ್ಮ ಜೀವಮಾನದ ಅಪರೂಪದ ಪ್ರವಾಸದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಜಗತ್ತಿನ ಒಟ್ಟು 245 ದೇಶ ಹಾಗೂ ಪ್ರಾಂತ್ಯಗಳಿಗೆ ಭೇಟಿ ನೀಡಿರುವ ಅವರು, ಅದಕ್ಕೆ ಪುರಾವೆಯಾಗಿ ವೀಸಾ ಮತ್ತು ಸೀಲ್‌ಗಳಿಂದ ತುಂಬಿ … Continued

ಇ.ಡಿ.ದಾಳಿ ; ಮಂಜುನಾಥ, ಆಪ್ತರ ಬಳಿ ₹5.5 ಕೋಟಿ ನಗದು, ₹7.8 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ…!

ಬೆಂಗಳೂರು : ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಹಾಗೂ ಇತರ ಅಧಿಕಾರಿಗಳ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ್ದ ದಾಳಿ ಅಂತ್ಯವಾಗಿದ್ದು ಸುಮಾರು 13 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಈ ಬಗ್ಗೆ ಸಮಗ್ರ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಬೆಳಗಾವಿ … Continued

ನಟಿ ಕೃಷಿ ತಾಪಂಡ ಬೆಂಗಳೂರು ನಿವಾಸದಲ್ಲಿ ಉದ್ಯಮಿ ಶವವಾಗಿ ಪತ್ತೆ

ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಕನ್ನಡ ಚಿತ್ರರಂಗದ ಖ್ಯಾತ ನಟಿ ಕೃಷಿ ತಾಪಂಡ ಅವರ ನಿವಾಸದಲ್ಲಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಭವಿಸಿದೆ ಎಂದು ಗುರುವಾರ ವರದಿಯಾಗಿದೆ. ಮೃತರನ್ನು ವೈಶಾಕ್ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಬುಧವಾರ ರಾತ್ರಿ ಸುಮಾರು 8:30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಮಯದಲ್ಲಿ ನಟಿ ಕೃಷಿ ತಾಪಂಡ … Continued

ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ; ಯಾರಿಗೆ ಯಾವ ಜಿಲ್ಲೆ ; ಇಲ್ಲಿದೆ ವಿವರ

ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ (DK Shivakumar) ಅಧಿಕಾರ ಸ್ವೀಕರಿಸಿದ 3 ವಾರಗಳ ಬಳಿಕ ಇದೀಗ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಮಳೆಗಾಲದ ತುರ್ತು ಪರಿಸ್ಥಿತಿ ಮತ್ತು ಪ್ರವಾಹ ನಿರ್ವಹಣೆಗಾಗಿ ಅವರು ತಾತ್ಕಾಲಿಕವಾಗಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ … Continued

ಬೆಂಗಳೂರು : ಬೆಚ್ಚಿಬೀಳಿಸಿದ ಘಟನೆ ; ಪ್ರಿಯಕರನ ಜೊತೆ ಸೇರಿ ತಂದೆ-ತಾಯಿ, ತಂಗಿಯನ್ನೇ ಇರಿದು ಕೊಂದಳಾ ಯುವತಿ…!?

ಬೆಂಗಳೂರು :  ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಒಂದೇ ಕುಟುಂಬದ ಮೂವರು ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಲಿವ್-ಇನ್ ರಿಲೇಷನ್‌ಶಿಪ್‌ಗೆ (Live In Relationship) ಪೋಷಕರು ವಿರೋಧ ವ್ಯಕ್ತಪಡಿಸಿದ ಕಾರಣ ಹಿರಿಯ ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ-ತಾಯಿ ಹಾಗೂ ತಂಗಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಮೃತರನ್ನು ಸೋಮಸುಂದರ (55), … Continued