‘ಒತ್ತೆಯಾಳುಗಳ ಪಟ್ಟಿ ಮೊದಲು ಬಿಡುಗಡೆ ಮಾಡಿ…ಅಲ್ಲಿಯವರೆಗೂ ಕದನ ವಿರಾಮ ಇಲ್ಲ…’: ಹಮಾಸ್‌ ಗೆ ತಿಳಿಸಿದ ಇಸ್ರೇಲ್‌

ಹಮಾಸ್ ಮೊದಲ ಹಂತದಲ್ಲಿ ಬಿಡುಗಡೆ ಮಾಡಲಿರುವ 33 ಒತ್ತೆಯಾಳುಗಳ ಪಟ್ಟಿಯನ್ನುಬಿಡುಗಡೆ ಮಾಡುವ ವರೆಗೆ ಇಸ್ರೇಲ್ ಗಾಜಾ ಕದನ ವಿರಾಮ ಒಪ್ಪಂದ ಮುಂದುವರಿಸುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಹೇಳಿದ್ದಾರೆ. ಕದನ ವಿರಾಮ ಒಪ್ಪಂದವು ಜಾರಿಗೆ ಬರಲು ಕೆಲವು ಗಂಟೆಗಳ ಮೊದಲು ಅವರ ಈ ಹೇಳಿಕೆ ಬಂದಿದೆ. ಹಮಾಸ್ ಒತ್ತೆಯಾಳುಗಳ ಹೆಸರನ್ನು ಅವರ ಬಿಡುಗಡೆಗೆ ಕನಿಷ್ಠ … Continued

ವೀಡಿಯೊ…| ಇಸ್ರೇಲಿ ಪ್ರಧಾನಿ ನೆತನ್ಯಾಹು ಮನೆ ಮೇಲೆ ಫ್ಲ್ಯಾಶ್ ಬಾಂಬ್‌ ದಾಳಿ

ಶನಿವಾರ ಇಸ್ರೇಲಿನ ಉತ್ತರ ಪಟ್ಟಣವಾದ ಸಿಸೇರಿಯಾದಲ್ಲಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಎರಡು ಫ್ಲಾಶ್ ಬಾಂಬ್‌ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಪ್ರಧಾನಿ ನೆತನ್ಯಾಹು ಮತ್ತು ಅವರ ಕುಟುಂಬವು ಮನೆಯಲ್ಲಿ ಇರಲಿಲ್ಲ ಮತ್ತು ಫ್ಲ್ಯಾಷ್ ಬಾಂಬ್ ನೆತನ್ಯಾಹು ಅವರ ಮನೆಯ ಉದ್ಯಾನಕ್ಕೆ ಬಿದ್ದ ನಂತರ ಬೆಂಕಿ ಹೊತ್ತಿ ಉರಿದಿದೆ. … Continued

ವೀಡಿಯೊ..| ಹಮಾಸ್ ಮುಖ್ಯಸ್ಥನ ಹತ್ಯೆಯ ನಂತರ ಇಸ್ರೇಲ್ ಪ್ರಧಾನಿ ಮನೆ ಮೇಲೆ ಹಿಜ್ಬೊಲ್ಲಾ ಡ್ರೋನ್ ದಾಳಿ ವಿಫಲಗೊಳಿಸಿದ ಭದ್ರತಾ ಸಿಬ್ಬಂದಿ

ಟೆಲ್ ಅವೀವ್: ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಡ್ರೋನ್ ದಾಳಿ ನಡೆಸಿರುವ ಹಿಜ್ಬೊಲ್ಲಾ ಉಗ್ರಸಂಘಟನೆ ಪ್ರಯತ್ನವನ್ನು ಇಸ್ರೇಲ್‌ ಭದ್ರತಾ ಸಿಬ್ಬಂದಿ ಇದನ್ನು ವಿಫಲಗೊಳಿಸಿವೆ. ಅವರು ಡ್ರೋನ್ ಹೊಡೆದುರುಳಿಸುವ ಮೂಲಕ‌ ಹತ್ಯೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು … Continued

ಇರಾನ್ ಇಂದೇ ಇಸ್ರೇಲ್ ಮೇಲೆ ದಾಳಿ ಮಾಡಬಹುದು ; ಇರಾನ್‌ ಮೇಲೆ ಪೂರ್ವಭಾವಿ ದಾಳಿಗೆ ನೆತನ್ಯಾಹು ಒಪ್ಪಬಹುದು : ವರದಿ

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ಮತ್ತು ಹಿಜ್ಬುಲ್ಲಾ ದಾಳಿ ಸೋಮವಾರದಿಂದಲೇ ಪ್ರಾರಂಭವಾಗಬಹುದು ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜಿ7 ದೇಶಗಳ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ. ಆದಾಗ್ಯೂ, ಇಸ್ರೇಲ್‌ನ ಪ್ರಮುಖ ದೈನಿಕ ಟೈಮ್ಸ್ ಆಫ್ ಇಸ್ರೇಲ್, ಬೆಂಜಮಿನ್ ನೆತನ್ಯಾಹು ನೇತೃತ್ವದ ಸರ್ಕಾರವು ಇಸ್ರೇಲಿ ನೆಲದ ಮೇಲಿನ ದಾಳಿ ತಡೆಯಲು … Continued

ವೀಡಿಯೊ…| ಹಮಾಸ್‌ ನಿಯಂತ್ರಣದಲ್ಲಿರುವ ಗಾಜಾ ಪ್ರವೇಶಿಸಿದ ಇಸ್ರೇಲಿ ಪ್ರಧಾನಿ…!

ಟೆಲ್‌ ಅವೀವ್‌ : ಯುದ್ಧ ಪ್ರಾರಂಭವಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ಹಮಾಸ್ ಜೊತೆ ನಡೆಯುತ್ತಿರುವ ಕದನ ವಿರಾಮದ ನಡುವೆ ಉತ್ತರ ಗಾಜಾ ಪಟ್ಟಿಯಲ್ಲಿರುವ ಇಸ್ರೇಲಿ ಸೈನಿಕರನ್ನು ಭೇಟಿ ಮಾಡಿದ್ದಾರೆ. ಇಸ್ರೇಲ್ ಪಡೆಗಳು ಹಮಾಸ್ ಆಡಳಿತವಿರುವ ಗಾಜಾ ಪಟ್ಟಿಯ ಮೇಲೆ ಭೂ ಆಕ್ರಮಣ ಮಾಡಿ ಮೇಲುಗೈ ಸಾಧಿಸಿದ … Continued

ಇಸ್ರೇಲ್-ಹಮಾಸ್ ಯುದ್ಧ: ಹಮಾಸ್‌ ಉಗ್ರರಿಂದ 50 ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ, 4 ದಿನ ಕದನ ವಿರಾಮಕ್ಕೆ ಇಸ್ರೇಲ್‌ ಅನುಮೋದನೆ

ಜೆರುಸಲೇಮ್‌: ಹಮಾಸ್ ವಶದಲ್ಲಿರುವ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಗುಂಪು ಒಪ್ಪಿದ್ದು, ಇದಕ್ಕೆ ಪ್ರತಿಯಾಗಿ ಗಾಜಾದಲ್ಲಿ 4 ದಿನಗಳ ಕದನ ವಿರಾಮಕ್ಕೆ ಇಸ್ರೇಲ್‌ ಅನುಮೋದಿಸಿದೆ. ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ದಾಳಿ ಮಾಡಿದಾಗ ಹಮಾಸ್‌ ಗುಂಪು ಅಪಹರಿಸಿ ಗಾಜಾಕ್ಕೆ ಕರೆದೊಯ್ದ ಸುಮಾರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ … Continued

ಗಾಜಾದ ಮೇಲೆ ಪರಮಾಣು ಬಾಂಬ್ ಹಾಕುವುದು ‘ಒಂದು ಆಯ್ಕೆ’ ಎಂದ ಇಸ್ರೇಲಿ ಸಚಿವ; ಇದಕ್ಕೆ ಪ್ರಧಾನಿ ನೆತನ್ಯಾಹು ಮಾಡಿದ್ದೇನೆಂದರೆ….

ಗಾಜಾದ ಮೇಲೆ “ಪರಮಾಣು ಬಾಂಬ್ ಹಾಕುವುದು” ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಾಧ್ಯತೆಗಳಲ್ಲಿ ಒಂದಾಗಿದೆ ಎಂದು ಇಸ್ರೇಲ್‌ ಸಚಿವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಸ್ರೇಲ್‌ನ ಬಲಪಂಥೀಯ ನಾಯಕ ಮತ್ತು ಮಂತ್ರಿ ಅಮಿಹೈ ಎಲಿಯಾಹು ಅವರನ್ನು ರೇಡಿಯೊ ಕೋಲ್ ಬೆರಾಮಾಗೆ ನೀಡಿದ ಸಂದರ್ಶನದಲ್ಲಿ ಗಾಜಾದ ಮೇಲೆ ಪರಮಾಣು ಬಾಂಬ್ ಹಾಕುವ ಕುರಿತಾದ ಪ್ರಶ್ನೆಗೆ, “ಇದು … Continued