ಸರ್ಕಾರಿ ಯೋಜನೆಗಳ ಲಾಭ ಬೇಕಾದ್ರೆ ಎರಡು ಮಕ್ಕಳ ನಿಯಮ ಪಾಲಿಸಬೇಕು : ಜನಸಂಖ್ಯಾ ನೀತಿ ಜಾರಿಗೆ ಮುಂದಾದ ಅಸ್ಸಾಂ ಸರ್ಕಾರ

ಗುವಾಹತಿ:ಅಸ್ಸಾಂನಲ್ಲಿ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕೆಂದರೆ ಇನ್ನು ಮುಂದೆ ಸರ್ಕಾರ ಜನಸಖ್ಯಾ ನೀತಿಯನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಶರ್ಮಾ ಹೇಳಿದ್ದಾರೆ. ಅಸ್ಸಾಂ ಸರ್ಕಾರ ಜನಸಂಖ್ಯಾ ನೀತಿ ಜಾರಿಗೆ ತರಲು ಮುಂದಾಗಿದ್ದು, ರಾಜ್ಯ ಸರ್ಕಾರದ ಯೋಜನೆಗಳ … Continued

3ನೇ ಕೋವಿಡ್‌-19 ಅಲೆ ಅನಿವಾರ್ಯ, ಇದು 6 ರಿಂದ 8 ವಾರದಲ್ಲೇ ಭಾರತಕ್ಕೆ ಹಿಟ್ ಮಾಡಬಹುದು:ಏಮ್ಸ್ ಮುಖ್ಯಸ್ಥ

ನವದೆಹಲಿ: ಭಾರತದಲ್ಲಿ ಮೂರನೇ ಕೋವಿಡ್ ಅಲೆ “ಅನಿವಾರ್ಯ”, ಮತ್ತು ಇದು ಮುಂದಿನ 6ರಿಂದ 8ಎಂಟು ವಾರಗಳಲ್ಲಿ ದೇಶದಲ್ಲಿ ಆರಂಭವಾಗಬಹುದು ಎಂದು ಏಮ್ಸ್ ಮುಖ್ಯಸ್ಥ ಡಾ.ರನದೀಪ್ ಗುಲೇರಿಯಾ ಹೇಳಿದ್ದಾರೆ. ಹೊಸ ಅಲೆಗಳ ನಡುವಿನ ಅಂತರವು ಕಡಿಮೆಯಾಗುತ್ತಿದೆ ಮತ್ತು ಇದು “ಚಿಂತಾಜನಕವಾಗಿದೆ” ಎಂದು ಡಾ ಗುಲೇರಿಯಾ ಹೇಳಿದ್ದಾರೆ. ಈ ಕುರಿತು ಎನ್‌ಡಿಟಿವಿಯೊಂದಿಗೆ ಮಾತನಾಡಿದ ಅವರು, ವಾರಗಳ ಕಟ್ಟುನಿಟ್ಟಿನ ನಿರ್ಬಂಧಗಳ … Continued

ಕರಾವಳಿ ಜಿಲ್ಲೆಗಳಲ್ಲಿ ಇಂದು ರೆಡ್​ ಅಲರ್ಟ್​ ಘೋಷಣೆ; ಬೆಳಗಾವಿ ಜಿಲ್ಲೆಯ ನದಿ ತೀರ ಪ್ರದೇಗಳಲ್ಲಿ ಪ್ರವಾಹ ಭೀತಿ

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಅತ್ಯಧಿಕ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಮಲೆನಾಡಿನ ಹಲವೆಡೆ ಮರಗಳು ಧರೆಗುರುಳಿವೆ, ರಸ್ತೆ ಹಾಗೂ ಸೇತುವೆಗಳು ಜಲಾವೃತವಾಗಿವೆ. ಕೃಷಿ ಭೂಮಿಗಳು ಮಳೆ … Continued

ಮಿಲ್ಖಾ ಸಿಂಗ್‌ ನಿಧನ..ಭಾರತ ವಿಭಜನೆ ವೇಳೆ ಕುಟುಂಬಸ್ಥರ ಹತ್ಯೆಯ ಘೋರ ದುರಂತದಿಂದೆದ್ದು ಫ್ಲೈಯಿಂಗ್‌ ಸಿಖ್‌ ಓಡಿದ ದಾರಿ..

ಸ್ವತಂತ್ರ ಭಾರತದ ಅತ್ಯಂತ ಅಪ್ರತಿಮ ಕ್ರೀಡಾ ನಾಯಕ ಎಂದು ಪರಿಗಣಿಸಲ್ಪಟ್ಟ ಮಿಲ್ಖಾ ಸಿಂಗ್ ಶುಕ್ರವಾರ ರಾತ್ರಿ ಚಂಡೀಗಡದಲ್ಲಿ ಕೋವಿಡ್‌ ನಂತರದ ತೊಂದರೆಯಿಂದ ತಮ್ಮ ಕೊನೆಯುಸಿರೆಳದರು.ಅವರಿಗೆ ವಯಸ್ಸು 91 ವರ್ಷ ವಯಸ್ಸಾಗಿತ್ತು. ಮಿಲ್ಖಾ ಒಂದು ತಿಂಗಳ ಹಿಂದೆಯೇ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು ಮತ್ತು ಈ ವಾರದ ಆರಂಭದಲ್ಲಿ ಪತ್ನಿ ನಿರ್ಮಲ್ ಕೌರ್ ಅವರನ್ನು ಕೋವಿಡ್ -19 … Continued

ಲ್ಯಾಂಬ್ಡಾ: 29 ದೇಶಗಳಲ್ಲಿ ಕಂಡುಬಂದ ಕೋವಿಡ್ -19 ಹೊಸ ರೂಪಾಂತರ..ನೀವು ತಿಳಿದುಕೊಳ್ಳಬೇಕಾದದ್ದು

ಡೆಲ್ಟಾ ಕೋವಿಡ್ -19 ರೂಪಾಂತರವನ್ನು ಎದುರಿಸಲು ಪ್ರಸ್ತುತ ಜಾಗತಿಕ ಪ್ರಯತ್ನಗಳ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತೊಂದು ರೂಪಾಂತರವನ್ನು ‘ಲ್ಯಾಂಬ್ಡಾ’ ಎಂದು ಹೆಸರಿಸಿದೆ, ಇದನ್ನು ‘ವೇರಿಯಂಟ್ ಆಫ್ ಇಂಟರೆಸ್ಟ್’ (ವಿಒಐ) ಎಂದು ಹೆಸರಿಸಿದೆ. ಇದು ಆತಂಕಕಾರಿ ಎನಿಸಿದರೂ, ಆಸಕ್ತಿಯ ರೂಪಾಂತರಗಳನ್ನು ಆರೋಗ್ಯ ಸಂಸ್ಥೆಗಳಿಂದ ಪತ್ತೆಹಚ್ಚಲಾಗುತ್ತದೆ, ಆದಾಗ್ಯೂ, ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂಬುದು ಇನ್ನೂ … Continued

ಹೊಸ ಕೃಷಿ ಕಾನೂನು ರದ್ದತಿ ತಳ್ಳಿಹಾಕಿದ ಕೃಷಿ ಸಚಿವ, ಆದ್ರೆ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧ ಎಂದ ತೋಮರ್‌

ನವದೆಹಲಿ; ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವುದನ್ನು ಶುಕ್ರವಾರ ತಳ್ಳಿಹಾಕಿದ್ದಾರೆ. ಆದರೆ ಶಾಸನಗಳ ನಿಬಂಧನೆಗಳ ಬಗ್ಗೆ ಪ್ರತಿಭಟನಾ ನಿರತ ರೈತ ಸಂಘಗಳೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಮತ್ತು ಒಕ್ಕೂಟಗಳು 11 ಸುತ್ತಿನ ಮಾತುಕತೆ ನಡೆಸಿವೆ., ಕೊನೆಯದು ಜನವರಿ 22 ರಂದು … Continued

ಆರ್‌ಬಿಐನ ತಾತ್ವಿಕ ಅನುಮೋದನೆಯಿಂದ ಸೆಂಟ್ರಮ್‌ಗೆ ಪಿಎಂಸಿ ಬ್ಯಾಂಕ್ ಸ್ವಾಧೀನಕ್ಕೆ ದಾರಿ

ಬಿಕ್ಕಟ್ಟಿನಿಂದ ಬಳಲುತ್ತಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ಸ್ವಾಧೀನಪಡಿಸಿಕೊಳ್ಳಲು ದಾರಿ ಮಾಡಿಕೊಡುವ ಸಣ್ಣ ಹಣಕಾಸು ಬ್ಯಾಂಕ್ (ಎಸ್‌ಎಫ್‌ಬಿ) ಸ್ಥಾಪಿಸಲು ಸೆಂಟ್ರಮ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ಗೆ ಜೂನ್ 18 ರಂದು ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿತು. ಪಿಎಮ್‌ಸಿ ಬ್ಯಾಂಕ್ ಪ್ರಕಟಿಸಿದ ನವೆಂಬರ್ 3, 2020 ರ ಅಭಿವ್ಯಕ್ತಿ ಅಧಿಸೂಚನೆಗೆ ಪ್ರತಿಕ್ರಿಯೆಯಾಗಿ ಫೆಬ್ರವರಿ 1, 2021 … Continued

ಮೇಕೆದಾಟು ಯೋಜನೆಗೆ ಎನ್​ಜಿಟಿ ಹಸಿರು ನಿಶಾನೆ, ಇದು ನಮಗೆ ಶುಭ ಸುದ್ದಿ: ಸಿಎಂ ಬಿಎಸ್‌ವೈ

ಬೆಂಗಳೂರು: ರಾಜ್ಯದ ಮಹತ್ವಕಾಂಕ್ಷೆಯ ಮೇಕೆದಾಟು ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಇದು ನಮಗೆ ಶುಭದಾಯಕ ವಿಚಾರ. ಕರ್ನಾಟಕದ ಪ್ರಕರಣವನ್ನು ಮುಕ್ತಾಯಗೊಳಿಸಿರುವ ರಾಷ್ಟ್ರೀಯ ಹಸಿರು ಪೀಠ (ಎನ್​ಜಿಟಿ) ಯೋಜನೆಗೆ ಹಸಿರು ನಿಶಾನೆ ತೋರಿದೆ ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ತಿಳಿಸಿದರು. ಮೇಕೆದಾಟು ಸ್ಥಳ ಪರಿಶೀಲನೆಗಾಗಿ ಸಮಿತಿ ರಚಿಸಿ ದಕ್ಷಿಣ ಪೀಠ ನೀಡಿದ್ದ ಆದೇಶ ಪ್ರಶ್ನಿಸಿದ್ದ ಕರ್ನಾಟಕ ಸಲ್ಲಿಸಿದ್ದ … Continued

ಮೇಕೆದಾಟು ಯೋಜನೆಯಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ ರಾಜ್ಯದ ನೆಲಜಲ ಹಿತಾಸಕ್ತಿ ಕಾಪಾಡಲು ಹಿಂದೆ ಮುಂದೆ ನೋಡಲ್ಲ

ಬೆಂಗಳೂರು:ಅದು ಮಹದಾಯಿ ಯೋಜನೆಯೇ ಇರಲಿ. ಮೇಕೆದಾಟು ಯೋಜನೆಯೇ ಇರಲಿ.  ಯಾವುದೇ ಸಂದರ್ಭದಲ್ಲಿಯೂ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ರಾಜ್ಯದ ನೆಲ ಜಲ ಹಿತರಕ್ಷಣೆಗೆ ಅತ್ಯಂತ ಬದ್ಧತೆಯಿಂದ ಕೆಲಸ ಮಾಡುತ್ತೇವೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಶುಕ್ರವಾರ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, … Continued

ನೀರಿನಲ್ಲೂ ಕೊರೊನಾ ವೈರಸ್‌..! ಸಬರಮತಿ ನದಿ ನೀರಿನ ಮಾದರಿಗಳಲ್ಲಿ ಕಂಡುಬಂದ ಕೊರೊನಾ ವೈರಸ್..ಆತಂಕಕಾರಿ ಎಂದ ತಜ್ಞರು..!!

ಐಐಟಿ ಗಾಂಧಿನಗರ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎನ್ವಿರಾನ್ಮೆಂಟ್ ಸೈನ್ಸ್ ಸಂಶೋಧಕರು ಅಹಮದಾಬಾದಿನ ಸಬರಮತಿ ನದಿಯಿಂದ ತೆಗೆದ ನೀರಿನ ಮಾದರಿಗಳಲ್ಲಿ ಕೊರೊನಾ ವೈರಸ್ಸಿನ ಕುರುಹುಗಳನ್ನು ಕಂಡುಹಿಡಿದಿದ್ದಾರೆ. ನಗರದ ಕಂಕ್ರಿಯಾ ಮತ್ತು ಚಂಡೋಲಾ ಸರೋವರಗಳಿಂದ ತೆಗೆದ ಮಾದರಿಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ಸರೋವರಗಳು ಮತ್ತು ನದಿಗಳಲ್ಲಿ SARS-CoV-2 ಇರುವುದು ಅಪಾಯಕಾರಿ ಸ್ಥಿತಿಗೆ ಕಾರಣವಾಗಬಹುದು ಎಂದು … Continued