ಬಹುಮುಖ ಪ್ರತಿಭೆಯ ಪತ್ರಕರ್ತ-ಬರಹಗಾರ ಅರುಣಕುಮಾರ ಹಬ್ಬು ; ಜೂನ್‌ 29ಕ್ಕೆ ʼಬೊಗಸೆ ನೀರುʼ ಆತ್ಮಕಥನ ಲೋಕಾರ್ಪಣೆ

(29-06-2025ರಂದು 11:00 ಗಂಟೆಗೆ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಪತ್ರಕರ್ತ ಅರುಣಕುಮಾರ ಹಬ್ಬು ಅವರ 368 ಪುಟಗಳ ʼಬೊಗಸೆ ನೀರುʼ ಆತ್ಮಕಥನ ಲೋಕಾರ್ಪಣೆಗೊಳ್ಳಲಿದೆ, ಈ ನಿಮಿತ್ತ ಲೇಖನ) ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗವು ಜನಸಾಮಾನ್ಯರಿಗೆ ದೇಶ- ವಿದೇಶಗಳಲ್ಲಿ ಆಗು-ಹೋಗುವ ಘಟನೆಗಳ ಮಾಹಿತಿಯನ್ನು ನೀಡುತ್ತದೆ. ಈ ರೀತಿಯ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಶಬ್ದರೂಪದಲ್ಲಿ ಕಟ್ಟಿಕೊಡುವ ಪತ್ರಕರ್ತರ … Continued

ವೀಡಿಯೊ..| ಅಮೆರಿಕದ ವಿದೇಶಾಂಗ ಕಾರ್ಯದರ್ಶಿಗೆ ʼಕ್ರಿಮಿನಲ್‌ʼ ಎಂದು ಕರೆದ ನಂತರ ವರದಿಗಾರನನ್ನು ಪತ್ರಿಕಾಗೋಷ್ಠಿಯಿಂದ ಹೊರಗೆ ಎಳೆದೊಯ್ದ ಭದ್ರತಾ ಸಿಬ್ಬಂದಿ

ವಾಷಿಂಗ್ಟನ್‌ ಡಿಸಿ: ಜನವರಿ 16, ಗುರುವಾರದಂದು ತನ್ನ ಅಂತಿಮ ಪತ್ರಿಕಾಗೋಷ್ಠಿ ನಡೆಸುವಾಗ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಹಮಾಸ್‌ನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್‌ಗೆ ಅಮೆರಿಕ ನೀಡಿದ ಬೆಂಬಲವನ್ನು ಟೀಕಿಸುವ ಪತ್ರಕರ್ತರಿಂದ ಪದೇ ಪದೇ ಅಡ್ಡಿಗಳನ್ನು ಎದುರಿಸಬೇಕಾಯಿತು. ಗಾಜಾ ಯುದ್ಧವನ್ನು ಒಳಗೊಂಡ ಇಬ್ಬರು ಪತ್ರಕರ್ತರು ಅವರ ಪತ್ರಿಕಾಗೋಷ್ಠಿ ವೇಳೆ ಅವರ ವಿರುದ್ಧ ಆರೋಪ ಮಾಡಿದರು. … Continued

ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ, ಬರಹಗಾರ ಪ್ರಿತೀಶ್ ನಂದಿ ನಿಧನ

ಮುಂಬೈ : ಹೃದಯ ಸ್ತಂಭನದಿಂದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ಪತ್ರಕರ್ತ ಪ್ರಿತೀಶ್ ನಂದಿ (73) ತಮ್ಮ ದಕ್ಷಿಣ ಮುಂಬೈ ನಿವಾಸದಲ್ಲಿ ಬುಧವಾರ ನಿಧನರಾದರು. ಝಂಕಾರ್ ಬೀಟ್ಸ್, ಚಮೇಲಿ, ಹಜಾರೋನ್ ಖ್ವೈಶೇನ್ ಐಸಿ, ಏಕ್ ಖಿಲಾಡಿ ಏಕ್ ಹಸೀನಾ, ಅಂಕಹೀ, ಪ್ಯಾರ್ ಕೆ ಸೈಡ್ ಎಫೆಕ್ಟ್ಸ್, ಬೋ ಬ್ಯಾರಕ್ಸ್ ಫಾರೆವರ್, ಮುಂತಾದ ಹಲವಾರು ಯಶಸ್ವಿ ಚಲನಚಿತ್ರಗಳನ್ನು … Continued

ಲಖಿಂಪುರ್ ಹಿಂಸಾಚಾರ ಪ್ರಕರಣ: ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಇಬ್ಬರ ಬಂಧನ

ಲಖಿಂಪುರಖೇರಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 3 ರಂದು ನಡೆದ ಹಿಂಸಾಚಾರದಲ್ಲಿ ಎಂಟು ಜನರು ಮೃತಪಟ್ಟಿದ್ದು ಅವರಲ್ಲಿ ನಾಲ್ವರು ರೈತರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ವಾಹನ ರೈತರ ಮೇಲೆ ಹರಿದಿದೆ … Continued