ದೆಹಲಿ ಮುಂಗೇಶಪುರದಲ್ಲಿ ದಾಖಲೆ ಮಟ್ಟದ 52.9 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲು ; ಇದು ಸೆನ್ಸರ್‌ ದೋಷದಿಂದ ಆಗಿದೆ ಎಂದ ಐಎಂಡಿ

ನವದೆಹಲಿ: ದೆಹಲಿಯು ತೀವ್ರತರವಾದ ಶಾಖದ ಅಲೆಯಲ್ಲಿ ತತ್ತರಿಸುತ್ತಿರುವಾಗ, ಬುಧವಾರ ಮಾಧ್ಯಮ ವರದಿಗಳು ಮುಂಗೇಶಪುರದಲ್ಲಿ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ಮಾಡಿವೆ. ಇದು ನಗರದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಆದಾಗ್ಯೂ, ಭಾರತೀಯ ಹವಾಮಾನ ಇಲಾಖೆ (IMD), ಸೆನ್ಸರ್‌ನಲ್ಲಿನ ದೋಷ ಅಥವಾ ಸ್ಥಳೀಯ ಅಂಶದಲ್ಲಿನ ದೋಷ” ಎಂದು ನಂತರ ಸ್ಪಷ್ಟಪಡಿಸಿದೆ. ಹಾಗೂ ಡೇಟಾ ಮತ್ತು … Continued

ಕರ್ನಾಟಕದ ಈ ಪ್ರದೇಶಗಳೂ ಸೇರಿ ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮುನ್ಸೂಚನೆ

ನವದೆಹಲಿ: ಭಾರತೀಯ ಹವಾಮಾನ ಇಲಾಖೆ (IMD) ಉತ್ತರ ಭಾರತಕ್ಕೆ ಉಷ್ಣ ಅಲೆಯ ಎಚ್ಚರಿಕೆ ನೀಡಿದ್ದು, ವಿಶೇಷವಾಗಿ ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಭಾರತದಲ್ಲಿ ಮೇ 22 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ದಕ್ಷಿಣ ಭಾರತದಲ್ಲಿ ಮುಂದಿನ ಏಳು ದಿನಗಳ … Continued

ಕೇರಳಕ್ಕೆ ಮೇ 31ರಂದು ನೈಋತ್ಯ ಮಾನ್ಸೂನ್ ಪ್ರವೇಶ : ವಾಡಿಕೆಗಿಂತ ಹೆಚ್ಚು ಮಳೆ ಸಾಧ್ಯತೆ ; ಹವಾಮಾನ ಇಲಾಖೆ

ನವದೆಹಲಿ : ಬಹುನಿರೀಕ್ಷಿತ ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳವನ್ನು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರಂದು ಕೇರಳದಲ್ಲಿ ಪ್ರಾರಂಭವಾಗುತ್ತದೆ. ಭಾರತದ ಕೃಷಿ ಆರ್ಥಿಕತೆಗೆ ನಾಲ್ಕು-ತಿಂಗಳ ನೈಋತ್ವ ಮಾನ್ಸೂನ್‌ ಋತುಮಾನವು ನಿರ್ಣಾಯಕವಾಗಿದೆ, ಇದು ದೇಶದಾದ್ಯಂತ ವಾರ್ಷಿಕ ಮಳೆಯ ಸುಮಾರು 75% ರಷ್ಟನ್ನು … Continued

ಸಿಹಿ ಸುದ್ದಿ ನೀಡಿದ ಹವಾಮಾನ ಇಲಾಖೆ : ನೈಋತ್ಯ ಮಾನ್ಸೂನ್ ಮುಂಚಿತವಾಗಿ ಆಗಮನ ; ಮುಂಗಾರು ಪೂರ್ವ ಮಳೆಯೂ ಜೋರು…!

ನವದೆಹಲಿ : ನೈಋತ್ಯ ಮಾನ್ಸೂನ್‌ ಮೇ 19ರೊಳಗೆ ಅಂದರೆ ಸಾಮಾನ್ಯವಾಗಿ ಆಗಮಿಸುವುದಕ್ಕಿಂತ ಮೂರು ದಿನ ಮುಂಚಿತವಾಗಿ ದಕ್ಷಿಣ ಅಂಡಮಾನ್ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ನೈಋತ್ಯ ಮಾನ್ಸೂನ್‌ ಸಾಮಾನ್ಯವಾಗಿ ಮೇ 22 ರಂದು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಕ್ಕೆ … Continued

41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

ಬೆಂಗಳೂರು ; ಪ್ರಸಕ್ತ ವರ್ಷ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲಿಗಳಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆರೋಗ್ಯ ಇಲಾಖೆ ಬಿಸಿಲಿನಲ್ಲಿ ಕೆಲಸಗಳಿಂದ ದೂರವಿರುವಂತೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಈ ವರ್ಷದ ಗರಿಷ್ಠ 41.8 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ. ಇದು ಬೆಂಗಳೂರಿನ ಇತಿಹಾಸದಲ್ಲಿ ದಾಖಲಾಗಿರುವ 3ನೇ ಗರಿಷ್ಠ ತಾಪಮಾನವಾಗಿದೆ. ಮಂಗಳವಾರ … Continued

ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರದಿಂದ ಐದು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಗಾಳಿ ಎಚ್ಚರಿಕೆ ನೀಡಿದ್ದು, ಜನರು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಆದಷ್ಟು ಹೊರಗೆ ಹೋಗಬೇಡಿ ಎಂದು ಸಲಹೆ ನೀಡಿದೆ. ಏಪ್ರಿಲ್‌ 26ರಂದು ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, … Continued

ಏಪ್ರಿಲ್‌ 18, 19ರಂದು ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಏಪ್ರಿಲ್ 18, 19ರಂದು ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆ ಸುರಿಯುವ ಮುನ್ಸೂಚನೆ ನಂತರ ಈ ಎರಡು ದಿನ ಬಹುತೇಕ ಎಲ್ಲ ಜಿಲ್ಲೆಗಳಿಗೂ  ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಪ್ರತಿ ಗಾಳಿಯ ವೇಗವು ಗಂಟೆಗೆ 30-40 ಕಿಲೋ … Continued

ಇದು ಸಮಾಧಾನಕರ ಸುದ್ದಿ..: ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ

ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದು ಕೇಂದ್ರ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. 2024ರಲ್ಲಿ ಮುಂಗಾರು ಸರಾಸರಿ 106 ಪ್ರತಿಶತದಷ್ಟು ( 87 ಸೆಂಟಿಮೀಟರ್‌ ) ಮಳೆ​ ಬರಲಿದೆ ಎಂದು ಹೇಳಿದೆ. ಎಲ್ ನಿನೋ ದುರ್ಬಲಗೊಳ್ಳುತ್ತಿದೆ. ಮಾನ್ಸೂನ್ ಪ್ರಾರಂಭವಾಗುವ ಜೂನ್‌ ವೇಳೆಗೆ ಇದು ತಟಸ್ಥವಾಗಲಿದೆ ಎಂದು ಐಎಂಡಿಯ … Continued

ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಿಗೆ 2 ದಿನ ಬಿಸಿ ಗಾಳಿ, ಕೆಲವು ಕಡೆ “ತೀವ್ರ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ನವದೆಹಲಿ: ಪೂರ್ವ ಭಾರತ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಇನ್ನೆರಡು ದಿನಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಭಾರತದ ಈಶಾನ್ಯ ಪ್ರದೇಶದಲ್ಲಿ ಏಪ್ರಿಲ್ 9 ರವರೆಗೆ ತೀವ್ರ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಒಡಿಶಾ, ಪಶ್ಚಿಮ ಬಂಗಾಳ, … Continued

ಏಪ್ರಿಲ್‌-ಜೂನ್‌ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು ; ಕರ್ನಾಟಕದ ಈ ಭಾಗಗಳಲ್ಲಿ ಬಿಸಿಗಾಳಿಯ ಕೆಟ್ಟ ಪರಿಣಾಮ ; ಹವಾಮಾನ ಇಲಾಖೆ

ನವದೆಹಲಿ : ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ ಹಲವು ದಿನಗಳಲ್ಲಿ ಬಿಸಿಲಿನ ಧಗೆ ಏರಲಿದೆ ಎಂದಿರುವ ಹವಾಮಾನ ಇಲಾಖೆ ಉಷ್ಣ ಮಾರುತದ ಎಚ್ಚರಿಕೆ ನೀಡಿದೆ. ಏಪ್ರಿಲ್‌ ಮೊದಲ ವಾರದಿಂದಲೇ ದೇಶದ ದಕ್ಷಿಣ, ಉತ್ತರ, ಕೇಂದ್ರ ಭಾಗಗಳಲ್ಲಿ ಉಷ್ಣ ಗಾಳಿ ಹೆಚ್ಚಲಿದೆ. ಏಪ್ರಿಲ್‌-ಜೂನ್‌ ತಿಂಗಳಲ್ಲಿ ಸಾಮನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬರಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, … Continued