ಭಾರತೀಯ ಮೂಲದ ಈ ವ್ಯಕ್ತಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ…! ಇವರ ಸಂಬಳ ದಿನಕ್ಕೆ 48 ಕೋಟಿ ರೂ…!

ನವದೆಹಲಿ: ಭಾರತೀಯ ಮೂಲದ ಟೆಕ್ಕಿಯೊಬ್ಬರು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ವಾಂಟಮ್‌ ಸ್ಕೇಪ್‌ನ ಸಂಸ್ಥಾಪಕ ಜಗದೀಪ ಸಿಂಗ್ ಅವರ ವಾರ್ಷಿಕ ಆದಾಯ ರೂ. 17,500 ಕೋಟಿ ರೂ.ಗಳಾಗಿದೆ. ಅವರು ಪ್ರತಿದಿನ 48 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ ಎಂದು ವರದಿಗಳು ತಿಳಿಸಿವೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ … Continued

ವೀಡಿಯೊ…| ‘ಪೂರ್ವಯೋಜಿತ ದಾಳಿ’ಯಲ್ಲಿ ಹೋಟೆಲ್ ಹೊರಗೆ ಗುಂಡು ಹಾರಿಸಿ ಯುನೈಟೆಡ್ ಹೆಲ್ತ್‌ಕೇರ್ ಕಂಪನಿಯ ಸಿಇಒ ಹತ್ಯೆ…

ನವದೆಹಲಿ : ಅಮೆರಿಕ ಮೂಲದ ಯುನೈಟೆಡ್ ಹೆಲ್ತ್‌ಕೇರ್‌ನ ಸಿಇಒ ಬ್ರಿಯಾನ್ ಥಾಂಪ್ಸನ್ ಅವರನ್ನು ಬುಧವಾರ ನ್ಯೂಯಾರ್ಕ್ ಹೋಟೆಲ್‌ನ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬ್ರಿಯಾನ್‌ ಥಾಂಪ್ಸನ್ (50) ಅವರು, ನ್ಯೂಯಾರ್ಕ್ ಹಿಲ್ಟನ್ ಮಿಡ್‌ಟೌನ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹಿಂದಿನಿಂದ ಗುಂಡಿನ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಬ್ರಿಯಾನ್‌ ಥಾಂಪ್ಸನ್ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಮುಖ … Continued

60 ಕಿಮೀ ಬೆನ್ನಟ್ಟಿದ ನಂತರ ಪಾರ್ಶ್ವನಾಥ ಲ್ಯಾಂಡ್‌ಮಾರ್ಕ್ ಸಿಇಒ ಸಂಜೀವ್ ಜೈನ್ ಬಂಧನ…

ನವದೆಹಲಿ: ರಿಯಾಲ್ಟಿ ಸಂಸ್ಥೆಯ ಪಾರ್ಶ್ವನಾಥ ಡೆವಲಪರ್ಸ್‌ನ ಅಂಗಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ಸಂಜೀವ ಜೈನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 60 ಕಿಲೋಮೀಟರ್ ಬೆನ್ನಟ್ಟಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. “ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಹಾಜರಾಗಲು ವಿಫಲವಾದ ನಂತರ ಸಿಇಒ ಸಂಜೀವ ಜೈನ್ ವಿರುದ್ಧ ಜಾಮೀನು ರಹಿತ ವಾರೆಂಟ್‌ಗಳನ್ನು … Continued

ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

ನವದೆಹಲಿ : ಪೇಟಿಎಂ(Paytm)ನ ಮೂಲ ಕಂಪನಿ ಒನ್‌97 (One97) ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೇಶ ಗುಪ್ತಾ ಅವರು ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ. ನಾಯಕತ್ವ ಬದಲಾವಣೆಯ ಭಾಗವಾಗಿ, ಫಿನ್ಟೆಕ್ ಸಂಸ್ಥೆ ಪೇಟಿಎಂ ರಾಕೇಶ್ ಸಿಂಗ್ ಅವರನ್ನು ಪೇಟಿಎಂ ಮನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿದೆ. ಪಾವತಿ … Continued

ಬೆಂಗಳೂರು ಐಐಎಸ್‌ಸಿ ಹಳೆಯ ವಿದ್ಯಾರ್ಥಿ ವಿಪ್ರೋ ಕಂಪನಿಗೆ ನೂತನ ಸಿಇಒ

ಬೆಂಗಳೂರು : ವಿಪ್ರೋ ಕಂಪನಿಗೆ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಶ್ರೀನಿವಾಸ ಪಲ್ಲಿಯಾ ಅವರನ್ನು ನೇಮಕ ಮಾಡಲಾಗಿದೆ. ಥಿಯೆರಿ ಡೆಲಾಪೋರ್ಟೆ ಅವರು ಈ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶ್ರೀನಿವಾಸ ಪಲ್ಲಿಯಾ ಅವರು ಎಂಡಿ ಮತ್ತು ಸಿಇಒ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಬೆಂಗಳೂರು ಮೂಲದ ಐಟಿ ದೈತ್ಯ ಹೇಳಿಕೆಯಲ್ಲಿ ತಿಳಿಸಿದ್ದು, ತಕ್ಷಣವೇ ಜಾರಿಗೆ ಬರಲಿದೆ. … Continued

”ಇದು ನಾನಲ್ಲ…”: ಡೀಪ್‌ಫೇಕ್ ಅಪಾಯದ ಬಗ್ಗೆ ಹೇಳಲು ತಮ್ಮದೇ ಡೀಪ್‌ಫೇಕ್ ವೀಡಿಯೊ ಹಂಚಿಕೊಂಡ ಜೆರೋಧಾ ಕಂಪನಿಯ ನಿತಿನ್ ಕಾಮತ್ | ವೀಕ್ಷಿಸಿ

ಜೆರೋಧಾ ಕಂಪನಿ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ಹಣಕಾಸು ಸೇವಾ ಉದ್ಯಮದಲ್ಲಿ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಹೆಚ್ಚುತ್ತಿರುವ ಬೆದರಿಕೆ ಮತ್ತು ಡೀಪ್‌ಫೇಕ್‌ಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. X ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಡಿಜಿಟಲೀಕರಣವು ಸಾಮಾನ್ಯವಾಗುತ್ತಿದ್ದಂತೆ ಗ್ರಾಹಕರ ಗುರುತನ್ನು ಪರಿಶೀಲಿಸಲು ಸಾಧ್ಯವಾಗದ ತೊಂದರೆಯ ಬಗ್ಗೆ ಅವರು ಮಾತನಾಡಿದ್ದಾರೆ. ”ಆದರೆ ಡೀಪ್‌ಫೇಕ್‌ಗಳು … Continued

ಬೆಳಗಾವಿ ದಂಡು ಮಂಡಳಿ ಸಿಇಒ ಆತ್ಮಹತ್ಯೆ

ಬೆಳಗಾವಿ : ಬೆಳಗಾವಿ ದಂಡು ಮಂಡಳಿಯ ಸಿಇಒ ಕೆ.ಆನಂದ (40) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದ ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗಾವಿ ದಂಡು ಮಂಡಳಿಯಲ್ಲಿ ಒಂದೂವರೆ ವರ್ಷಗಳಿಂದ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಆನಂದ ಅವರು ಮೂಲತಃ ತಮಿಳುನಾಡಿನವರು. ಇಂದು, ಶನಿವಾರ ಅವರ … Continued