ಧಾರವಾಡದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಧೀಮಂತ ವ್ಯಕ್ತಿ ನ.ವಜ್ರಕುಮಾರ : ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ

ಧಾರವಾಡ: ಜೀವನದ ಪ್ರತಿ ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು. ಒಂದು ಮರ ತಾನು ಧರೆಗುರುಳಿದ ನಂತರವೂ, ಪ್ರತಿ ಹಂತದಲ್ಲೂ ಪರೋಪಕಾರಿಯಾಗಿ ತನ್ನ ಜೀವನವನ್ನು ಮುಕ್ತಾಯಗೊಳಿಸುತ್ತದೆ. ನದಿ ಸಮುದ್ರ ಸೇರುವವರೆಗೂ ಪ್ರತಿಕ್ಷಣವೂ ತನ್ನನ್ನು ಇತರರಿಗೆ ಸಮರ್ಪಿಸಿಕೊಳ್ಳುತ್ತದೆ. ಆ ರೀತಿ ಮಾನವ ನಿಸರ್ಗ ನೋಡಿಯಾದರೂ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ವಜ್ರಕುಮಾರವರು ಬದುಕಿರುವ ವರೆಗೂ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿ ಮುಡಿಪಾಗಿಟ್ಟವರು. ವಿದ್ಯಾಸೌಧಗಳನ್ನು … Continued

ಧಾರವಾಡ: ಮಾರ್ವೇಲ್ ಕಂಪನಿ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಉತ್ಸವ ಸಭಾಭವನದಲ್ಲಿ ಹೈದ್ರಾಬಾದ ಮೂಲದ ಮಾರ್ವೆಲ್ ಕಂಪನಿಯವರು ಜುಲೈ 4ರಂದು ಬೆಳಿಗ್ಗೆ 9:30ಕ್ಕೆ ಯಾವುದೇ ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಪ್ರೋಸೆಸ್ ಅಸೋಸಿಯೇಟ್ಸ್‌ ಹುದ್ದೆಗಳಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಆಸಕ್ತರು ತಮ್ಮ ಸ್ವ-ವಿವರ, ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಸರನ್ನು ನೋಂದಾಯಿಸಲು … Continued

ನನಗೆ ಅಧಿಕಾರ ಕೊಟ್ಟಿದ್ದು ಶಿಕ್ಷಕ ಸಮುದಾಯ, ಅವರಿಗೆಂದೂ ಅನ್ಯಾಯ ಮಾಡಲು ಬಿಡುವುದಿಲ್ಲ: ಸಭಾಪತಿ ಹೊರಟ್ಟಿ

ಧಾರವಾಡ : ಕಳೆದ ನಲವತ್ತೆರಡು ವರ್ಷಗಳ ಹಿಂದೆ ಶಿಕ್ಷಕ ಸಮುದಾಯ ನನ್ನ ಕೈಗೆ ಅಧಿಕಾರವನ್ನು ಕೊಟ್ಟರು. ಅಂದಿನಿಂದ ಇಂದಿನ ವರೆಗೂ ನನಗೆ ಅಧಿಕಾರ ಕೊಟ್ಟ ಶಿಕ್ಷಕ ಸಮುದಾಯದವರಿಗೆ ನಾನೆಂದೂ ಕೈಕೊಟ್ಟಿಲ್ಲ, ಅನ್ಯಾಯ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಇಲ್ಲಿಯ ಜನತಾ ಶಿಕ್ಷಣ ಸಮಿತಿಯ (ಜೆ.ಎಸ್.ಎಸ್) ಪರವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ … Continued

ಶಿಕ್ಷಣವು ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ

ಶಿಕ್ಷಣ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಹೊಂದಿದೆ-ಡಾ. ನ. ವಜ್ರಕುಮಾರ ಧಾರವಾಡ : ಶಿಕ್ಷಣವೆಂಬುದು ನಿರಂತರವಾದ ಸಾಧನೆ ಹಾಗೂ ತಪಸ್ಸು. ಶಿಕ್ಷಣ ಎಂದೂ ನಿಲ್ಲದ ಪ್ರವಾಹ. ಇದಕ್ಕೆ ವಯಸ್ಸಿನ, ಲಿಂಗಭೇದಗಳ ಜಾತಿ-ಮತಗಳ ಅಧಿಕಾರ-ಅಂತಸ್ತಿನ ಅಡ್ಡಗೋಡೆಗಳಿಲ್ಲ ಎಂದು ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಹೇಳಿದರು. ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ … Continued

ಬಿ.ಕಾಂ ವಿದ್ಯಾರ್ಥಿಗಳಿಗೆ ಸ್ಟಾಕ್ ಮಾರ್ಕೆಟ್ ಆಪರೇಶನ್ ಪುಸ್ತಕ ಬಿಡುಗಡೆ

ಹುಬ್ಬಳ್ಳಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ವಾಣಿಜ್ಯ ಕಾಲೇಜಿನ ಉಪನ್ಯಾಸಕರಾದ ಕಿರಣಕುಮಾರ ಬಾಲಾಜಿ ಅವರು ಹೊಸ ಶಿಕ್ಷಣ ನೀತಿ ಅನ್ವಯ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ರಚಿಸಿದ “ಸ್ಟಾಕ್ ಮಾರ್ಕೆಟ್ ಆಪರೇಶನ್” ಎಂಬ ಪುಸ್ತಕವನ್ನು ಜೆ.ಎಸ್.ಎಸ್ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಹಾವೀರ ಉಪಾದ್ಯೆ, ಜಿನೇಂದ್ರ ಕುಂದಗೋಳ, ಶಾಂತಿನಾಥ ರೋಖಡೆ ಉಪಸ್ಥಿತರಿದ್ದರು.

ದಿ. ಆರ್.ಎಸ್ ಹುಕ್ಕೇರಿಕರ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಧಾರವಾಡ: ಕಾಲಕಾಲಕ್ಕೆ ಹಲವಾರು ಪ್ರಾತಸ್ಮರಣಿಯರು ಜನ್ಮತಾಳುತ್ತಾರೆ. ಅವರ ಆಗಮನದಿಂದ ದೇಶ ರಾಜ್ಯ ಸುಭಿಕ್ಷೆ ಕಾಣುತ್ತದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಜನಿಸಿದ ರಾಮರಾವ್ ಹುಕ್ಕೇರಿಕರವರು ಅಂತಹ ಮಹನೀಯರಲ್ಲಿ ಒಬ್ಬರು. ಅವರು ಅಂದು ಸ್ಥಾಪಿಸಿದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಇಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದಿಂದ ಪ್ರತಿವರ್ಷ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ದಾರಿಯಾಗಿದೆ ಎಂದು ಜೆ.ಎಸ್.ಎಸ್ ಸಂಸ್ಥೆ … Continued

ಜೆಎಸ್ಎಸ್ ನೂತನ ಆಡಳಿತ ಮಂಡಳಿಯ ೪೮ ವರ್ಷಗಳ ಸಾರ್ಥಕ-ಪ್ರಾಮಾಣಿಕ ಸೇವೆಯಿಂದ ಸಂಸ್ಥೆಈಗ ಹೆಮ್ಮರ: ಡಾ. ನ. ವಜ್ರಕುಮಾರ

ಧಾರವಾಡ: ಉತ್ತರ ಕರ್ನಾಟಕದ ಶಿಕ್ಷಣದ ಹೆಬ್ಬಾಗಿಲಾಗಿರುವ ಧಾರವಾಡಕ್ಕೆ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯ. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಜನತಾ ಶಿಕ್ಷಣ ಸಮಿತಿಯ ಸಾರಥ್ಯವನ್ನು ಎಂದು ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಅವರು ನೂತನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡು ೪೮ ವರ್ಷಗಳನ್ನು ಪೂರೈಸಿ ೪೯ನೇ ವರ್ಷಕ್ಕೆ ಕಾಲಿಡುತ್ತಿರುವ … Continued

ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿ: ಜೆಎಸ್ಎಸ್‌ ನಿಂದ ಸನ್ಮಾನ

ಧಾರವಾಡ: ಜೆಎಸ್‌ಎಸ್ ಬನಶಂಕರಿ ಕಲಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಕ್ಕೆ ಅತ್ಯತ್ತಮ ಘಟಕ ಮತ್ತು ಸುರೇಶಪ್ಪ ಸಜ್ಜನ ಅವರಿಗೆ ೨೦೧೯-೨೦೨೦ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ೨೪ ಸಪ್ಟೆಂಬರ್ ೨೦೨೧ ರಂದು ದೆಹಲಿಯ ಸುಶ್ಮಾಸ್ವರಾಜ ಭವನದಲ್ಲಿ ನೀಡಿ ಗೌರವಿಸಲಾಯಿತು. ಕಳೆದ ಆರು ವರ್ಷಗಳ ಅವಧಿಯಲ್ಲಿ ೧೦ ರಕ್ತದಾನ ಶಿಬಿರ, ೧೨ ಉಚಿತ … Continued

ಟಾಟಾ ಉದ್ಯಮ ಲಾಭಾಂಶದ ಬಹುಪಾಲನ್ನು ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗೆ ನೀಡುತ್ತಿದೆ: ಡಾ.ಅಜಿತ್ ಪ್ರಸಾದ

ಧಾರವಾಡ: ದೇಶದ ಅತಿ ದೊಡ್ಡ ಉದ್ಯಮವಾದ ಟಾಟಾ ತನ್ನ ಲಾಭಾಂಶದಲ್ಲಿ ಹೆಚ್ಚಿನ ಪಾಲನ್ನು ಸಾರ್ವಜನಿಕರ ಆರೋಗ್ಯ, ಶಿಕ್ಷಣ, ಪರಿಸರ ಕಾಳಜಿಗಾಗಿ ಖರ್ಚು ಮಾಡುತ್ತಿದೆ. ಪರಿಸರದಿಂದ ಬಹಳಷ್ಟನ್ನು ಪಡೆಯುವ ನಾವು ಪರಿಸರಕ್ಕೆ ಏನನ್ನಾದರೂ ತಿರುಗಿ ನೀಡದಿದ್ದರೆ, ಮುಂದಿನ ಪೀಳಿಗೆಗೆ ಬರಡು ಭೂಮಿಯನ್ನು ಬಿಟ್ಟು ಹೋದಂತಾಗುತ್ತದೆ ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ್ ಪ್ರಸಾದ್ ಹೇಳಿದರು. ಅವರು … Continued

ಅತ್ಯುತ್ತಮ ವಿದ್ಯಾರ್ಥಿಗಳೇ ಶಿಕ್ಷಕರ ಜೀವಾಳ: ಡಾ. ನ.ವಜ್ರಕುಮಾರ

ಧಾರವಾಡ: ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಆಸ್ತಿ. ಶಿಕ್ಷಕ-ವಿದ್ಯಾರ್ಥಿ ಬಾಂಧವ್ಯ ವರ್ಣಿಸಲು ಅಸಾಧ್ಯ. ನಮ್ಮನ್ನು ಗುರುತಿಸಿ ಮಾತನಾಡಿಸಿದಾಗ ಆಗುವ ಆತ್ಮತೃಪ್ತಿ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದು ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹೇಳಿದರು. ಶಿಕ್ಷಕ ದಿನಾಚರಣೆ ನಿಮಿತ್ತ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನಾವು ಹಣ-ಆಸ್ತಿ ಗಳಿಸಬಹುದು … Continued