ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಪ್ರಯಾಗರಾಜ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ನವದೆಹಲಿ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿರುವ ಬಘಂಬರಿ ಮಠದಲ್ಲಿ ಮಹಂತ್ ನರೇಂದ್ರ ಗಿರಿ ಅವರ ಶವ ಪತ್ತೆಯಾಗಿದೆ. ಆರಂಭಿಕ ವರದಿಗಳ ಪ್ರಕಾರ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿದೆ ಮತ್ತು ಅದನ್ನು ಮುರಿಯಬೇಕಾಯಿತು. … Continued

ರಷ್ಯಾ ಪೆರ್ಮ್ ಸ್ಟೇಟ್ ವಿವಿಯಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ: 8 ಸಾವು, ಕಿಟಕಿಯಿಂದ ಜಿಗಿದು ಓಡಿದ ವಿದ್ಯಾರ್ಥಿಗಳು.. ವಿಡಿಯೊದಲ್ಲಿ ಸೆರೆ

ಮಾಸ್ಕೋ: ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ವರ್ಷ ನಡೆದ ದೇಶದ ಎರಡನೇ ಸಾಮೂಹಿಕ ಗುಂಡಿನ ದಾಳಿಯಲ್ಲಿ, ಸೆಂಟ್ರಲ್ ರಶಿಯಾದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಂದೂಕುಧಾರಿ ಇಂದು (ಸೋಮವಾರ) ಗುಂಡಿನ ದಾಳಿ ನಡೆಸಿದ್ದು, 8 ಜನರನ್ನು ಕೊಂದಿದ್ದಾನೆ, 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಾಸ್ಕೋದಿಂದ ಪೂರ್ವಕ್ಕೆ 1,300 ಕಿಲೋಮೀಟರ್ (800 ಮೈಲಿ) ದೂರದಲ್ಲಿರುವ ಪೆರ್ಮ್ ನಗರದ ವಿಶ್ವವಿದ್ಯಾನಿಲಯದ … Continued

ಕರ್ನಾಟಕ ಸಿಇಟಿ -2021 ಫಲಿತಾಂಶ ಪ್ರಕಟ; 5 ವಿಭಾಗದಲ್ಲೂ ಮೊದಲ ಸ್ಥಾನ ಪಡೆದ ಮೈಸೂರಿನ ಮೇಘನ್‌..!..!

ಬೆಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಇಂಜಿನಿಯರಿಂಗ್ (Engineering) , ಕೃಷಿ (Agriculture) , ನ್ಯಾಚುರೋಪಥಿ (Naturopathy) , ಪಶು ವೈದ್ಯಕೀಯ (Veterinary) , ಬಿ-ಫಾರ್ಮಾ ವಿಭಾಗದ ಫಲಿತಾಂಶ ಪ್ರಕಟಿಸಲಾಗಿದೆ. ಈ ಐದೂ ವಿಭಾಗಗಳಲ್ಲಿ ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಮೇಘನ್ ಹೆಚ್​.ಕೆ ಪ್ರಥಮ ಸ್ಥಾನ (CET First Rank) ಪಡೆದಿದ್ದಾರೆ. … Continued

ರಾಜಕೀಯ ಮೈಲೇಜ್‌ಗಾಗಿ ತನ್ನ ಹೆಸರು ಬಳಸಿದ್ದಕ್ಕೆ ತಂದೆ-ತಾಯಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ ತಮಿಳಿನ ಸೂಪರ್‌ ಸ್ಟಾರ್‌ ವಿಜಯ..!

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರು ತಮ್ಮ ತಂದೆ ತಾಯಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ್ದಾರೆ. ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ತಂದೆ-ತಾಯಿ ಸೇರಿದಂತೆ ಸೇರಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು,ಅವರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ಹೆಸರು ಬಳಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನನ್ನ ಹೆಸರಿನಲ್ಲಿ … Continued

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತಂತಿಗೆ ಕುತ್ತಿಗೆ ಸಿಲುಕಿ ಉಸಿರುಗಟ್ಟಿ ಗಂಡು ಜಿರಾಫೆ ಸಾವು

ಬೆಂಗಳೂರು: ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ ಮೂರೂವರೆ ವರ್ಷದ ಜಿರಾಫೆ ಭಾನುವಾರ ದಾರುಣವಾಗಿ ಮೃತಪಟ್ಟಿದೆ. 11 ಅಡಿ ಎತ್ತರದ ಯದುನಂದನ ಎಂಬ ಹೆಸರಿನ ಗಂಡು ಚಿರತೆ ಆಹಾರ ತಿನ್ನಲು ಉದ್ಯಾನ ಆವರಣದ ತಂತಿಯಿಂದ ಕುತ್ತಿಗೆ ಹೊರಚಾಚಿದಾಗ ಅದರಲ್ಲಿ ಕುತ್ತಿಗೆ ಸಿಲುಕಿ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಿರಾಫೆ ಸೂಕ್ಷ್ಮ ಪ್ರಾಣಿಯಾಗಿರುವುದರಿಂದ ಉಸಿರುಗಟ್ಟಿ ಕೊನೆಯುಸಿರೆಳೆಯಿತು ಎಂದು ಉದ್ಯಾನದ … Continued

ಲೋಕಸಭಾ ಟಿಕೆಟ್ ಗೆ ರೂ 5 ಕೋಟಿ ಪಡೆದ ಆರೋಪ :ಆರ್‌ಜೆಡಿ ತೇಜಸ್ವಿ ಯಾದವ್, ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪಾಟ್ನಾ ಕೋರ್ಟ್‌ ಆದೇಶ

ಪಾಟ್ನಾ: 2019 ರ ಚುನಾವಣೆಯಲ್ಲಿ ಲೋಕಸಭಾ ಟಿಕೆಟ್ ಗೆ 5 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದ ಆರೋಪದ ಮೇಲೆ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಮಿಸಾ ಭಾರತಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಲು ಪಾಟ್ನಾ ನ್ಯಾಯಾಲಯ ಆದೇಶಿಸಿದೆ. ಕಾಂಗ್ರೆಸ್ ಮುಖಂಡ ಸಂಜೀವ್ ಕುಮಾರ್ ಸಿಂಗ್ ಅವರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲು … Continued

ಪಂಜಾಬ್ ಬಿಕ್ಕಟ್ಟಿನ ಪರಿಣಾಮ ರಾಜಸ್ಥಾನ- ಛತ್ತೀಸ್‌ಗಡದ ಮೇಲಾದರೆ…?: ಹೆದರುತ್ತಿರುವ ಕಾಂಗ್ರೆಸ್ ನಾಯಕರು

ನವದೆಹಲಿ: ಪಂಜಾಬ್‌ನಲ್ಲಿ ಶೀಘ್ರವಾಗಿ ನಡೆಯುತ್ತಿರುವ ಘಟನೆಗಳು ಕಾಂಗ್ರೆಸ್‌ಗೆ ವ್ಯಾಪಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಯಿದ್ದು, ಅಮರಿಂದರ್ ಸಿಂಗ್ ಮುಖ್ಯಮಂತ್ರಿಯಾಗಿ “ಅವಮಾನಕರ ನಿರ್ಗಮನದ ನಂತರ ಇತರ ರಾಜ್ಯಗಳಲ್ಲಿ ಇದೇರೀತಿ ಭಿನ್ನಮತ ಭಿನ್ನಾಭಿಪ್ರಾಯದ ಏಳಬಹುದು ಎಂದು ಕಾಂಗ್ರೆಸ್‌ ಪಕ್ಷದ ಒಳಗಿನವರು ಭಯಪಡುತ್ತಾರೆ. ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಸುಶ್ಮಿತಾ ದೇವ್ ಮತ್ತು ಪ್ರಿಯಾಂಕ ಚತುರ್ವೇದಿ ಸೇರಿದಂತೆ ಹಲವು ಪಕ್ಷದ ನಾಯಕರ … Continued

ಐಪಿಎಲ್ 2021ರ ನಂತರ ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್ ಕೊಹ್ಲಿ ವಿದಾಯ..!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಋತುವಿನ ನಂತರ ವಿರಾಟ್ ಕೊಹ್ಲಿ ತಂಡದ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಫ್ರಾಂಚೈಸಿ ವಿಡಿಯೊ ಪೋಸ್ಟ್ ಮಾಡಿದೆ, ಅಲ್ಲಿ ಆರ್‌ ಸಿಬಿ ನಾಯಕ ತನ್ನ ನಿರ್ಧಾರವನ್ನು ವಿವರಿಸಿದ್ದಾರೆ. ಅಧಿಕೃತ ಹೇಳಿಕೆಯ ಮೂಲಕ ಮಾತನಾಡಿದ ಕೊಹ್ಲಿ, “ಆರ್‌ಸಿಬಿ ತಂಡದಲ್ಲಿ … Continued

ಹೈದರಾಬಾದಿನ ಪ್ರಸಿದ್ಧ ಗಣೇಶ ಲಡ್ಡು 18.90 ಲಕ್ಷ ರೂ.ಗಳಿಗೆ ಹರಾಜು..!

ಹೈದರಾಬಾದ್: ಹೈದರಾಬಾದಿನ ಅತ್ಯಂತ ಜನಪ್ರಿಯಬಾಲಾಪುರ ಗಣೇಶನ 21 ಕೆಜಿ ಲಡ್ಡು ಭಾನುವಾರ 18.90 ಲಕ್ಷ ರೂ.ಗೆ ಸಾರ್ವಕಾಲಿಕ ದಾಖಲೆಗೆ ಹರಾಜಾಯಿತು. ತೆಲಂಗಾಣದ ನಾಡರ್ಗಲ್‌ನ ಉದ್ಯಮಿ ಮರಿ ಶಶಾನ್ ರೆಡ್ಡಿ ಜೊತೆಗೆ ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ರಮೇಶ್ ಯಾದವ್ ಪ್ರಸಿದ್ಧ ಲಡ್ಡು ಖರೀದಿಸಿದರು. ಬಿಡ್ಡಿಂಗ್ 1,116 ರೂ.ಗಳಿಗೆ ಆರಂಭವಾಯಿತು ಮತ್ತು ಕೆಲವೇ ನಿಮಿಷಗಳಲ್ಲಿ ನೂರಾರು ಭಕ್ತರ ಹರ್ಷೋದ್ಗಾರದ … Continued

ದಲಿತ ದಾಳ ಉರುಳಿಸಿದ ಕಾಂಗ್ರೆಸ್‌: ಚರಣಜಿತ್ ಸಿಂಗ್ ಚನ್ನಿ ಪಂಜಾಬಿನ ಮೊದಲ ದಲಿತ ಸಿಎಂ

ನವದೆಹಲಿ: ಅಚ್ಚರಿಯ ಹಾಗೂ ಲೆಕ್ಕಾಚಾರದ ಬೆಳವಣಿಗೆಯಲ್ಲಿ ಪಂಜಾಬಿನ ಮುಂದಿನ ಮುಖ್ಯಮಂತ್ರಿಯಾಗಿ ಚಮ್ಕೌರ್ ಸಾಹಿಬ್ ಶಾಸಕ ಚರಣಜಿತ್ ಸಿಂಗ್ ಚನ್ನಿಯನ್ನು ಕಾಂಗ್ರೆಸ್ ಹೆಸರಿಸಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ತಾಂತ್ರಿಕ ಶಿಕ್ಷಣ ಸಚಿವ ಚರಣ್ಜಿತ್ ಸಿಂಗ್ ಚನ್ನಿ ಅವರ ಹೆಸರನ್ನು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಭಾನುವಾರ ಘೋಷಿಸಿದೆ. ಚನ್ನಿ ಪ್ರಮಾಣವಚನ ಸ್ವೀಕಾರಕ್ಕೆ … Continued