ಕರ್ನಾಟಕ ಸೇರಿ ವಿವಿಧ ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣಾಧಿಕಾರಿಗಳ ನೇಮಕ ಮಾಡಿದ ಬಿಜೆಪಿ; ಪಟ್ಟಿ ಇಲ್ಲಿದೆ…

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ವಿವಿಧ ರಾಜ್ಯಗಳ ಅಧ್ಯಕ್ಷರು ಮತ್ತು ರಾಷ್ಟ್ರೀಯ ಅಸೆಂಬ್ಲಿ ಸದಸ್ಯರ ಚುನಾವಣೆಯನ್ನು ಮೇಲ್ವಿಚಾರಣೆ ಮಾಡುವ ಚುನಾವಣಾ ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದೆ. . ಸಾಂಸ್ಥಿಕ ಚುನಾವಣೆಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ವಿವಿಧ ರಾಜ್ಯಗಳ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರಿಗೆ ಈ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಕರ್ನಾಟಕಕ್ಕೆ ಕೇಂದ್ರ ಸಚಿವ ಹಾಗೂ ಮಧ್ಯಪ್ರದೇಶದ … Continued

₹ 13 ಕೋಟಿ ಮೌಲ್ಯದ ಎರಡು ಐಷಾರಾಮಿ ವಾಚ್‌ ಕಳ್ಳಸಾಗಣೆ ಮಾಡುತ್ತಿದ್ದ ದಂಪತಿ ಸೆರೆ

ಅಹಮದಾಬಾದ್: ದುಬೈನಿಂದ ಶುಕ್ರವಾರ ಸುಮಾರು ₹ 13 ಕೋಟಿ ಮೌಲ್ಯದ ಎರಡು ದುಬಾರಿ ವಾಚ್‌ಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ರಾಜಸ್ಥಾನದ ದಂಪತಿಯನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ದುಬೈನಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಆಗಮಿಸಿದ ಪುರುಷ ಮತ್ತು ಮಹಿಳೆಯಿಂದ … Continued

ಒಬ್ಬನೇ ಚಾಲಕ, 24 ಅಪಘಾತಗಳು…: ಬೃಹತ್ ವಿಮಾ ಹಗರಣ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ..?

ಅಹಮದಾಬಾದ್: ಗುಜರಾತಿನ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ಸಂಭವಿಸಿದ 24 ಪ್ರತ್ಯೇಕ ಅಪಘಾತಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬೃಹತ್ ವಿಮಾ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಸ್ಲಂ ಮೊಹಮ್ಮದ್ ಚುಂಚಲ ಎಲ್ಲ 24 ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಚಾಲಕ ಎಂದು ಗುರುತಿಸಲಾಗಿದೆ. ಗೋಧ್ರಾ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣವೊಂದರಲ್ಲಿ … Continued

ವೀಡಿಯೊ..| ಹೆದ್ದಾರಿ ಬದಿ ಇದ್ದ ಹೊಟೇಲ್‌ ಒಳಗೆ ನುಗ್ಗಿದ ಕಾರು ; ಮೂವರಿಗೆ ಗಾಯ

ಅಹಮದಾಬಾದ್ : ಕಾರೊಂದು ರಸ್ತೆ ಬದಿಯ ರೆಸ್ಟೋರೆಂಟಿಗೆ ನುಗ್ಗಿದ ಘಟನೆ ಗುಜರಾತ್‌ ಛೋಟಾ ಉದಯಪುರ (Chhota Udaipur) ಜಿಲ್ಲೆಯಿಂದ ವರದಿಯಾಗಿದ್ದು, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಈ ಅಪಘಾತದ ವೀಡಿಯೊದಲ್ಲಿ ಸೆರೆಯಾಗಿದೆ. ರೆಸ್ಟೊರೆಂಟ್ ಒಂದರಲ್ಲಿ ಗ್ರಾಹಕರು ಆಹಾರ ಸೇವಿಸುತ್ತ ಕುಳಿತಿದ್ದಾಗ ಕಾರೊಂದು ಸೀದಾ ರೆಸ್ಟೊರೆಂಟ್ ಒಳಗೇ ನುಗ್ಗಿದೆ. ಕ್ಷಣಮಾತ್ರದಲ್ಲಿ ಆ ಹೊಟೇಲನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಡಿ.10ರ ಬೆಳ್ಳಂಬೆಳಗ್ಗೆ … Continued

ವೀಡಿಯೊ..| ಫಿಕ್ಸಡ್‌ ಡಿಪಾಸಿಟ್‌ ಮೇಲೆ ತೆರಿಗೆ ಕಡಿತ ಮಾಡಿದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಜೊತೆ ಹೊಡೆದಾಡಿದ ಗ್ರಾಹಕ…!

ಅಹಮದಾಬಾದ್‌ನ ಯೂನಿಯನ್ ಬ್ಯಾಂಕ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ ಮತ್ತು ಗ್ರಾಹಕರ ನಡುವಿನ ಹೊಡೆದಾಟದ ವೀಡಿಯೊ ವೈರಲ್ ಆಗಿದೆ. ಫಿಕ್ಸಡ್‌ ಠೇವಣಿಯ ಮೇಲೆ ತೆರಿಗೆ ಕಡಿತ ಮಾಡಿದ್ದು ಹೆಚ್ಚಾಗಿದೆ ಎಂದು ಗ್ರಾಹಕ ಜೈಮನ್ ರಾವಲ್ ಅಸಮಾಧಾನಗೊಂಡಿದ್ದರು. ಇದು. ಗ್ರಾಹಕ ಮತ್ತು ಬ್ಯಾಂಕ್ ಮ್ಯಾನೇಜರ್ ನಡುವಿನ ವಾಗ್ವಾದಕ್ಕೆ ಕಾರಣವಾಗಿ ಅದು ವಿಕೋಪಕ್ಕೆ ಹೋಗಿ ಹೊಡೆದಾಟಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. 43 … Continued

90 ವರ್ಷದ ವೃದ್ಧನ ಟಾರ್ಗೆಟ್‌ ಮಾಡಿ ₹ 1 ಕೋಟಿ ವಂಚಿಸಿದ ʼಡಿಜಿಟಲ್ ಅರೆಸ್ಟ್ʼ ವಂಚಕರು..!

ಅಹಮದಾಬಾದ್: ಗುಜರಾತಿನ ಸೂರತ್‌ನಲ್ಲಿ 90 ವರ್ಷದ ವ್ಯಕ್ತಿಯೊಬ್ಬರು ತನ್ನ ಸಂಪೂರ್ಣ ಜೀವಮಾನದ ಉಳಿತಾಯದ ₹ 1 ಕೋಟಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ವಂಚಕರು ಸಿಬಿಐ ಅಧಿಕಾರಿಗಳಂತೆ ನಟಿಸಿ ನಿಮ್ಮ ಹೆಸರಿನಲ್ಲಿ ಹೆಸರಿನಲ್ಲಿ ಮುಂಬೈನಿಂದ ಚೀನಾಕ್ಕೆ ಕೊರಿಯರ್ ಮಾಡಲಾಗಿತ್ತು. ಆ ಪಾರ್ಸೆಲ್‌ನಲ್ಲಿ ಡ್ರಗ್ಸ್ ಪತ್ತೆಯಾಗಿದೆ ಎಂದು ಬೆದರಿಸಿ ವಯೋವೃದ್ಧರನ್ನು 15 ದಿನಗಳ ಕಾಲ ‘ಡಿಜಿಟಲ್ ಬಂಧನ’ಕ್ಕೆ ಒಳಪಡಿಸಿ … Continued

ಒಂದು ತಿಂಗಳಲ್ಲಿ 5 ಕೊಲೆ ; ರೈಲು ಪ್ರಯಾಣಿಕರೇ ಟಾರ್ಗೆಟ್‌ : ಊರಿಂದ ಊರಿಗೆ ಅಲೆಯುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದೇ ರೋಚಕ…!

ಅಹಮದಾಬಾದ್‌ : ಒಂದು ತಿಂಗಳ ಅಂತರದಲ್ಲಿ ಐವರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಗುಜರಾತಿನಲ್ಲಿ ಬಂಧಿಸಿದ್ದಾರೆ. ರೈಲು ಪ್ರಯಾಣಿಕರನ್ನೇ ಟಾರ್ಗೆಟ್‌ ಮಾಡಿ ಅವರನ್ನು ಕೊಲೆ ಮಾಡಿ ಪರಾರಿಯಾಗಿ ಊರಿಂದ ಊರಿಗೆ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದೇ ರೋಚಕ. ಬಂಧಿತನನ್ನು ಹರಿಯಾಣದ ರೋಟಕ್‌ ನಿವಾಸಿ ರಾಹುಲ್‌ ಕರವೀರ ಜಾಟ್‌ ಎಂದು ಗುರುತಿಸಲಾಗಿದೆ. ಗುಜರಾತ್‌ನಲ್ಲಿ … Continued

ವೀಡಿಯೊ..| ವೇಗವಾಗಿ ವಾಹನ ಓಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿ ಸಾಯಿಸಿದ ಚಾಲಕ

ಸೂರತ್‌ : ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗೂಡ್ಸ್‌ ಟೆಂಪೋ ಚಾಲಕ ಆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಅಮಾನುಷ ಘಟನೆ ಗುಜರಾತಿನ (Gujarat) ಸೂರತ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದನ್ನು ತಡೆಯಲು ಯತ್ನಿಸಿದ ಮಗನ್ನು ಸಲ್ಪ ದೂರ ಟೆಂಪೋ ಎಳೆದೊಯ್ದಿದೆ. ಘಟನೆಯಲ್ಲಿ ವಾಹನ ಮೈಮೇಲೆ ಹರಿದ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಪಘಾತದ … Continued

ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳ ನಂತರ ಕುಟುಂಬದವರು ತನ್ನದೇ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ʼಸತ್ತʼ ವ್ಯಕ್ತಿ…!

ಮೆಹ್ಸಾನಾ (ಗುಜರಾತ್): ಘಟನೆಯ ವಿಲಕ್ಷಣ ತಿರುವಿನಲ್ಲಿ, ವ್ಯಕ್ತಿಯೊಬ್ಬರು ಸತ್ತಿದ್ದಾರೆಂದು ನಂಬಿ ಅವರ ಅಂತ್ಯಕ್ರಿಯೆ ನಡೆಸಿದ ನಂತರ ಕುಟುಂಬದವರು ಅವರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಅದೇ ವ್ಯಕ್ತಿ ಆಗಮಿಸಿದಾಗ ಅಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ…! ಗುಜರಾತದ ಮೆಹ್ಸಾನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸತ್ತಿದ್ದಾರೆಂದು ಭಾವಿಸಲಾಗಿದ್ದ 43 ವರ್ಷದ ಬ್ರಿಜೇಶ್ ಸುತಾರ್ ಅವರು ತಮ್ಮದೇ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ … Continued

ವೀಡಿಯೊ…| ಹಳೆಯ ಕಾರಿಗೆ 4 ಲಕ್ಷ ರೂ. ವೆಚ್ಚದಲ್ಲಿ ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ ; ಕಾರ್ಯಕ್ರಮದಲ್ಲಿ 1500 ಜನ ಭಾಗಿ…!

ಗುಜರಾತಿನ ಅಮ್ರೇಲಿ ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪದ ವಿದ್ಯಮಾನ ನಡೆದ ವರದಿಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ ಮಾಲೀಕರೊಬ್ಬರು ತಮ್ಮ ಪ್ರೀತಿಯ ಕಾರಿಗೆ ‘ಸಮಾಧಿ ಸಮಾರಂಭ’ ಅಥವಾ ಅಂತ್ಯಕ್ರಿಯೆ ನಡೆಸುವ ಮೂಲಕ ಸುದ್ದಿಯಾಗಿದ್ದಾರೆ…! ಈ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 1,500 ಜನರ ಬೃಹತ್ ಜನಸ್ತೋಮ ಸೇರಿತ್ತು. ಕಾರಿನ ಮಾಲೀಕರ ಪ್ರಕಾರ, ವ್ಯಾಗನ್ ಆರ್ 12 ವರ್ಷಗಳಿಂದ ಅವರ ಬಳಿ … Continued