ಕುಮಟಾ: ಕಾರು ಪಲ್ಟಿಯಾಗಿ ಮಹಿಳೆ ಸಾವು, ಮೂವರಿಗೆ ಗಾಯ

ಕುಮಟಾ :ರಾಷ್ಟ್ರೀಯ ಹೆದ್ದಾರಿ  66ರಲ್ಲಿ ಮೋಟಾರ್ ಕಾರ ಪಲ್ಟಿ ಯಾಗಿ ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ. ಸೋಮವಾರ ಮಧ್ಯಾಹ್ನ   ವಿಪರೀತ ಸುರಿಯುತ್ತಿರುವ ಮಳೆಯಿಂದ ಕಾರ ಸ್ಕಿಡ್ಡ್ ಆಗಿದೆ ಎನ್ನಲಾಗಿದೆ. ಕಾರು ಮೂರು ಪಲ್ಟಿಯಾಗಿದ್ದರಿಂದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಕಾರಿನಲ್ಲಿ ಇದ್ದ ಮಹಿಳೆ ರಮಾ ಭಟ್ಟ ಎಂಬವರು ಮೃತಪಟ್ಟಿದ್ದು … Continued

ಕುಮಟಾ: ಭತ್ತಕ್ಕೆ ಬೆಂಕಿರೋಗ-ಮಾಹಿತಿಯ ಕೊರತೆ, ಸಂಕಷ್ಟದಲ್ಲಿ ಭತ್ತದ ರೈತ

ಕುಮಟಾ;ಭತ್ತ ಬೆಳೆದ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಫಸಲು ಬರುವ ಸಂದರ್ಭಲ್ಲಿ ಭತ್ತಕ್ಕೆ ಬೆಂಕಿ ರೋಗ ಮತ್ತು ಕಾಡು ಪ್ರಾಣಿಗಳ ಉಪಟಳ ಹಾಗೂ ಕೃಷಿ ಅಧಿಕಾರಿಗಳಿಂದ ಸರಿಯಾಗಿ ಸಿಗದ ಮಾಹಿತಿಯಿಂದ ಭತ್ತ ಬೆಳೆಯುವದೇ ನಿಷ್ಟ್ರಯೋಜಕ ಎನ್ನುವುದು ರೈತರು ಹೇಳುವ ಮಾತು. ಕೃಷಿ ಇಲಾಖೆಯಿಂದ ಪ್ರತಿವರ್ಷ ಬಿತ್ತನೆ ಬೀಜ ತಂದಿದ್ದೆವು ೪ ತಿಂಗಳಿಗೆ ಉತ್ಪಾದನೆ ಬರುತ್ತದೆ ಎಂದಿದ್ದರು ಆದರೆ … Continued

ಕುಮಟಾದ ಎರಡು ಸಿಇಟಿ ಕೇಂದ್ರಗಳಲ್ಲಿ ಮೊದಲನೇ ದಿನ ಸುಗಮವಾಗಿ ನಡೆದ ಪರೀಕ್ಷೆ

ಕುಮಟಾ; ತಾಲೂಕಿನಲ್ಲಿ ಎರಡು ಸಿಇಟಿ ಪರಿಕ್ಷಾ ಕೇಂದ್ರಗಳಿದ್ದು ಡಾ.ಎ.ವಿ.ಬಾಳಿಗಾ ಕಲಾ ವಿಜ್ಞಾನ ಮಹಾವಿದ್ಯಾಲಯದಲ್ಲಿ ೨೬೪ ವಿದ್ಯಾರ್ಥಿಗಳು ಪರೀಕ್ಷೆಬರೆಯಲು ಅನುಮತಿ ಪಡೆದಿದ್ದಾರೆ. ಮುಂಜಾನೆ ಅವಧಿಯ ಜೀವಶಾಸ್ತ್ರ ಪರಿಕ್ಷೆಯಲ್ಲಿ ೬೯ ವಿದ್ಯಾರ್ಥಿಗಳು ಗೈರುಹಾಜರಾಗಿದ್ದು ೧೯೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಧ್ಯಾಹ್ನ ಗಣಿತ ಪರೀಕ್ಷೆಯಲ್ಲಿ ಕೇವಲ ೬ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು. ಬೆಣ್ಣೆ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೭೬ ಪರೀಕ್ಷಾರ್ಥಿಗಳಿದ್ದು … Continued

ದೀವಗಿ ಬಳಿ ಬೈಕ್‌-ಲಾರಿ ಡಿಕ್ಕಿ: ಒಬ್ಬ ಸಾವು, ಇನ್ನೊಬ್ಬನಿಗೆ ಗಾಯ

ಕುಮಟಾ : ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ದೀವಗಿ ಬಳಿ ಬೈಕ್ ಹಾಗೂ ಮೀನು ಲಾರಿ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಹಿಂಬದಿಯ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರು ವಿದ್ಯಾರ್ಥಿಗಳೆಂದು ಹೇಳಲಾಗಿದ್ದು, ಬೈಕ್ ಸವಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿದ್ದ ಇನ್ನೋರ್ವ ವಿದ್ಯಾರ್ಥಿ … Continued

ಪ್ರವಾಸಿಗನ ದುಬಾರಿ ಬೈಕ್‌ ಕಳುವು ಪ್ರಕರಣ: ಕಳ್ಳನ ಹಿಡಿದ ಕುಮಟಾ ಪೊಲೀಸರು

ಕುಮಟಾ : ತಾಲೂಕಿನ ಸನ್ಮಾನ ಲಾಡ್ಜ್ ಎದುರಿನಲ್ಲಿ ನಿಲ್ಲಿಸಿಟ್ಟಿದ್ದ ಪ್ರವಾಸಿಗನ ದುಬಾರಿ ಬೈಕ್ ಕದ್ದ ಪ್ರಕರಣ ಭೇದಿಸುವಲ್ಲಿ ಕುಟಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಈತನನ್ನು ಕಾರವಾರ ಶಿರವಾಡದ ಆನಂದ ನಿಂಗನಬಸಪ್ಪ (19 ವರ್ಷ) ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ … Continued

ಇಂದು ಪಿಯು ಕಾಲೇಜು ಆರಂಭ : ಕುಮಟಾದಲ್ಲಿ ಹಾಜರಾತಿ ಶೇ.೯೦ರಷ್ಟು..!

ಕುಮಟಾ: ರಾಜ್ಯ ಸರಕಾರದ ಮಾರ್ಗ ಸೂಚಿಯಂತೆ ಕುಮಟಾ ಕಾಲೇಜುಗಳಲ್ಲಿಯೂ ೯ರಿಂದ ೧೨ನೇ ತರಗತಿಗಳಿಗೆ ಭೌತಿಕ ಪಾಠ ಆರಂಭವಾಗಿದ್ದು ವಿದ್ಯಾರ್ಥಿಗಳ ಹಾಜರಾತಿಯು ಶೇ.೯೦ ಕ್ಕಿಂತ ಹೆಚ್ಚಿದೆ. ಕುಮಟಾದ ಸರಕಾರಿ ಪದವಿ ಪೂರ್ವ ಕಾಲೇಜು ನೆಲ್ಲೇಕೆರಿ , ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ,ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಆನ್ ಲೈನ್ … Continued

ಕುಮಟಾ: ಹೊಲನಗದ್ದೆ ತೆಪ್ಪದಮಠ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳ ಅರ್ಚನೆ

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ  ಹೊಲನಗದ್ದೆಯ ತೆಪ್ಪದಮಠದ ಗ್ರಾಮ ದೇವರಾದ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ ಮಾಡಲಾಯಿತು. ಹಲವಾರು ವರ್ಷದಿಂದ ನೂಲ ಹಣ್ಣಿಮೆದಿನದಂದು ದೇವಾಲಯದಲ್ಲಿ ಪವಿತ್ರಧಾರಣೆಯೊಂದಿಗೆ ಶ್ರೀದೇವರಿಗೆ ಲಕ್ಷಾಧಿಕ ತುಳಸಿ ದಳವನ್ನು ಅರ್ಚಿಸಿ ಪೂಜೆ ನೆರವೇರಿಸಲಾಗುತ್ತಿದೆ. ನಾಡು ಸುಭಿಕ್ಷೆಯಿಂದ ಕೂಡಿರಲಿ ಹಾಗೂ ಲೋಕದ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕು … Continued

ಕುಮಟಾ: ಬಾಡ ಸಮುದ್ರದಲ್ಲಿ ನಾಪತ್ತೆಯಾಗಿದ್ದವ ಎರಡು ದಿನಗಳ ಬಳಿಕ ಶವವಾಗಿ ಪತ್ತೆ

ಕುಮಟಾ; ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಾಡದ ಹುಬ್ಬಣ್ಣಗೆರೆ ಅರಬ್ಬಿ ಸಮುದ್ರ ತೀರದಲ್ಲಿ ಸೋಮವಾರ ನಾಪತ್ತೆಯಾಗಿದ್ದ ಬುಧವಾರ ಯುವಕನ ಶವ ಪತ್ತೆಯಾಗಿದೆ. ಸೋಮವಾರ ಈಜಾಡಲು ಸಮುದ್ರಕ್ಕೆ ಇಳಿದಿದು ಕಾಣೆಯಾಗಿದ್ದ ದಾವಣಗೆರೆಯ ಇಂಜಿನಿಯರಿಂಗ್ ವಿದ್ಯಾರ್ಥಿ ರೇಣುಕಾಪ್ರಸಾದ (೨೩)ಎಂದು ಗುರುತಿಸಲಾಗಿದೆ. ಸೋಮವಾರ ಪ್ರವಾಸಕ್ಕೆ ಬಂದಿದ್ದ ರೇಣುಕಾ ಪ್ರಸಾದ ಮತ್ತು ಮೇಘಾ ಎಂಬವರು ಬಾಡದ ಸಮುದ್ರ ತೀರದಲ್ಲಿ ಈಜಿಗೆಂದು … Continued

ಕುಮಟಾ: ಯಕ್ಷಗಾನ ಕಲಾವಿದ ಗೋಪಾಲ ಗೌಡ ನಿಧನ

ಕುಮಟಾ: ಉತ್ತರಕನ್ನಡ ಜಿಲ್ಲೆ ಯಕ್ಷಗಾನ ಕಲಾವಿದ ಕುಮಟಾ ತಾಲೂಕಿನ ಕಂದವಳ್ಳಿ ಗೋಪಾಲ ಗೌಡ (29 ವರ್ಷ) ಆಗಸ್ಟ್ 14ರಂದು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಮಂಗಳವಾರ (ಆಗಸ್ಟ್‌ 17ರಂದು) ಅವರ ಮೃತದೇಹ ಕುಮಟಾ ಹೆಡ್ ಬಂದರ್ ಬೀಚ್ ಬಳಿ ದೊರಕಿದೆ. ಕುಮಟಾ ಹಾಗೂ ಹೊನ್ನಾವರದ ಮಧ್ಯೆ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ … Continued

ವೇದ ಘೋಷ ,ಬ್ರಹ್ಮಸ್ಫೋಟದೊಂದಿಗೆ ಮಹಾಸಮಾಧಿ ಹೊಂದಿದ ಶ್ರೀರಾಮಾನಂದ ಅವಧೂತರು

ಕುಮಟಾ; ಶನಿವಾರ ರಾತ್ರಿ ಬ್ರಹ್ಮೀಭೂತರಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದಿವಗಿ ಮಠದ ಅವಧೂತ ಪರಂಪರೆಯ ಶ್ರೀರಾಮಾನಂದರು ಭಾನುವಾರ ಯತಿಪರಂಪರೆಯಂತೆ ಮಹಾಸಮಾಧಿ ಹೊಂದಿದರು. ಸ್ವಾಮೀಜಿ ಶನಿವಾರ ರಾತ್ರಿ ಮುಕ್ತಿಹೊಂದಿದ್ದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಭಾನುವಾರದಂದು ಶ್ರೀಮಠದಲ್ಲಿ ಮುಂಜಾನೆಯಿಂದಲೇ ಶ್ರೀರಾಮಾನಂದರ ಸಮಾಧಿ ಪ್ರಕ್ರಿಯೇ ಆರಂಭವಾಗಿತ್ತು. ಬೆಳಿಗ್ಗೆ ಸಾವಿರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. … Continued