ದೇಶದ್ರೋಹ ಪ್ರಕರಣ: IPC ಸೆಕ್ಷನ್ 124A ತಡೆಹಿಡಿಯುವಂತೆ ಸುಪ್ರೀಂಕೋರ್ಟ್ ಆದೇಶ, ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ- ರಾಜ್ಯಗಳಿಗೆ ಸೂಚನೆ

ನವದೆಹಲಿ: ಕೇಂದ್ರ ಸರ್ಕಾರ ಕಾನೂನಿನ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವ ವರೆಗೆ ಸೆಕ್ಷನ್ 124ಎ ಬಳಕೆಯನ್ನು ತಡೆಹಿಡಿಯುವಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರ್ದೇಶಿಸಿತು. ಜೊತೆಗೆ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಈ ಕಾನೂನಿನಡಿ ಬಾಕಿ ಉಳಿದಿರುವ ಎಲ್ಲಾ ವಿಚಾರಣೆಗಳಿಗೆ ಸುಪ್ರೀಂ ಕೋರ್ಟ್‌ … Continued

ಇಂದಿನಿಂದ Google Play Store ಇಂದ ಎಲ್ಲ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳಿಗೆ ನಿಷೇಧ

ಬಹಳ ದಿನಗಳಿಂದಲೂ ಗೂಗಲ್ ತನ್ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಥರ್ಡ್ ಪಾರ್ಟಿ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್​ಗಳನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿತ್ತು. ಇದೀಗ ಗೂಗಲ್‌ ಅದನ್ನು ಜಾರಿಗೆ ತರಲು ನಿರ್ಧರಿಸಿದೆ. ಮೇ 11ರ ಬಳಿಕ ಅಂದರೆ ಇಂದಿನಿಂದ ಅಂಡ್ರಾಯ್ಡ್‌ ಫೋನ್‌ ಬಳಕೆದಾರರು ಅಪ್ಲಿಕೇಶನ್ ಬಳಸಿ ಕರೆ ರೆಕಾರ್ಡ್‌ (Call recording) ಮಾಡಲು ಸಾಧ್ಯವಾಗುವುದಿಲ್ಲ. ಅಂಡ್ರಾಯ್ಡ್‌ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಯನ್ನು … Continued

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೆರೆಬ್ರಲ್ ಅನ್ಯೂರಿಸಂನಿಂದ ಬಳಲುತ್ತಿದ್ದಾರೆ: ವರದಿ

ಬೀಜಿಂಗ್: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ‘ಸೆರೆಬ್ರಲ್ ಅನ್ಯೂರಿಸಂ’ನಿಂದ ಬಳಲುತ್ತಿದ್ದಾರೆ ಮತ್ತು 2021 ರ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶಸ್ತ್ರಚಿಕಿತ್ಸೆಗೆ ಹೋಗುವುದಕ್ಕಿಂತ ಹೆಚ್ಚಾಗಿ ಚೀನಾದ ಸಾಂಪ್ರದಾಯಿಕ ಔಷಧಿಗಳ ಚಿಕಿತ್ಸೆ ಪಡೆಯಲು ಅವರು ಆದ್ಯತೆ ನೀಡಿದರು ಎಂದು ತಿಳಿದುಬಂದಿದೆ. ಸೆರೆಬ್ರಲ್ ಅನ್ಯೂರಿಸಂ’ ರಕ್ತನಾಳಗಳನ್ನು ಮೃದುಗೊಳಿಸುತ್ತದೆ ಮತ್ತು ರಕ್ತನಾಳವನ್ನು ಕುಗ್ಗಿಸುತ್ತದೆ. ತಡವಾಗಿ, … Continued

ಭಾರತದಲ್ಲಿ ಆಲ್ಕೊಹಾಲ್ ಸೇವನೆ ಮಾಡುವ ಪುರುಷ ಸಂಖ್ಯೆ ಶೇ.7ರಷ್ಟು ಇಳಿಮುಖ : NFHS-5 ವರದಿ

ನವದೆಹಲಿ: 2015ರಿಂದ ಭಾರತದ ಪುರುಷರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಶೇ.7 ರಷ್ಟು ಕಡಿಮೆಯಾಗಿದೆ ಎಂದು NFHS-5 ವರದಿ ತಿಳಿಸಿದೆ. ಪುರುಷರಲ್ಲಿ ಆಲ್ಕೋಹಾಲ್ ಸೇವನೆಯು ಯಾವಾಗಲೂ ಹೆಚ್ಚಾಗಿರುತ್ತದೆ ಎಂದು ತಿಳಿದಿದ್ದರೂ, 2019-2021 ಗಾಗಿ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS-5)ಯು ದೇಶದಲ್ಲಿ ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು 7%ರಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ. ದೇಶದಲ್ಲಿ ಶೇ.22ರಷ್ಟು ಪುರುಷರಿಗೆ … Continued

ತಕ್ಷಣದಿಂದಲೇ ಜಾರಿಗೆ ಬರುವಂತೆ ಬೃಹತ್ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಬೃಹತ್ ಅವಧಿಯ ಠೇವಣಿಗಳ ( 2 ಕೋಟಿ ರೂ.ಗಳು ಮತ್ತು ಅದಕ್ಕಿಂತ ಹೆಚ್ಚಿನ) ಬಡ್ಡಿ ದರವನ್ನು ಮೇ 10 ರಿಂದ ಜಾರಿಗೆ ಬರುವಂತೆ 40-90 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. ಬಜಾಜ್ ಫೈನಾನ್ಸ್, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯು ಸ್ಥಿರ ಠೇವಣಿ … Continued

ಶ್ರೀಲಂಕಾದಲ್ಲಿ ಹಿಂಸಾಚಾರ : ಅಶಾಂತಿ ಶಮನಕ್ಕೆ ಕಂಡಲ್ಲಿ ಗುಂಡಿಕ್ಕಲು’ ಆದೇಶಿಸಿದ ಸರ್ಕಾರ

ಕೊಲಂಬೊ: ಸಾವುಗಳು. ಅಗ್ನಿಸ್ಪರ್ಶ. ರಾಷ್ಟ್ರವ್ಯಾಪಿ ಕರ್ಫ್ಯೂ. ದೇಶದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಪ್ರತಿಭಟನೆ ಮುಂದುವರಿದಿರುವಂತೆಯೇ ಕಳೆದ ಎರಡು ದಿನಗಳಿಂದ ಶ್ರೀಲಂಕಾ ಅಭೂತಪೂರ್ವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಸೋಮವಾರ ಶ್ರೀಲಂಕಾದ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸೆ ನೀಡಿದ ನಂತರ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಆಹಾರ, ಇಂಧನ ಮತ್ತು ಔಷಧಿಗಳ ತೀವ್ರ ಕೊರತೆ ಮತ್ತು ದೀರ್ಘಕಾಲದ … Continued

ಆಜಾನ್‌-ಹನುಮಾನ ಚಾಲೀಸಾ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಇನ್ಮುಂದೆ ಲೌಡ್​ಸ್ಪೀಕರ್ (Loudspeaker) ಬಳಸುವವರು ಅಧಿಕೃತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ಕುರಿತು ಮಾರ್ಗಸೂಚಿ ಹೊರಡಿಸಿದ್ದಾರೆ. ಇದಕ್ಕೂ ಮೊದಲು … Continued

ಸೆಕ್ಷನ್ 124ಎ ಮರುಪರಿಶೀಲನೆ ಆಗುವ ವರೆಗೆ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಬಹುದೇ? ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ಐಪಿಸಿ ಸೆಕ್ಷನ್ 124 ಎ ಮರುಪರಿಶೀಲನೆ ಮಾಡುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಾಕಿ ಉಳಿದಿರುವ ಎಲ್ಲ ದೇಶದ್ರೋಹ ಪ್ರಕರಣಗಳನ್ನು ತಡೆ ಹಿಡಿಯಲು ಸರ್ಕಾರಗಳಿಗೆ ನಿರ್ದೇಶನ ನೀಡಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಕೇಂದ್ರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ನಾಳೆಯೊಳಗೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಸುಪ್ರೀಂ ಕೋರ್ಟ್‌ … Continued

ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿಯಮಗಳು ಜಾರಿ: ಅಭ್ಯರ್ಥಿಗಳು ವಾಚ್ ಕಟ್ಟಿ ಪರೀಕ್ಷಾ ಕೊಠಡಿ ಪ್ರವೇಶಿಸುವಂತಿಲ್ಲ…! ಇಲ್ಲಿದೆ ಮಾರ್ಗಸೂಚಿಗಳು

ಬೆಂಗಳೂರು: ಇತ್ತೀಚಿನ ಪರೀಕ್ಷಾ ಅಕ್ರಮಗಳಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಲರ್ಟ್ ಆಗಿದೆ. ಶಿಕ್ಷಕರ ನೇಮಕಾತಿಗಾಗಿ ಪರೀಕ್ಷೆ ನಡೆಸಲು ಮುಂದಾಗಿರುವ ಶಿಕ್ಷಣ ಇಲಾಖೆ ಈಗ ಟೆಕ್ನಾಲಜಿ ಬಳಸಿ ಪರೀಕ್ಷಾ ಅಕ್ರಮಕ್ಕೆ ಕಡಿವಾಣಕ್ಕೆ ಮುಂದಾಗಿದೆ. ಮೇ 21 ಹಾಗೂ 22 ರಂದು 15 ಸಾವಿರ ಶಿಕ್ಷಕರ ನೇಮಕಾತಿ ಉದ್ದೇಶದಿಂದ ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತಿದೆ. ಈ … Continued

ಮೈಸೂರು ಮೃಗಾಲಯದಲ್ಲಿ 3 ಮರಿಗಳಿಗೆ ಜನ್ಮನೀಡಿದ ಬಿಳಿಹುಲಿ

ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಒಂಬತ್ತು ವರ್ಷಗಳ ಬಳಿಕ ಬಿಳಿಹುಲಿಯೊಂದು ಮೂರು ಮರಿಗಳಿಗೆ ಜನ್ಮನೀಡಿದೆ. ತಾಯಿ ಮತ್ತು ಮೂರು ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ಮೃಗಾಲಯದ ಹೆಣ್ಣು ಹುಲಿ ತಾರಾ ಹಾಗೂ ಗಂಡು ಹುಲಿ ರಾಕಿ ಜೋಡಿಗೆ ಮೂರು ಮರಿಗಳು ಜನಿಸಿವೆ. ತಾರಾ ಎಪ್ರಿಲ್‌ 26ರಂದು ಮೂರು ಮರಿಗಳಿಗೆ ಮೃಗಾಲಯದ … Continued