ಹುಕ್ಕಾ ಬಾರ್‌ನಲ್ಲಿ ದಾಳಿ ವೇಳೆ ಬಿಗ್ ಬಾಸ್ 17 ರ ವಿಜೇತ ಮುನಾವರ್ ಫರೂಕಿ ಬಂಧನ ; ನಂತರ ಬಿಡುಗಡೆ

ಮುಂಬೈ: ಮುಂಬೈನ ಹುಕ್ಕಾ ಪಾರ್ಲರ್‌ನಲ್ಲಿ ನಡೆದ ದಾಳಿಯಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮತ್ತು ಬಿಗ್ ಬಾಸ್ 17 ರ ವಿಜೇತ ಮುನಾವರ್ ಫರೂಕಿ ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ರಿಯಾಲಿಟಿ ಟಿವಿ ಸ್ಟಾರ್ ಮುನಾವರ್ ಫರೂಕಿ ಅವರನ್ನು ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ. ನಗರದ ಕೋಟೆ ಪ್ರದೇಶದಲ್ಲಿ ಅಕ್ರಮವಾಗಿ … Continued

ಅತಿಹೆಚ್ಚು ಬಿಲಿಯನೇರ್‌ ಗಳ ಸಂಖ್ಯೆ : ಮೊದಲ ಬಾರಿಗೆ ಏಷ್ಯಾದಲ್ಲಿ ಮೊದಲನೇ ಸ್ಥಾನಕ್ಕೆ ಏರಿದ ಮುಂಬೈ, ಜಾಗತಿಕವಾಗಿ ಎಷ್ಟನೇ ಸ್ಥಾನ ಗೊತ್ತಾ..?

ಮುಂಬೈ: ಭಾರತದ ಆರ್ಥಿಕ ರಾಜಧಾನಿ ಮುಂಬೈ ಈಗ ಮತ್ತೊಂದು ಟ್ಯಾಗ್‌ ಅನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡಿದೆ. ಈಗ ಏಷ್ಯಾದ ‘ಬಿಲಿಯನೇರ್ (ಶತಕೋಟ್ಯಧಿಪತಿಗಳು) ರಾಜಧಾನಿ’ಯಾಗಿ ಹೊರಹೊಮ್ಮಿದೆ. ಮುಂಬೈನಲ್ಲಿ ವಾಸಿಸುವ ಬಿಲಿಯನೇರ್‌ಗಳ ಸಂಖ್ಯೆ ಈಗ ಚೀನಾದ ಶಾಂಘೈ ಮತ್ತು ಅದರ ರಾಜಧಾನಿ ಬೀಜಿಂಗ್‌ಗಿಂತ ಹೆಚ್ಚಾಗಿದೆ. ಮುಂಬೈ ನಗರವು ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿಯಾಗಿ ಹೊರಹೊಮ್ಮಿದೆ. ಈ ಮಾಹಿತಿಯನ್ನು … Continued

ವಿಶ್ವ ಸುಂದರಿ 2024 ಪ್ರಶಸ್ತಿ ಗೆದ್ದ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ

ಮುಂಬೈ: ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ಅವರು ಶನಿವಾರ ಮಿಸ್‌ ವರ್ಲ್ಡ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಿಸ್ ಲೆಬನಾನ್ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಇಲ್ಲಿ ನಡೆದ ಫೈನಲ್‌ನಲ್ಲಿ ಪೋಲೆಂಡ್‌ನ ವಿಶ್ವ ಸುಂದರಿ ಕರೋಲಿನಾ ಬಿಲಾವ್ಸ್ಕಾ ಅವರು ತಮ್ಮ ಉತ್ತರಾಧಿಕಾರಿಗೆ ಮಿಸ್‌ ವರ್ಲ್ಡ್‌ ಕಿರೀಟವನ್ನು ತೊಡಿಸಿದರು. 28 … Continued

ಮುಂಬೈ..| ಪಾಕಿಸ್ತಾನಕ್ಕೆ ತೆರಳುತ್ತಿದ್ದ ಚೀನಾದ ಹಡಗು ತಡೆದ ಭಾರತದ ಭದ್ರತಾ ಅಧಿಕಾರಿಗಳು : ಅಧಿಕಾರಿಗಳಿಗೆ ಸಿಕ್ಕಿದ್ದೇನು ಗೊತ್ತೆ..?

ಮುಂಬೈ : ಚೀನಾದಿಂದ ಪಾಕಿಸ್ತಾನದ ಕರಾಚಿಗೆ ಭಾರೀ ಸರಕು ಹೊತ್ತು ಹೊರಟಿದ್ದ ಹಡಗನ್ನು ಭಾರತದ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮುಂಬೈನ ನ್ಹಾವಾ ಶೇವಾ ಬಂದರಿನಲ್ಲಿ ವಶಕ್ಕೆ ಪಡೆದಿದ್ದಾರೆ.ಈ ಹಡಗು ಪಾಕಿಸ್ತಾನಕ್ಕೆ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸಬಹುದಾದ ಸರಕು ಹೊಂದಿರುವ ಅನುಮಾನದ ಮೇರೆಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇರೆಗೆ ಮಾಲ್ಟಾ … Continued

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ : ಕಾಂಗ್ರೆಸ್ಸಿನ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ರಾಜೀನಾಮೆ

ಮುಂಬೈ: ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಪಾಟೀಲ ಮುರುಮಕರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಲವೇ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಅವರು ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದರು. ಬಸವರಾಜ ಪಾಟೀಲ ಅವರು ಭಾರತೀಯ ಜನತಾ ಪಕ್ಷಕ್ಕೆ … Continued

ಮುಂಬೈ ಅಲ್ಲ, ದೆಹಲಿಯೂ ಅಲ್ಲ…. ಈ ಎರಡು ನಗರಗಳು ಭಾರತದಲ್ಲೇ ಅತ್ಯಂತ ಕೆಟ್ಟ ಸಂಚಾರ ದಟ್ಟಣೆ ನಗರಗಳು..!

ನವದೆಹಲಿ : ಬ್ರಿಟನ್ ರಾಜಧಾನಿ ಲಂಡನ್ 2023ರಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರವಾಗಿದ್ದು, ರಶ್ ಅವರ್‌ನಲ್ಲಿ ವಾಹನಗಳು ಗಂಟೆಗೆ ಸರಾಸರಿ ವೇಗ 14 ಕಿ.ಮೀ ಎಂದು ವರದಿಯೊಂದು ತಿಳಿಸಿದೆ. ಇದೇವೇಳೆ ಎರಡು ಭಾರತೀಯ ನಗರಗಳಾದ ಬೆಂಗಳೂರು ಮತ್ತು ಪುಣೆ ಕೂಡ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪಟ್ಟಿಯಲ್ಲಿವೆ ಎಂದು ಆಮ್ಸ್ಟರ್‌ಡ್ಯಾಮ್ ಮೂಲದ ಸ್ಥಳ ತಂತ್ರಜ್ಞಾನ ತಜ್ಞ … Continued

ಹೊಸ ದಾಖಲೆ : ಷೇರು ಮಾರುಕಟ್ಟೆಯಲ್ಲಿ ಸಂಕ್ರಾಂತಿ ಸಡಗರ; ಇದೇ ಮೊದಲ ಬಾರಿಗೆ 73,000ದ ಗಡಿ ದಾಟಿದ ಸೆನ್ಸೆಕ್ಸ್

ಮುಂಬೈ: ಸಂಕ್ರಾಂತಿ ಹಬ್ಬದ ದಿನದಂದು ಷೇರುಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 73,000ಕ್ಕೆ ಏರಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ದಾಖಲೆಯ ಮಟ್ಟಕ್ಕೇರಿದ್ದು, ಸೆನ್ಸೆಕ್ಸ್ ಮೊದಲ ಬಾರಿಗೆ 73,000 ಪಾಯಿಂಟ್ಸ್‌ ಗೆ ಏರಿದೆ ಗೇರಿದೆ. ನಿಫ್ಟಿ ಕೂಡ ಐತಿಹಾಸಿಕ 22,000-ಮಾರ್ಕ್ ಅನ್ನು ದಾಟಿತು. ಸೋಮವಾರದ ವಹಿವಾಟಿನಲ್ಲಿ ಐಟಿ ಷೇರುಗಳು ಗಣನೀಯ ಏರಿಕೆ ಕಂಡಿದೆ. … Continued

ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ಶಿವಸೇನೆಗೆ ಸೇರಿದ ಮಿಲಿಂದ್ ದಿಯೋರಾ

ಮುಂಬೈ: ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಭಾನುವಾರ ಸೇರ್ಪಡೆಯಾಗಿದ್ದಾರೆ. ಮಿಲಿಂದ್‌ ಅವರಿಗೆ ಕೇಸರಿ ಧ್ವಜವನ್ನು ನೀಡಿದ ಏಕನಾಥ ಶಿಂಧೆ ಅವರು ಶಿವಸೇನೆಗೆ ಸೇರ್ಪಡೆಗೊಂಡರು. ಪದಗ್ರಹಣ ಸಮಾರಂಭದಲ್ಲಿ, ದಿಯೋರಾ ಅವರಿಗೆ ಇದು ತುಂಬಾ ಭಾವನಾತ್ಮಕ ದಿನ ಎಂದು ಹೇಳಿದರು. … Continued

ವೀಡಿಯೊ…| ಪ್ರಧಾನಿ ಮೋದಿಯಿಂದ ಅಟಲ್ ಸೇತು ಉದ್ಘಾಟನೆ : ಭಾರತದ ಅತಿ ಉದ್ದದ ಸಮುದ್ರ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು….

ಮುಂಬೈ: ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ಸೇತುವೆಗೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. 21.8 ಕಿಮೀ ಉದ್ದ ಮತ್ತು ಆರು ಲೇನ್‌ಗಳನ್ನು ಹೊಂದಿರುವ ಈ ಸೇತುವೆಯನ್ನು … Continued

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಫಾರ್ಮ್‌ ಹೌಸ್‌ ಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪನ್ವೇಲ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ನುಗ್ಗಲು ಯತ್ನಿಸಿದ ಇಬ್ಬರನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಪನ್ವೇಲ್‌ನಲ್ಲಿರುವ ನಟನ ಫಾರ್ಮ್‌ಹೌಸ್‌ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಇಬ್ಬರೂ ವ್ಯಕ್ತಿಗಳನ್ನು ತಡೆದರು. ನಂತರ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಇಬ್ಬರೂ ವ್ಯಕ್ತಿಗಳ ಚಲನವನಗಳು ಅನುಮಾನಕ್ಕೆ ಕಾರಣವಾದ ನಂತರ … Continued