ಮೋದಿ ಕ್ಯಾಬಿನೆಟ್ ಪುನರ್ರಚನೆ ; ಜ್ಯೋತಿರಾದಿತ್ಯ ಸಿಂಧ್ಯಾ, ವರುಣ್ ಗಾಂಧಿ, ದಿನೇಶ ತ್ರಿವೇದಿ ಸೇರ್ಪಡೆ ಸಾಧ್ಯತೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಉನ್ನತ ನಾಯಕರೊಂದಿಗೆ ಮತ್ತು ಎರಡು ಪ್ರತ್ಯೇಕ ಮಂತ್ರಿಗಳ ಗುಂಪುಗಳೊಂದಿಗೆ ನಾಲ್ಕು ದಿನಗಳಲ್ಲಿ ಎರಡು ಸಭೆಗಳನ್ನು ನಡೆಸಿದ್ದು, ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ರಚನೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಸೂಚನೆ ನೀಡಿದ್ದಾರೆ. 2019 ರ ಮೇ 30 ರಂದು ಪ್ರಾರಂಭವಾದ ಮೋದಿ ಸರ್ಕಾರದ ಎರಡನೇ ಇನ್ನಿಂಗ್ಸ್‌ನಲ್ಲಿ ಇದು … Continued

ತುರ್ತು ಕ್ರಮ ಅಗತ್ಯವಿದೆ’: ಭಾರತದಲ್ಲಿ ಕೋವಿಡ್ ಪುನರುತ್ಥಾನ ನಿಭಾಯಿಸಲು 8 ಹಂತ ಪಟ್ಟಿ ಮಾಡಿದ ಲ್ಯಾನ್ಸೆಟ್‌ ತಜ್ಞರ ಸಮಿತಿ

ನವದೆಹಲಿ: ಕೊವಿಡ್‌-19 ಪ್ರಕರಣಗಳು ಪುನರುತ್ಥಾನಗೊಳ್ಳುವ ಸಾಧ್ಯತೆಯಿದೆ ಎಂದು ಲ್ಯಾನ್ಸೆಟ್ ವೈದ್ಯಕೀಯ ಜರ್ನಲ್ ಭಾರತಕ್ಕೆ ಎಚ್ಚರಿಕೆ ನೀಡಿದೆ. ಹಾಗೂ ಅದನ್ನು ನಿಭಾಯಿಸಲು ತೆಗೆದುಕೊಳ್ಳಬೇಕಾದ ಎಂಟು ‘ತುರ್ತು ಕ್ರಮಗಳನ್ನು’ ಪಟ್ಟಿ ಮಾಡಿದೆ. ಲ್ಯಾನ್ಸೆಟ್‌ ಜೂನ್ 12 ರ ಸಂಚಿಕೆಯಲ್ಲಿ ಬಯೋಕಾನ್ ಮುಖ್ಯಸ್ಥ ಕಿರಣ್ ಮಜುಂದಾರ್-ಶಾ ಸೇರಿದಂತೆ 21 ಜನರು ಬರೆದಿದ್ದಾರೆ. ಜರ್ನಲ್ಲಿನಲ್ಲಿ ತುರ್ತಾಗಿ ಮಾಡಬೇಕಾದದ್ದರ ವೇಗ ಹೆಚ್ಚಿಸಲು ಮತ್ತು … Continued

ಎರಡನೇ ಹಂತದ ಅನ್ಲಾಕ್‌ ಬಗ್ಗೆ ನಾಳೆ ತೀರ್ಮಾನ ಎಂದ ಸಿಎಂ ಬಿಎಸ್‌ವೈ ಏನೆಲ್ಲ ಹೇಳಿದ್ರು..?

ಬೆಂಗಳೂರು: ನಾಳೆ ಎರಡನೇ ಹಂತದ ಅನ್ಲಾಕ್‌ ಬಗ್ಗೆ ತೀರ್ಮಾನ ಮಾಡುತ್ತೇವೆ, ಸಂಭವನೀಯ ಮೂರನೇ ಅಲೆಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದಕ್ಕೆಲ್ಲ ವಿನಾಯಿತಿ ಕೊಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಆದರೆ ಮುರನೇ ಅಲೆಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ತಜ್ಞರ … Continued

ಕರ್ನಾಟಕದಲ್ಲಿ ಮಳೆ: ಚಿಕ್ಕೋಡಿಯಲ್ಲಿ ಸೇತುವೆಗಳು ಜಲಾವೃತ, ಕರಾವಳಿ, ಮಲೆನಾಡಿನಲ್ಲಿ 3 ದಿನ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆಗೆ ಮರಗಳು ಧರೆಗುರುಳಿದ್ದರೆ, ಇನ್ನೂ ಹಲವೆಡೆ ರಸ್ತೆಗಳು, ಸೇತುವೆಗಳು ಬಿರುಕು ಬಿಟ್ಟಿವೆ. ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಚಿಕ್ಕೋಡಿಯಲ್ಲಿ ನಾಲ್ಕು ಸೇತುವೆಗಳು ಜಲಾವೃತವಾಗಿವೆ. ವಿಶೇಷವಾಗಿ ಕರ್ನಾಟಕದ ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ … Continued

ಕೋವಿಡ್‌-19 ಎರಡನೇ ಅಲೆ ಉಲ್ಬಣದ ಹೊರತಾಗಿಯೂ, ಪ್ರಧಾನಿ ಮೋದಿ ಅನುಮೋದನೆ ರೇಟಿಂಗ್ಸ್‌ ವಿಶ್ವ ನಾಯಕರಲ್ಲೇ ಅತಿ ಹೆಚ್ಚು:ಸಮೀಕ್ಷೆ

ನವದೆಹಲಿ: ಮೇ ತಿಂಗಳಲ್ಲಿ ನಡೆದ ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಜನಪ್ರಿಯತೆಯ ರೇಟಿಂಗ್ ಕುಸಿತದ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ ಇತರ ಜಾಗತಿಕ ನಾಯಕರಿಗಿಂತ ಉತ್ತಮ ರೇಟಿಂಗ್‌ ಮುಂದುವರಿಸಿದ್ದಾರೆ ಎಂದು ಅಮೆರಿಕದ ದತ್ತಾಂಶ ಗುಪ್ತಚರ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್ ಡೇಟಾದ ಪ್ರಕಾರ, ಪ್ರಧಾನಿ ಮೋದಿಯವರ … Continued

3ನೇ ಕೋವಿಡ್‌ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇಲ್ಲ: ಡಬ್ಲ್ಯೂಎಚ್‌ಒ-ಏಮ್ಸ್‌ ಅಧ್ಯಯನ

ನವದೆಹಲಿ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಡೆಸಿದ ಅಧ್ಯಯನವು ಮಕ್ಕಳಲ್ಲಿ ಹೆಚ್ಚಿನ ಸೆರೊ-ಸಕಾರಾತ್ಮಕತೆಯನ್ನು ಕಂಡುಹಿಡಿದಿದೆ. ಅಧ್ಯಯನದ ಮಧ್ಯಂತರ ಆವಿಷ್ಕಾರಗಳು ಕೋವಿಡ್ -19 ಸೋಂಕುಗಳ ಸಂಭವನೀಯ ಮೂರನೇ ಅಲೆಯ ಬಗ್ಗೆ ಇತರ ವಯಸ್ಸಿನವರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಬಗ್ಗೆ ಕಳವಳವನ್ನು ಕಡಿಮೆ ಮಾಡುತ್ತದೆ. … Continued

ಪಕ್ಷ ವಿರೋಧಿ ಹೇಳಿಕೆ ನೀಡಿದರೆ ಕ್ರಮ; ಬಿಜೆಪಿ ಶಾಸಕರು, ನಾಯಕರಿಗೆ ಅರುಣ್ ​ಸಿಂಗ್​ ಖಡಕ್‌ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಾಯಕತ್ವದ ವಿರುದ್ಧ ಪಕ್ಷದ ನಾಯಕರು ಪರ ಹಾಗೂ ವಿರೋಧ ಹೇಳಿಕೆ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕಾಗುತ್ತದೆ ಎಂದು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಉದ್ಭವಿಸಿದ್ದ ನಾಯಕಟ್ಟಿನ ಬಿಕ್ಕಟ್ಟು ನಿವಾರಣೆಗೆ ಬಂದಿದ್ದ ಅವರು, ಇಂದು (ಗುರುವಾರ) ಹಲವರು ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ನಂತರ ಮಾತನಾಡಿದ … Continued

ತಜ್ಞರ ಸಮಿತಿ ತೀರ್ಮಾನಿಸುವ ವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೆಂಗಳೂರು: ರಾಜ್ಯ ಸರ್ಕಾರವು ರಚಿಸಿದ ತಜ್ಞರ ಸಮಿತಿಯು ಸಮಗ್ರ ನಿರ್ಧಾರವನ್ನು ತೆಗೆದುಕೊಳ್ಳುವ ವರೆಗೆ ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ರಿಪೀಟರ್ಸ್‌ ಸೇರಿದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟು ಈ ಆದೇಶ ಹೊರಡಿಸಲಾಗಿದೆ. ನ್ಯಾಯಮೂರ್ತಿ ಬಿ.ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಹಂಚಾಟೆ ಸಂಜೀವಕುಮಾರ್ … Continued

ಕರ್ನಾಟಕ ಅನ್ಲಾಕ್‌ 2.0: ಮಾಲ್, ಹೊಟೇಲ್‌, ಕಲ್ಯಾಣಮಂಟಪ ಆರಂಭಕ್ಕೆ ಹಸಿರು ನಿಶಾನೆ.. ಷರತ್ತುಗಳು ಅನ್ವಯಿಸುತ್ತವೆ..?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಕೆಯಾಗುತ್ತಿದ್ದು, ಮಾಲ್, ರೆಸ್ಟೋರೆಂಟ್, ಮದುವೆ ಮಂಟಪಗಳು, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಕೆಲವೊಂದು ಆರ್ಥಿಕ ಚಟುವಟಿಕೆಗಳನ್ನು ಜೂ.21ರಿಂದ ಹಂತಹಂತವಾಗಿ ಪುನರಾರಂಭಿಸಬಹುದು. ನಿಯಂತ್ರಿತ ಸಂಖ್ಯೆಯ ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಜೂನ್ ಅಂತ್ಯದವರೆಗೂ ರಾತ್ರಿ ಕರ್ಫ್ಯೂ ಮುಂದುವರೆಸಬೇಕು. ಸಾರ್ವಜನಿಕ ಜಾಥಾ. ಸಮಾವೇಶ, ಧರಣಿ, … Continued

100 ಶತಕೋಟಿ ಡಾಲರ್‌ ವೆಚ್ಚಉಳಿಸಲು ಐಟಿ ಸಂಸ್ಥೆಗಳು ಯಾಂತ್ರೀಕರಣಗೊಳ್ಳುವ ಕಾರಣ 2022ರ ವೇಳೆಗೆ 30 ಲಕ್ಷ ಉದ್ಯೋಗ ನಷ್ಟ:ವರದಿ

ಮುಂಬೈ: ಕೈಗಾರಿಕೆಗಳಲ್ಲಿ ವಿಶೇಷವಾಗಿ ಟೆಕ್ ಸ್ಥಳದಲ್ಲಿ ಯಾಂತ್ರೀಕರಣ ಹೆಚ್ಚು ವೇಗದಲ್ಲಿ ನಡೆಯುತ್ತಿರುವುದರಿಂದ, 1.60 ಕೋಟಿಗೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ದೇಶೀಯ ಸಾಫ್ಟ್‌ವೇರ್ ಸಂಸ್ಥೆಗಳು 2022ರ ವೇಳೆಗೆ 3೦ ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಲಿವೆ, ಇದು ವಾರ್ಷಿಕವಾಗಿ ಸಂಬಳದಲ್ಲಿ 100 ಶತಕೋಟಿ ಡಾಲರ್‌ಗಳಷ್ಟು ಹೆಚ್ಚು ಉಳಿತಾಯಕ್ಕೆ ಸಹಾಯ ಮಾಡುತ್ತದೆ ಎಂದು ವರದಿಯೊಂದು ಹೇಳಿದೆ. ದೇಶೀಯ ಐಟಿ ವಲಯವು ಸುಮಾರು … Continued