ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ  ಹೀಯಾಳಿಸಿದಿರಿ… ನನ್ನ ಮೇಲೆ ನಿಮಗೆ ಇಷ್ಟೊಂದು ಕೋಪವೇಕೆ ದೀದಿ?: ಬಿಜೆಪಿ ಸಮಾವೇಶದಲ್ಲಿ ಮೋದಿ ಪ್ರಶ್ನೆ

  ಕೊಲ್ಕತ್ತಾ:ದೀದಿ (ಮಮತಾ ಬ್ಯಾನರ್ಜಿ) ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಕೋಪ ಎಷ್ಟಿತ್ತೆಂದರೆ ಅನೇಕ ಸಲ ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ ಕರೆದು ನನ್ನನ್ನು ಹೀಯಾಳಿಸಿದ್ದೀರಿ. ದೀದಿಯವರೇ ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ? ಅಂಥದ್ದನ್ನು ನಾನೇನು ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಕೇಳಿದರು. ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ … Continued

ತಮಿಳು ಭಾಷೆಯ ಹಿರಿಮೆ ಹೊಗಳಿದ ಪ್ರಧಾನಿ ಮೋದಿ

ಸುಂದರ ಭಾಷೆಗಳಲ್ಲೊಂದಾದ ತಮಿಳು ಕಲಿಯಲು ಸಾಧ್ಯವಾಗದಿರುವುದಕ್ಕೆ ವ್ಯಥೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಮನ್‌ ಕೀ ಬಾತ್‌ನಲ್ಲಿ ಮಾತನಾಡಿ, ಅತ್ಯಂತ ಹಳೆಯ ಭಾಷೆ ತಮಿಳು ಸುಂದರ ಭಾಷೆಯಾಗಿದ್ದು, ಅದು ವಿಶ್ವದಾದ್ಯಂತ ಜನಪ್ರಿಯ ಭಾಷೆಯಾಗಿದೆ ಎಂದು ಬಣ್ಣಿಸಿದರು. ತಮಿಳು ಕಲಿಯಲು ಸಾಧ್ಯವಾಗದಿರುವುದು ಒಂದು ವಿಷಾದವಾಗಿದೆ ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯಬೇಕು. ತಮಿಳು … Continued

ಅಮೆಜೊನಿಯಾ-೧ ಯಶಸ್ವಿ ಉಡಾವಣೆ: ಬ್ರೆಜಿಲ್‌ ಅಧ್ಯಕ್ಷರ ಅಭಿನಂದಿಸಿದ ಮೋದಿ

ಬ್ರೆಜಿಲ್‌ನ ಅಮೆಜೊನಿಯಾ-೧ ಉಪಗ್ರಹವನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್‌ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. ಪಿಎಸ್ಎಲ್ವಿ-ಸಿ 51 ಬ್ರೆಜಿಲ್‌ನ ಅಮೆಜೋನಿಯಾ -1 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದ್ದಕ್ಕಾಗಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿಗೆ ಅಭಿನಂದನೆಗಳು. ಇದು ನಮ್ಮ ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಿದೆ ಬ್ರೆಜಿಲ್‌ ವಿಜ್ಞಾನಿಗಳು ಸನ್ಮಾನಕ್ಕೆ ಪಾತ್ರರಾಗಿದ್ದಾರೆ ಎಂದು ಪಿಎಂ ಮೋದಿ … Continued

ಅಹ್ಮದಾಬಾದ ಕ್ರೀಡಾಂಗಣಕ್ಕಿಟ್ಟ ಮೋದಿ ಹೆಸರು ತೆಗೆಯಲು ‌ಸ್ವಾಮಿ ಆಗ್ರಹ

ಅಹ್ಮದಾಬಾದ್‌ ಕ್ರೀಡಾಂಗಣಕ್ಕಿಡಲಾದ ತಮ್ಮ ಹೆಸರನ್ನು ತೆಗೆದುಹಾಕಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ. ಕ್ರೀಡಾಂಗಣಕ್ಕೆ ತಮ್ಮ ಹೆಸರಿಡುವಂತೆ ಹೇಳುವ ರಾಷ್ಟ್ರದ ನಾಯಕರು ಯಾರಾದರೂ ಇದ್ದಾರೆಯೇ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ನನ್ನ ಪ್ರಕಾರ ತಮ್ಮ ಹೆಸರಿಡುವಂತೆ ಸೂಚಿಸುವವರು ಸದ್ದಾಂ ಹುಸೇನ್ ಮತ್ತು ಗಡಾಫಿ ಇಬ್ಬರು ಮಾತ್ರ ಎಂದು ಅಭಿಪ್ರಾಯಪಟ್ಟರು. ನೆಹರೂ, ಮಾವೋ ಅಥವಾ … Continued

ಪ್ರಧಾನಿ ಮೋದಿಗೆ ಸೆರಾವೀಕ್‌ ಜಾಗತಿಕ ಇಂಧನ-ಪರಿಸರ ನಾಯಕತ್ವ ಪ್ರಶಸ್ತಿ

ನವದೆಹಲಿ: ಮುಂದಿನ ವಾರ ನಡೆಯುವ ವಾರ್ಷಿಕ ಅಂತಾರಾಷ್ಟ್ರೀಯ ಇಂಧನ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೆರಾ ವೀಕ್‌ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ನೀಡಲಾಗುವುದು. ಮಾರ್ಚ್ 1 ರಿಂದ 5 ರವರೆಗೆ ನಡೆಯಲಿರುವ ಸೆರಾವೀಕ್ ಕಾನ್ಫರೆನ್ಸ್ -2021 ರಲ್ಲಿ ಪ್ರಧಾನಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅದರ ಸಂಘಟಕ ಐಎಚ್‌ಎಸ್ ಮಾರ್ಕಿಟ್ … Continued

ಪಶ್ಚಿಮ ಬಂಗಾಳದಲ್ಲಿ ೮ ಹಂತದಲ್ಲಿ ಚುನಾವಣೆ ಆಯೋಜಿಸಲು ಮೋದಿ, ಶಾ ಸೂಚನೆಯಿದೆಯೇ?

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಸೂಚನೆ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ೮ ಹಂತಗಳಲ್ಲಿ ಮತದಾನ ನಿಗದಿಪಡಿಸಲಾಗಿದೆಯೇ ಎಂದು ಸಿಎಂ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಆಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೆರಿ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಪ್ರಚಾರ ನಡೆಸಲು ಮೋದಿ ಮತ್ತು ಶಾ ಅವರಿಗೆ … Continued

ಟ್ವಿಟರ್‌ ಮಾಹಿತಿ: ಬಿಜೆಪಿ ಕಾಲೆಳೆದ ಟ್ವೀಟಿಗರು

ಸಾಮಾಜಿಕ ಜಾಲತಾಣ ಹಾಗೂ ಓವರ್‌ ದಿ ಟಾಪ್‌ (ಒಟಿಟಿ) ವೇದಿಕೆಗಳ ಮಾರ್ಗಸೂಚಿ ಘೋಷಣೆ ಸಂದರ್ಭದಲ್ಲಿ ಸಚಿವರು ತಿಳಿಸಿದ ಅಂಕಿ ಅಂಶಗಳು ಬಿಜೆಪಿಯನ್ನು ಮುಜುಗರಕ್ಕೀಡುಮಾಡಿವೆ. ಮಾಹಿತಿ ತಂತ್ರಜ್ಞಾನ ಸಚಿವ ಸಚಿವ ರವಿಶಂಕರ ಪ್ರಸಾದ್‌ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವ್ಯಾಟ್ಸ್‌ಪ್‌ ಬಳಕೆದಾರರು ೫೩ ಕೋಟಿ, ಯುಟ್ಯೂಬ್‌ ಬಳಕೆದಾರರು ೪೪.೮ ಕೋಟಿ, ಫೇಸ್‌ಬುಕ್‌ ೪೧ ಕೋಟಿ, ಇನ್ಸ್‌ಟಾಗ್ರಾಮ್‌ ೨೧ ಕೋಟಿ, ಟ್ವಿಟರ್‌ … Continued

“ಮೋದಿ ಉದ್ಯೋಗ ಕೊಡಿʼ ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ

ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಸುತ್ತಿರುವ “ಮೋದಿ ಉದ್ಯೋಗ ಕೊಡಿ” ಅಭಿಯಾನವನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಟ್ವಿಟರ್ ಬಳಕೆದಾರರು “ಮೋದಿ ಜಾಬ್‌ ದೊʼ, “ಮೋದಿ ರೋಜಗಾರ್‌ ದೊʼ ಎಂಬ ಹಾಷ್‌ಟ್ಯಾಗ್‌ ಬಳಕೆ ಮಾಡಿಕೊಂಡು ಉದ್ಯೋಗ ಕೇಳುವ ಅಭಿಯಾನ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ಯುವಕರೊಂದಿಗೆ ಸೇರಿಕೊಂಡ ರಾಹುಲ್ ಗುರುವಾರ … Continued

ಪಶ್ಚಿಮ ಬಂಗಾಳ ಪರಿವರ್ತನೆಗೆ ಮನಸು ಮಾಡಿದೆ: ಪ್ರಧಾನಿ ಮೋದಿ

ಪಶ್ಚಿಮ ಬಂಗಾಳ ಪರಿವರ್ತನೆಗೆ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಹೂಗ್ಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯವು ಪರಿವರ್ತನೆಗೆ ಮನಸು ಮಾಡಿದೆ. ಜನರ ಉತ್ಸಾಹವು ಕೋಲ್ಕತ್ತದಿಂದ ದೆಹಲಿಗೆ ಸಂದೇಶ ಕಳಿಸುತ್ತಿದೆ ಎಂದರು. ಕಳೆದ ಬಾರಿ ನಾನು ಅನಿಲ ಸಂಪರ್ಕ ಯೋಜನೆಗೆ ಚಾಲನೆ ನೀಡಲು ಬಂದಿದ್ದೆ. ಆದರೆ ಈ ಬಾರಿ ರೈಲ್ವೆ ಸೌಲಭ್ಯಗಳನ್ನು ನೀಡಲು … Continued

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರಧಾನಿ ಮೋದಿ

ಯುವಕರು “ದೇಶ ಮೊದಲುʼ ಎಂಬ ಮನೋಭಾವ ಅಳವಡಿಸಿಕೊಂಡರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರಪಂಚಿನಾದ್ಯಂತ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಹರಡುತ್ತಿರುವ ಅನೇಕ ವಿದ್ಯಾವಂತರಿದ್ದಾರೆ, ಇನ್ನೊಂದೆಡೆ ಕೊರೊನಾದಂಥ ಸಾಂಕ್ರಾಮಿಕ ರೋಗಗಳಿಂದ ಜನರನ್ನು ರಕ್ಷಿಸಲು ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಜನರೂ ಇದ್ದಾರೆ. ಎಲ್ಲವೂ ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ. … Continued