6ನೇ ತರಗತಿ ಬಳಿಕ ಹುಡುಗಿಯರಿಗೆ ಶಿಕ್ಷಣ ಇಲ್ಲ ಎಂದು ತಾಲಿಬಾನ್ ಘೋಷಣೆ..!

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಬುಧವಾರ ಬಾಲಕಿಯರ ಮಾಧ್ಯಮಿಕ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ. ಅಫ್ಘಾನಿಸ್ಥಾನದ ಹೊಸ ಆಡಳಿತಗಾರರ ಕಟ್ಟುನಿಟ್ಟಿನ ನಾಯಕತ್ವವು 6 ನೇ ತರಗತಿಗಿಂತ ಹೆಚ್ಚಿನ ಹುಡುಗಿಯರಿಗೆ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರಲು ನಿರ್ಧರಿಸಿದೆ ಎಂದು ಬುಧವಾರ ತಾಲಿಬಾನ್ ಹೇಳಿದೆ. ದೇಶದಲ್ಲಿ ಎರಡನೇ ಬಾರಿಗೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಕಳೆದ ಆಗಸ್ಟ್‌ ನಂತರ ಮೊದಲ ಬಾರಿಗೆ ಶಾಲೆಗಳು … Continued

ಹೈದರಾಬಾದ್ : ಗೋದಾಮಿನಲ್ಲಿ ಬೆಂಕಿ ಅವಘಡ, 11 ಮಂದಿ ವಲಸೆ ಕಾರ್ಮಿಕರು ಸುಟ್ಟು ಕರಕಲು

ಹೈದರಾಬಾದ್‌: ಹೈದರಾಬಾದ್‌ನ ಭೋಯಿಗುಡಾ ಪ್ರದೇಶದಲ್ಲಿ ಕಬ್ಬಿಣ ಮತ್ತು ಪ್ಲಾಸ್ಟಿಕ್‌ ಚೂರುಪಾರುಗಳನ್ನು ಸಂಗ್ರಹಿಸುವ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 11 ಮಂದಿ ವಲಸೆ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಒಬ್ಬ ವ್ಯಕ್ತಿ ತ ಕಿಟಕಿಯನ್ನು ಒಡೆದು ಹೊರಬಂದು ಬದುಕುಳಿಯುವಲ್ಲಿ ಯಶಸ್ವಿಯಾಗಿದ್ದಾನೆ. ಸದ್ಯ ಅವರು ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, … Continued

ಭಾರತ-ರಷ್ಯಾ ಸಂಬಂಧಗಳು ವರ್ಷಗಳಿಂದ ಪರಸ್ಪರ ಗಟ್ಟಿಯಾಗಿ ವಿಕಸನಗೊಂಡಿದ್ದು ಹೇಗೆ..? ಒಂದು ಅವಲೋಕನ..

ನವದೆಹಲಿ: ಉಕ್ರೇನ್‌ನಲ್ಲಿನ ಯುದ್ಧವು ಪಶ್ಚಿಮ ಮತ್ತು ರಷ್ಯಾದ ನಡುವಿನ ಸಂಬಂಧಗಳನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಭಾರತವನ್ನು ರಾಜತಾಂತ್ರಿಕ  ಹಗ್ಗದ ಮೇಲೆ ನಡೆಯುವಂತೆ ಮಾಡಿದೆ. ಮತ್ತು ರಷ್ಯಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸಂಬಂಧಗಳು ನಡೆದು ಬಂದ ದಾರಿಯನ್ನು ಗಮನಿಸಿದರೆ, ನವದೆಹಲಿಗೆ ಯಾವುದೇ ಸುಲಭವಾದ ಬೇರೆ ಆಯ್ಕೆಗಳಿಲ್ಲ ಎಂಬುದು ಗೋಚರವಾಗುತ್ತದೆ. ಅಗತ್ಯವಿದ್ದಾಗ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯಲ್ಲಿ ಪರಸ್ಪರ … Continued

ವಿಶ್ವದ 100 ಅತ್ಯಂತ ಕಲುಷಿತ ನಗರಗಳಲ್ಲಿ 63 ನಗರಗಳು ಭಾರತದಲ್ಲೇ ಇವೆ..!

ನವದೆಹಲಿ: 2021ರಲ್ಲಿ ಭಾರತದ ವಾಯು ಮಾಲಿನ್ಯವು ಹದಗೆಟ್ಟಿದೆ ಎಂದು ಸ್ವಿಸ್ ಸಂಸ್ಥೆಯಾದ IQAir ಬಿಡುಗಡೆ ಮಾಡಿದ ವಿಶ್ವ ವಾಯು ಗುಣಮಟ್ಟ ವರದಿ ತಿಳಿಸಿದೆ. ಇದು ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಮೂರು ವರ್ಷಗಳ ಪ್ರವೃತ್ತಿಯನ್ನು ಕೊನೆಗೊಳಿಸಿದೆ. ಸೂಕ್ಷ್ಮದರ್ಶಕ PM2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ ಸರಾಸರಿ ವಾಯು ಮಾಲಿನ್ಯವು ಪ್ರತಿ ಘನ ಮೀಟರ್‌ಗೆ 58.1 ಮೈಕ್ರೊಗ್ರಾಮ್ ಆಗಿದೆ, ಇದು ವಿಶ್ವ … Continued

ಬಸ್‌-ಕಾರಿನ​ ನಡುವೆ ಭೀಕರ ಅಪಘಾತ: ಐವರು ವಿದ್ಯಾರ್ಥಿಗಳು ಸಾವು

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಸಮೀಪ ಹಾಸನ – ಬೇಲೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಲ್ಟೊ ಕಾರು ನಡುವೆ ಡಿಕ್ಕಿ ಸಂಭವಿಸಿ ಐವರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಮೃತಪರನ್ನು ವಿದ್ಯಾರ್ಥಿಗಳಾದ ಅಕ್ಮಲ್(18), ಜಿಲಾನಿ(19), ತೋಹಿದ್(18), ಕೈಫ್ (18) ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ರಿಹಾನ್ (19) ಆಸ್ಪತ್ರೆಗೆ ಸಾಗಿಸುವಾಗ … Continued

ಜಾಗತಿಕವಾಗಿ ವೇಗವಾಗಿ ಹರಡುತ್ತಿರುವ ಕೋವಿಡ್‌-19 ವೈರಸ್ಸಿನ ಉಪರೂಪಾಂತರಿ ಸ್ಟೆಲ್ತ್ ಓಮಿಕ್ರಾನ್ BA.2…ಇದರ ಬಗ್ಗೆ ತಿಳಿದುಕೊಳ್ಳಬೇಕಾದದ್ದು

ನವದೆಹಲಿ: ಕೋವಿಡ್‌-19 ವೈರಸ್ಸಿನ ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿ ಬಿಎ.2 ಅಮೆರಿಕದಲ್ಲಿ ತನ್ನ ನೆಲೆ ಸ್ಥಾಪಿಸುವುದನ್ನು ಮುಂದುವರೆಸಿದೆ. ಹೆಚ್ಚು ಸಾಂಕ್ರಾಮಿಕ ಬಿಎ.2 ಉಪ ರೂಪಾಂತರಿಯಿಂದಾಗಿ ಚೀನಾ, ಪಶ್ಚಿಮ ಯುರೋಪ್‌ನಲ್ಲಿ ಕೋವಿಡ್‌-19 ಮತ್ತೆ ಉಲ್ಬಣಗೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಅಮೆರಿಕದ ಸ್ಯಾನ್ ಡಿಯಾಗೋ ಮೂಲದ ಜೀನೋಮಿಕ್ಸ್ ಸಂಸ್ಥೆಯಾದ ಹೆಲಿಕ್ಸ್, BA.2 ರೂಪಾಂತರವನ್ನು ಜನವರಿ ಆರಂಭದಲ್ಲಿ ಅಮೆರಿಕದಲ್ಲಿ ಮೊದಲು … Continued

ಪಶ್ಚಿಮ ಬಂಗಾಳ: ಪಂಚಾಯತ ನಾಯಕನ ಹತ್ಯೆಯ ನಂತರ 8 ಜನರ ಸಜೀವ ದಹನ ಮಾಡಿದ ಗುಂಪು..

ಕೋಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಕನಿಷ್ಠ 8 ಜನರು ಸಜೀವ ದಹನವಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳ ಪ್ರಕಾರ, ಬಿರ್ಭೂಮ್‌ನಲ್ಲಿ ಪಂಚಾಯತ್ ನಾಯಕನಾಗಿ ಸೇವೆ ಸಲ್ಲಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕನನ್ನು ಹತ್ಯೆಗೈದ … Continued

ನಮ್ಮ ಸೌರವ್ಯೂಹದ ಹೊರಗೆ 5,000 ಜಗತ್ತುಗಳಿವೆ, ಕೆಲವು ಭೂಮಿಯಂತೆಯೇ ಇವೆ-ನಾಸಾ

ಮನುಷ್ಯರು ಆಕಾಶದತ್ತ ನೋಡಲಾರಂಭಿಸಿದಾಗ, ವೈಜ್ಞಾನಿಕ ಕುತೂಹಲ ಮೂಡಿದ ಕಾಲಾನಂತರದಲ್ಲಿ, ನಾವು ಸೂರ್ಯನ ಸುತ್ತ ಗ್ರಹಗಳನ್ನು ಕಂಡುಹಿಡಿದಿದ್ದೇವೆ, ಶತಕೋಟಿ ಕಿಲೋಮೀಟರ್‌ಗಳಿಂದ ಬೇರ್ಪಟ್ಟು ನಮ್ಮ ಸೌರವ್ಯೂಹವನ್ನು ರೂಪಿಸಿದ್ದೇವೆ. ಈಗ ನಾಸಾ ಆ ಕಾಸ್ಮಿಕ್ ಗಡಿಯನ್ನು ಮೀರಿ ಒಂದು ಹೆಜ್ಜೆ ಹೋಗಿದೆ ಮತ್ತು ಆಳವಾದ ಬಾಹ್ಯಾಕಾಶದಲ್ಲಿ 5,000 ಕ್ಕೂ ಹೆಚ್ಚು ವಿಶ್ವಗಳಿದ್ದು, ಅವುಗಳು ಅನ್ವೇಷಣೆಗೆ ಕಾಯುತ್ತಿದೆ ಎಂದು ದೃಢಪಡಿಸಿದೆ. 65 … Continued

137 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ…ಅಡುಗೆ ಅನಿಲ ಸಿಲಿಂಡರ್ ದರದಲ್ಲಿಯೂ ಏರಿಕೆ

ನವದೆಹಲಿ: ನಾಲ್ಕೂವರೆ ತಿಂಗಳ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿಲೀಟರಿಗೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.21 ರೂ., ಡೀಸೆಲ್ ಲೀಟರ್​ಗೆ 87.47 ರೂ., ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ … Continued

ಪದ್ಮಶ್ರೀ’ ಪಡೆಯುವಾಗ ರಾಷ್ಟ್ರಪತಿ, ಪ್ರಧಾನಿಗೆ ನೆಲಕ್ಕೆ ಬಗ್ಗಿ ವಂದಿಸಿದ ಯೋಗ ದಂತಕಥೆ 125 ವರ್ಷದ ಸ್ವಾಮಿ ಶಿವಾನಂದರು..!: ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ನವದೆಹಲಿ: 2022ನೇ ಸಾಲಿನ ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿ ಭವನದಲ್ಲಿ ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಹೃದಯಸ್ಪರ್ಶಿ ವಿಡಿಯೋ ಎಲ್ಲರ ಮನಗೆದ್ದಿದೆ. ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 125 ವರ್ಷದ ಯೋಗ ಪಟು ಸ್ವಾಮಿ ಶಿವಾನಂದ ಅವರಿಗೆ ಸೋಮವಾರ … Continued