ಪ್ಯಾರಾಲಿಂಪಿಕ್ಸ್ 2024: ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದ ಭಾರತದ ನವದೀಪ್

ಪ್ಯಾರಿಸ್‌ : ಸೆಪ್ಟೆಂಬರ್ 7 ರಂದು ನಡೆದ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ 7 ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಜಾವೆಲಿನ್ ಎಸೆತಗಾರ ನವದೀಪ್ ಅವರು 47.32 ಮೀಟರ್‌ಗಳಷ್ಟು ದೂರ ಎಸೆದು ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿಯುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. 2021 ರಲ್ಲಿ ಟೋಕಿಯೊದಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ ಅವರು ನಿರ್ಮಿಸಿದ್ದ ಹಿಂದಿನ ದಾಖಲೆಯನ್ನು … Continued

ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ : ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಭಾರತದ ನಿತೇಶಕುಮಾರ

ನವದೆಹಲಿ : ನಿತೇಶಕುಮಾರ ಅವರು ಪ್ಯಾರಾಲಿಂಪಿಕ್ಸ್ 2024 ರ ಪುರುಷರ ಸಿಂಗಲ್ಸ್ ಎಸ್‌ಎಲ್ 3 (SL3) ವರ್ಗದ ಪ್ಯಾರಾ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಸೋಮವಾರ (ಸೆಪ್ಟೆಂಬರ್ 2) ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವರ್ಗದ ಚಿನ್ನದ ಪದಕದ ಪಂದ್ಯದಲ್ಲಿ ನಿತೇಶಕುಮಾರ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ … Continued

ಹಂಗೇರಿ | ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ; ಉತ್ತರ ಕನ್ನಡದ ಧನ್ವಿತಾ ಮೊಗೇರ ವಲ್ಡ್ ಚಾಂಪಿಯನ್

ಕಾರವಾರ : ಯುರೋಪಿನ ಹಂಗೇರಿಯಲ್ಲಿ ನಡೆದ ಯೂತ್ ವಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ ಗೆದ್ದು ವಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಪ್ರಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024 ರಲ್ಲಿ … Continued

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ : ಭಾರತಕ್ಕೆ ಮೊದಲ ಚಿನ್ನದ ಪದಕ; 10 ಮೀ ಏರ್ ರೈಫಲ್​ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

ಪ್ಯಾರಿಸ್‌ : ಅವನಿ ಲೇಖರಾ ಶುಕ್ರವಾರ ಪ್ಯಾರಿಸ್‌ ನಲ್ಲಿ ನಡೆಯುತ್ತಿರುವ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ಎರಡು ಪ್ಯಾರಾಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ, … Continued

ವೀಡಿಯೊ…| ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಂ ʼಲಷ್ಕರ್ ಉಗ್ರʼನ ಜತೆ ಇರುವ ವೀಡಿಯೊ ವೈರಲ್‌ !

ಜಾವೆಲಿನ್‌ ಥ್ರೋದಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಪಾಕಿಸ್ತಾನದ ಅರ್ಷದ್ ನದೀಮ್, ಅಮೆರಿಕದಿಂದ ಭಯೋತ್ಪಾದಕ ಎಂದು ಗೊತ್ತುಪಡಿಸಿದ ಮೊಹಮ್ಮದ್ ಹ್ಯಾರಿಸ್ ಧರ್ ಅವರೊಂದಿಗೆ ಕಾಣಿಸಿಕೊಂಡ ವೀಡಿಯೊವೊಂದು ವೈರಲ್ ಆದ ನಂತರ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆನ್‌ಲೈನ್ ಚರ್ಚೆಗೆ ಕಾರಣವಾಗಿರುವ ಈ ವೀಡಿಯೊ, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ) ಯ ರಾಜಕೀಯ ಫ್ರಂಟ್‌ ಮರ್ಕಝಿ ಮುಸ್ಲಿಂ ಲೀಗ್ … Continued