ಸಂಪುಟ ವಿಸ್ತರಣೆ : ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆಗೆ ದೆಹಲಿಗೆ ತೆರಳಿದ ಸಿಎಂ

ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಕೇಂದ್ರದ ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ದೆಹಲಿಗೆ ತೆರಳಿದರು. ರಾಷ್ಟ್ರ ರಾಜಧಾನಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಬಹುಶಹ ನಾಳೆ ಸಭೆ ನಡೆಯುವ ಸಾಧ್ಯತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು. ಸಂಪುಟ ವಿಸ್ತರಣೆ … Continued

ಕೊರೊನಾ ಸಾಂಕ್ರಾಮಿಕ ಹರಡಿದ ನಂತರ ದೆಹಲಿಯಲ್ಲಿ ಅತಿಹೆಚ್ಚು ಏಕದಿನ ಪ್ರಕರಣ ದಾಖಲು.!!

ನವ ದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ನಂತರ ಇದೇ ಮೊದಲ ಬಾರಿಗೆ ದೆಹಲಿಯು ಈ ವರೆಗಿನಾತಿಹೆಚ್ಚು ದೈನಂದಿನ ಪ್ರಕರಣಗಳನ್ನು ಬುಧವಾರ ದಾಖಲಿಸಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯು17,282 ಹೊಸ ಪ್ರಕರಣಗಳನ್ನುವರದಿ ಮಾಡಿದೆ. ದೆಹಲಿಯ ಒಟ್ಟು ಸೋಂಕಿತರ ಸಂಖ್ಯೆ 7,67,438 ಕ್ಕೆ ಏರಿದೆ ಎಂದು ಆರೋಗ್ಯ ಬುಲೆಟಿನ್ ತಿಳಿಸಿದೆ.ರಾಷ್ಟ್ರ ರಾಜಧಾನಿ ಕಳೆದ 24 ಗಂಟೆಗಳಲ್ಲಿ 100 … Continued

ದೆಹಲಿಯಲ್ಲಿ ತೀವ್ರ ಶಾಖದ ಅಲೆ, 76 ವರ್ಷದಲ್ಲೇ ಮಾರ್ಚಿನಲ್ಲಿ ಅತಿ ಹೆಚ್ಚು ಉಷ್ಣತೆ ಎಂದ ಐಎಂಡಿ..!

ನವ ದೆಹಲಿ: ಹೋಳಿ ದಿನದಂದು ದೆಹಲಿಯು ಹೋಳಿಯ ದಿನವೇ ಗರಿಷ್ಠ ತಾಪಮಾನ ಕಂಡಿತು. ಈ ದಿನ 40.1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಇದು 76 ವರ್ಷಗಳಲ್ಲಿ ಮಾರ್ಚಿನಲ್ಲಿ ಕಂಡ ಅತಿ ಹೆಚ್ಚು ತಾಪಮಾನದ ದಿನವಾಗಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಗರಿಷ್ಠ … Continued

ದೆಹಲಿ ಮಸೂದೆ ವಿವಾದ: ರಾಜ್ಯಸಭೆಯಲ್ಲಿ ಗದ್ದಲ

ನವ ದೆಹಲಿ: ದೆಹಲಿಯಲ್ಲಿ ಚುನಾಯಿತ ಸರ್ಕಾರದ ಅಧಿಕಾರಗಳನ್ನು ಮೊಟಕುಗೊಳಿಸಿ, ಲೆಫ್ಟಿನೆಂಟ್ ಗವರ್ನರ್‌ಗೆ ಮತ್ತಷ್ಟು ಅಧಿಕಾರ ನೀಡುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ರಾಜ್ಯಸಭೆಯಲ್ಲಿ ಬುಧವಾರ ತೀವ್ರ ಕೋಲಾಹಲ ಉಂಟಾಯಿತು. ಹಣಕಾಸು ಮಸೂದೆ ಕುರಿತು ಚರ್ಚೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡುವಾಗ ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ತಿವ್ರ ವಾಗ್ವಾದ ನಡೆಯಿತು. … Continued

ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ನವ ದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆ- ದೆಹಲಿಯ ರಾಷ್ಟ್ರೀಯ ರಾಜಧಾನಿ ಸರ್ಕಾರ (ತಿದ್ದುಪಡಿ) ಮಸೂದೆ-2021 ಯನ್ನು ಲೋಕಸಭೆಯಲ್ಲಿ ಸೋಮವಾರ (ಮಾ.೨೨) ಅಂಗೀಕರಿಸಲಾಗಿದೆ. ಈ ತಿದ್ದುಪಡಿ ಮಸೂದೆಯಲ್ಲಿ ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕಿಂತ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್‌ ಅಧಿಕಾರ ವ್ಯಾಪ್ತಿ ಹೆಚ್ಚಿದ್ದು, ಈಗ ಈ ಕಾಯ್ದೆಯಿಂದ ಅವರಿಗೆ ಮತ್ತಷ್ಟು ಬಲ … Continued

ಕೊರೊನಾ ಹೆಚ್ಚಳ: ದೆಹಲಿ ತಬ್ಲಿಘಿ ಜಮಾತ್ ಸಭೆ ಉಲ್ಲೇಖಿಸಿದ್ದ ಎಂಬಿಬಿಎಸ್ ಪುಸ್ತಕ ಹಿಂಪಡೆದ ಸರ್ಕಾರ

ಮುಂಬೈ: ದೇಶದಲ್ಲಿ ಕೊರೊನಾ ಸೋಂಕಿನ ಸ್ಫೋಟಕ್ಕೆ ಸಂಬಂಧಿಸಿದಂತೆ, ನವದೆಹಲಿಯಲ್ಲಿನ ತಬ್ಲಿಘಿ ಜಮಾತ್ ಸಭೆ ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ 2ನೇ ವರ್ಷಕ್ಕೆ ಸಂಬಂಧಿಸಿದ ಇದರ ಉಲ್ಲೇಖ ಇರುವ ಪುಸ್ತಕ ಹಿಂಪಡೆದಿರುವುದಾಗಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಹೊರತರಲಾಗಿದ್ದ ಎಸ್ಸೆನ್ಶಿಯಲ್ಸ್ ಆಫ್ ಮೆಡಿಕಲ್ ಮೈಕ್ರೊಬಯಾಲಜಿ” ಪುಸ್ತಕದ ಮೂರನೇ ಆವೃತ್ತಿಯಲ್ಲಿ ತಬ್ಲಿಘಿ ಜಮಾತ್ ಸಭೆಯ ಉಲ್ಲೇಖ ಮಾಡಲಾಗಿತ್ತು. … Continued

ಸಿಡಿ ಪ್ರಕರಣ : ದೆಹಲಿಯಲ್ಲಿ ಎಸ್‍ಐಟಿ ಹುಡುಕಾಟ

ಬೆಂಗಳೂರು: ಸಿಡಿ ಪ್ರಕರಣದ ಕಿಂಗ್‍ಪಿನ್‍ಗಳು ಎನ್ನಲಾದ ಇಬ್ಬರು ವ್ಯಕ್ತಿಗಳು ಹಾಗೂ ಆ ಯುವತಿ ದೆಹಲಿಯಲ್ಲಿ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಎಸ್‍ಐಟಿ ಪೊಲೀಸರು ದೆಹಲಿ ಹಾಗೂ ಸುತ್ತಮುತ್ತ ಶೋಧ ನಡೆಸುತ್ತಿದ್ದಾರೆ. ಕಿಂಗ್‍ಪಿನ್ ಎಂದು ಹೇಳಲಾದ ವ್ಯಕ್ತಿ ಬುಧವಾರ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ. ಆ ವಿಡಿಯೋವನ್ನು ದೆಹಲಿಯಿಂದಲೇ ಅಪ್‍ಲೋಡ್ ಮಾಡಲಾಗಿದೆ ಎಂಬುದು ಎಸ್‍ಐಟಿ ಶಂಕೆ. ಈ ಹಿನ್ನೆಲೆಯಲ್ಲಿ … Continued

ವಿಶ್ವದ ಅತ್ಯಂತ ಕಲುಷಿತ ರಾಜಧಾನಿ: ದೆಹಲಿ ಹ್ಯಾಟ್ರಿಕ್‌ ಸಾಧನೆ !!

ವಿಶ್ವದ ಅತ್ಯಂತ ಮಲೀನ ರಾಜಧಾನಿ ಎಂದು ಸತತ ೩ನೇ ಬಾರಿ ಕುಖ್ಯಾತಿಗೆ ಪಾತ್ರವಾಗಿದೆ. ಸ್ವಿಸ್‌ನ ಐಕ್ಯೂ ಕೇರ್‌ ನಡೆಸಿದ ಸಂಶೋಧನೆಯಲ್ಲಿ ಶ್ವಾಸಕೋಶದ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ವಾಯುವಿನ ಗುಣಮಟ್ಟವನ್ನು ಪಿಎಂ೨.೫ ರಂದು ಗುರುತಿಸಲಾಗಿದೆ. 106 ದೇಶಗಳಿಗೆ ದತ್ತಾಂಶವನ್ನು ಸಂಗ್ರಹಿಸಿದ ಸಂಸ್ಥೆ 2020 ರ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ವಿಶ್ವದ … Continued

ಐಕ್ಯೂಏರ್ ವರದಿ:ಸತತ ಮೂರನೇ ವರ್ಷವೂ ದೆಹಲಿಗೆ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಕುಖ್ಯಾತಿ…!

2020ರಲ್ಲಿ ಸತತ ಮೂರನೇ ವರ್ಷವೂ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ. ಸ್ವಿಸ್ ಗುಂಪಿನ ಐಕ್ಯೂಏರ್ (IQAir,) ಅಧ್ಯಯನ ವರದಿ ಸತತ ಮೂರನೇ ವರ್ಷವೂ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎಂದು ಹೇಳಿದೆ. ಶ್ವಾಸಕೋಶದ ಹಾನಿಕಾರಕ ವಾಯುಗಾಮಿ ಕಣಗಳ ಸಾಂದ್ರತೆಯ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ. ವಾಯು ಗುಣಮಟ್ಟದ ಮಟ್ಟವನ್ನು … Continued

ದೆಹಲಿ ಬಾಟ್ಲಾ ಎನ್‌ಕೌಂಟರ್‌ ಪ್ರಕರಣ: ಉಗ್ರ ಅರಿಜ್‌ ಖಾನಗೆ ಮರಣದಂಡನೆ

    ನವ ದೆಹಲಿ: 2008 ರ ಬಾಟ್ಲಾ ಹೌಸ್ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರ ಕೊಲೆ ಮತ್ತು ಇತರ ಅಪರಾಧಗಳಿಗಾಗಿ ದೆಹಲಿ ನ್ಯಾಯಾಲಯ ಸೋಮವಾರ ಉಗ್ರ ಅರಿಜ್ ಖಾನ್ ಅವರಿಗೆ ಮರಣದಂಡನೆ ವಿಧಿಸಿದೆ.ನ್ಯಾಯಾಲಯವು ಈ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಹೇಳಿದೆ. ಇದಕ್ಕೂ ಮೊದಲು, ಖಾನ್ ಗೆ ಪೊಲೀಸರು … Continued