ಉತ್ತರಾಖಂಡದ ಸಿಎಂ ಸ್ಥಾನಕ್ಕೆ ರಾವತ್‌ ರಾಜೀನಾಮೆ

ಡೆಹರಾಡೂನ್: ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಉಲ್ಬಣಿಸಿದ್ದು, ವಿಧಾನಸಭೆ ಚುನಾವಣೆಗೆ ವರ್ಷವಷ್ಟೇ ಬಾಕಿ ಉಳಿದಿರುವಾಗ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ಹೈಕಮಾಂಡ್‌ ಸೂಚನೆ ಮೇರೆಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ … Continued

ಭಾರತ-ಬಾಂಗ್ಲಾದೇಶದ ನಡುವಿನ ಮೈತ್ರಿ ಸೇತು ಉದ್ಘಾಟಿಸಿದ ಮೋದಿ

ಭಾರತ ಮತ್ತು ಬಾಂಗ್ಲಾದೇಶ ನಡುವಿನ ‘ಮೈತ್ರಿ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು. “ಬಾಂಗ್ಲಾದೇಶ ಸಂಪರ್ಕವು ಭಾರತದ ಈಶಾನ್ಯ ಪ್ರದೇಶಕ್ಕೆ ಬೆಳೆಯುತ್ತದೆ. ಮತ್ತು ಭಾರತ ಮತ್ತು ಬಾಂಗ್ಲಾದೇಶದ ವ್ಯಾಪಾರಕ್ಕೂ ಬಹಳ ಮುಖ್ಯ. ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಹೊಸ ವ್ಯಾಪಾರ ಕಾರಿಡಾರ್ ಆಗಿದೆ” ಎಂದು ಮೋದಿ ಹೇಳಿದರು. ತ್ರಿಪುರ ಮತ್ತು ಬಾಂಗ್ಲಾದೇಶದ ಭಾರತದ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದ ಚುನಾವಣೆ: ಆಯೋಗದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್‌

  ನವ ದೆಹಲಿ: ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ನ್ಯಾಯವಾದಿ ಮನೋಹರ್ ಲಾಲ್ ಶರ್ಮಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರ ನ್ಯಾಯಪೀಠವು ಮಂಗಳವಾರ … Continued

ಇದು ನೂರಕ್ಕೆ ನೂರು ನಕಲಿ ಸಿಡಿ, ಯುವತಿಗೆ ೫ ಕೋಟಿ, ವಿದೇಶದಲ್ಲಿ ಎರಡು ಫ್ಲ್ಯಾಟ್ ‌ಆಮಿಷ: ರಮೇಶ ಜಾರಕಿಹೊಳಿ

ಬೆಂಗಳೂರು: ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ. ಸಿಡಿ ವಿದ್ಯಮಾನದಲ್ಲಿ ನಾನು ನಿರಪರಾಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ಇದು ನನ್ನ ತೇಜೋವಧೆ ಮಾಡಲು ರೂಪಿಸಿದ ಷಡ್ಯಂತ್ರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿದ್ದಾರೆ. ಮಂಗಳವಾರ (ಮಾ.೯) ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುತ್ತ ಕೆಲಕಾಲ ತೀವ್ರವಾಗಿ ಗದ್ಗದಿತರಾದರು. ರಮೇಶ್ ಜಾರಕಿಹೊಳಿಯವರು ಯುವತಿಗೆ ಕೆಲಸದ ಆಮಿಷವೊಡ್ಡಿ … Continued

“ಇತನಾ ಗುಸ್ಸಾ ಕ್ಯೋಂ, ದೀದಿ?: ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ಹಾಡು

ಇತನಾ ಗುಸ್ಸಾ ಕ್ಯೋಂ, ದೀದಿ?(ಇಷ್ಟೊಂದು ಕೋಪ ಏಕೆ, ದೀದಿ), ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಹೊಸ ಪ್ರಚಾರದ ಜಾಹೀರಾತು. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮನ್ನು ‘ರಾವಣ’, ‘ರಾಕ್ಷಸ’, ದೈತ್ಯ ಮತ್ತು ‘ಗೂಂಡಾ’ ಎಂದು ಕರೆದಿದ್ದಕ್ಕೆ ಕೊಲ್ಕತ್ತಾದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಇತನಾ ಗುಸ್ಸಾ ಕ್ಯೋಂ ದೀದಿ (ಇಷ್ಟೊಂದು ಕೋಪ … Continued

ಟೈಮ್ಸ್ ನೌ-ಸಿ ವೋಟರ್‌ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಟಿಂಎಂಸಿ ಮತ್ತೆ ಅಧಿಕಾರಕ್ಕೆ, ಬಿಜೆಪಿಯೂ ಅದರ ಹಿಂದೆಯೇ ..!

  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಟೈಮ್ಸ್ ನೌ-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ. ಸಮೀಕ್ಷೆ ಪ್ರಕಾರ, 294 ಸದಸ್ಯರ ವಿಧಾನಸಭೆಯಲ್ಲಿ ಟಿಎಂಸಿ ಸುಮಾರು 146 ರಿಂದ 162 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, 2016 ರ ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿಯವರ ಪಕ್ಷವು ಗೆದ್ದ … Continued

ಟೈಮ್ಸ್‌ ನೌ-ಸಿ ವೋಟರ್‌ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ ಮತದಾರ ಜೈ…

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಗೆಲುವು ಸಾಧಿಸಲಿದೆ ಎಂದು ಟೈಮ್ಸ್ ನೌ-ಸಿ ವೋಟರ್‌ ಸಮೀಕ್ಷೆ ಸೋಮವಾರ ಭವಿಷ್ಯ ನುಡಿದಿದೆ. ಅವರ ಚುನಾವಣಾ ಪೂರ್ವ ಸಮೀಕ್ಷೆಯ ಸಮೀಕ್ಷೆಯ ಪ್ರಕಾರ, ಡಿಎಂಕೆ ಮೈತ್ರಿಕೂಟವು 158 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಎಐಎಡಿಎಂಕೆ ಮೈತ್ರಿಕೂಟವು 65 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ. ನಟ- ರಾಜಕಾರಣಿ ಕಮಲ್ … Continued

ಯಲ್ಲಾಪುರ: ಗುಡ್ಡ ಕುಸಿದು ನಾಲ್ವರು ಕಾರ್ಮಿಕರ ಸಾವು

ಕಾರವಾರ: ತೋಟದ ಮಣ್ಣಿನ ಕೆಲಸ ಮಾಡುವಾಗ ಆಕಸ್ಮಾತ್‌ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಇಡಗುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂತೇಬೈಲ್‌ ಮಂಜುನಾಥ ಭಟ್‌ ಅವರ ಮಾಲೀಕತ್ವದ ತೋಟಕ್ಕೆ ಮಣ್ಣು ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತೋಟಕ್ಕೆಂದು ಮಣ್ಣು ತೆಗೆಯಲು ಒಟ್ಟು … Continued

ಬಿಎಸ್‌ವೈ ಬಜೆಟ್ಟಿನ ವಿಶೇಷತೆಗಳೇನು? ಪ್ರಮುಖವಾದದ್ದು ಇಲ್ಲಿದೆ ನೋಡಿ

*ಆಯವ್ಯಯ ಗಾತ್ರ (ಸಂಚಿತ ನಿಧಿ)- 2,46,207 ಕೋಟಿ ರೂ. *ಒಟ್ಟು ಸ್ವೀಕೃತಿ- 2,43,734 ಕೋಟಿ ರೂ.; ರಾಜಸ್ವ ಸ್ವೀಕೃತಿ- 1,72,271 ಕೋಟಿ ರೂ.; ಸಾರ್ವಜನಿಕ ಋಣ 71,332 ಕೋಟಿ ರೂ. ಮತ್ತು ಬಂಡವಾಳ ಸ್ವೀಕೃತಿ 71,463 ಕೋಟಿ ರೂ. *ಒಟ್ಟು ವೆಚ್ಚ- 2,46,207 ಕೋಟಿ ರೂ.; ರಾಜಸ್ವ ವೆಚ್ಚ – 1,87,405 ಕೋಟಿ ರೂ.; ಬಂಡವಾಳ … Continued

ಅತ್ಯಾಚಾರ ಆರೋಪಿ ಪ್ರಕರಣ; ನಾವು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ-ತಪ್ಪು ವರದಿಗೆ ಸುಪ್ರೀಂ ಕೋರ್ಟ್ ಅಸಮಾಧಾನ‌

ನವದೆಹಲಿ: ಮಹಿಳೆಯರ ಬಗ್ಗೆ ತಮಗೆ ಅತ್ಯಂತ ಹೆಚ್ಚಿನ ಗೌರವವಿದೆ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನು ಒಳಗೊಂಡ ಪೀಠ, ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರದ ವಿಚಾರಣೆಯೊಂದನ್ನು ‘ಸಂಪೂರ್ಣ ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂದು ನಾವು ಆರೋಪಿಯನ್ನು ಆರೋಪಿ ನೀಡಿದ … Continued