ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

ನವದೆಹಲಿ: 2021-22ರ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ದೆಹಲಿ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿದೆ. ಎರಡು ದಿನಗಳ ಕಾಲ ಕೇಜ್ರಿವಾಲ ಮತ್ತು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿದ ನಂತರ ರಜಾಕಾಲದ ನ್ಯಾಯಾಧೀಶರಾದ ನಿಯಾಯ್ ಬಿಂದು ಅವರು ಜಾಮೀನು ನೀಡಿ … Continued

ದೆಹಲಿ ಮುಂಗೇಶಪುರದಲ್ಲಿ ದಾಖಲೆ ಮಟ್ಟದ 52.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲು ; ಇದು ಸೆನ್ಸರ್‌ ದೋಷದಿಂದ ಆಗಿದೆ ಎಂದ ಐಎಂಡಿ

ನವದೆಹಲಿ: ದೆಹಲಿಯು ತೀವ್ರತರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಬುಧವಾರ ಮಾಧ್ಯಮ ವರದಿಗಳು ಮುಂಗೇಶಪುರದಲ್ಲಿ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಡಿವೆ. ಇದು ನಗರದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆ (IMD), ಸೆನ್ಸರ್‌ನಲ್ಲಿನ ದೋಷ ಅಥವಾ ಸ್ಥಳೀಯ ಅಂಶದಲ್ಲಿನ ದೋಷ” ಎಂದು ನಂತರ ಸ್ಪಷ್ಟಪಡಿಸಿದೆ. ಹಾಗೂ ಡೇಟಾ ಮತ್ತು … Continued

ಪ್ರಯಾಣಿಕರ ಚಿನ್ನಾಭರಣ ಕಳ್ಳತನ ಮಾಡಲು 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣಿಸಿದ್ದ ಈ ಮಹಾಕಳ್ಳ…!

ನವದೆಹಲಿ: ವಿವಿಧ ವಿಮಾನಗಳಲ್ಲಿ ಸಹ ಪ್ರಯಾಣಿಕರ ಬ್ಯಾಗ್‌ಗಳಿಂದ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈತ ವಿಮಾನದಲ್ಲಿ ಕದ್ದ ಹಣದಿಂದ ಕೇಂದ್ರ ದೆಹಲಿಯಲ್ಲಿ ಹೋಟೆಲ್ ಅನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದ ಎಂಬ ವರದಿಯೂ ಇದೆ…! ಆರೋಪಿ ರಾಜೇಶ ಕಪೂರ್ ಎಂಬಾತ … Continued

ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ನವದೆಹಲಿ : ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ ಮಹೀಂದ್ರಾ ಅವರು ರಸ್ತೆ ಬದಿಯ ಸ್ಟಾಲ್‌ನಲ್ಲಿ ರೋಲ್‌ಗಳನ್ನು ಮಾರಾಟ ಮಾಡುತ್ತಿರುವ 10 ವರ್ಷದ ಬಾಲಕನ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ವೈರಲ್ ವೀಡಿಯೊದಲ್ಲಿ ಕಂಡುಬರುವ 10 ವರ್ಷದ ಬಾಲಕ ಜಸ್‌ಪ್ರೀತ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮಿದುಳಿನ ಕ್ಷಯರೋಗದಿಂದ ಕೆಲವು ದಿನಗಳ ಹಿಂದೆ ತಂದೆ ಮರಣಹೊಂದಿದ ನಂತರ ಈ … Continued

ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

ನವದೆಹಲಿ: ಲೋಕಸಭೆ ಚುನಾವಣೆಗೆ ಎಎಪಿ ಜೊತೆಗಿನ ಕಾಂಗ್ರೆಸ್‌ ಪಕ್ಷದ ಮೈತ್ರಿ ಮಾಡಿಕೊಂಡಿದ್ದನ್ನು ವಿರೋಧಿಸಿ ಕೆಲದಿನಗಳ ಹಿಂದೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಅವರು ಶನಿವಾರ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚದೇವ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ … Continued

ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

ನವದೆಹಲಿ : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡ ಕುರಿತು ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್ ದೆಹಲಿ ಘಟಕದ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಎರಡು ದಿನಗಳಲ್ಲಿಯೇ ಮತ್ತಿಬ್ಬರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿ ಲೋಕಸಭೆ ಕ್ಷೇತ್ರಗಳ ಕಾಂಗ್ರೆಸ್ ವೀಕ್ಷಕರೂ ಆಗಿರುವ ನಾಯಕರಾದ ನೀರಜ್ ಬಸೋಯಾ … Continued

50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

ನವದೆಹಲಿ: ದೆಹಲಿ ಮತ್ತು ನೋಯ್ಡಾದ 50 ಕ್ಕೂ ಹೆಚ್ಚು ಶಾಲೆಗಳಿಗೆ ಬುಧವಾರ ಬೆಳಗ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ ಮನೆಗೆ ಕಳುಹಿಸಲಾಗಿದೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಲವು ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ. ಚಾಣಕ್ಯಪುರಿಯಲ್ಲಿರುವ … Continued

ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಯನ್ನು ಸೇವೆಯಿಂದ ವಜಾ ಮಾಡಿದ ವಿಜಿಲೆನ್ಸ್

ನವದೆಹಲಿ: ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ ಅವರನ್ನು ಸೇವೆಯಿಂದ ವಜಾಗೊಳಿಸಿ ವಿಜಿಲೆನ್ಸ್ ನಿರ್ದೇಶನಾಲಯ (ಡಿಒವಿ) ಆದೇಶ ಹೊರಡಿಸಿದೆ. 2007ರ ಪ್ರಕರಣವನ್ನು ಉಲ್ಲೇಖಿಸಿ ವಿಜಿಲೆನ್ಸ್‌ನ ವಿಶೇಷ ಕಾರ್ಯದರ್ಶಿ ರಾಜಶೇಖರ ಆದೇಶ ಹೊರಡಿಸಿದ್ದಾರೆ. “ಸಕ್ಷಮ ಪ್ರಾಧಿಕಾರವು 1965 ರ ಕೇಂದ್ರ ನಾಗರಿಕ ಸೇವೆಗಳ (ತಾತ್ಕಾಲಿಕ … Continued

ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಬಾನ್ಸುರಿ ಸ್ವರಾಜ್‌ ಕಣ್ಣಿಗೆ ಗಾಯ

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರದ ಮಾಜಿ ಸಚಿವೆ ಬಾನ್ಸುರಿ ಸ್ವರಾಜ್‌ ಅವರ ಕಣ್ಣಿಗೆ ಗಾಯವಾಗಿದೆ. ಪ್ರಚಾರದ ವೇಳೆ ಎಡಗಣ್ಣಿಗೆ ಗಾಯವಾಗಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ವೈದ್ಯರ ಬಳಿ ತೆರಳಿ ಒಂದು ಕಣ್ಣಿಗೆ ಬ್ಯಾಂಡೇಜ್‌ ಹಾಕಿಕೊಂಡಿರುವ ಪೋಟೊ ಶೇರ್‌ ಮಾಡಿಕೊಂಡಿರುವ ಬಾನ್ಸುರಿ ಸ್ವರಾಜ್‌, ‘ಪ್ರಚಾರದ … Continued

ದೆಹಲಿಗೆ ಹೋದರೂ ಈಶ್ವರಪ್ಪ ಭೇಟಿಯಾಗದ ಅಮಿತ್‌ ಶಾ….!

ಬೆಂಗಳೂರು: ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಆಹ್ವಾನದ ಮೇರೆಗೆ ಬುಧವಾರ ದೆಹಲಿಗೆ ತೆರಳಿದರೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ವಾಪಸ್‌ ಬಂದಿದ್ದಾರೆ. ಮಂಗಳವಾರ ದೂರವಾಣಿ ಕರೆ ಮಾಡಿದ್ದ ಅಮಿತ್‌ ಶಾ ಅವರು ತಮಗೆ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದರು ಎಂಬುದಾಗಿ ಈಶ್ವರಪ್ಪ ಹೇಳಿದ್ದರು. … Continued