ನ್ಯಾಯಾಲಯದ ಆವರಣದೊಳಗೆ ಅಳಿಯನನ್ನು ಗುಂಡಿಕ್ಕಿ ಕೊಂದ ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ…!

ಚಂಡೀಗಢ : ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ಅವರ ಮಾವ ಹಾಗೂ ಪಂಜಾಬ್ ಪೊಲೀಸ್‌ನ ನಿವೃತ್ತ ಸಹಾಯಕ ಇನ್ಸ್‌ಪೆಕ್ಟರ್ ಜನರಲ್ (ಎಐಜಿ) ಶನಿವಾರ ಗುಂಡಿಕ್ಕಿ ಕೊಂದ ಘಟನೆ ಶನಿವಾರ ಚಂಡೀಗಢ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಕೌಟುಂಬಿಕ ವಿವಾದದ ಪ್ರಕರಣದ ವಿಚಾರಣೆಗಾಗಿ ಹರಪ್ರೀತ್ ಸಿಂಗ್ ಹಾಗೂ ಅವರ ಕುಟುಂಬ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿದ್ದಾಗ ಮಾಜಿ ಪೊಲೀಸ್ … Continued

ತಾಯಿಯ ಗೌರವಕ್ಕಾಗಿ ಇಂತಹ 1000 ಉದ್ಯೋಗ ಬೇಕಾದ್ರೂ ಕಳೆದುಕೊಳ್ತೇನೆ: ಕಂಗನಾ ರಣಾವತಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಾನ್‌ಸ್ಟೆಬಲ್

ನವದೆಹಲಿ : ಚಂಡೀಗಢ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಅಮಾನತುಗೊಂಡ ಮತ್ತು ಬಂಧಿಸಲ್ಪಟ್ಟ ಒಂದು ದಿನದ ನಂತರ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಮಹಿಳಾ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಶುಕ್ರವಾರ ತಾನು ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. “ಈ ಕೆಲಸವನ್ನು ಕಳೆದುಕೊಳ್ಳುವ ಭಯವಿಲ್ಲ… ನನ್ನ ತಾಯಿಯ ಗೌರವಕ್ಕಾಗಿ … Continued

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್‌ ಗೆ ಕಪಾಳಮೋಕ್ಷ ಮಾಡಿದ ಭದ್ರತಾ ಸಿಬ್ಬಂದಿ

ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯಿಂದ ನೂತನವಾಗಿ ಆಯ್ಕೆಯಾದ ಸಂಸದೆ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾನ್‌ಸ್ಟೆಬಲ್ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಂಗನಾ ರಣಾವತ್ ಅವರು‌ ಚಂಡೀಗಢ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ವಿಮಾನ … Continued

ಬಿಜೆಪಿಗೆ ದೊಡ್ಡ ಹಿನ್ನಡೆ : ಎಎಪಿ ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ : ಹಿಂದಿನ ಫಲಿತಾಂಶ ರದ್ದು

ನವದೆಹಲಿ: ಚಂಡೀಗಢ ಮೇಯರ್‌ ಚುನಾವಣೆ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದೊಡ್ಡ ಹಿನ್ನಡೆಯಾಗಿದ್ದು, ಚಂಡೀಗಢದ ಆಮ್‌ ಆದ್ಮಿ ಪಕ್ಷದ ಮೇಯರ್ ಅಭ್ಯರ್ಥಿ ಕುಲದೀಪಕುಮಾರ ಅವರನ್ನು ವಿಜಯಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ. ಜಾಹೀರಾತು ಚಂಡೀಗಢದ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ್ದ ಚುನಾವಣಾಧಿಕಾರಿಯ (ಆರ್‌ಒ- ರಿಟರ್ನಿಂಗ್‌ ಆಫೀಸರ್‌) ಅನಿಲ ಮಸೀಹ್‌ ಅವರ ನಿರ್ಧಾರವನ್ನು … Continued

ಚಂಡೀಗಢ ಮೇಯರ್ ಚುನಾವಣೆ : “ನೀವು ಮತಪತ್ರದ ಮೇಲೆ X ಮಾರ್ಕ್ ಏಕೆ ಹಾಕಿದ್ದೀರಿ?” : ಚುನಾವಣಾ ಅಧಿಕಾರಿ ಬೆವರಿಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಆರೋಪಿತ ಪ್ರಕರಣದಲ್ಲಿ ಚುನಾವಣಾಧಿಕಾರಿ (ಆರ್‌ ಒ- ರಿಟರ್ನಿಂಗ್‌ ಆಫೀಸರ್‌) ಅನಿಲ ಮಾಸಿಹ್ ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಮತ ಎಣಿಸಬೇಕಿದ್ದ ಅಧಿಕಾರಿ ಮತಪತ್ರಗಳಲ್ಲಿ ಟಿಕ್‌ ಮತ್ತು ಇಂಟೂ ಮಾರ್ಕ್‌ಗಳನ್ನು ಹಾಕಿದ್ದು ಏಕೆ ಎಂದು … Continued

ಚಂಡೀಗಢ ಮೇಯರ್ ಆಯ್ಕೆ ಪ್ರಕರಣ : ಸುಪ್ರೀಂ ಕೋರ್ಟ್ ವಿಚಾರಣೆಗೆ ಮುಂಚಿತವಾಗಿ 3 ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

ಚಂಡೀಗಢ: ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಿದ ಆರೋಪದ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನಾಯಕ ಮನೋಜ ಸೋಂಕರ್ ಅವರು ಭಾನುವಾರ ಸಂಜೆ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಆಮ್‌ ಆದ್ಮಿ ಪಕ್ಷದ ಮೂವರು ಕೌನ್ಸಿಲರ್‌ಗಳು ಬಿಜೆಪಿ ಸೇರುವ ಮೂಲಕ ಎಎಪಿಗೆ ಆಘಾತ ನೀಡಿದ್ದಾರೆ. ಜನವರಿ 30 … Continued

ಸುಪ್ರೀಂ ಕೋರ್ಟ್ ವಿಚಾರಣೆಗೂ ಮುನ್ನ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮನೋಜ ಸೋಂಕರ್

ಚಂಡೀಗಢ : ಮತ ಎಣಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್ ನಿಗದಿತ ವಿಚಾರಣೆ ನಡೆಸಲಿರುವ ಒಂದು ದಿನ ಮೊದಲು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮನೋಜ ಸೋಂಕರ್ ಅವರು ಭಾನುವಾರ ಚಂಡೀಗಢ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಂಚೆ … Continued

ಚಂಡೀಗಢ ಮೇಯರ್ ಚುನಾವಣೆ : ಇಂಡಿಯಾ ಮೈತ್ರಿಕೂಟದ ವಿರುದ್ಧ ಬಿಜೆಪಿಗೆ ಜಯ, 8 ಮತಗಳು ಅಸಿಂಧು, ಎಎಪಿ-ಕಾಂಗ್ರೆಸ್ ಕೋರ್ಟ್‌ ಮೊರೆ

ಚಂಡೀಗಢ : ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿಯ ಮೊದಲ ನೇರ ಹಣಾಹಣಿಯಲ್ಲಿ ಮಂಗಳವಾರ ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮನೋಜಕುಮಾರ ಸೋಂಕರ್ ಅವರು ಗೆಲುವು ಸಾಧಿಸಿದ್ದಾರೆ. 8 ಮತಗಳು ಅಸಿಂಧುವಾದ ನಂತರ ಅವರು ಎಎಪಿ-ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರನ್ನು ಸೋಲಿಸಿದ್ದಾರೆ. ಪದನಿಮಿತ್ತ ಸದಸ್ಯ ಹಾಗೂ ಸಂಸದೆ ಕಿರಣ್ ಖೇರ್ … Continued

“ನಾನು ಕಳ್ಳರನ್ನು ಹಿಡಿಯುತ್ತೇನೆ, ಅವರು ಹಣಕ್ಕಾಗಿ ಕಳ್ಳರನ್ನು ಬಿಡುತ್ತಾರೆ”: ಪೊಲೀಸಪ್ಪನ ವಿಶಿಷ್ಟ ಪ್ರತಿಭಟನೆ | ವೀಕ್ಷಿಸಿ

ಚಂಡೀಗಢ: ಪಂಜಾಬ್‌ನ ಜಲಂಧರ್‌ನ ಪ್ರಮುಖ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಜನರು ನಿನ್ನೆ ನಡುರಸ್ತೆಯಲ್ಲಿ ‘ಭ್ರಷ್ಟಾಚಾರ’ದ ಬಗ್ಗೆ ಪ್ರತಿಭಟಿಸಲು ಮತ್ತು ತನ್ನ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳ ವಿರುದ್ಧ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿ ರಸ್ತೆಯ ಮಧ್ಯದಲ್ಲಿ ಮಲಗಿದ್ದ ಪೊಲೀಸ್‌ ಕಾನ್ಸ್ಟೇಬಲ್‌ ಅಸಾಮಾನ್ಯ ವಿದ್ಯಮಾನಕ್ಕೆ ಸಾಕ್ಷಿಯಾದ ಘಟನೆ ನಡೆದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅಸಾಂಪ್ರದಾಯಿಕ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ … Continued