ಏಪ್ರಿಲ್‌ ನಿಂದ ಜೂನ್‌ ಅವಧಿಯಲ್ಲಿ ಕರ್ನಾಟಕ ಸೇರಿ ದೇಶಾದ್ಯಂತ ತಾಪಮಾನ ಇನ್ನಷ್ಟು ಹೆಚ್ಚಳ ; ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ನವದೆಹಲಿ: ಭಾರತವು ಏಪ್ರಿಲ್‌ನಿಂದ ಜೂನ್‌ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ, ಮಧ್ಯ ಮತ್ತು ಪೂರ್ವ ಭಾರತ ಮತ್ತು ವಾಯುವ್ಯ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಶಾಖದ ದಿನಗಳು ಇರುತ್ತವೆ ಎಂದು ಐಎಂಡಿ (IMD) ಸೋಮವಾರ (ಮಾರ್ಚ್ 31) ತಿಳಿಸಿದೆ. ದೇಶಾದ್ಯಂತ ಬಿಸಿಲ ಬೇಗೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪ್ರಖರತೆ ಇನ್ನಷ್ಟು ಜಾಸ್ತಿಯಾಗಲಿದೆ ಎಂದು ಭಾರತೀಯ … Continued

ಹಜ್ ಯಾತ್ರೆ ವೇಳೆ ಶಾಖದ ಅಲೆಯಿಂದಾಗಿ 68 ಭಾರತೀಯರು ಸೇರಿ 1000ಕ್ಕೂ ಹೆಚ್ಚು ಸಾವು ; ವರದಿ

ರಿಯಾದ್‌ : ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಈ ವರ್ಷದ ಹಜ್ ಯಾತ್ರೆಯ ಸಮಯದಲ್ಲಿ ಬಿಸಿಲಿನ ತಾಪದ ನಡುವೆ ಮೃತಪಟ್ಟವರ ಸಂಖ್ಯೆ 1,000 ಮೀರಿದೆ ಎಂದು ಎಎಫ್‌ಪಿ (AFP) ಗುರುವಾರ (ಜೂನ್ 20) ವರದಿ ಮಾಡಿದೆ. ಇವರಲ್ಲಿ 68 ಭಾರತೀಯರು ಸಾವಿಗೀಡಾದ್ದಾರೆ ಎಂದು ಹೇಳಲಾಗಿದೆ. ವರದಿಯಾದ ಸಾವುಗಳಲ್ಲಿ, ಅರ್ಧದಷ್ಟು ಜನರು ನೋಂದಾಯಿಸದ ಯಾತ್ರಿಗಳಾಗಿದ್ದಾರೆ. ಅವರು ಪವಿತ್ರ ನಗರವಾದ … Continued

52 ಡಿಗ್ರಿ ಸೆಲ್ಸಿಯಸ್‌ ಸಮೀಪ ತಲುಪಿದ ತಾಪಮಾನ ; ಹಜ್​ ಯಾತ್ರೆಗೆ ತೆರಳಿದ್ದ 550 ಯಾತ್ರಿಕರು ಸಾವು

ಈ ವರ್ಷ ಹಜ್ ಸಮಯದಲ್ಲಿ ಕನಿಷ್ಠ 550 ಯಾತ್ರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಮೆಕ್ಕಾದಲ್ಲಿ ಸುಡುವ ತಾಪಮಾನವು 50 ಸೆಂಟಿಗ್ರೇಡ್‌ಗಿಂತ ಹೆಚ್ಚಾಗಿದೆ. ಸೋಮವಾರ ಮೆಕ್ಕಾದ ಗ್ರ್ಯಾಂಡ್ ಮಸೀದಿಯಲ್ಲಿ ತಾಪಮಾನವು 51.8 ಡಿಗ್ರಿ ಸೆಲ್ಸಿಯಸ್ (125 ಫ್ಯಾರನ್‌ಹೀಟ್) ತಲುಪಿದೆ ಎಂದು ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಮೃತಪಟ್ಟವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟಿನವರು, ಅವರಲ್ಲಿ … Continued

ಬಿಸಿಗಾಳಿಗೆ ಬಿಹಾರ ತತ್ತರ..: 24 ತಾಸಿನಲ್ಲಿ 19 ಮಂದಿ ಸಾವು

ಪಾಟ್ನಾ : ಕಳೆದ 24 ಗಂಟೆಗಳಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಬಿಸಿಗಾಳಿಗೆ ಕನಿಷ್ಠ 19 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಕ್ಸಾರ್‌ನಲ್ಲಿ ಸಿಕ್ರೌಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಬದಿಯಲ್ಲಿ ಪತ್ತೆಯಾದ ಯುವಕ ಸೇರಿದಂತೆ ಮೂವರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಳಂದಾದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಓರ್ವ ಶಿಕ್ಷಕ, ಓರ್ವ … Continued

ವೀಡಿಯೊ..| ರಾಜಸ್ಥಾನದಲ್ಲಿ ತಾಪಮಾನ ಈಗ ನಿಗಿನಿಗಿ ಕೆಂಡ : ಬಿಕಾನೇರ್‌ ಮರಳಿನಲ್ಲಿ ಹಪ್ಪಳ ಹುರಿದ ಬಿಎಸ್​ಎಫ್​ ಯೋಧ…!

ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ದಾಟಿ ಶಾಖದ ಅಲೆಗೆ ಕಾರಣವಾಗುತ್ತಿದ್ದು, ದೆಹಲಿ, ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳ ವಾಯುವ್ಯ ಬಯಲು ಪ್ರದೇಶಗಳಿಗೆ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ನೀಡಿದೆ. ಹವಾಮಾನ ಇಲಾಖೆಯು ಮೇ 25 ರವರೆಗೆ ಈ … Continued

ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಭಾರತಕ್ಕೆ ಉಷ್ಣ ಅಲೆಯ ಎಚ್ಚರಿಕೆ ನೀಡಿದ್ದು, ವಿಶೇಷವಾಗಿ ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಭಾರತದಲ್ಲಿ ಮೇ 22 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಭಾರತದಲ್ಲಿ ಮುಂದಿನ ಏಳು ದಿನಗಳ … Continued