S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ ಯಶಸ್ಸಿನ ಬೆನ್ನಲ್ಲೇ ರಷ್ಯಾದ ಜೊತೆ S-500 ಜಂಟಿ ಉತ್ಪಾದನೆಗೆ ಭಾರತ ಸಜ್ಜು ; ಮಿಲಿಟರಿಗೆ ಇದು ಯಾಕೆ ಮಹತ್ವದ್ದು…?

ನವದೆಹಲಿ :ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಆಪರೇಷನ್ ಸಿಂದೂರ (Operation Sindoor) ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ ನಿರ್ಮಿತ S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್‌ ನಂತರ, ಭಾರತವು ಇದೀಗ ಅದರ ಅತ್ಯಾಧುನಿಕ ಅದರ ಮುಂದಿನ ಹಂತದ S-500 ‘ಪ್ರೋಮಿಥಿಯಸ್’ ಕ್ಷಿಪಣಿ ವ್ಯವಸ್ಥೆಯ ಜಂಟಿ ಉತ್ಪಾದನೆ (Co-production) … Continued

ಪ್ರಧಾನಮಂತ್ರಿ ಕಾರ್ಯಾಲಯ(PMO)ಕ್ಕೆ ‘ಸೇವಾ ತೀರ್ಥ’ ಎಂದು ನಾಮಕರಣ, ರಾಜಭವನಕ್ಕೂ ಹೊಸ ಹೆಸರು

ನವದೆಹಲಿ: ಪ್ರಧಾನಮಂತ್ರಿ ಕಾರ್ಯಾಲಯದ (PMO) ಹೊಸ ಕಚೇರಿ ಸಂಕೀರ್ಣಕ್ಕೆ ‘ಸೇವಾ ತೀರ್ಥ’ ಎಂದು ಹೆಸರಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಈ ಮೊದಲು ಇದನ್ನು ‘ಕಾರ್ಯಕಾರಿ ಆವರಣ’ (Executive Enclave) ಎಂದು ಕರೆಯಲಾಗುತ್ತಿತ್ತು. ಇದರಲ್ಲಿ ಪಿಎಂಒ ಜೊತೆಗೆ, ಸಂಪುಟ ಕಾರ್ಯದರ್ಶಿಗಳ ಕಚೇರಿ (Cabinet Secretariat), ರಾಷ್ಟ್ರೀಯ ಭದ್ರತಾ ಮಂಡಳಿ ಕಚೇರಿ (National Security Council Secretariat) … Continued

ದೇಶಾದ್ಯಂತ ʼಡಿಜಿಟಲ್ ಬಂಧನ’ ವಂಚನೆ ಪ್ರಕರಣಗಳು : ಸಿಬಿಐಗೆ ತನಿಖೆ ನಡೆಸಲು ಆದೇಶಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ‘ಡಿಜಿಟಲ್ ಬಂಧನ’ (Digital Arrest) ವಂಚನೆ ಪ್ರಕರಣಗಳ ತನಿಖೆಯನ್ನು ತಕ್ಷಣವೇ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರೀಯ ತನಿಖಾ ದಳ (CBI)ಕ್ಕೆ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜೋಯಮಾಲ್ಯ ಬಾಗ್ಚಿ ಅವರಿದ್ದ ಪೀಠವು, ನ್ಯಾಯಾಲಯದ ಸಲಹೆಗಾರರು (Amicus Curiae) ಎತ್ತಿ ತೋರಿಸಿದ ಸೈಬರ್ ಅಪರಾಧಗಳಾದ ಡಿಜಿಟಲ್ ಬಂಧನ ವಂಚನೆಗಳು … Continued

ಭಾರತದ ಸಿಂಧೂ ಕಣಿವೆ ನಾಗರಿಕತೆ ಕಣ್ಮರೆಯಾಗಿದ್ದು ಏಕೆ ? ಕಾರಣ ಹೇಳಿದ ಐಐಟಿ ವಿಜ್ಞಾನಿಗಳು…

ನವದೆಹಲಿ: ಭಾರತದ ಅತಿದೊಡ್ಡ ರಹಸ್ಯ ಯಾವುದೆಂದರೆ ಸಿಂಧೂ ಕಣಿವೆ ನಾಗರಿಕತೆಯು ಹೇಗೆ ಮತ್ತು ಏಕೆ ಕಣ್ಮರೆಯಾಯಿತು ಎಂಬುದು. ಈಗ, ಗಾಂಧಿನಗರದ ಐಐಟಿ ಸಂಶೋಧಕರು ಒಂದು ಹೊಸ ಸಿದ್ಧಾಂತವನ್ನು ಮಂಡಿಸಿದ್ದಾರೆ. ಹರಪ್ಪ, ಮೊಹೆಂಜೋದಾರೋ, ರಾಖಿಗಢಿ ಮತ್ತು ಲೋಥಾಲ್‌ನಂತಹ ನಗರಗಳನ್ನು ಈ ಪ್ರದೇಶಗಳ ಜನರು  ತ್ಯಜಿಸಲು ಕಾರಣವಾದದ್ದು ಸರಣಿ ರೂಪದಲ್ಲಿ ಬಂದ ದೀರ್ಘಾವಧಿಯ ಬರಗಾಲಗಳು ಎಂದು ಅವರು ಪ್ರತಿಪಾದಿಸಿದ್ದಾರೆ. … Continued

ಇಡೀ ಹಿಮಾಲಯ ಶ್ರೇಣಿ ಈಗ ‘ಅತ್ಯಂತ ಹೆಚ್ಚು ಭೂಕಂಪ ಸಂಭನೀಯ ವಲಯ’

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಭಾರತದ ಸಂಪೂರ್ಣ ಹಿಮಾಲಯ ಪರ್ವತ ಶ್ರೇಣಿಯನ್ನು, ಈಗ ವಲಯ VI (Zone VI) ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇದು ದೇಶದ ಅತಿ ಹೆಚ್ಚು ಭೂಕಂಪ ಪೀಡಿತ ಪ್ರದೇಶ ಎಂದು ವರ್ಗೀಕರಿಸಲಾಗಿದೆ. ಭಾರತೀಯ ಮಾನದಂಡಗಳ ಬ್ಯೂರೋ (BIS) ಬಿಡುಗಡೆ ಮಾಡಿದ ಪರಿಷ್ಕೃತ ಭೂಕಂಪ ವಿನ್ಯಾಸ ಸಂಹಿತೆಯ (Earthquake Design … Continued

ʼಆಪರೇಷನ್ ಸಿಂಧೂರʼ ನಂತರ ʼಶಕ್ತಿಶಾಲಿ ರಾಷ್ಟ್ರʼಗಳ ಸೂಚ್ಯಂಕದಲ್ಲಿ ಜಾಗತಿಕವಾಗಿ 3ನೇ ಸ್ಥಾನಕ್ಕೆ ಏರಿದ ಭಾರತ…

ನವದೆಹಲಿ: ಏಷ್ಯಾ-ಪೆಸಿಫಿಕ್ ವಲಯದ ಶಕ್ತಿಯನ್ನು ಅಳೆಯುವ ಆಸ್ಟ್ರೇಲಿಯಾ ಮೂಲದ ಪ್ರಖ್ಯಾತ ಥಿಂಕ್ ಟ್ಯಾಂಕ್ ಲೋವಿ ಇನ್ಸ್ಟಿಟ್ಯೂಟ್‌ (Lowy Institute) ತನ್ನ ಇತ್ತೀಚಿನ ‘ಏಷ್ಯಾ ಪವರ್ ಇಂಡೆಕ್ಸ್ 2025’ ವರದಿಯಲ್ಲಿ ಭಾರತವನ್ನು ಮೊದಲ ಬಾರಿಗೆ ‘ಪ್ರಮುಖ ಶಕ್ತಿ’ (Major Power) ಎಂದು ಮಾನ್ಯ ಮಾಡಿದೆ. ಒಟ್ಟಾರೆ ಏಷ್ಯಾದಲ್ಲಿ ಅಮೆರಿಕ ಮತ್ತು ಚೀನಾದ ನಂತರ ಮೂರನೇ ಅತಿ ಹೆಚ್ಚು … Continued

ಭಾರತದಲ್ಲೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ‘HR88B8888’ ನಂಬರ್ ಪ್ಲೇಟ್: ಇದರ ಬೆಲೆ ಎಷ್ಟು ಗೊತ್ತೆ…?

ನವದೆಹಲಿ: ‘HR88B8888’ ಎಂಬ ವಿಶಿಷ್ಟ ನೋಂದಣಿ ಸಂಖ್ಯೆಯು ಹರಿಯಾಣದಲ್ಲಿ ಬುಧವಾರ ನಡೆದ ಆನ್‌ಲೈನ್ ಹರಾಜಿನಲ್ಲಿ ಬರೋಬ್ಬರಿ ₹1.17 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದು, ಇದು ಭಾರತದಲ್ಲಿ ಇಲ್ಲಿಯವರೆಗೆ ಮಾರಾಟವಾದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಎಂಬ ದಾಖಲೆಗೆ ಪಾತ್ರವಾಗಿದೆ. ಹರಿಯಾಣದಲ್ಲಿ ಪ್ರತಿ ವಾರವೂ ವಿಐಪಿ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗಾಗಿ ಆನ್‌ಲೈನ್ ಹರಾಜು ನಡೆಯುತ್ತದೆ. ಶುಕ್ರವಾರ … Continued

2026ರ T20 ವಿಶ್ವಕಪ್ ಫೆ.7ರಿಂದ ಆರಂಭ ; 20 ತಂಡಗಳು ಭಾಗಿ : ಫೆ.15ಕ್ಕೆ ಭಾರತ vs ಪಾಕ್‌ ಪಂದ್ಯ-ಪೂರ್ಣ ವೇಳಾಪಟ್ಟಿ

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು 2026ರ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ನವೆಂಬರ್ 25 ರಂದು ಮುಂಬೈನಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಅನಾವರಣಗೊಳಿಸಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿ ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನೆಯಲಿದ್ದು, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿವೆ ಎಂದು ಖಚಿತಪಡಿಸಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಎಂಟು ಸ್ಥಳಗಳಲ್ಲಿ ಒಟ್ಟು … Continued

12000 ವರ್ಷಗಳ ನಂತ್ರ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ : ಭಾರತದ ಉತ್ತರಕ್ಕೆ ಬೂದಿ ಮೋಡ ; ಹಲವು ವಿಮಾನಗಳ ಸಂಚಾರ ರದ್ದು..!

ನವದೆಹಲಿ: ಇಥಿಯೋಪಿಯಾದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ನಂತರ ಉಂಟಾದ ಬೂದಿ ಮೋಡದಿಂದಾಗಿ ಜಾಗತಿಕ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ, ಭಾರತದ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ (Advisory) ನೀಡಲಾಗಿದೆ. ಅನೇಕ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜ್ವಾಲಾಮುಖಿ ಬೂದಿಯ ಮೋಡವು ಪೂರ್ವದ ಕಡೆಗೆ ಚಲಿಸುತ್ತಿದ್ದು, ಶೀಘ್ರದಲ್ಲೇ ಭಾರತದ ಉತ್ತರ ಭಾಗವನ್ನು … Continued

ಇದು ಅಮೆರಿಕದ ನಿದ್ದೆಗೆಡಿಸುವ ಆಫರ್‌….! ಭಾರತಕ್ಕೆ ಮಹತ್ವದ ಸ್ಟೆಲ್ತ್ ಯುದ್ಧ ವಿಮಾನದ ತಂತ್ರಜ್ಞಾನ ನೀಡುವ ಆಫರ್‌ ನೀಡಿದ ರಷ್ಯಾ…!

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮೊದಲು, ರಷ್ಯಾವು ಮಹತ್ವದ ಮಿಲಿಟರಿ ತಂತ್ರಜ್ಞಾನದ ಆಫರ್‌ ಅನ್ನು ಭಾರತಕ್ಕೆ ನೀಡಿದೆ. ಭಾರತದ ಬಹುಕಾಲದ ಮಿತ್ರರಾಷ್ಟ್ರವಾದ ರಷ್ಯಾ, ದೇಶದ ಭವಿಷ್ಯದ ಯುದ್ಧ ವಿಮಾನಗಳ ಅಗತ್ಯಗಳನ್ನು ಪೂರೈಸಲು, ಹೊಸ ಪೀಳಿಗೆಯ ಐದನೇ ತಲೆಮಾರಿನ (Fifth-Generation) ಎಸ್‌ಯು-57 (Su-57) ಸ್ಟೆಲ್ತ್ ಫೈಟರ್ … Continued