ಕೋವಿಡ್ ಲಸಿಕೆಯಲ್ಲಿ ಬಂಜೆತನಕ್ಕೆ ಕಾರಣವಾಗುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ: ಆರೋಗ್ಯ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಕೋವಿಡ್ -19 ವ್ಯಾಕ್ಸಿನೇಷನ್ ಬಗ್ಗೆ ಪುರುಷರು ಮತ್ತು ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾದ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪುನರುಚ್ಚರಿಸಿದೆ ಮತ್ತು ಡೋಸುಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳಿದೆ. ಸಂತಾನೋತ್ಪತ್ತಿ ವಯಸ್ಸಿನ ಜನರಲ್ಲಿ ಕೋವಿಡ್ -19 ಲಸಿಕೆ ನೀಡುವುದರಿಂದ ಬಂಜೆತನದ ಬಗ್ಗೆ ಕಳವಳ ವ್ಯಕ್ತಪಡಿಸುವ ಮಾಧ್ಯಮ ವರದಿಗಳೂ ಬಂದಿವೆ … Continued

ಯೋಗ ದಿನದ ಲಸಿಕೆ ಅಭಿಯಾನ:ಡೋಸ್‌ ನೀಡುವಲ್ಲಿ ಬೆಂಗಳೂರು ನಗರ ದೇಶದಲ್ಲೇ ಪ್ರಥಮ, ಕರ್ನಾಟಕಕ್ಕೆ ಎರಡನೇ ಸ್ಥಾನ

ಬೆಂಗಳೂರು: ವಿಶ್ವ ಯೋಗ ದಿನದಂದು ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೊವಿಡ್ ಲಸಿಕೆ ಅಭಿಯಾನದಲ್ಲಿ ಲಸಿಕೆ ಪಡೆದುಕೊಂಡವರಲ್ಲಿ ಬೆಂಗಳೂರು ನಗರ ಜಿಲ್ಲೆ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 2,09,256 ಡೋಸ್ ಕೊವಿಡ್ ಲಸಿಕೆ ಡೋಸ್‌ ನೀಡಲಾಗಿದೆ. ಈ ಮೂಲಕ ಬೆಂಗಳೂರು ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ ಮಧ್ಯ ಪ್ರದೇಶದ 2,01,339 ಡೋಸ್ … Continued

ಬಿಎಸ್ಸಿ ಅಗ್ರಿ ಸೀಟು ಮೀಸಲಾತಿ 50%ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರದ ನಿರ್ಧಾರ:ಸಚಿವ ಬೊಮ್ಮಾಯಿ

ಬೆಂಗಳೂರು: ಬಿಎಸ್ಸಿ ಅಗ್ರಿ ಮತ್ತು ಸರಿ ಸಮಾನ ಕೋರ್ಸ್‌ಗಳಲ್ಲಿ ರೈತ ಮಕ್ಕಳಿಗೆ ನೀಡಲಾಗ್ತಿದ್ದ ಮೀಸಲಾತಿ ಪ್ರಮಾಣವನ್ನ ಶೇ.40ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸೋಮವಾರ ಸಚಿವ ಸಂಪುಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ‘ಸಾದಿಲ್ವಾರು ನಿಧಿಯನ್ನು 2500 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಮೈಸೂರು … Continued

ಯೋಗ ದಿನದಂದು ಹೊಸ ದಾಖಲೆ ಬರೆದ ಭಾರತ: ದೇಶದಲ್ಲಿ ಒಂದೇ ದಿನದಲ್ಲಿ 81 ಲಕ್ಷ ಜನರಿಗೆ ಕೋವಿಡ್‌-19 ಲಸಿಕೆ..!

ನವದೆಹಲಿ:ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕುವ ಅಭಿಯಾನ ಇಂದಿನಿಂದ (ಜೂನ್‌ 21ರಿಂದ) ಆರಂಭವಾಗಿದ್ದು ಮೊದಲ ದಿನ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ  ಸುಮಾರು 81 ಲಕ್ಷ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಸರ್ಕಾರದ ಕೋವಿನ್ ವೆಬ್‌ಸೈಟ್‌ನಲ್ಲಿನ ದತ್ತಾಂಶವು ಸೋಮವಾರ ರಾತ್ರಿ 9 ಗಂಟೆ ವರೆಗೆ ಒಟ್ಟು 80,96,492 ಲಸಿಕೆಡೋಸುಗಳನ್ನು ನೀಡಲಾಗಿದೆ … Continued

ಮತ್ತೆ ನಾನು ಸಿಎಂ ಆಗಬೇಕೆನ್ನುವುದು ಶಾಸಕರ ವೈಯಕ್ತಿಕ ಅಭಿಪ್ರಾಯ: ಸಿದ್ದರಾಮಯ್ಯ

ಕೊಪ್ಪಳ: ಸಿದ್ದರಾಮಯ್ಯ ಅವರೇ ಮುಂದಿನ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಕೆಲ ಶಾಸಕರು ಹೇಳುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಕ್ಷೇತ್ರದಲ್ಲಿ ಜನತೆಗೆ ಕಿಟ್ ವಿತರಿಸಲು  ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕೆಲ ಶಾಸಕರು ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು … Continued

ರೈತರಿಗೆ ಈ ವರ್ಷ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ರೂ. ಅಲ್ಪಾವಧಿ ಬೆಳೆ ಸಾಲದ ಗುರಿ: ಸಿಎಂ ಬಿಎಸ್‌ವೈ

ಬೆಂಗಳೂರು: ಈ ವರ್ಷ ರಾಜ್ಯದಲ್ಲಿ ೩೦.೨೬ ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೧೯,೩೭೦ ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು ೦.೬ ಲಕ್ಷ ರೈತರಿಗೆ ಶೇ. ೩ರ ಬಡ್ಡಿ ದರದಲ್ಲಿ ೧೪೬೦ ಕೋಟಿ ರೂ. ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ರಾಜ್ಯದ ಸಹಕಾರ ಇಲಾಖೆ … Continued

‘ಸರ್ಕಾರ ಕೇಳುವುದಿಲ್ಲ ..ಟ್ರ್ಯಾಕ್ಟರುಗಳೊಂದಿಗೆ ಸಿದ್ಧರಾಗಿ: ರೈತರಿಗೆ ಕರೆ ನೀಡಿದ ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್‌

ನವದೆಹಲಿ: ದೆಹಲಿಯ ವಿವಿಧ ಗಡಿಗಳಲ್ಲಿ ಕೃಷಿ ಕಾನೂನುಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿ ಸುಮಾರು ಏಳು ತಿಂಗಳುಗಳಿಗಳಾಗಿದ್ದು, ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ರೈತರು ಟ್ರ್ಯಾಕ್ಟರುಗಳೊಂದಿಗೆ ಸಿದ್ಧರಾಗಿರಬೇಕು ಎಂದು ಸೋಮವಾರ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪ್ರತಿಭಟನಾ ನಿರತ ರೈತರಿಗೆ “ಭೂಮಿಯನ್ನು ಉಳಿಸಿಕೊಳ್ಳಲು … Continued

ಯೋಗ ದಿನದಂದು ಪ್ರಧಾನಿ ಮೋದಿ ಬಿಡುಗಡೆ ಮಾಡಿದ mYoga ಆ್ಯಪ್ ಎಂದರೇನು..? ಇಲ್ಲಿದೆ ಮಾಹಿತಿ

ನವದೆಹಲಿ: ಏಳನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮೈ ಯೋಗ ಆ್ಯಪ್ ಬಿಡುಗಡೆ ಮಾಡಿದರು. ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಮೈ ಯೋಗ ಅಪ್ಲಿಕೇಶನ್ ಯೋಗ ತರಬೇತಿ ಮತ್ತು ಅಭ್ಯಾಸದ ಅವಧಿಯ ವಿವಿಧ ಸಮಯವನ್ನು ಜನಸಾಮಾನ್ಯರಿಗೆ ಮತ್ತು ಉತ್ಸಾಹಿಗಳಿಗೆ ಒದಗಿಸಲು ಉದ್ದೇಶಿಸಿದೆ. … Continued

ಆಂಧ್ರದಲ್ಲಿ ಒಂದೇ ದಿನದಲ್ಲಿ 13.59 ಲಕ್ಷ ಜನರಿಗೆ ಲಸಿಕೆ: ಹೊಸ ದಾಖಲೆ

ಹೈದರಾಬಾದ್: ಪ್ರಮುಖ ಮೈಲಿಗಲ್ಲಿನಲ್ಲಿ, ಆಂಧ್ರಪ್ರದೇಶದಲ್ಲಿ ಭಾನುವಾರ 13 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ಲಸಿಕೆ ನೀಡಲಾಯಿತು. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಾದ್ಯಂತ ಭಾನುವಾರ 13,59,300 ಜನರಿಗೆ ಕೊರೊನಾ ವೈರಸ್ ವಿರುದ್ಧ ಚುಚ್ಚುಮದ್ದು ನೀಡಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ 28,917 ಸಿಬ್ಬಂದಿ, 40,000 ಆಶಾ ಕಾರ್ಯಕರ್ತರು ಮತ್ತು 5,000 ಇತರ ಸಿಬ್ಬಂದಿ ಈ … Continued

ಕರ್ನಾಟಕದಲ್ಲಿ ಭಾನುವಾರ 5 ಸಾವಿರಕ್ಕಿಂತ ಕಡಿಮೆಯಾದ ದೈನಂದಿನ ಪ್ರಕರಣ, ಶೇ.2.58 ಕ್ಕೆ ಕುಸಿದ ಪಾಸಿಟಿವಿಟಿ ದರ

ಬೆಂಗಳೂರು: ಕರ್ನಾಟಕದಲ್ಲಿ ಹಲವು ದಿನಗಳ ನಂತರ ಇದೇ ಮೊದಲ ಬಾರಿಗೆ ಭಾನುವಾರ ಕೊರೊನಾ ಸೋಂಕಿತರ ಸಂಖ್ಯೆ 5 ಸಾವಿರಕ್ಕಿಂತ ಕಡಿಮೆ ದಾಖಲಾಗಿದೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದೆ. ಮತ್ತೊಂದು ಸಮಾಧಾನದ ಸಂಗತಿಯೆಂದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಭಾನುವಾರ ಶೇ.2.58 ಕ್ಕೆ ಕುಸಿದಿದೆ. ಅ ಎಂದು ರಾಜ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ರಾಜ್ಯದಲ್ಲಿ ಭಾನುವಾರ ಹೊಸದಾಗಿ 4,517 … Continued