ಕೋವಿಡ್‌ನಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ಭಾರತದ ಮೊದಲ ಗ್ರೀನ್‌ ಫಂಗಸ್‌ ಪ್ರಕರಣ ಪತ್ತೆ..!

ಇಂದೋರ್‌: ಕೋವಿಡ್‌ ಉಲ್ಬಣದ ಮಧ್ಯೆ ಈ ಫಂಗಸ್‌ಗಳು ಸೋಂಕು ಹೆಚ್ಚಾಗುತ್ತಿದೆ. ಈಗ ಗ್ರೀನ್‌ ಫಂಗಸ್‌ ಕಾಣಿಸಿಕೊಂಡಿದೆ..! ಈ ಮೊದಲು ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯೆಲ್ಲೋ ಫಂಗಸ್ ಕಾಣಿಸಿಒಂಡಿತ್ತು. ಈಗ ಹಸಿರು ಶಿಲೀಂಧ್ರ (ಗ್ರೀನ್‌ ಫಂಗಸ್‌) ಕಾಣಿಸಿಕೊಂಡಿದೆ. 34 ವರ್ಷದ ವ್ಯಕ್ತಿಯಲ್ಲಿ ಗ್ರೀನ್ ಫಂಗಸ್ ಪತ್ತೆಯಾಗಿದ್ದು ಆ ವ್ಯಕ್ತಿಯನ್ನು ಇಂದೋರ್‌ನಿಂದ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಏರ್‌ಲಿಫ್ಟ್ … Continued

ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಭಾರೀ ಮಳೆ

ಬೆಂಗಳೂರು: ಕರ್ನಾಟಕದಲ್ಲಿ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಖ್ಯವಾಗಿ ರಾಜ್ಯದ ಕರಾವಳಿ ಪ್ರದೇಶ ಮತ್ತು ಮಲೆನಾಡಿನಲ್ಲಿ ಎರಡು-ಮೂರು ದಿನಗಳಿಂದ ಎಡೆಬಿಡದಂತೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ … Continued

ಹೊಸ ಐಟಿ ನಿಯಮ ಪಾಲಿಸದ ಕಾರಣ ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್

  ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಿಸುವಲ್ಲಿ ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಭಾರತದಲ್ಲಿ ಪ್ರಮುಖ ಅಧಿಕಾರಿಗಳನ್ನು ನೇಮಕ ಮಾಡುವ ಅಗತ್ಯವಿರುವ ಹೊಸ ಸಾಮಾಜಿಕ ಮಾಧ್ಯಮ ನಿಯಮಗಳನ್ನು ಪಾಲಿಸಲು ವಿಫಲವಾದ ಕಾರಣ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಮೂಲಗಳು … Continued

ಕೋವಿಡ್ ಚಿಕಿತ್ಸೆಗಾಗಿ ದೇಶದ ಮೊದಲ ಎಂಟಿ-ಮೈಕ್ರೋಬಿಯಲ್ ಆಯುರ್ವೇದ ಔಷಧ ಕೋವಿರಕ್ಷಾ ಬಿಡುಗಡೆ

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಯುರ್ವೇದದ ಸಂಶೋಧನೆಗಳತ್ತ ಗಮನ ಹರಿಸಬೇಕಾದ ಅಗತ್ಯತೆ ಮತ್ತು ಜೀವನಶೈಲಿ ಕಾಯಿಲೆಗಳಿಗೆ ಇದು ಹೇಗೆ ಉತ್ತಮ ಪರಿಹಾರವನ್ನು ನೀಡುತ್ತದೆ ಎಂಬುದನ್ನು ಒತ್ತಿಹೇಳಿದ ಒಂದು ದಿನದ ನಂತರ, ನ್ಯಾನೊತಂತ್ರಜ್ಞಾನ ಆಧಾರಿತ ಸ್ಟಾರ್ಟ್‌ ಅಪ್‌ ನೂತನ್ ಲ್ಯಾಬ್ಸ್ ಮಂಗಳವಾರ ಕೋವಿಡ್ ಅನ್ನು ತಡೆಗಟ್ಟಲು ಮತ್ತು ರೋಗದ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಆಯುರ್ವೇದ … Continued

ಮಹತ್ವದ ನಿರ್ಧಾರ.. ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ನೋಂದಣಿ -ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್‌ ವಿರುದ್ಧದ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವುದು ಅಥವಾ ಅಪಾಯಿಂಟ್​ಮೆಂಟ್ ಪಡೆದುಕೊಳ್ಳುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ (ಜೂನ್ 15) ಮಾಹಿತಿ ನೀಡಿದೆ. ಗ್ರಾಮೀಣ ಭಾಗದ ಹಲವು ಮಂದಿ ಲಸಿಕೆ ಪಡೆಯುವಲ್ಲಿ ಕಷ್ಟ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ನೋಂದಣಿ ಅವಶ್ಯಕತೆ ಇಲ್ಲ ಎಂದು ಸರ್ಕಾರ ತಿಳಿಸಿದೆ. 18ವರ್ಷ ಮೇಲ್ಪಟ್ಟ ವ್ಯಕ್ತಿಗಳು ನೇರವಾಗಿ ಹತ್ತಿರದ ಲಸಿಕಾ … Continued

ದ್ವಿತೀಯ ಪಿಯು ಉತ್ತೀರ್ಣರೆಲ್ಲ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರ ಪದವಿ ತರಗತಿಗೆ ದಾಖಲಾತಿ

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್‌ನಿಂದ ಪದವಿ ತರಗತಿಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಬಿಎಸ್ಸಿ ಕೋರ್ಸ್‌ಗೆ ಈ ಬಾರಿ ಸಿಇಟಿ ಅಂಕ ಪರಿಗಣಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ​ ತಿಳಿಸಿದ್ದಾರೆ. 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ … Continued

ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಕೊರೊನಾ ಹೆಚ್ಚಳದ ಕಾರಣಕ್ಕೆ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಗುರುವಾರದ ವರೆಗೆ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್‌ ತಡೆ ನೀಡಿದೆ. ರಿಪೀಟರ್ಸ್​​ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ನ್ಯೂಸ್‌18 ಕನ್ನಡ.ಕಾಮ್‌ ವರದಿ ಮಾಡಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು … Continued

ಕಳೆದ ವರ್ಷ ಗಾಲ್ವಾನ್ ಘರ್ಷಣೆ ನಂತರ ಚೀನಾ ಉತ್ಪನ್ನ ಖರೀದಿಸದ 43% ಭಾರತೀಯರು:ಸಮೀಕ್ಷೆಯಲ್ಲಿ ಬಹಿರಂಗ..!

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಕಣಿವೆ ಘರ್ಷಣೆಯ ಒಂದು ವರ್ಷದ ನಂತರ, ಕನಿಷ್ಠ 43%ರಷ್ಟು ಭಾರತೀಯ ಗ್ರಾಹಕರು ಕಳೆದ ವರ್ಷ ಒಂದೇ ಒಂದು ‘ಮೇಡ್ ಇನ್ ಚೀನಾ ಉತ್ಪನ್ನ’ ಖರೀದಿಸಿಲ್ಲ ಎಂದು ಹೊಸ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸಮುದಾಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಕಳೆದ … Continued

ಪೊಲೀಸ್ ಗೌರವಗಳೊಂದಿಗೆ ಇಂದು ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ ಅಂತ್ಯಕ್ರಿಯೆ

ಚಿಕ್ಕಮಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನ್ನಡ ಚಲನಚಿತ್ರ ನಟ ಸಂಚಾರಿ ವಿಜಯ ಅವರ ಅಂತ್ಯ ಸಂಸ್ಕಾರ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಇಂದು (ಮಂಗಳವಾರ) ನಡೆಯಲಿದ್ದು, ಸಿದ್ಧತೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ವಿಜಯ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರದ ನಡೆಯಲಿದೆ. ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನಡೆಯಲಿದ್ದು, ಅಂತಿಮ ವಿಧಿ … Continued

2 ಕೋಟಿ ರೂ ಭೂಮಿ 18.5 ಕೋಟಿ ರೂ.ಗಳಿಗೆ ಖರೀದಿ ಆರೋಪ: ವಿವಾದಕ್ಕೆ ಕಾರಣವಾದ ಅಯೋಧ್ಯೆಯ ರಾಮ ದೇವಾಲಯದ ಭೂಮಿ ಖರೀದಿ

ಲಕ್ನೋ / ಅಯೋಧ್ಯೆ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಭಾನುವಾರ ಉತ್ತರ ಪ್ರದೇಶದ ಅಯೋಧ್ಯೆಯ ರಾಮ್ ದೇವಾಲಯದ ಆವರಣದ ಭೂ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಎಎಪಿ ಮತ್ತು ಎಸ್‌ಪಿ ಯ ಇಬ್ಬರು ಮುಖಂಡರು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ … Continued