ಲೋಕಸಭೆಯಲ್ಲಿ ಟೆಲಿಕಾಂ ಮಸೂದೆ ಮಂಡನೆ ; ‘ರಾಷ್ಟ್ರೀಯ ಭದ್ರತೆ’ ಸಂದರ್ಭದಲ್ಲಿ ಸೇವೆ ಸ್ಥಗಿತ, ಸ್ವಾಧೀನಕ್ಕೆ ಅವಕಾಶ

ನವದೆಹಲಿ: ದೂರಸಂಪರ್ಕ ವಲಯವನ್ನು ನಿಯಂತ್ರಿಸುವ 138 ವರ್ಷಗಳಷ್ಟು ಹಳೆಯದಾದ ಭಾರತೀಯ ಟೆಲಿಗ್ರಾಫ್ ಕಾಯಿದೆಯನ್ನು ಬದಲಾಯಿಸಲು ಕೇಂದ್ರ ಸರ್ಕಾರ ಸೋಮವಾರ ದೂರಸಂಪರ್ಕ ಮಸೂದೆ-2023 ಅನ್ನು ಲೋಕಸಭೆಯಲ್ಲಿ ಮಂಡಿಸಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಲೋಕಸಭೆಯಲ್ಲಿ ಟೆಲಿಕಾಂ ಮಸೂದೆಯನ್ನು ಮಂಡಿಸಿದರು. ಪ್ರಸ್ತಾವಿತ ಮಸೂದೆಯು ರಾಷ್ಟ್ರೀಯ ಭದ್ರತೆ ಉಲ್ಲೇಖಿಸಿ, ಯಾವುದೇ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಬಹುದಾಗಿದೆ. ಅಲ್ಲದೆ, … Continued

ಅಭೂತಪೂರ್ವ ಕ್ರಮದಲ್ಲಿ ಸಂಸತ್ತಿನಿಂದ ವಿಪಕ್ಷಗಳ 45 ರಾಜ್ಯಸಭಾ ಸದಸ್ಯರು, 33 ಲೋಕಸಭೆ ಸದಸ್ಯರು ಅಮಾನತು…!

ನವದೆಹಲಿ: ಅಭೂತಪೂರ್ವ ಬೆಳವಣಿಗೆಯಲ್ಲಿ, ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೇರಿ 78 ಸಂಸದರನ್ನು ಸೋಮವಾರ (ಡಿಸೆಂಬರ್‌ 18) ಅಮಾನತುಗೊಳಿಸಲಾಗಿದೆ. ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಗೃಹ ಸಚಿವರು ಒತ್ತಾಯಿಸಿದ್ದಕ್ಕಾಗಿ ಹದಿನಾಲ್ಕು ಸಂಸದರನ್ನು … Continued

ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 30ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಲೋಕಸಭಾ ಸ್ಪೀಕರ್

ನವದೆಹಲಿ : ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆಯ ವೇಳೆ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಸೇರಿದಂತೆ 30 ಪ್ರತಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ. … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ : ಪ್ರಧಾನಿ ಮೋದಿ ‘ಕಾಣೆಯಾದ ವ್ಯಕ್ತಿ’ ಎಂಬ ಕರಪತ್ರ ಹೊಂದಿದ್ದ ಆರೋಪಿಗಳು ; ಪೊಲೀಸರು

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಕರಪತ್ರಗಳನ್ನು ಹೊತ್ತೊಯ್ದಿದ್ದು, ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು “ಕಾಣೆಯಾದ” ವ್ಯಕ್ತಿ ಎಂದು ಕರೆದಿದ್ದಾರೆ ಮತ್ತು ಅವರನ್ನು ಪತ್ತೆ ಮಾಡಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ಘೋಷಿಸಲಾಗಿದೆ ಎಂದು ಹೇಳಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಗುರುವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು. “ಅವರನ್ನು (ಮೋದಿ) ಘೋಷಿತ ಅಪರಾಧಿಯಂತೆ … Continued

ಲೋಕಸಭೆಗೆ ಗೈರಾಗಿದ್ದ ಡಿಎಂಕೆ ಸಂಸದ ಪಾರ್ಥಿಬನ್ ತಪ್ಪಾಗಿ ಅಮಾನತು: ನಂತರ ಸ್ಪಷ್ಟಪಡಿಸಿದ ಸರ್ಕಾರ

ನವದೆಹಲಿ: ಸದನ ನಡೆಯಲು ಅಡ್ಡಿಪಡಿಸಿದ್ದಕ್ಕಾಗಿ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಲೋಕಸಭೆಯಿಂದ ಗುರುವಾರ ಅಮಾನತುಗೊಂಡ 14 ವಿರೋಧ ಪಕ್ಷದ ಸಂಸದರಲ್ಲಿ ಡಿಎಂಕೆ ನಾಯಕ ಎಸ್.ಆರ್ ಪಾರ್ಥಿಬನ್ ಅವರ ಹೆಸರು ಸೇರಿದೆ. ಪಾರ್ಥಿಬನ್ ಸೇರ್ಪಡೆ ‘ತಪ್ಪಾದ ಗುರುತಿನ’ ಪ್ರಕರಣ ಎಂದು ಸರ್ಕಾರ ನಂತರ ಸ್ಪಷ್ಟಪಡಿಸಿದೆ. ಹಾಗೂ ಅವರ ಅಮಾನತನ್ನು ಹಿಂಪಡೆದಿದೆ. ಒಟ್ಟಾರೆಯಾಗಿ ವಿಪಕ್ಷಗಳ 13 ಸಂಸದರನ್ನು ಲೋಕಸಭೆಯಿಂದ … Continued

ಲೋಕಸಭೆ-ರಾಜ್ಯಸಭೆ ಸದನದ ಕಲಾಪಕ್ಕೆ ಅಡ್ಡಿ : ವಿಪಕ್ಷಗಳ 15 ಸಂಸದರ ಅಮಾನತು

ನವದೆಹಲಿ : ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆಗಾಗಿ ಒಬ್ಬ ರಾಜ್ಯಸಭೆ ಮತ್ತು 14 ಲೋಕಸಭೆ ಸಂಸದರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಗುರುವಾರ (ಡಿಸೆಂಬರ್ 14) ಹೈ ಡ್ರಾಮಾ ನಡೆಯಿತು. ಲೋಕಸಭೆಯಲ್ಲಿ ಭದ್ರತಾ ಲೋಪದ ನಂತರ ಒಂದು ದಿನದ ನಂತರ – ಉಭಯ ಸದನಗಳಲ್ಲಿ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪತ್ತಾಯಿಸಿ ವಿಪಕ್ಷಗಳ ಸದಸ್ಯರು … Continued

ಸಂಸತ್‌ ಭದ್ರತಾ ಲೋಪ ಪ್ರಕರಣ: ಎಂಟು ಸಿಬ್ಬಂದಿ ಅಮಾನತು ಮಾಡಿದ ಲೋಕಸಭೆ ಸಚಿವಾಲಯ

ನವದೆಹಲಿ: ಸಂಸತ್ತಿನಲ್ಲಿ ಬುಧವಾರ ಸಂಭವಿಸಿದ ಭಾರಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ ಎಂಟು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ, ಇಬ್ಬರು ವ್ಯಕ್ತಿಗಳು ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಹಾರಿ ಹಳದಿ ಹೊಗೆಯ ಡಬ್ಬಿಗಳನ್ನು ಎಸೆದಿದ್ದರು. ಭದ್ರತಾ ಸಿಬ್ಬಂದಿಯ ಅಮಾನತು ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಸಚಿವಾಲಯವು ತೆಗೆದುಕೊಂಡ ಮೊದಲ ಮಹತ್ವದ ಕ್ರಮವನ್ನು ಸೂಚಿಸುತ್ತದೆ. ಭದ್ರತೆಯಲ್ಲಿನ ಅಭೂತಪೂರ್ವ ಲೋಪವು … Continued

ಸಂಸತ್‌ನಲ್ಲಿ ಭದ್ರತಾ ಲೋಪ: ಯುಎಪಿಎ ಅಡಿ ಪ್ರಕರಣ ದಾಖಲಿಸಿದ ದೆಹಲಿ ಪೊಲೀಸರು

ನವದೆಹಲಿ: ಸಂಸತ್‌ ಮೇಲಿನ ದಾಳಿಯ 22ನೇ ವರ್ಷದ ಕಹಿ ನೆನಪಿನ ದಿನವೇ ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪದ ನಡೆದಿದ್ದು, ಘಟನೆ ಸಂಬಂಧ ದೆಹಲಿ ಪೊಲೀಸ್ ವಿಶೇಷ ವಿಭಾಗ ಕಾನೂನುಬಾಹಿರ ಚಟುವಟಿಕೆಗಳ ‌ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಘಟನೆಯಲ್ಲಿ ಒಟ್ಟು ಆರು ಮಂದಿ ಭಾಗಿಯಾಗಿದ್ದು, ಅವರೆಲ್ಲರೂ ಸಾಮಾಜಿಕ ಮಾಧ್ಯಮಗಳಲ್ಲಿ … Continued

ಸಂಸತ್ತಿನಲ್ಲಿ ಭದ್ರತಾ ಲೋಪ : ಘಟನೆಯ ತನಿಖೆಗೆ ಗೃಹ ಸಚಿವಾಲಯ ಆದೇಶ, ಸಿಆರ್‌ಪಿಎಫ್ ಡಿಜಿ ತನಿಖಾ ಸಮಿತಿ ಮುಖ್ಯಸ್ಥ

ನವದೆಹಲಿ: ಲೋಕಸಭೆಯ ಸೆಕ್ರೆಟರಿಯೇಟ್‌ನ ಕೋರಿಕೆಯ ಮೇರೆಗೆ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ತನಿಖೆಗೆ ಗೃಹ ಸಚಿವಾಲಯ (MHA) ಬುಧವಾರ ಆದೇಶಿಸಿದೆ. ಅಧಿಕಾರಿಗಳ ಪ್ರಕಾರ, ಸಿಆರ್‌ಪಿಎಫ್‌ನ ಡಿಜಿ ಅನೀಶ ದಯಾಳ ಸಿಂಗ್ ನೇತೃತ್ವದಲ್ಲಿ ಇತರ ಭದ್ರತಾ ಏಜೆನ್ಸಿಗಳ ಸದಸ್ಯರು ಮತ್ತು ತಜ್ಞರೊಂದಿಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಇಡೀ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ … Continued

ವೀಡಿಯೊ: ಲೋಕಸಭೆಗೆ ನುಗ್ಗಿದವನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಸದರು

ನವದೆಹಲಿ : ಹೊಗೆ ಡಬ್ಬಿ ಹಿಡಿದ ಇಬ್ಬರು ವ್ಯಕ್ತಿಗಳು ಲೋಕಸಭೆಗೆ ನುಗ್ಗಿದ ನಂತರ ಆಘಾತದಿಂದ ಚೇತರಿಸಿಕೊಂಡ ಸಂಸದರು, ಒಳನುಗ್ಗಿದ ಇಬ್ಬರಲ್ಲಿ ಒಬ್ಬನನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸುವ ಮೊದಲು ಆತನನ್ನು ಥಳಿಸಿದ್ದಾರೆ. ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೋರಂಜನ ಡಿ ಮತ್ತು ಸಾಗರ ಶರ್ಮಾ ಎಂಬವರು ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಹಾರಿದರು. ಸಾಗರ … Continued