ವಯನಾಡ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

ವಯನಾಡ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರೊಂದಿಗೆ ಆಗಮಿಸಿ ಚುನಾವಣಾಧಿಕಾರಿಯೂ ಆಗಿರುವ ವಯನಾಡ್ ಜಿಲ್ಲಾಧಿಕಾರಿಗೆ ಬುಧವಾರ (ಏಪ್ರಿಲ್‌ ೩) … Continued

ಈ ಕೇಂದ್ರ ಸಚಿವರು ನಾಮಪತ್ರ ಸಲ್ಲಿಸಲು ಠೇವಣಿ ಹಣ ನೀಡಿದ ಯುದ್ಧದ ವೇಳೆ ಉಕ್ರೇನ್‌ ನಿಂದ ಪಾರಾಗಿ ಬಂದ ವಿದ್ಯಾರ್ಥಿಗಳು…!

ತಿರುವನಂತಪುರಂ : ಕೇಂದ್ರ ಸಚಿವ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ವಿ ಮುರಳೀಧರನ್ ಅವರು ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ನೀಡಿದ ಗೌರವದ ಟೋಕನ್‌ ಹಣದಿಂದ ಶನಿವಾರ ಕೇರಳದ ಅಟ್ಟಿಂಗಲ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಶುಕ್ರವಾರ ಮುರಳೀಧರನ್ ಅವರನ್ನು ಭೇಟಿ ಮಾಡಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬಿಜೆಪಿಯ ರಾಜ್ಯ ಕಚೇರಿಗೆ ಭೇಟಿ ನೀಡಿ ಲೋಕಸಭೆ … Continued

ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಮೇಲಿವೆ 242 ಪ್ರಕರಣಗಳು…

ಕೊಚ್ಚಿ : ಕೇರಳದ ವಯನಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಅಭ್ಯರ್ಥಿಯೂ ಆಗಿರುವ ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ. ಶಾಸನಬದ್ಧ ಅವಶ್ಯಕತೆಗಳ ಭಾಗವಾಗಿ, ಸುರೇಂದ್ರನ್ ಅವರು ಇತ್ತೀಚೆಗೆ ತಮ್ಮ ಪ್ರಕರಣಗಳ ವಿವರಗಳನ್ನು ಪಕ್ಷದ ಮುಖವಾಣಿಯಲ್ಲಿ ಮೂರು ಪೂರ್ಣ ಪುಟಗಳಲ್ಲಿ ಪ್ರಕಟಿಸಿದ್ದರು. ಅದೇ ರೀತಿ ಬಿಜೆಪಿ … Continued

ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

ಕಾಸರಗೋಡು : ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ.ಗಳನ್ನು ದರೋಡೆ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಕೇರಳ ಕಾಸರಗೋಡಿನ ಉಪ್ಪಳ ಪೇಟೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ವಾಹನದ ಗಾಜನ್ನು ಒಡೆದು ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕಿನ ಎಟಿಎಂ ಯಂತ್ರಕ್ಕೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. … Continued

ಅಪರೂಪದ ವಿದ್ಯಮಾನ : ರಾಷ್ಟ್ರಪತಿಗಳ ವಿರುದ್ದವೇ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ ಕೇರಳ ಸರ್ಕಾರ…!

ನವದೆಹಲಿ : ರಾಜ್ಯ ವಿಧಾನಸಭೆ ಅಂಗೀಕರಿಸಿದ ನಾಲ್ಕು ವಿಧೇಯಕಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮ್ಮತಿ ನೀಡದೆ ತಡೆಹಿಡಿದಿರುವುದನ್ನು ಪ್ರಶ್ನಿಸಿ ಕೇರಳ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ವಕೀಲ ಸಿ.ಕೆ. ಶಶಿ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ರಾಜ್ಯ ಸರ್ಕಾರದ ಈ ಮಸೂದೆಗಳು ಒಪ್ಪಿಗೆಗಾಗಿ ರಾಜ್ಯಪಾಲರ ಬಳಿ ಸುಮಾರು ಎರಡು ವರ್ಷಗಳಿಂದ ಬಾಕಿ ಉಳಿದಿವೆ. … Continued

ಆರ್‌ ಎಸ್‌ ಎಸ್ ಮುಖಂಡ ಶ್ರೀನಿವಾಸನ್ ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಪ್ರಮುಖ ಪಿಎಫ್‌ಐ ಸದಸ್ಯನ ಬಂಧಿಸಿದ ಎನ್‌ಐಎ

ನವದೆಹಲಿ: 2022ರಲ್ಲಿ ಕೇರಳದಲ್ಲಿ ನಡೆದ ಆರ್‌ಎಸ್‌ಎಸ್‌ ಮುಖಂಡ ಶ್ರೀನಿವಾಸನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಯ ತಲೆಮರೆಸಿಕೊಂಡಿದ್ದ ಪ್ರಮುಖ ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಬಂಧಿಸಿದೆ. ಆರೋಪಿಯನ್ನು ಶಫೀಖ್ ಎಂದು ಗುರುತಿಸಲಾಗಿದ್ದು, 2022 ರ ಏಪ್ರಿಲ್ 16 ರಂದು ಪಾಲಕ್ಕಾಡ್‌ನಲ್ಲಿ ಶ್ರೀನಿವಾಸನ್ ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ. ಮಲಪ್ಪುರಂ … Continued

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿಗೆ ಕೇಂದ್ರ ಸರ್ಕಾರದ ಅಧಿಸೂಚನೆ ನಂತರ ನಾವು ಜಾರಿ ಮಾಡಲ್ಲ ಎಂದ ಪಶ್ಚಿಮ ಬಂಗಾಳ, ಕೇರಳ ಸಿಎಂಗಳು

ನವದೆಹಲಿ: 2019 ರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ್ದರೂ ಸಹ, ತಮ್ಮ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಚುನಾವಣೆಗೂ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆಯ … Continued

ಕಡಬ : ಮುಸುಕುಧಾರಿಯಿಂದ ಶಾಲಾ ಆವರಣದಲ್ಲೇ ಆ್ಯಸಿಡ್ ದಾಳಿ ; ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

ಮಂಗಳೂರು: ದುಷ್ಕರ್ಮಿಯೊಬ್ಬ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯಗಳಾಗಿದ್ದು ಅವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಮುಸುಕು ಧರಿಸಿ ಬಂದಿದ್ದು, ದಾಳಿ ನಡೆಸಿದ ಆರೋಪಿ ಅಬೀನ್‌ … Continued

ಕ್ಯಾಲಿಫೋರ್ನಿಯಾದ ಮನೆಯಲ್ಲಿ ಇಬ್ಬರು ಮಕ್ಕಳು ಸೇರಿ ಭಾರತೀಯ ಕುಟುಂಬದ ನಾಲ್ವರು ಶವವಾಗಿ ಪತ್ತೆ : ದಂಪತಿಗೆ ಗುಂಡಿನ ಗಾಯ

ಭಾರತೀಯ ಮೂಲದ ಕುಟುಂಬದ ನಾಲ್ವರು ಅಮೆರಿಕದ ಸ್ಯಾನ್ ಮಾಟಿಯೊ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ, ಪೊಲೀಸರು ಇದನ್ನು ಕೊಲೆ-ಆತ್ಮಹತ್ಯೆಯ ಪ್ರಕರಣ ಎಂದು ತನಿಖೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಫಾಕ್ಸ್ ಕೆಟಿವಿಯು ವರದಿಯ ಪ್ರಕಾರ, ಮೆಟಾ ಕಂಪನಿಯ ಮಾಜಿ ಇಂಜಿನಿಯರ್ ಆನಂದ ಸುಜಿತ ಹೆನ್ರಿ (42) ತನ್ನ 4 ವರ್ಷದ ಅವಳಿ ಗಂಡು ಮಕ್ಕಳನ್ನು … Continued

ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ: ಕೇರಳದ 15 ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ

 ಕೊಚ್ಚಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಹಾಗೂ ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸನ್‌ ಅವರ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಗೆ ಸಂಬಂಧಿಸಿದ 15 ಮಂದಿಗೆ ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿ ಮಂಗಳವಾರ (ಜನವರಿ 30) ತೀರ್ಪು ಪ್ರಕಟಿಸಿದೆ. ಕಳೆದ ವಾರ 15 ಮಂದಿ ತಪ್ಪಿತಸ್ಥರೆಂದು … Continued