ಪಹಲ್ಗಾಮ್ ದಾಳಿ: ಭೂಸೇನೆ, ನೌಕಾಪಡೆ ಮಾಹಿತಿ ಪಡೆದ ನಂತರ ವಾಯುಪಡೆ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು. ಲೋಕ ಕಲ್ಯಾಣ ಮಾರ್ಗದ 7ರಲ್ಲಿರುವ … Continued

ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ; ಸಿಂಧೂ ಜಲ ಒಪ್ಪಂದ ಸ್ಥಗಿತದ ಬಳಿಕ ಈಗ ಮತ್ತೆರಡು ಅಣೆಕಟ್ಟುಗಳ ನೀರು ಬಂದ್…!

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ನಡುವೆಯೇ ಭಾರತವು ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಈಗಾಗಲೇ ಸಿಂಧೂ ನದಿಯ ನೀರು ಸ್ಥಗಿತ ಮಾಡಿರುವ ಭಾರತ ಈಗ ಮಹತ್ವದ ಮತ್ತೊಂದು ಕ್ರಮವೊಂದರಲ್ಲಿ, ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಎರಡು ಅಣೆಕಟ್ಟುಗಳ ನೀರನ್ನು ಸ್ಥಗಿತಗೊಳಿಸಿದೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ … Continued

ವಿಮಾನದಲ್ಲಿ ಪಹಲ್ಗಾಮ್ ದಾಳಿ ಶಂಕಿತರು ಇರುವ ಶಂಕೆ: ಕೊಲಂಬೊದಲ್ಲಿ ವಿಮಾನ ಶೋಧ

ನವದೆಹಲಿ: ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಸಂಭಾವ್ಯ ಶಂಕಿತರ ಇರುವಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ, ಚೆನ್ನೈನಿಂದ ಆಗಮಿಸುತ್ತಿದ್ದ ಶ್ರೀಲಂಕಾದ ಏರ್ಲೈನ್ಸ್ ವಿಮಾನವು ಶನಿವಾರ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIA) ವಿಶೇಷ ಭದ್ರತಾ ತಪಾಸಣೆಗೆ ಒಳಗಾಯಿತು. ಚೆನ್ನೈನಿಂದ ಬಂದ ವಿಮಾನದಲ್ಲಿ ಆರು ಶಂಕಿತ ಭಯೋತ್ಪಾದಕರ ಬಗ್ಗೆ ಭಾರತದಿಂದ ಬಂದ ಎಚ್ಚರಿಕೆಯ ಮೇರೆಗೆ … Continued

ಪಹಲ್ಗಾಮ್ ಭಯೋತ್ಪಾದಕ ದಾಳಿ: ಪಾಕಿಸ್ತಾನದ ಎಲ್ಲ ಸರಕುಗಳ ಆಮದು ನಿಷೇಧಿಸಿದ ಭಾರತ

ನವದೆಹಲಿ: ಪಾಕಿಸ್ತಾನದ ವಿರುದ್ಧದ ಮತ್ತೊಂದು ಮಹತ್ವದ ಕ್ರಮದಲ್ಲಿ, ಭಾರತವು ಪಾಕಿಸ್ತಾನದ ಎಲ್ಲ ಸರಕುಗಳ ನೇರ ಅಥವಾ ಪರೋಕ್ಷ ಆಮದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ ಎಂದು ವಾಣಿಜ್ಯ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. “ಪಾಕಿಸ್ತಾನದಿಂದ ರಫ್ತು ಮಾಡುವ ಎಲ್ಲಾ ಸರಕುಗಳ ನೇರ … Continued

ವೀಡಿಯೊ..| ಅವಕಾಶ ಕೊಟ್ರೆ ದೇವರ ಮೇಲಾಣೆ ಬಾಂಬ್ ಕಟ್ಟಿಕೊಂಡು ಪಾಕ್‌ ಜತೆ ಯುದ್ಧಕ್ಕೆ ಹೋಗ್ತೇನೆ ; ಸಚಿವ ಜಮೀರ್ ಅಹ್ಮದ್ ಹೇಳಿಕೆ ವೈರಲ್

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವಂತೆಯೇ, ಕರ್ನಾಟಕದ ವಸತಿ ಮತ್ತು ಅಲ್ಪಸಂಖ್ಯಾತ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೆರೆಯ ದೇಶದ ವಿರುದ್ಧ ಯುದ್ಧ ನಡೆಸಲು ಆತ್ಮಹತ್ಯಾ ಬಾಂಬ್ ಆಗಿ ಪಾಕಿಸ್ತಾನಕ್ಕೆ ಹೋಗಲು ಸಿದ್ಧ ಎಂದು ಹೇಳಿರುವುದು ವೈರಲ್‌ ಆಗಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಸಚಿವ … Continued

1947ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ಹೋಗುವವರಿಗೆ ‘ಪಡಿತರ ಚೀಟಿ’ ಯ ಸೂಚನೆ ಈಗ ವೈರಲ್‌…!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ದೇಶವನ್ನು ತೊರೆಯುವಂತೆ ಆದೇಶಿಸಿತು. ಆದಾಗ್ಯೂ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಭಾರತದಲ್ಲಿ ಹಲವು ವರ್ಷಗಳಿಂದ ಅಥವಾ ದಶಕಗಳಿಂದಲೂ ಇರುವ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಗೊಂದಲದ ನಡುವೆಯೇ, ದೆಹಲಿ ಪಡಿತರ ಇಲಾಖೆಯಿಂದ 1947ರ ಸೂಚನೆಯು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ … Continued

ಪಹಲ್ಗಾಮ್ ದಾಳಿ | ಭಾರತದ ಸಿಖ್ ಸೈನಿಕರಿಗೆ ಪ್ರಚೋದನಾಕಾರಿ ಕರೆ ನೀಡಿದ ಭಯೋತ್ಪಾದಕ ಗುರುಪತ್ವಂತ್ ಪನ್ನುನ್

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಭುಗಿಲೆದ್ದರೆ ಪಾಕಿಸ್ತಾನದ ವಿರುದ್ಧ ಹೋರಾಡಬೇಡಿ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತೀಯ ಸೇನೆಯಲ್ಲಿರುವ ಸಿಖ್ ಸೈನಿಕರಿಗೆ ಹೇಳಿದ್ದಾನೆ. ಪಾಕಿಸ್ತಾನ ಸಿಖ್ಖರಿಗೆ ಮತ್ತು ಖಲಿಸ್ತಾನಕ್ಕೆ “ಸ್ನೇಹಪರ” ಎಂದು ಹೇಳಿದ್ದಾನೆ. ಮತ್ತೊಂದು ಪ್ರಚೋದನಕಾರಿ ವೀಡಿಯೊದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಅದು ಭಾರತ … Continued

ಪಹಲ್ಗಾಮ್ ದಾಳಿಗೆ ʼಭಾರತʼದ ಜಲ ʼಅಸ್ತ್ರʼಕ್ಕೆ ಪಾಕ್‌ ತತ್ತರ ; ಸಿಂಧೂ ಜಲ ಒಪ್ಪಂದ ರದ್ದಾದ ನಂತರ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದ ಬತ್ತಿದ ʼಪಾಕಿಸ್ತಾನʼದ ಕಾಲುವೆಗಳು..!

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಘೋಷಿಸಲಾದ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಭಾರತ ಅಮಾನತುಗೊಳಿಸಿದ ನಂತರದ ಮೊದಲ ಪರಿಣಾಮ ಗೋಚರವಾಗಿದೆ. ಭಾರತೀಯ ಸೇನೆಯ ಮಿಲಿಟರಿ ಗುಪ್ತಚರ ಅನುಭವಿ ಕರ್ನಲ್ ವಿನಾಯಕ್ ಭಟ್ (ನಿವೃತ್ತ) ಹಂಚಿಕೊಂಡ ಉಪಗ್ರಹ ಚಿತ್ರಗಳು ಪಾಕಿಸ್ತಾನದ ಚೆನಾಬ್ ನದಿಯ ಮರಾಲಾ ಹೆಡ್‌ವರ್ಕ್ಸ್‌ನಲ್ಲಿ ನೀರಿನ ಹರಿವಿನಲ್ಲಿ ತೀವ್ರ ಕುಸಿತವಾಗಿದ್ದನ್ನು ಬಹಿರಂಗಪಡಿಸಿವೆ. ಏಪ್ರಿಲ್ 21 … Continued

ಪಹಲ್ಗಾಮ್‌ ದಾಳಿ | ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಬಂದ್

ನವದೆಹಲಿ : ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಮಂದಿ ಹತ್ಯೆಯಾದ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದೆ. ಅದಿ ಪ್ರತಿಯಾಗಿ ಪಾಕಿಸ್ತಾನವು ಕ್ರಮ ಕೈಗೊಂಡಿದೆ. ಪಾಕಿಸ್ತಾನವು ತನ್ನ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳ ಸಂಚಾರವನ್ನು ಮುಚ್ಚಿದ್ದು, ಈಗ ಭಾರತವು ಪಾಕಿಸ್ತಾನದಿಂದ ಬರುವ ಎಲ್ಲ ವಿಮಾನಗಳಿಗೆ … Continued

ಭಾರತ vs ಪಾಕಿಸ್ತಾನ | ಯಾರ ಸೇನೆ ಬಲಿಷ್ಠ : ಭೂ ಸೇನೆ-ನೌಕಾ ದಳ-ವಾಯು ದಳದಲ್ಲಿ ಯಾರ ಬಲ ಎಷ್ಟಿದೆ..?

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಗಿನ ಸಂಪರ್ಕ ಹೊಂದಿರುವ ಭಯೋತ್ಪಾದಕರು 26 ಪ್ರವಾಸಿಗರನ್ನು ಕೊಂದಿರುವುದು ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಈ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಗಿರಿಧಾಮದಲ್ಲಿ ನಡೆದ ಬರ್ಬರ ಭಯೋತ್ಪಾದಕ ದಾಳಿಯ ನಂತರ, ಮುಗ್ಧ ಪ್ರವಾಸಿಗರನ್ನು ಕೊಂದ ಅಪರಾಧಿಗಳು ಮತ್ತು ಅವರ ಬೆಂಬಲಿಗರ ವಿರುದ್ಧ ಬಲವಾದ ಪ್ರತೀಕಾರ ತೀರಿಸಿಕೊಳ್ಳುವುದಾಗಿ … Continued