ಕುಮಟಾ: ಕೂಜಳ್ಳಿಯಲ್ಲಿ ಡಿಸೆಂಬರ್‌ 25ರಂದು ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಸಂಗೀತೋತ್ಸವ, ಮೂವರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಕುಮಟಾ:ಪಂ. ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಹಾಗೂ ಷಡಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭ ಡಿಸೆಂಬರ್‌ 25ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಡಿಸೆಂಬರ್‌ 25ರಂದು ಬೆಳಗ್ಗೆ 9 ಗಂಟೆಗೆ ಉದ್ಘಾಟನೆ ನಡೆಯಲಿದ್ದು, … Continued

ಕುಮಟಾ: ಗೋ ಗ್ರೀನ್‌ನಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶ: ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು- ಕಾಗೇರಿ

ಕುಮಟಾ: ನಮ್ಮ ಬದುಕಿನ ಮಧ್ಯೆ ಬರುವ ಸಮಸ್ಯೆ ನಿವಾರಣೆಗೆ  ಹಾಗೂ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು ಎಂದು ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಡಗಣಿಯ ಗೊ ಗ್ರೀನ್ ಮೈದಾನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವ್ಯವಹಾರಿಕ ಜಂಜಾಟದಲ್ಲಿ ಇರುತ್ತಾರೆ. ಇದರ ಮಧ್ಯೆ … Continued

ಕುಮಟಾ: ಕುತೂಹಲಕ್ಕೆ ಕಾರಣವಾದ ಮುಸ್ಗುಪ್ಪೆ ಗ್ರಾಮದಲ್ಲಿ ಪತ್ತೆಯಾದ ಗುಹೆ..!

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರಿನ ಮುಸ್ಗುಪ್ಪೆ ಗ್ರಾಮದ ಬಳಿ ಗುಹೆಯೊಂದು ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಮೂರೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಸ್ಗುಪ್ಪೆಯಲ್ಲಿ ರಸ್ತೆ ಬದಿಯಲ್ಲಿ ಮಣ್ಣು ತೆಗೆಯುತ್ತಿರುವಾಗ ಇದು ಕಂಡುಬಂದಿದೆ. ಇದು ಮಣ್ಣಿನ ಮಧ್ಯೆ ಪೊಳ್ಳು ಇರಬಹುದು ಎಂದು ಮಣ್ಣನ್ನು ತೆಗೆಯುತ್ತ ಹೋದಾಗ ಈ … Continued

ಕುಮಟಾ: ನಿವೃತ್ತ ತಹಶೀಲ್ದಾರ ಮೇಘರಾಜ ನಾಯ್ಕ ನಿಧನ

ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ್ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ … Continued

ಕುಮಟಾ: ಕೂಜಳ್ಳಿಯಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಕೂಜಳ್ಳಿಯಲ್ಲಿ ಮಗನಿಂದಲೇ ತಾಯಿಯ ಹತ್ಯೆ ನಡೆದ ಘಟನೆ ನಡೆದಿದೆ. ಗೀತಾ ಭಟ್ಟ (64) ಎಂಬ ಮಹಿಳೆ ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಈ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಂಡ ಎಂಬಲ್ಲಿ ನಡೆದಿದ್ದು, ಮಗ ಕುಡಿತದ ಚಟಕ್ಕೆ ದಾಸನಾಗಿದ್ದ ಎಂದು ತಿಳಿದು ಬಂದಿದ್ದು, ಇದೇ ಕಾರಣಕ್ಕೆ ತಾಯಿಯ … Continued

ಕುಮಟಾ: ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಶಕ್ತಿ ಸ್ಥಳಗಳಲ್ಲೊಂದಾದ ಕುಮಟಾ ತಾಲೂಕಿನ ಹೊಳೆಗದ್ದೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದೇವಿಗೆ ಪೂಜೆ ಸಲ್ಲಿಸಿದರು. ಕುಮಟಾ ಕಾಂಗ್ರೆಸ್‌ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಹೊಳೆಗದ್ದೆ ಶಾಂತಿಕಾ ಪರಮೇಶ್ವರಿ ದೇವಾಲಯಕ್ಕೆ ಆಗಮಿಸಿದ ಅವರು ಪೂಜೆ ಸಲ್ಲಿಸಿ ಶ್ರೀ ದೇವಿಯ ಆಶೀರ್ವಾದ ಬೇಡಿದರು. ದೇವಾಲಯದ ಆಡಳಿತ … Continued

ಕುಮಟಾ: ಐವರು ಯಕ್ಷಗಾನ ಕಲಾವಿದರಿಗೆ ಕೆರೆಮನೆ ‘ಮಹಾಬಲ’ ‌ಪ್ರಶಸ್ತಿ ಪ್ರಕಟ

ಕುಮಟಾ: ಕುಮಟಾದ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ವತಿಯಿಂದ ಕೊಡಮಾಡುವ ಯಕ್ಷಗಾನದ ಭೀಷ್ಮ ಎಂದೇ ಹೆಸರಾಗಿದ್ದ ಮೇರು ಕಲಾವಿದ ಡಾ. ಮಹಾಬಲ ಹೆಗಡೆ ಕೆರೆಮನೆ ಹೆಸರಿನ ಪ್ರಶಸ್ತಿಯನ್ನು‌ ಕಳೆದ‌ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅನವರತವಾಗಿ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುಮ್ಮೇಳದ ಮೂವರು ಹಿರಿಯ ಕಲಾವಿದರಿಗೆ ಹಾಗೂ ಹಿಮ್ಮೇಳದ ಇಬ್ಬರು ಹಿರಿಯ ಕಲಾವಿದರಿಗೆ … Continued

ಗೋಕರ್ಣ: ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಪ್ರವಾಸಿಗ ಸಾವು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ (Gokarna)ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಗೋಕರ್ಣದ ಮುಖ್ಯ ಕಡಲತೀರದ ರುದ್ರಪಾದ ಬಳಿ ಈ ದುರಂತ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ನಾಲ್ವರು ಸ್ನೇಹಿತರೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಲು … Continued

ಉತ್ತರ ಕನ್ನಡದಲ್ಲಿ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ: ಮಿರ್ಜಾನ್‌ನಲ್ಲಿ ಸ್ಥಳ ಪರಿಶೀಲಿಸಿದ ಆರೋಗ್ಯ ಸಚಿವ ಸುಧಾಕರ

 ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾ ತಾಲೂಕಿನ ಮೂರು ಕಡೆ ಆರೋಗ್ಯ ಸಚಿವ ಡಾ. ಸುಧಾಕರ ಅವರು ಇಂದು ಮಂಗಳವಾರ ಜಾಗ ಪರಿಶೀಲನೆ ಮಾಡಿದರು. ಕುಮಟಾ ತಾಲೂಕಿನ ಮಿರ್ಜಾನ ಸಮೀಪದ ಸ್ಥಳ ಪರಿಶೀಲನೆ ನಡೆಸಿದ ಸಚಿವ ಡಾ. ಸುಧಾಕರ ಅವರು ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ … Continued

ಶೀಘ್ರದಲ್ಲೇ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಆರೋಗ್ಯ ಸಚಿವ ಡಾ.ಸುಧಾಕರ

ಕಾರವಾರ: ಶೀಘ್ರದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ‌ ನಿರ್ಮಾಣ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ ತಿಳಿಸಿದ್ದಾರೆ. ಕಾರವಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಟಾಕ್ಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದು, ಸ್ಥಳ ಯೋಗ್ಯವಾದರೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಮಂಜೂರಾತಿ ಪಡೆದು ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತೇವೆ. ಇಡೀ‌ … Continued