ಈ ವರ್ಷವೇ ಚೀನಾ ಹಿಂದಿಕ್ಕಿ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಲಿರುವ ಭಾರತ…!

ನವದೆಹಲಿ: ಈ ವರ್ಷದ ಮಧ್ಯಭಾಗದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) “ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್-2023” ರ ಜನಸಂಖ್ಯಾ ದತ್ತಾಂಶವು ಭಾರತದ ಜನಸಂಖ್ಯೆಯನ್ನು 142.86 ಕೋಟಿ ಜನಸಂಖ್ಯೆ ಹೊಂದಲಿದೆ ಎಂದು … Continued

ಬಿಲ್ಕಿಸ್ ಬಾನೊ ಪ್ರಕರಣ : ಕಡತ ಸಲ್ಲಿಸುವ ಆದೇಶ ಪ್ರಶ್ನಿಸಬಹುದು; ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅಪರಾಧಿಗಳ ಕ್ಷಮಾಪಣೆ ಫೈಲ್‌ ಸಲ್ಲಿಸುವುದಿಲ್ಲ ಎಂದ ಕೇಂದ್ರ, ಗುಜರಾತ್ ಸರ್ಕಾರ

ನವದೆಹಲಿ: ಗುಜರಾತ್‌ ಹತ್ಯಾಕಾಂಡ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 11 ಅಪರಾಧಿಗಳಿಗೆ ಕ್ಷಮಾದಾನ ನೀಡಿದ್ದಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಆದೇಶವನ್ನು ಪ್ರಶ್ನಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಮತ್ತು ಗುಜರಾತ್‌ ಸರ್ಕಾರಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಗುರುವಾರ ತಿಳಿಸಿವೆ. ಗುಜರಾತ್‌ ಹತ್ಯಾಕಾಂಡದ ಸಂದರ್ಭದಲ್ಲಿ ಬಿಲ್ಕಿಸ್‌ ಬಾನೊ … Continued

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂನ 11.04 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ 11.04 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮೂರು ಚರ ಮತ್ತು … Continued

ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ, ಜಗದೀಶ ಶೆಟ್ಟರಗೆ ಟಿಕೆಟ್‌

ಬೆಂಗಳೂರು : ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ಹುಬ್ಬಳ್ಳಿ -ಧಾರವಾಡ ಸೆಂಟ್ರಲ್‌ ಕ್ಷೇತ್ರಕ್ಕೆ ಬಿಜೆಪಿಯಿಂದ ಎರಡು ದಿನಗಳ ಹಿಂದೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇದೇರೀತಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಚಿಕ್ಕಮಗಳೂರಿನಲ್ಲಿ ಮೂಲ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ  ಸಿ.ಟಿ.ರವಿ … Continued

ಅಪರೂಪದಲ್ಲಿ ಅಪರೂಪ…ಸೀರೆ ಉಟ್ಟು 42.5 ಕಿಮೀ ದೂರದ ಬ್ರಿಟನ್‌ ಮ್ಯಾರಾಥಾನ್​ ಓಡಿದ ಭಾರತೀಯ ಮಹಿಳೆ : ನಿಬ್ಬೆರಗಾದ ಜನ | ವೀಕ್ಷಿಸಿ

ಸಂಬಲ್‌ಪುರಿ ಕೈಮಗ್ಗದ ಸೀರೆಯನ್ನು ಉಟ್ಟು, ಒರಿಸ್ಸಾದ ಮಹಿಳೆಯೊಬ್ಬರು ಭಾನುವಾರ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ 42.5 ಕಿಮೀ ಮ್ಯಾರಥಾನ್‌ ಓಡಿ ತನ್ನ ಸಹ ಓಟಗಾರರನ್ನು ಬೆರಗುಗೊಳಿಸಿದ್ದಾರೆ ಮತ್ತು ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ. 41 ವರ್ಷದ ಮಧುಸ್ಮಿತಾ ಜೆನಾ ಎಂಬ ಮಹಿಳೆ ಸೀರೆಯುಟ್ಟು ಮ್ಯಾರಥಾನ್‌ ಓಡಿದ ಮಹಿಳೆ ಹಾಗೂ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.. ಮ್ಯಾಂಚೆಸ್ಟರ್‌ನಲ್ಲಿ … Continued

ಅರೆರೇ…ಚೌಕಾಕಾರದಲ್ಲಿದೆ ಈ ಸೈಕಲ್ ಚಕ್ರ….! ಆದ್ರೂ ರಸ್ತೆ ಮೇಲೆ ಸರಾಗವಾಗಿ ಓಡುತ್ತದೆ ಈ ಸೈಕಲ್‌ | ವೀಕ್ಷಿಸಿ

ಸಾಮಾನ್ಯವಾಗಿ ವಾಹನಗಳ ಚಕ್ರ ವೃತ್ತಾಕಾರ (ಗೋಳಾಕಾರ) ಆಗಿರುವುದನ್ನು ನೋಡಿದ್ದೇವೆ. ಚಕ್ರ ಸ್ವಲ್ಪ ಬೆಂಡ್ ಆದರೂ ವಾಹನ ಮುಂದೆ ಚಲಿಸಲು ಕಷ್ಟವಾಗುತ್ತದೆ. ಆದರೆ ಇಲ್ಲೊಂದು ಸೈಕಲ್ ಚಕ್ರ ವೃತ್ತಾಕಾರದಲ್ಲಿರುವ ಬದಲು ಚೌಕಾಕಾರದಲ್ಲಿದೆ. ಆದರೂ ಸೈಕಲ್‌ ಸರಾಗವಾಗಿ ರಸ್ತೆ ಮೇಲೆ ಓಡುತ್ತದೆ. ಚೌಕಾಕಾರದ ಚಕ್ರಗಳನ್ನು ಹೊಂದಿರುವ ಈ ಬೈಸಿಕಲ್‌ ವೀಡಿಯೊ ಈಗ ಇಂಟರ್ನೆಟ್ಟಿನಲ್ಲಿ ಬಿರುಗಾಳಿ ಎಬ್ಬಿಸಿದೆ. ಭೌತಶಾಸ್ತ್ರ ಮತ್ತು … Continued

ತೀವ್ರ ಶಾಖದ ಅಲೆ : ಪಶ್ಚಿಮ ಬಂಗಾಳದಲ್ಲಿ ಒಂದು ವಾರ ಶಾಲಾ ಕಾಲೇಜುಗಳಿಗೆ ರಜೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ 17ರಿಂದ ವಾರದ ವರೆಗೆ ಎಲ್ಲ ಶಾಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಿಸಿದೆ. ಗರಿಷ್ಠ 40 ಡಿಗ್ರಿ ತಾಪಮಾನ ದಾಖಲಾಗಿ ಶಾಖದ ಅಲೆಗಳ ತೀವ್ರತೆ ಹೆಚ್ಚಾಗಿರುವುದರಿಂದ ಮುಂದಿನ ಆದೇಶದವರೆಗೂ ರಜೆ ಮುಂದುವರಿಯಲಿದೆ ಎಂದು … Continued

ಈವರೆಗಿನ ಅತ್ಯಂತ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ: ಇತಿಹಾಸ ನಿರ್ಮಿಸಲಿದೆಯೇ ಎಲಾನ್ ಮಸ್ಕ್‌ ನ ಸ್ಪೇಸ್ ಎಕ್ಸ್ ಕಂಪನಿ…?

ಟೆಕ್ಸಾಸ್: ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ನಿರ್ಮಿಸಲಾದ ಬೃಹತ್ ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ರಾಕೆಟ್ ಉಡಾವಣೆ ಯಶಸ್ವಿಯಾದರೆ ಇದು ಬಾಹ್ಯಾಕಾಶ ಇತಿಹಾಸದಲ್ಲೇ ಈವರೆಗೆ ಉಡಾವಣೆಯಾದ ರಾಕೆಟ್‌ಗಳಲ್ಲೇ ಬೃಹತ್ ರಾಕೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಕಂಪನಿಯಿಂದ ಸ್ಟಾರ್ ಶಿಪ್ ಎಂಬ ಹೆಸರಿನ … Continued

ಕರ್ನಾಟಕದ ಚುನಾವಣೆ: ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ, ಜಗದೀಶ ಶೆಟ್ಟರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಇಂದು, ಸೋಮವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಮೂರನೇ ಪಟ್ಟಿ ಕ್ಷೇತ್ರ         ಅಭ್ಯರ್ಥಿ ನಾಗಠಾಣ-ಸಂಜೀವ ಐಹೊಳೆ ಸೇಡಂ-ರಾಜಕುಮಾರ ಪಾಟೀಲ ಕೊಪ್ಪಳ-ಮಂಜುಳಾ ಅಮರೇಶ ರೋಣ – ಕಳಕಪ್ಪ ಬಂಡಿ, … Continued

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದ ತಕ್ಷಣವೇ ಜಗದೀಶ ಶೆಟ್ಟರಗೆ ಟಿಕೆಟ್‌ ನೀಡಿದ ಕಾಂಗ್ರೆಸ್‌….!

ಬೆಂಗಳೂರು : ಬಿಜೆಪಿಗೆ (BJP) ರಾಜೀನಾಮೆ ನೀಡಿ ಇಂದು, ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್‌ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ವಿಧಾನ ಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕಿಳಿಯಲಿದ್ದಾರೆ. ಜಗದೀಶ … Continued