ಆನ್‌ಲೈನ್‌ನಲ್ಲಿ ವಿಷಕಾರಿ ʼದತ್ತೂರʼ ಮಾರಾಟ: ಅಮೆಜಾನ್‌, ಇನ್‌ಸ್ಟಾಮಾರ್ಟ್‌, ಬಿಗ್‌ಬಾಸ್ಕೆಟ್‌ ಆಹಾರ ಲೈಸನ್ಸ್‌ ಸಸ್ಪೆಂಡ್‌

ಬೆಂಗಳೂರು: ವಿಷಕಾರಿ ಸಸ್ಯವಾದ ಧತ್ತೂರ (Datura)ವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಮೆಜಾನ್‌,  ಇನ್‌ಸ್ಟಾಮಾರ್ಟ್‌ ಹಾಗೂ ಬಿಗ್‌ಬಾಸ್ಕೆಟ್‌ಗೆ ನೀಡಲಾಗಿದ್ದ ಆಹಾರ ಪರವಾನಗಿಗಳನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ಅಮಾನತುಗೊಳಿಸಿದೆ. ಇಲಾಖೆಯಿಂದ ಮುಂದಿನ ಆದೇಶ ಹೊರಬೀಳುವವರೆಗೆ ಈ ಅಮಾನತು ಜಾರಿಯಲ್ಲಿರಲಿದೆ. ಇತ್ತೀಚೆಗೆ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಧತ್ತೂರದ ಹಣ್ಣುಗಳು ಹಾಗೂ … Continued

ಎಫ್‌ಎಸ್‌ಎಸ್‌ಎಐ ಕಠಿಣ ಕ್ರಮ : ಆಹಾರ ಕಂಪನಿಗಳಿಗೆ 150, ಪಂಚತಾರಾ ಹೋಟೆಲ್‌ಗಳಿಗೆ 20ಕ್ಕೂ ಹೆಚ್ಚು ನೋಟಿಸ್

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಮಗಳನ್ನು ಉಲ್ಲಂಘಿಸುವ ಆಹಾರ ಉದ್ಯಮಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ವಿವಿಧ ವಲಯಗಳ ಆಹಾರ ಉದ್ಯಮ ಸಂಸ್ಥೆಗಳ ವಿರುದ್ಧ ಮಹತ್ವದ ಜಾರಿ ಕ್ರಮ ಕೈಗೊಂಡಿರುವುದಾಗಿ ಎಫ್‌ಎಸ್‌ಎಸ್‌ಎಐ(FSSAI) ಶನಿವಾರ ತಿಳಿಸಿದೆ. ಇದರ ಭಾಗವಾಗಿ ಆಹಾರ ಕಂಪನಿಗಳಿಗೆ … Continued

ವಿಮಲ್ ಎಲೈಚಿ ಜಾಹೀರಾತು : ಅಜಯ ದೇವಗನ್, ಶಾರುಖ್ ಖಾನ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್

ಮುಂಬೈ: ವಿಮಲ್ ಎಲೈಚಿ ಜಾಹೀರಾತಿನಲ್ಲಿ ಬ್ರ್ಯಾಂಡ್ ಅನುಮೋದಕರಾಗಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಅಜಯ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ‘ವಿಮಲ್ ಎಲೈಚಿ’ ಹೆಸರಿನಲ್ಲಿ ಪ್ರಸಾರವಾಗಿರುವ ಈ ಜಾಹೀರಾತು ನಿಷೇಧಿತ ಅಥವಾ ನಿರ್ಬಂಧಿತ ಉತ್ಪನ್ನದ ಪರೋಕ್ಷ, ಪರ್ಯಾಯ … Continued

ಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿ

ಬೆಂಗಳೂರು: ರಾಜ್ಯಾದ್ಯಂತ ಆಹಾರ ಸುರಕ್ಷತಾ ತಪಾಸಣೆ ತೀವ್ರಗೊಂಡಿರುವ ಬೆನ್ನಲ್ಲೇ, ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಂಟೀನ್‌ಗಳು, ಕ್ಯಾಟರಿಂಗ್‌ ಸಂಸ್ಥೆಗಳು, ಧಾಬಾಗಳು ಸೇರಿದಂತೆ ಎಲ್ಲ ಆಹಾರ ಉದ್ಯಮಗಳಿಗೆ 12 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಆಗಸ್ಟ್‌ 11ರಂದು ಹೊರಡಿಸಿರುವ ಈ ಸುತ್ತೋಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, … Continued

ಕೊಳೆತ ಮಾಂಸ, ಅವಧಿ ಮೀರಿದ ಹಾಲು….: ಬೆಂಗಳೂರು ಪಂಚತಾರಾ ಹೋಟೆಲ್‌ಗಳ ದಾಳಿಯಲ್ಲಿ ಆಘಾತಕಾರಿ ಸಂಗತಿಗಳು ಬಹಿರಂಗ

ಬೆಂಗಳೂರು: ಅವಧಿ ಮೀರಿದ ಹಾಲು, ಕೊಳೆತ ಮಾಂಸ, ತರಕಾರಿಗಳಲ್ಲಿ ಶಿಲೀಂಧ್ರದ ಬೆಳವಣಿಗೆ ಸೇರಿದಂತೆ ಹಲವು ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳು ನಗರದ ಕೆಲ ಪ್ರತಿಷ್ಠಿತ ಐಷಾರಾಮಿ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಲ್ಲಿ ಪತ್ತೆಯಾಗಿವೆ. ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಹೋಟೆಲ್‌ಗಳಲ್ಲೇ ಇಂತಹ ಉಲ್ಲಂಘನೆಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ನಗರದ … Continued