ಅಚ್ಚರಿಯ ಬೆಳವಣಿಗೆಯಲ್ಲಿ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಿಸಿದ ಶರದ್ ಪವಾರ್…!

ಅನೇಕರಿಗೆ ಆಶ್ಚರ್ಯವನ್ನುಂಟುಮಾಡುವ ಕ್ರಮದಲ್ಲಿ, ಅನುಭವಿ ರಾಜಕಾರಣಿ ಹಾಗೂ ಎನ್‌ಸಿಪಿ ಸಂಸ್ಥಾಪಕರಾದ ಶರದ್ ಪವಾರ್ ಅವರು ಮಂಗಳವಾರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. “ನಾನು ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ” ಎಂದು ಪವಾರ್ ತಮ್ಮ ಆತ್ಮಚರಿತ್ರೆಯ ಲೋಕ್ ಮೇಜ್ ಸಂಗತಿಯ ಎರಡನೇ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಹೇಳಿದರು. ಮಹಾರಾಷ್ಟ್ರ ರಾಜಕೀಯದ … Continued

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಬಜರಂಗದಳ, ಪಿಎಫ್‌ಐ ಸೇರಿದಂತೆ ಮತೀಯ ದ್ವೇಷ ಬಿತ್ತುವ ಸಂಘಟನೆಗಳ ನಿಷೇಧದ ಭರವಸೆ

ಬೆಂಗಳೂರು : ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್‌ ಹೇಳಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಬಜರಂಗದಳದಂತಹ “ಹಗೆತನ ಅಥವಾ ದ್ವೇಷವನ್ನು ಉತ್ತೇಜಿಸುವ” ಸಂಘಟನೆಗಳ ಮೇಲೆ ನಿಷೇಧವನ್ನು ಅದು ಪ್ರಸ್ತಾಪಿಸಿದೆ. … Continued

ಭಾರತದಲ್ಲಿ ಸರಾಸರಿ ಮಾಸಿಕ ವೇತನ ₹50,000ಕ್ಕಿಂತ ಕಡಿಮೆ : ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ದೇಶಗಳ ಪಟ್ಟಿ ಇಲ್ಲಿದೆ….

ನವದೆಹಲಿ: ಭಾರತದಲ್ಲಿ ಸರಾಸರಿ ವೇತನವು ₹ 50,000 ಕ್ಕಿಂತ ಕಡಿಮೆ ಇದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಸಂದರ್ಭದಲ್ಲಿ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವಿಶ್ವದಾದ್ಯಂತ ವಿವಿಧ ದೇಶಗಳ ಸರಾಸರಿ ಮಾಸಿಕ ಸಂಬಳದ ಡೇಟಾವನ್ನು ಬಿಡುಗಡೆ ಮಾಡಿದೆ. ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತದ 23 ದೇಶಗಳಲ್ಲಿ ಸರಾಸರಿ ಮಾಸಿಕ ಸಂಬಳ ₹1 ಲಕ್ಷಕ್ಕಿಂತ ಹೆಚ್ಚಿವೆ. … Continued

ಕರ್ನಾಟಕ ಚುನಾವಣೆ 2023: ಲಿಂಗಾಯತರು, ಒಕ್ಕಲಿಗರಿಗೆ ಮೀಸಲಾತಿಯಿಂದ ಬಿಜೆಪಿ ಮೇಲೆ ಪರಿಣಾಮ ಏನಾಗಬಹುದು..? ; ಎನ್‌ಡಿಟಿವಿ ಜನಾಭಿಪ್ರಾಯ ಏನು ಹೇಳಿದೆ..?

ಬೆಂಗಳೂರು: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿ ತೆಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ 4% ಮೀಸಲಾತಿಯನ್ನು ನೀಡುವ ರಾಜ್ಯದ ಬಿಜೆಪಿ ಸರ್ಕಾರದ ನಿರ್ಧಾರವು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ -2023 ರಲ್ಲಿ ಪಕ್ಷಕ್ಕೆ ಪ್ರಯೋಜನ ನೀಡಬಹುದು ಎಂದು ಎನ್‌ಡಿಟಿವಿ ಲೋಕನೀತಿ-ಕೇಂದ್ರದ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ (CSDS) ಸಹಯೋಗದೊಂದಿಗೆ ನಡೆಸಿದ ಸಾರ್ವಜನಿಕ ಅಭಿಪ್ರಾಯದಲ್ಲಿ ನಿರೀಕ್ಷಿಸಲಾಗಿದೆ. ಎನ್‌ಡಿಟಿವಿ ಸಮೀಕ್ಷೆಯು … Continued

ಹೊಸ ಮಾಲೀಕನಿಂದ ತಪ್ಪಿಸಿಕೊಂಡು 27 ದಿನಗಳ ನಂತರ 64 ಕಿಮೀ ದೂರದ ತನ್ನ ಹಿಂದಿನ ಮಾಲೀಕನ ಮನೆ ತಲುಪಿದ ಈ ನಾಯಿ…!

ಐರ್ಲೆಂಡ್‌ನ ನಾಯಿಯೊಂದು ತನ್ನ ಹೊಸ ಮಾಲೀಕನಿಂದ ತಪ್ಪಿಸಿಕೊಂಡು ತನ್ನ ಹಿಂದಿನ ಮಾಲೀಕನ ಮನೆಗೆ 64 ಕಿಮೀ ನಡೆದುಕೊಂಡು ಬಂದು ತಲುಪಿದ ನಂತರ ಸುದ್ದಿಯಲ್ಲಿದೆ…! ಕೂಪರ್ ಎಂಬ ಹೆಸರಿನ ಈ ಗೋಲ್ಡನ್‌ ರಿಟ್ರಿವರ್‌ ನಾಯಿಯನ್ನು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ನ ಡಂಗನ್ನನ್‌ನಲ್ಲಿರುವ ಕುಟುಂಬವು ದತ್ತು ತೆಗೆದುಕೊಂಡಿತ್ತು; ಆದಾಗ್ಯೂ, ಆ ಗಂಡು ನಾಯಿ ತನ್ನ ಹೊಸ ಮಾಲೀಕನ ಮನೆಯಲ್ಲಿ … Continued

ಈ ಮೊದಲಿನ ಎಲ್ಲ ದಾಖಲೆಗಳನ್ನೂ ಉಡೀಸ್‌ ಮಾಡಿದ ಏಪ್ರಿಲ್‌ ತಿಂಗಳಿನ ಜಿಎಸ್‌ಟಿ ಸಂಗ್ರಹ…!

ನವದೆಹಲಿ: ಏಪ್ರಿಲ್‌ನಲ್ಲಿ ಸರ್ಕಾರವು 1.87 ಲಕ್ಷ ಕೋಟಿ ರೂಪಾಯಿಗಳಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಮೇ 1 ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿರುವುದು ಈವರೆಗಿನ ಸಾರ್ವಕಾಲಿಕ ಗರಿಷ್ಠ ಸಂಗ್ರಹವಾಗಿದೆ. ಏಪ್ರಿಲ್ 2022 ರಲ್ಲಿ ಸಂಗ್ರಹಿಸಲಾದ 1.68 … Continued

ಮಥುರಾ ಶ್ರೀ ಕೃಷ್ಣ ಜನ್ಮ ಭೂಮಿ -ಶಾಹಿ ಈದ್ಗಾ ವಿವಾದ: ಅಲಹಾಬಾದ್ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಮಥುರಾ ಕೃಷ್ಣ ಜನ್ಮ ಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇಂದು, ಸೋಮವಾರ ಶಾಹಿ ಈದ್ಗಾ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ ಹಾಗೂ ಸಿವಿಲ್ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮತ್ತೊಮ್ಮೆ ವಿಚಾರಣೆ ನಡೆಸಿದ ನಂತರ ಆದೇಶ ನೀಡುವಂತೆ ಮಥುರಾದ ಜಿಲ್ಲಾ ನ್ಯಾಯಾಧೀಶರಿಗೆ ಹೈಕೋರ್ಟ್ … Continued

ವಿವಾಹ ವಿಚ್ಛೇದನಕ್ಕೆ ಇನ್ನು 6 ತಿಂಗಳು ಕಾಯಬೇಕಾಗಿಲ್ಲ: ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸುಪ್ರೀಂಕೋರ್ಟ್‌ ನ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಇಂದು, ಸೋಮವಾರ ಮಹತ್ವದ ತೀರ್ಪು ಪ್ರಕಟಿಸಿದೆ. ವಿಚ್ಛೇದನ ಪಡೆಯಲು ಬಯಸುವವರು ಪರಸ್ಪರ ಬಾಳಲು ಸಾಧ್ಯವೇ ಇಲ್ಲ ಎಂಬ ಸಂದರ್ಭದಲ್ಲಿ ಸಹಮತದ ವಿಚ್ಛೇದನ ನೀಡಲು ಸಂವಿಧಾನದ 142ನೇ ವಿಧಿ ಬಳಸಿ ಸುಪ್ರೀಂ ಕೋರ್ಟ್‌ ತನ್ನ ಪೂರ್ಣ ಅಧಿಕಾರ ಚಲಾಯಿಸಬಹುದು ಹಾಗೂ ಆರು ತಿಂಗಳು ಕಾಯದೆ … Continued

ಕ್ಯಾನ್ಸರ್ ಸೋಲಿಸಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಅಸ್ತ್ರ ?: ಕ್ಯಾನ್ಸರ್ ಪತ್ತೆಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಉಪಕರಣ ಕಂಡುಹಿಡಿದ ತಜ್ಞರು…!

ಲಂಡನ್: ಕೃತಕ ಬುದ್ಧಿಮತ್ತೆ (artificial intelligence (AI)) ಮೂಲಕ ನಿಖರವಾಗಿ ಕ್ಯಾನ್ಸರ್ ರೋಗ ಪತ್ತೆ ಹಚ್ಚುವ ಉಪಕರಣ ಕಂಡು ಹಿಡಿಯುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ. ಹೊಸ ಉಪಕರಣ ರೋಗದ ರೋಗನಿರ್ಣಯವನ್ನು ವೇಗಗೊಳಿಸುವುದರ ಜತೆಗೆ ರೋಗಿಗಳಿಗೆ ತ್ವರಿತ ಚಿಕಿತ್ಸೆಯನ್ನು ಸಹ ನೀಡುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಈಗಿರುವ ವಿಧಾನಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ … Continued

ಬಿಜೆಪಿ ಪ್ರಣಾಳಿಕೆ ಬಿಡುಗಡೆ : ಅಟಲ್ ಆಹಾರ ಕೇಂದ್ರ, ಬಿಪಿಎಲ್‌ ಕುಟುಂಬಕ್ಕೆ ನಂದಿನಿ ಹಾಲು,10 ಲಕ್ಷ ವಸತಿ ನಿವೇಶನಗಳ ವಿತರಣೆ, ಏಕರೂಪ ನಾಗರಿಕ ಸಹಿತೆ ಜಾರಿ ಭರವಸೆ…

ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ‘ಪ್ರಜಾ ಪ್ರಣಾಳಿಕೆ’ (ಚುನಾವಣಾ ಪ್ರಣಾಳಿಕೆ) ಬಿಡುಗಡೆ ಮಾಡಿದರು. ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ನಳಿನಕುಮಾರ … Continued