ಕಾರಿನಲ್ಲಿದ್ದ ಹಮಾಸ್ ಕಾರ್ಯಕರ್ತರ ಜೊತೆ ಶೂಟೌಟ್‌ನಲ್ಲಿ ಚಲಿಸುವ ಬೈಕ್‌ನಿಂದ ಗುಂಡು ಹಾರಿಸುತ್ತ ಇಬ್ಬರನ್ನು ಹೊಡೆದುರುಳಿಸಿದ ಇಸ್ರೇಲಿ ಪೋಲೀಸ್ : ದೃಶ್ಯ ವೀಡಿಯೊದಲ್ಲಿ ಸೆರೆ

ಗನ್‌ ಹಿಡಿದ ಇಬ್ಬರು ಹಮಾಸ್‌ ಉಗ್ರರನ್ನು ಹೊತ್ತೊಯ್ಯುತ್ತಿದ್ದ ಕಾರನ್ನು ತನ್ನ ಬೈಕಿನಲ್ಲಿ ಹಿಂಬಾಲಿಸಿದ ಇಸ್ರೇಲಿ ಪೋಲೀಸ್ ತನ್ನ ಬಂದೂಕಿನಿಂದ ಅವರತ್ತ ಗುಂಡು ಹಾರಿಸುತ್ತಿರುವ ವೀಡಿಯೊವೊಂದು ಹೊರಹೊಮ್ಮಿದೆ. ಇಸ್ರೇಲಿ ಪೊಲೀಸರು ಹಂಚಿಕೊಂಡಿರುವ ವೀಡಿಯೊದಲ್ಲಿ ಪೊಲೀಸ್‌ ತನ್ನ ಬೈಕಿನಿಂದ ಕಾರಿನತ್ತ ಗುಂಡುಹಾರಿಸುತ್ತ ಬೈಕ್‌ ಓಡಿಸುವುದು ಕಂಡುಬರುತ್ತದೆ. ಆತನ ಸಹೋದ್ಯೋಗಿಗಳು ಆ ಕಾರನ್ನು ಹಿಂದಿಕ್ಕುತ್ತಿದ್ದಂತೆ ಆತ ಗುಂಡು ಹಾರುವುದನ್ನು ಹೆಚ್ಚಿಸುತ್ತಾನೆ. … Continued

ಗಾಜಾ ಪಟ್ಟಿಯ ಸುತ್ತಲೂ 1500 ಹಮಾಸ್ ಉಗ್ರರ ಶವಗಳು ಪತ್ತೆ: ಇಸ್ರೇಲ್ ಸೇನೆ ಹೇಳಿಕೆ

ಇಸ್ರೇಲ್‌ನಲ್ಲಿ ಗಾಜಾ ಪಟ್ಟಿಯ ಸುತ್ತಮುತ್ತ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ ಎಂದು ಇಸ್ರೇಲಿ ಸೇನೆ ಮಂಗಳವಾರ ತಿಳಿಸಿದೆ. ಹಾಗೂ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ವೈಮಾನಿಕ ದಾಳಿಯೊಂದಿಗೆ ಹೊಡೆದುರುಳಿಸಲಾಗಿದೆ ಎಂದು ಹೇಳಿದೆ. “ಗಾಜಾ ಪಟ್ಟಿಯ ಸುತ್ತ ಇಸ್ರೇಲ್‌ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳ ಶವಗಳು ಪತ್ತೆಯಾಗಿವೆ” ಎಂದು ಮಿಲಿಟರಿ ವಕ್ತಾರ ರಿಚರ್ಡ್ ಹೆಕ್ಟ್ ಸುದ್ದಿಗಾರರಿಗೆ … Continued

ಇಸ್ರೇಲ್‌-ಹಮಾಸ್‌ ಸಂಘರ್ಷ ಉಲ್ಬಣ: 1000ಕ್ಕೂ ಹೆಚ್ಚು ಜನರು ಸಾವು; ಗಾಜಾ ತೊರೆಯಿರಿ ಎಂದು ಪ್ಯಾಲೆಸ್ತೀನಿಗಳಿಗೆ ಇಸ್ರೇಲ್‌ ಸೂಚನೆ

ಇಸ್ರೇಲ್ ಮೇಲೆ ಉಗ್ರರು ಹಠಾತ್ ದಾಳಿ ನಡೆಸಿದ 24 ಗಂಟೆಗಳ ನಂತರ ಇಸ್ರೇಲ್ ಮಿಲಿಟರಿ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವಿನ ರಕ್ತಸಿಕ್ತ ಗುಂಡಿನ ಚಕಮಕಿ ದಕ್ಷಿಣ ಇಸ್ರೇಲ್‌ನ ಹಲವು ಭಾಗಗಳಲ್ಲಿ ನಡೆಯುತ್ತಿದೆ. ಉತ್ತರ ಇಸ್ರೇಲ್ ಮೇಲೆ ಲೆಬನಾನ್‌ನಿಂದ ಮಾರ್ಟರ್ ಶೆಲ್ ದಾಳಿ ನಡೆಸಲಾಯಿತು. ಲೆಬನಾನಿನ ಇಸ್ಲಾಮಿಸ್ಟ್ ಗುಂಪು ಹೆಜ್ಬೊಲ್ಲಾಹ್ ಭಾನುವಾರ ಇಸ್ರೇಲಿ ಪೋಸ್ಟ್‌ಗಳನ್ನು … Continued

ವೀಡಿಯೊ…| ಮಾರಣಾಂತಿಕ ಗಾಜಾ ಬಾಂಬ್ ದಾಳಿ ನಂತರ ಇಸ್ರೇಲಿನ ವೈಮಾನಿಕ ದಾಳಿಯಲ್ಲಿ ಹಮಾಸ್ ಕಚೇರಿಯಿದ್ದ ಪ್ಯಾಲೆಸ್ತೀನ್ ಟವರ್ ನೆಲಸಮ

ಇಸ್ರೇಲಿ ವೈಮಾನಿಕ ದಾಳಿಯು ಶನಿವಾರ ಹಮಾಸ್ ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಿತು. ಹಮಾಸ್ ಭಯೋತ್ಪಾದಕರು ಮುಂಜಾನೆ ಹಠಾತ್ ದಾಳಿಯಲ್ಲಿ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿದರು. ಹಾಗೂ ಗಾಜಾ ಪಟ್ಟಿಯ ಸಮೀಪವಿರುವ ಇಸ್ರೇಲಿ ಪಟ್ಟಣಗಳಿಗೆ ಡಜನ್ಗಟ್ಟಲೆ ಹೋರಾಟಗಾರರನ್ನು ನುಗ್ಗಿಸಿ ಹಲವಾರು ಜನರನ್ನು ಕೊಂದ ನಂತರ ಇಸ್ರೇಲ್‌ ಪ್ತೀಕಾರವಾಗಿ ವೈಮಾನಿಕ ದಾಳಿ ನಡೆಸಿತು. ಇಸ್ರೇಲಿ ವಾಯುಪಡೆಯು ಬಹುಮಡಿಗಳ ಎತ್ತರದ … Continued

ಗಾಜಾದಿಂದ 5,000 ರಾಕೆಟ್‌ ಹಾರಿಸಿ ದಾಳಿ ಮಾಡಿದ ಹಮಾಸ್ : 22 ಇಸ್ರೇಲಿಗಳ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ರೇಲ್ ಶನಿವಾರ ಪ್ಯಾಲೆಸ್ಟೈನ್‌ನ ಹಮಾಸ್ ವಿರುದ್ಧ ಯುದ್ಧ ಘೋಷಿಸಿದೆ. 22 ಇಸ್ರೇಲಿಗಳನ್ನು ಕೊಂದ ಹಾಗೂ 500 ಜನರನ್ನು ಗಾಯಗೊಳಿಸಿದ ಭೀಕರ ರಾಕೆಟ್ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅದು ಪ್ರತಿಜ್ಞೆ ಮಾಡಿದೆ. ಈ ಮಧ್ಯೆ ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರರು ಇದು ತಮ್ಮ “ಮೊದಲ ದಾಳಿ ಎಂದು ಹೇಳಿದ್ದಾರೆ. ದಿಗ್ಬಂಧನಗೊಂಡಿರುವ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ … Continued