ಇರಾನ್ ವಿರುದ್ಧ ದಾಳಿ: “ನಾನು ಅದನ್ನು ಮಾಡಬಹುದು, ಮಾಡದೆಯೂ ಇರಬಹುದು ಎಂದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ ಡಿಸಿ: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿದ್ದಕ್ಕಾಗಿ ಅಮೆರಿಕ ಮತ್ತು ಅದರ ಅಧ್ಯಕ್ಷರಿಗೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಭರಿಸಲಾಗದ ಹಾನಿಯನ್ನು ಅನುಭವಿಸುತ್ತದೆ” ಎಂದು ಎಚ್ಚರಿಕೆ ನೀಡಿದ ಕೆಲವು ಗಂಟೆಗಳ ನಂತರ, ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ಅಮೆರಿಕವು ಇರಾನ್ ಮೇಲೆ ದಾಳಿ ಮಾಡಬಹುದು ಅಥವಾ ಮಾಡದಿರಬಹುದು ಎಂದು ಹೇಳಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, … Continued

ನೇರ ಪ್ರಸಾರದ ವೇಳೆ ಇರಾನ್‌ ಸರ್ಕಾರಿ ಟಿವಿ ಕೇಂದ್ರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ಅರ್ಧಕ್ಕೇ ಹೊರನಡೆದ ನಿರೂಪಕಿ ; ದೃಶ್ಯ ವೀಡಿಯೊದಲ್ಲಿ ಸೆರೆ

ಇರಾನ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಅದರ ರಾಜಧಾನಿ ತೆಹ್ರಾನ್‌ನಲ್ಲಿ ಆಕಾಶದಿಂದ ಇಸ್ರೇಲ್‌ ಕ್ಷಿಪಣಿಗಳ ಮಳೆ ಗೈಯುತ್ತಿದೆ. ಈಗಾಗಲೇ ಇಸ್ರೇಲ್ ತಾನು ಇರಾನ್‌ ಮೇಲೆ ʼಸಂಪೂರ್ಣ ವಾಯು ಪ್ರಾಬಲ್ಯʼವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಎರಡು ಪ್ರಮುಖ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷವು ಘಾತೀಯವಾಗಿ ಬೆಳೆಯುತ್ತಿದೆ. ಈಗ ಇಸ್ರೇಲಿನ ಅಂತಹ ಒಂದು ವಾಯು ದಾಳಿಯಲ್ಲಿ, ಇಸ್ರೇಲಿ ಕ್ಷಿಪಣಿಯು ನೇರ ಪ್ರಸಾರ ಕಾರ್ಯಕ್ರಮ … Continued

ಇಸ್ರೇಲ್‌-ಇರಾನ್‌ ಸಂಘರ್ಷ | ಇಸ್ರೇಲಿ ವಾಯುದಾಳಿಯಲ್ಲಿ ಇರಾನಿನ 4 ಸೇನಾ ಮೇಜರ್‌ ಜನರಲ್‌ ಗಳು, 6 ಪರಮಾಣು ವಿಜ್ಞಾನಿಗಳು ಸಾವು

ನವದೆಹಲಿ : ತೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಇರಾನಿನ ಹಲವಾರು ಮಿಲಿಟರಿ ಪ್ರಮುಖರು ಮತ್ತು ಪರಮಾಣು ವಿಜ್ಞಾನಿಗಳು “ಹುತಾತ್ಮರಾಗಿದ್ದಾರೆ” ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ದೃಢಪಡಿಸಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನಿನ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ದಾಳಿಯ ಸಮಯದಲ್ಲಿ, ಇರಾನ್​ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ … Continued

ವೀಡಿಯೊಗಳು..| ಇಸ್ರೇಲಿನತ್ತ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಇರಾನ್ : ಕ್ಷಿಪಣಿ ಅಪ್ಪಳಿಸಿ ಮೊಸಾದ್ ಮುಖ್ಯ ಕಚೇರಿ ಬಳಿ ಬೃಹತ್‌ ಕುಳಿ ಸೃಷ್ಟಿ

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ದೊಡ್ಡ ಪ್ರಮಾಣದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಕಳೆದ ಏಳು ತಿಂಗಳಲ್ಲಿ ಇದು ಇಸ್ರೇಲ್‌ ಮೇಲೆ ಇರಾನಿನ ಎರಡನೆಯ ದೊಡ್ಡ ಪ್ರಮಾಣದ ದಾಳಿಯಾಗಿದೆ. ಮಂಗಳವಾರ, ‘ಆಪರೇಷನ್ ಟ್ರೂ ಪ್ರಾಮಿಸ್ II’ ಎಂದು ಕರೆಯಲಾದ ದಾಳಿಯಲ್ಲಿ ಇಸ್ರೇಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ನೂರಾರು ಕ್ಷಿಪಣಿಗಳು ಉಡಾಯಿಸಲಾಗಿದೆ. ಕಳೆದ ವಾರ ಇರಾನ್‌ ಬೆಂಬಲಿತ ಲೆಬನಾನಿನ … Continued

ವೀಡಿಯೊಗಳು..| ಪ್ರತೀಕಾರವಾಗಿ ಇರಾನ್​ನಿಂದ ಇಸ್ರೇಲ್​ ಮೇಲೆ 200 ಡ್ರೋನ್-ಕ್ಷಿಪಣಿಗಳಿಂದ ದಾಳಿ : ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿಯ ಕಾರ್ಮೋಡಗಳು ಸೃಷ್ಟಿಯಾಗಿವೆ. ಪ್ರಮುಖ ಬೆಳವಣಿಗೆಯಲ್ಲಿ ಸಿರಿಯಾದಲ್ಲಿನ ತನ್ನ ದೂತಾವಾಸ ಕಟ್ಟಡದ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದ ಇರಾನ್ ಈಗ ಇಸ್ರೇಲ್ ಮೇಲೆ ಅಭೂತಪೂರ್ವ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ಮೇಲೆ 200 ಡ್ರೋನ್ ಮತ್ತು ಕ್ಷಿಪಣಿಗಳನ್ನು ಇರಾನ್‌ ಉಡಾಯಿಸಿದೆ. ಇರಾನ್ ಸ್ಫೋಟಕ ಡ್ರೋನ್‌ಗಳ ಸಮೂಹವನ್ನೇ … Continued