ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿ 2 ವರ್ಷಗಳ ನಂತರ ಮನೆ ಮುಂದೆ ಪ್ರತ್ಯಕ್ಷ..!!

ಧಾರ್ (ಮಧ್ಯಪ್ರದೇಶ) : ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ “ಮೃತ” ಎಂದು ಘೋಷಿಸಿದ ವ್ಯಕ್ತಿಯೊಬ್ಬನ ಕುಟುಂಬ ಸದಸ್ಯರು ಆತನ ಅಂತ್ಯಕ್ರಿಯೆ ನೆರವೇರಿಸಿದ ಎರಡು ವರ್ಷಗಳ ನಂತರ ಆತ ಮನೆಗೆ ಮರಳಿದ್ದಾನೆ. ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಕಮಲೇಶ ಪಾಟಿದಾರ್ (35) ಎಂಬ ವ್ಯಕ್ತಿ ತಮ್ಮ ಕುಟುಂಬವರು ತಮ್ಮ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ ಸುಮಾರು ಎರಡು ವರ್ಷಗಳ … Continued

ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಅದೇ ಪ್ರೇಮಿಗಳಿಗೆ ಮದುವೆ ಮಾಡಿದ ಕುಟುಂಬಸ್ಥರು..!

ತಾಪಿ: ಗುಜರಾತಿನ ತಾಪಿ ಜಿಲ್ಲೆಯಲ್ಲಿ ವಿಚಿತ್ರ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಕಳೆದ ವರ್ಷ ಜಿಲ್ಲೆಯ ನಿಜರ ತಾಲೂಕಿನ ನೇವಾಳ ಗ್ರಾಮದಲ್ಲಿ ತಮ್ಮ ಮದುವೆಗೆ ಮನೆಯವರು ವಿರೋಧ ಮಾಡಿದ್ದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುತೂಹಲಕಾರಿಯಾಗಿ, ಈಗ ಎರಡು ಕುಟುಂಬಗಳು ಈಗ ತಮ್ಮ ತಪ್ಪನ್ನು ಅರಿತುಕೊಂಡು ಸತ್ತ ನಂತರ ಅವರಿಬ್ಬರ ಮದುವೆ ಮಾಡಿದ್ದಾರೆ…! ಆದರೆ ಸತ್ತ ನಂತರ … Continued

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನ

ಬೆಂಗಳೂರು : ಅನೈತಿಕ ದಂಧೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥನನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಗಾಗಿಹುಡುಕಾಟ ನಡೆಸಿದ್ದರು. ರಾಜ್ಯದಿಂದ ಪರಾರಿಯಾಗಿ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸ್ವಂತ ಫೋನ್‌ ಬಳಸದೆ ಪೊಲೀಸರಿಂದ ತಪ್ಪಿಸಿಕೊಂಡಿದ್ದ ಸ್ಯಾಂಟ್ರೋ … Continued

ನಾಯಿಗಳು ಅಟ್ಟಿಸಿಕೊಂಡು ಬಂದ ನಂತರ ಎಟಿಎಂನಲ್ಲಿ ಸಿಕ್ಕಿಬಿದ್ದ ಜಿಂಕೆ | ವೀಕ್ಷಿಸಿ

ಅಂತರ್ಜಾಲದಲ್ಲಿ ಲಭ್ಯವಿರುವ ಹಲವಾರು ವೀಡಿಯೋಗಳು ಪ್ರಾಣಿಗಳಿಗೆ ಮಾನವ ಸಹಾಯದ ಅಗತ್ಯವಿರುವ ಜಿಗುಟಾದ ಸಂದರ್ಭಗಳಲ್ಲಿ ಹೇಗೆ ಸಿಲುಕಿಕೊಳ್ಳುತ್ತವೆ ಎಂಬುದನ್ನು ತೋರಿಸುತ್ತದೆ. ಅಂತಹ ಒಂದು ಘಟನೆ ಗುಜರಾತ್‌ನಲ್ಲಿ ದಾಖಲಾಗಿದ್ದು, ಜಿಂಕೆಯೊಂದು ಎಟಿಎಂ ಒಳಗೆ ಸಿಲುಕಿಕೊಂಡಿದೆ. ಗುಜರಾತ್‌ನ ಧರಿಯ ಅಮ್ರೇಲಿಯಲ್ಲಿ ಈ ಘಟನೆ ನಡೆದಿದ್ದು, ಆದರೆ, ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಅವರ … Continued

‘ಫೈರ್ ಹೇರ್ ಕಟ್’ಮಾಡುವಾಗ ಕ್ಷೌರಿಕನಿಂದ ಎಡವಟ್ಟು, ಯುವಕನ ತಲೆಗೆ ಬೆಂಕಿ | ವೀಕ್ಷಿಸಿ

ಸಲೂನ್‌ನಲ್ಲಿ ಫೈರ್ ಹೇರ್ ಕಟ್ ಮಾಡಿಸಿಕೊಳ್ಳುವ ವೇಳೆ ಕ್ಷೌರಿಕನ ಎಡವಟ್ಟಿನಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಫೈರ್ ಹೇರ್‌ಕಟ್, ಜನಪ್ರಿಯತೆ ಗಳಿಸಿದೆ. ಇದು ಗ್ರಾಹಕರ ಕೂದಲಿನ ಮೇಲೆ ಬೆಂಕಿಯನ್ನು ಬಳಸಿ ವಿಭಿನ್ನವಾಗಿ ಕೇಶ ವಿನ್ಯಾಸ ಮಾಡುವುದಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. … Continued

ಗುಜರಾತಿನ ಮೊಧೇರಾ ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ: ಪ್ರಧಾನಿ ಮೋದಿ ಘೋಷಣೆ

ಗುಜರಾತ್‌ನ ಮೊಹ್ಸಾನಾ ಜಿಲ್ಲೆಯ ಮೊಧೇರಾವನ್ನು ಭಾರತದ ಮೊದಲ 24×7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದ್ದಾರೆ. ಅಕ್ಟೋಬರ್ 9 ರಿಂದ 11ರ ವರೆಗೆ ಮೂರು ದಿನಗಳ ಕಾಲ ಪ್ರಧಾನಿ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ತಮ್ಮ ಮೊದಲ ದಿನದಲ್ಲಿ, ಪ್ರಧಾನಿ ಮೊಧೇರಾಕ್ಕೆ ಭೇಟಿ ನೀಡಿದರು ಮತ್ತು ನವೀಕರಿಸಬಹುದಾದ ಇಂಧನ ತಯಾರಿಸುವ ಭಾರತದ … Continued

ರೈಲ್ವೇ ಪರೀಕ್ಷೆ ಪಾಸ್‌ ಮಾಡಲು‌ ಹೆಬ್ಬೆರಳಿನ ಚರ್ಮವನ್ನೇ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿದ ಭೂಪ…! ಆದ್ರೆ ಸ್ಯಾನಿಟೈಸರ್ ಹಾಳು ಮಾಡ್ಬಿಡ್ತು ಇವರ ಪ್ಲ್ಯಾನ್…

ವಡೋದರಾ: ರೈಲ್ವೇ ಉದ್ಯೋಗವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ, ಅಭ್ಯರ್ಥಿಯೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು ಅದನ್ನು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ ವಿದ್ಯಮಾನ ಬೆಳಕಿಗೆ ಬಂದಿದೆ. ಈತ ಸ್ನೇಹಿತ ಈತನ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಓಕೆ ಆಗಿ ತನ್ನ ಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗೆ ಹಾಜರಾಗುತ್ತಾನೆ ಎಂಬ ಭರವಸೆಯ ಮೇಲೆ ಈ ಕೃತ್ಯಕ್ಕೆ ಮುಂದಾಗಿದ್ದಾನೆ…! … Continued

ಮುಂಬೈನಲ್ಲಿ ಹಣ ಉಳಿಯಲ್ಲ ಎಂಬ ಹೇಳಿಕೆಗೆ ಕ್ಷಮೆಯಾಚಿಸಿದ ಮಹಾರಾಷ್ಟ್ರ ರಾಜ್ಯಪಾಲರು

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಈ ವಾರದ ಆರಂಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಗೆ ಸೋಮವಾರ ಕ್ಷಮೆಯಾಚಿಸಿದ್ದಾರೆ. ಅವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿತ್ತು. ಜುಲೈ 29 ರಂದು ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮುಂಬೈನ ಅಭಿವೃದ್ಧಿಗೆ ಕೆಲವು ಸಮುದಾಯಗಳ ಕೊಡುಗೆಯನ್ನು ಶ್ಲಾಘಿಸುವ ಭರದಲ್ಲಿ ನಾನು ತಪ್ಪು ಮಾತಾಡಿದೆ. ಮಹಾರಾಷ್ಟ್ರ ಮಾತ್ರವಲ್ಲ, … Continued

ಎರಡು ಕಡೆ ಸಿಂಹಿಣಿ ದಾಳಿ: ಆರು ಮಂದಿಗೆ ಗಾಯ

ಅಮ್ರೇಲಿ(ಗುಜರಾತ್): ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಭಾನುವಾರ ಸಿಂಹಿಣಿಯೊಂದು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಆರು ಜನರನ್ನು ಗಾಯಗೊಳಿಸಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಾಫ್ರಾಬಾದ್ ಅರಣ್ಯ ವ್ಯಾಪ್ತಿಯ ಬಾಬರ್‌ಕೋಟ್ ಗ್ರಾಮದಲ್ಲಿ ಬೆಳಗ್ಗೆ ಮೂವರು ಮತ್ತು ಸಂಜೆ ರಸ್ತೆ ಬದಿಯ ದಾಳಿಯಲ್ಲಿ ಅಷ್ಟೇ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಯಂತ್ ಪಟೇಲ್ ಮಾಹಿತಿ … Continued

ಸ್ಟಾರ್ಟ್‌ ಅಪ್‌ ಇಕೊ ಸಿಸ್ಟಂ: ಡಿಪಿಐಐಟಿ ಶ್ರೇಯಾಂಕದಲ್ಲಿ ಗುಜರಾತ್‌, ಕರ್ನಾಟಕ ಅತ್ಯುತ್ತಮ ರಾಜ್ಯಗಳು

ನವದೆಹಲಿ: ಉದಯೋನ್ಮುಖ ಉದ್ಯಮಿಗಳಿಗೆ ಅತ್ಯುತ್ತಮ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಗುಜರಾತ್ ಮತ್ತು ಕರ್ನಾಟಕವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿವೆ ಎಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಕ್ಕಾಗಿ (ಡಿಪಿಐಐಟಿ) ಇಲಾಖೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕ ವರದಿ ಹೇಳಿದೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ರಾಜ್ಯಗಳಲ್ಲಿ, ಮೇಘಾಲಯ ರಾಜ್ಯವು ಅತ್ಯುತ್ತಮ … Continued