ವೀಡಿಯೊ | ಟಿಕೆಟಿಗೆ “ಹಣವಿಲ್ಲ” ; ರೈಲಿನ ಕೆಳಗೆ ಚಕ್ರಗಳ ನಡುವೆ ಅಡಗಿಕೊಂಡು 250 ಕಿಮೀ ಪ್ರಯಾಣಿಸಿದ ವ್ಯಕ್ತಿ…!

ಭೋಪಾಲ: ಮಧ್ಯಪ್ರದೇಶದ ಜಬಲಪುರ ನಿಲ್ದಾಣದಲ್ಲಿ ರೈಲಿನ ರೋಲಿಂಗ್ ಸ್ಟಾಕ್ ಮತ್ತು ಅಂಡರ್‌ ಕ್ಯಾರೇಜ್‌ನ ದಿನನಿತ್ಯದ ತಪಾಸಣೆ ನಡೆಸುತ್ತಿದ್ದ ರೈಲ್ವೆ ಸಿಬ್ಬಂದಿ ಶುಕ್ರವಾರ ಬೋಗಿಯೊಂದರ ಕೆಳಗೆ ಚಕ್ರಗಳ ಮೇಲಿನ ಸಣ್ಣ ಜಾಗದಲ್ಲಿ ವ್ಯಕ್ತಿಯೊಬ್ಬ ಅಡಗಿಕೊಂಡಿರುವುದನ್ನು ಗಮನಿಸಿ ಆಘಾತಕ್ಕೊಳಗಾದರು. ಆ ವ್ಯಕ್ತಿ ಇಟಾರ್ಸಿಯಿಂದ ತಾನು ಇದೇ ಸ್ಥಿತಿಯಲ್ಲಿ 250 ಕಿಮೀ ಪ್ರಯಾಣಿಸಿದ್ದಾಗಿ ಆತ ಹೇಳಿದಾಗ ಅವರಿಗೆ ಅಚ್ಚರಿ ಹಾಗೂ … Continued

ಕಾಂಚನಜುಂಗಾ ಎಕ್ಸ್‌ಪ್ರೆಸ್‌ ಗೆ ಗೂಡ್ಸ್ ರೈಲು ಡಿಕ್ಕಿ ; 15 ಮಂದಿ ಸಾವು, 60 ಜನರಿಗೆ ಗಾಯ

ಸಿಲಿಗುರಿ (ಪಶ್ಚಿಮ ಬಂಗಾಳ) : ಗೂಡ್ಸ್ ರೈಲೊಂದು ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ ಮತ್ತು 60 ಜನರು ಗಾಯಗೊಂಡಿದ್ದಾರೆ. ಈಶಾನ್ಯ ಫ್ರಂಟಿಯರ್ ರೈಲ್ವೆ ವ್ಯಾಪ್ತಿಗೆ ಒಳಪಡುವ ನಿಜಬರಿ ಮತ್ತು ರಂಗಪಾಣಿ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದ್ದು, ಎಕ್ಸ್‌ಪ್ರೆಸ್ ರೈಲಿನ ಮೂರು ಕೋಚ್‌ಗಳು (ಎರಡು ಪಾರ್ಸೆಲ್ … Continued

ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ವಂದೇ ಭಾರತ್ ಲೋಕೋ ಪೈಲಟ್ ಗಳಾದ ಐಶ್ವರ್ಯ ಮೆನನ್, ಸುರೇಖಾ ಯಾದವಗೆ ಆಹ್ವಾನ..!

ನವದೆಹಲಿ : ಭಾನುವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 8,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗುತ್ತಿದ್ದು, ದಕ್ಷಿಣ ರೈಲ್ವೇಯ ಚೆನ್ನೈ ವಿಭಾಗದ ಹಿರಿಯ ಸಹಾಯಕ ಲೋಕೋ ಪೈಲಟ್ ಐಶ್ವರ್ಯ ಎಸ್ ಮೆನನ್ ಹಾಗೂ ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಕೂಡ ಪಾಲ್ಗೊಳ್ಳಲಿದ್ದಾರೆ … Continued

ವೀಡಿಯೊ…| ರೈಲು ಪ್ರಯಾಣಿಕನಿಗೆ ಮನಸೋ ಇಚ್ಛೆ ಥಳಿಸಿದ ಟಿಟಿಇ : ವೀಡಿಯೊ ವೈರಲ್ ಆದ ನಂತ್ರ ಅಮಾನತು

ಬರೌನಿ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಇಲ್ಲದ ಪ್ರಯಾಣಿಕರೊಬ್ಬರನ್ನು ನಿಂದಿಸಿದ ಮತ್ತು ನಂತರ ಪ್ರಯಾಣಕನಿಗೆ ಅನೇಕ ಸಲ ಹೊಡೆದ ನಂತರ ಭಾರತೀಯ ರೈಲ್ವೇ ಗುರುವಾರ ಪ್ರಯಾಣ ಟಿಕೆಟ್ ಪರೀಕ್ಷಕರನ್ನು (ಟಿಟಿಇ) ಅಮಾನತುಗೊಳಿಸಿದೆ. ಟಿಟಿಇ ಪ್ರಯಾಣಿಕನಿಗೆ ಹೊಡೆದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊ ಕಾಣಿಸಿಕೊಂಡ ನಂತರ, ಟಿಟಿಇಯನ್ನು ಅಮಾನತುಗೊಳಿಸಲಾಯಿತು ಮತ್ತು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. … Continued

ಮುಂದಿನ 4-5 ವರ್ಷದಲ್ಲಿ ದೇಶಾದ್ಯಂತ 3000 ಹೊಸ ರೈಲುಗಳು : 400ಕ್ಕೂ ಅಧಿಕ ವಂದೇ ಭಾರತ್‌ ಹೊಸ ರೈಲು ಓಡಲಿವೆ ; ವೇಟಿಂಗ್ ಲಿಸ್ಟ್‌ ಶೂನ್ಯಕ್ಕೆ ತರಲು ಪ್ರಯತ್ನ

ನವದೆಹಲಿ : ರೈಲ್ವೆಯಲ್ಲಿ ಪ್ರಯಾಣಿಸುವವರ ಸಾಮರ್ಥ್ಯವನ್ನು ವಾರ್ಕವಾಗಿ ಪ್ರಸ್ತುತ ಇರುವ 800 ಕೋಟಿಯಿಂದ 1,000 ಕೋಟಿಗೆ ಹೆಚ್ಚಿಸಲು ಮುಂದಿನ ನಾಲ್ಕೈದು ವರ್ಷಗಳಲ್ಲಿ ಸುಮಾರು 3,000 ಹೊಸ ರೈಲುಗಳನ್ನು ಓಡಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಜೊತೆಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಅವರ ಸಚಿವಾಲಯದ ಮತ್ತೊಂದು ಗುರಿಯಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಪ್ರಸ್ತುತ, … Continued