ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ : ಕರ್ನಾಟಕದ ಟೆಕ್ಕಿ-ಮಾಜಿ ಪೊಲೀಸ್ ಅಧಿಕಾರಿ ಪುತ್ರನ ಬಂಧನ

ನವದೆಹಲಿ: ಸಂಸತ್ತಿನ ಭಾರೀ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮತ್ತಿಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಒಬ್ಬನನ್ನು ಕರ್ನಾಟಕದ ಬಾಗಲಕೋಟೆಯ ನಿವೃತ್ತ ಉಪ ಪೊಲೀಸ್ ವರಿಷ್ಠಾಧಿಕಾರಿಯವರ ಮಗ ಸಾಯಿಕೃಷ್ಣ ಎಂದು ಗುರುತಿಸಲಾಗಿದೆ. ಸಾಯಿಕೃಷ್ಣ, ಡಿಸೆಂಬರ್ 13 ರಂದು ಲೋಕಸಭೆಯ ಸದನಕ್ಕೆ ಒಳನುಗ್ಗಿ ಡಬ್ಬಿಗಳಿಂದ ಹಳದಿ ಅನಿಲವನ್ನು ಬಿಡುಗಡೆ ಮಾಡಿದವರಲ್ಲಿ ಒಬ್ಬನಾದ ಮನೋರಂಜನ ಡಿ. … Continued

ಅಭೂತಪೂರ್ವ ಕ್ರಮದಲ್ಲಿ ಸಂಸತ್ತಿನಿಂದ ವಿಪಕ್ಷಗಳ 45 ರಾಜ್ಯಸಭಾ ಸದಸ್ಯರು, 33 ಲೋಕಸಭೆ ಸದಸ್ಯರು ಅಮಾನತು…!

ನವದೆಹಲಿ: ಅಭೂತಪೂರ್ವ ಬೆಳವಣಿಗೆಯಲ್ಲಿ, ಕಳೆದ ವಾರ ಸಂಸತ್ತಿನಲ್ಲಿ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಸೇರಿ 78 ಸಂಸದರನ್ನು ಸೋಮವಾರ (ಡಿಸೆಂಬರ್‌ 18) ಅಮಾನತುಗೊಳಿಸಲಾಗಿದೆ. ಭದ್ರತಾ ಲೋಪದ ಕುರಿತು ಹೇಳಿಕೆ ನೀಡುವಂತೆ ಗೃಹ ಸಚಿವರು ಒತ್ತಾಯಿಸಿದ್ದಕ್ಕಾಗಿ ಹದಿನಾಲ್ಕು ಸಂಸದರನ್ನು … Continued

ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 30ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಿದ ಲೋಕಸಭಾ ಸ್ಪೀಕರ್

ನವದೆಹಲಿ : ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಪ್ರತಿಭಟನೆಯ ವೇಳೆ ಸಂಸದರು ಸದನದೊಳಗೆ ಫಲಕಗಳನ್ನು ಪ್ರದರ್ಶಿಸಿದ್ದರಿಂದ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧರಿ ಸೇರಿದಂತೆ 30 ಪ್ರತಿಪಕ್ಷ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸೋಮವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅಮಾನತುಗೊಳಿಸಿದ್ದಾರೆ. … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ: ಆರೋಪಿಗಳ ಬಳಕೆ ಮಾಡಿದ್ದ ಸುಟ್ಟ ಫೋನ್ ಗಳ ಭಾಗಗಳು ರಾಜಸ್ಥಾನದಲ್ಲಿ ಪತ್ತೆ

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಸಂಸತ್‌ ಭದ್ರತಾ ಉಲ್ಲಂಘನೆ ಪ್ರಕರಣದ ಪ್ರಮುಖ ಆರೋಪಿ ಲಲಿತ್‌ ಝಾ ನಾಶಪಡಿಸಿದ್ದ ಮೊಬೈಲ್‌ ಫೋನ್‌ಗಳ ಭಾಗಗಳನ್ನು ದೆಹಲಿ ಪೊಲೀಸರು ಭಾನುವಾರ ರಾಜಸ್ಥಾನದಲ್ಲಿ ವಶಪಡಿಸಿಕೊಂಡಿದ್ದಾರೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಫೋನ್‌ಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಲೋಕಸಭೆ ಭದ್ರತಾ ಉಲ್ಲಂಘನೆ ಘಟನೆಯ ಮಾಸ್ಟರ್ ಮೈಂಡ್ ಲಲಿತ್ ಝಾ ಎಲ್ಲಾ ಆರೋಪಿಗಳ … Continued

‘ಭಾರತಕ್ಕೆ ಬೇಕಾಗಿರುವುದು ಬಾಂಬ್’: ಸಂಸತ್ತಿನ ಭದ್ರತಾ ಉಲ್ಲಂಘನೆಯ ʼಮಾಸ್ಟರ್ ಮೈಂಡ್ʼ ಲಲಿತ್ ಝಾ ಸಾಮಾಜಿಕ ಮಾಧ್ಯಮ ಪೋಸ್ಟ್ ಹೀಗೆ ಹೇಳುತ್ತದೆ….

ನವದೆಹಲಿ : ಸಂಸತ್ತಿನ ಭದ್ರತಾ ಉಲ್ಲಂಘನೆಯ ಆಪಾದಿತ ʼಮಾಸ್ಟರ್‌ಮೈಂಡ್ʼ ಲಲಿತ್ ಝಾ ಮಾಡಿದ ಅನೇಕ ಪ್ರಚೋದಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಒಂದು “ಭಾರತಕ್ಕೆ ಇಂದು ಬೇಕಾಗಿರುವುದು ಬಾಂಬ್” ಎಂದು ಹೇಳುತ್ತದೆ. ತನಿಖೆ ನಡೆಸುತ್ತಿರುವಾಗ ಇದು ದೆಹಲಿ ಪೊಲೀಸ್ ವಿಶೇಷ ಕೋಶದ ಸ್ಕ್ಯಾನರ್ ಅಡಿಯಲ್ಲಿ ಬಂದಿದೆ. ದೆಹಲಿ ಪೊಲೀಸ್ ವಿಶೇಷ ಕೋಶವು ಸಾಮಾಜಿಕ ಮಾಧ್ಯಮ ಸಂಪರ್ಕಗಳು ಮತ್ತು … Continued

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: 6ನೇ ಆರೋಪಿ ಬಂಧನ

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಇಂದು, ಶನಿವಾರ (ಡಿಸೆಂಬರ್‌ ೧೬) ಆರನೇ ವ್ಯಕ್ತಿಯನ್ನು ಬಂಧಿಸಿದ್ದಾರೆ. ‘ಮಾಸ್ಟರ್ ಮೈಂಡ್’ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಹೇಶ ಕುಮಾವತ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 2001 ರ ದಾಳಿಯ 22ನೇ ಕರಾಳ ವಾರ್ಷಿಕ ದಿನದಂದು ಡಿಸೆಂಬರ್ 13 ರ ಘಟನೆಯನ್ನು … Continued

ಸಂಸತ್ ಭದ್ರತಾ ಉಲ್ಲಂಘನೆ: ‘ಮಾಸ್ಟರ್ ಮೈಂಡ್’ ಲಲಿತ್ ಝಾ ಯಾರು? ಆತನ ಬಗ್ಗೆ ಕುತೂಹಲಕಾರಿ ವಿವರ ಬಹಿರಂಗಪಡಿಸಿದ ಕುಟುಂಬ

ನವದೆಹಲಿ : ಸಂಸತ್ತಿನ ಭದ್ರತಾ ಉಲ್ಲಂಘನೆಯ ಮಾಸ್ಟರ್‌ಮೈಂಡ್ ಲಲಿತ್ ಮೋಹನ ಝಾ ಬಾಲ್ಯದಿಂದಲೂ ಶಾಂತ ವ್ಯಕ್ತಿಯಾಗಿದ್ದು, ಯಾವಾಗಲೂ ಗದ್ದಲದಿಂದ ದೂರವಿದ್ದರು ಎಂದು ಸಂಸತ್ತಿನ ಒಳಗೆ ಹೊಗೆ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿದ ಆರೋಪಿಯ ಬಗ್ಗೆ ಆಘಾತಕ್ಕೊಳಗಾದ ಬಿಹಾರ ಮೂಲದ ಶಿಕ್ಷಕನ ಕುಟುಂಬ ಸದಸ್ಯರು ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. . ಲಲಿತ್ ಝಾ ಹಿರಿಯ ಸಹೋದರ … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ : ಪ್ರಧಾನಿ ಮೋದಿ ‘ಕಾಣೆಯಾದ ವ್ಯಕ್ತಿ’ ಎಂಬ ಕರಪತ್ರ ಹೊಂದಿದ್ದ ಆರೋಪಿಗಳು ; ಪೊಲೀಸರು

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆ ಮಾಡಿದ ಆರೋಪಿಗಳು ಕರಪತ್ರಗಳನ್ನು ಹೊತ್ತೊಯ್ದಿದ್ದು, ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು “ಕಾಣೆಯಾದ” ವ್ಯಕ್ತಿ ಎಂದು ಕರೆದಿದ್ದಾರೆ ಮತ್ತು ಅವರನ್ನು ಪತ್ತೆ ಮಾಡಿದವರಿಗೆ ಸ್ವಿಸ್ ಬ್ಯಾಂಕ್‌ನಿಂದ ಬಹುಮಾನ ಘೋಷಿಸಲಾಗಿದೆ ಎಂದು ಹೇಳಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಗುರುವಾರ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು. “ಅವರನ್ನು (ಮೋದಿ) ಘೋಷಿತ ಅಪರಾಧಿಯಂತೆ … Continued

ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣ : ಪೊಲೀಸರ ಮುಂದೆ ʼಮಾಸ್ಟರ್ ಮೈಂಡ್ʼ ಶರಣಾಗತಿ

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ, ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಮಾಸ್ಟರ್ ಮೈಂಡ್ ಮತ್ತು ಆರನೇ ಆರೋಪಿ ಗುರುವಾರ ದೆಹಲಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಆರೋಪಿ ಲಲಿತ್ ಝಾ ಸ್ವತಃ ದೆಹಲಿಯ ಕರ್ತವ್ಯ ಮಾರ್ಗವನ್ನು ತಲುಪಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈ ವೇಳೆ ಮಹೇಶ ಎಂಬ ವ್ಯಕ್ತಿ ಈತನ ಜೊತೆಗಿದ್ದ ಎನ್ನಲಾಗಿದೆ. … Continued

ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿ

ನವದೆಹಲಿ : ಭಾರೀ ಭದ್ರತಾ ಲೋಪದ ನಂತರ ಬುಧವಾರ ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಲೋಕಸಭೆಯೊಳಗೆ ನುಗ್ಗಿ ಸಿಕ್ಕಿಬಿದ್ದಿರುವ ಸಾಗರ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ವಿವರವಾಗಿ ಪ್ರಶ್ನಿಸಬೇಕಾಗಿದೆ ಎಂದು ದೆಹಲಿ ಪೊಲೀಸರು … Continued