ಸರ್ಕಾರದ ಮತ್ತೊಂದು ಎಡವಟ್ಟು : ಖಾಸಗಿ ಶಾಲೆಯಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂದು ಸುತ್ತೋಲೆ, ವಿವಾದ ಬೆನ್ನಲ್ಲೇ ಯೂ ಟರ್ನ್…!​

ಬೆಂಗಳೂರು: ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಕುವೆಂಪು ಅವರ ಕವಿತೆಯ ಬರಹವನ್ನು ಬದಲಾವಣೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದ ರಾಜ್ಯ ಸರ್ಕಾರ ಅದಾದ ಎರಡು ದಿನಗಳಲ್ಲಿ ಮತ್ತೊಂದು ಯಡವಟ್ಟು ನಿರ್ಧಾರ ಮಾಡಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅದರಿಂದ ಯೂ ಟರ್ನ್‌ ಹೊಡೆದಿದೆ ಹಾಗೂ ಈಗ ತಿದ್ದುಪಡಿ ಆದೇಶ ಹೊರಡಿಸಿದೆ…! ಖಾಸಗಿ ಶಾಲೆಗಳಲ್ಲಿ (Private Schools) ಇನ್ನು … Continued

ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ : ದಿನೇಶ ಗುಂಡೂರಾವ್‌

ಉಡುಪಿ : ಮಂಗನ ಕಾಯಿಲೆಗೆ ಲಸಿಕೆ ಕುರಿತು ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದ್ದು, ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಐಸಿಎಂಆರ್ ನವರು ವ್ಯಾಕ್ಸಿನ್ ತಯಾರಿಕೆಗೆ … Continued

ಕರ್ನಾಟಕದಲ್ಲಿ ಹುಕ್ಕಾ ಬಾರ್, ಮಾರಾಟ, ಬಳಕೆ ಸಂಪೂರ್ಣ ನಿಷೇಧ

ಬೆಂಗಳೂರು : ಕರ್ನಾಟಕದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಬಳಕೆ, ಸ್ವಾಧೀನ ಮತ್ತು ಅವುಗಳ ಜಾಹೀರಾತಿನ ಮೇಲೆ ಬುಧವಾರದಿಂದ ಜಾರಿಗೆ ಬರುವಂತೆ ಆರೋಗ್ಯ ಇಲಾಖೆ ತಕ್ಷಣದಿಂದ ನಿಷೇಧಿಸಿದೆ. ಕರ್ನಾಟಕ ಆರೋಗ್ಯ ಇಲಾಖೆಯು ಹುಕ್ಕಾ ಮಾರಾಟ ಮತ್ತು ಸೇವನೆ ನಿಷೇಧಿಸಿ ಬುಧವಾರ ಅಧಿಸೂಚನೆ ಹೊರಡಿಸಿದೆ. ‘ಸಾರ್ವಜನಿಕ ಆರೋಗ್ಯ’ವನ್ನು ಉಲ್ಲೇಖಿಸಿ ಸರ್ಕಾರವು ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಮಾರಾಟವನ್ನು … Continued

ಮನೆ ಬದಲಿಸುವ ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ : ‘ಗೃಹ ಜ್ಯೋತಿ’ ನಿಯಮದಲ್ಲಿ ಬದಲಾವಣೆಗೆ ಸೂಚನೆ

ಬೆಂಗಳೂರು : ಇಂಧನ ಇಲಾಖೆಯು ಗೃಹಜ್ಯೋತಿಯ ಫ‌ಲಾನುಭವಿಗಳು ಬಾಡಿಗೆ ಮನೆ ಅಥವಾ ಮನೆ ಬದಲಾಯಿಸಿದ ಬಳಿಕವೂ ಗೃಹಜ್ಯೋತಿ ಯೋಜನೆ ಲಾಭ ಮುಂದುವರಿಸಲು ಅವಕಾಶ ಕಲ್ಪಿಸಿದೆ. ಗೃಹ ಜ್ಯೋತಿ ಯೋಜನೆಯಿಂದ ಗ್ರಾಹಕರು ತಮ್ಮ ಖಾತೆಗಳನ್ನು ಡಿ-ಲಿಂಕ್ ಮಾಡಲು, ವಿಳಾಸ ಬದಲಾವಣೆ ಮತ್ತು ಶಿಫ್ಟಿಂಗ್‌ ನಂತರ ಮರು ಲಿಂಕ್ ಮಾಡಲು ಅವಕಾಶ ಒದಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ವಿದ್ಯುತ್ ಸರಬರಾಜು … Continued

ಕರ್ನಾಟಕಕ್ಕೆ ಎಲ್ಲಿ ಹಣ ನೀಡಿಲ್ಲ ? ಎಲ್ಲಿ ಕಡಿಮೆ ಹಣ ಸಿಗ್ತಿದೆ..? : ಕರ್ನಾಟಕಕ್ಕೆ ಕೊಟ್ಟ ಹಣದ ಲೆಕ್ಕ ನೀಡಿ ಮರುಪ್ರಶ್ನಿಸಿದ ನಿರ್ಮಲಾ ಸೀತಾರಾಮನ್‌

ನವದೆಹಲಿ: ತೆರಿಗೆ ಹಂಚಿಕೆ ಮತ್ತು ಕೇಂದ್ರದ ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ದಿನ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸುಗಳನ್ನು “ಕೊನೆಯ ಪದದವರೆಗೆ” ಅನುಸರಿಸಿದ್ದೇವೆ ಎಂದು ಹೇಳಿದ್ದಾರೆ. ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ವಿತ್ತ ಸಚಿವರು ಅಂಕಿಅಂಶಗಳನ್ನು … Continued

ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 62 ಸಾವಿರ ಕೋಟಿಗೂ ಹೆಚ್ಚು ನಷ್ಟ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ರಾಜ್ಯದಿಂದ 4.30 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಆದರೂ ನಮಗೆ ತೆರಿಗೆ ಹಣ ಹಂಚಿಕೆ ಕಡಿತ ಮಾಡಿ ಮೋಸಲ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ 62,098 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕೇಂದ್ರದ ವಿರುದ್ಧ ವಾಗ್ದಾಳಿ … Continued

ಓಲಾ, ಉಬರ್ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಪಡಿಸಿದ ಸರ್ಕಾರ

ಬೆಂಗಳೂರು: ಪೀಕ್ ಅವರ್​ನಲ್ಲಿ ದರ ಏರಿಸಿ ಜನರ ಸುಲಿಗೆ ತಡೆಯಲು ಆ್ಯಪ್ ಆಧಾರಿತ ಅಗ್ರಿಗೇಟರ್‌ಗಳಾದ ಓಲಾ, ಉಬರ್, ರ್ಯಾಪಿಡೋ ಮತ್ತು ಸಿಟಿ ಟ್ಯಾಕ್ಸಿಗಳಿಗೆ ರಾಜ್ಯ ಸರ್ಕಾರ ಈಗ ಏಕರೂಪ ದರ ನಿಗದಿಪಡಿಸಿದೆ. ಆ್ಯಪ್ ಆಧಾರಿತ ಕ್ಯಾಬ್ ಅಗ್ರಿಗೇಟರ್‌ಗಳು ಮತ್ತು ಸಿಟಿ ಟ್ಯಾಕ್ಸಿಗಳ ದರಗಳು ಏಕರೂಪವಾಗಿರುತ್ತವೆ ಎಂದು ಸರ್ಕಾರದ ಆದೇಶವು ಹೇಳಿದೆ. ಪರಿಷ್ಕೃತ ದರಗಳು ತಕ್ಷಣದಿಂದ ಜಾರಿಗೆ … Continued

12 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಉಜ್ವಲ್ ಕುಮಾರ ಘೋಷ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ)ಯ ಕಾರ್ಯದರ್ಶಿಯಾಗಿ … Continued

ಡಿಕೆಶಿ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಪ್ರಕರಣ : ಪ್ರಕರಣದ ವಿಚಾರಣೆ ಹೈಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸ್ಸು

ಬೆಂಗಳೂರು : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಕುರಿತಾದ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಪ್ರಕರಣದ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಲ್ಲಿಸಿರುವ … Continued

ಸೇವೆ ಕಾಯಂ ಆಗುವ ಮುನ್ನ ಉದ್ಯೋಗಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡಿದ್ದರೆ ಆ ಅವಧಿಗೂ ಗ್ರಾಚ್ಯುಟಿ ಪಾವತಿಸಬೇಕು: ಹೈಕೋರ್ಟ್‌

ಬೆಂಗಳೂರು : ಉದ್ಯೋಗಿಯೊಬ್ಬರಿಗೆ ಒಂಬತ್ತು ವರ್ಷಗಳ ಕಾಲ ಗ್ರಾಚ್ಯುಟಿ ಪಾವತಿಸಲು ರಾಜ್ಯ ಸರ್ಕಾರ ವಿಳಂಬ ಮಾಡಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ಸರ್ಕಾರಿ ಸೇವೆ ಕಾಯಂಗೂ ಮುನ್ನ ಉದ್ಯೋಗಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದರೆ ಆ ಅವಧಿಗೂ ಗ್ರಾಚ್ಯುಟಿ ಪಾವತಿಸಬೇಕು ಎಂದು ಆದೇಶಿಸಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಡಿ ಗ್ರೂಪ್‌ ಉದ್ಯೋಗಿ ಬಸವೇಗೌಡ ಸಲ್ಲಿಸಿದ್ದ … Continued