ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್‌ ಎಸ್‌ಎಸ್‌ ಕಚೇರಿಗೆ ಮೋದಿ ಭೇಟಿ; ಸಂಘದ ಸಂಸ್ಥಾಪಕರಿಗೆ ಪುಷ್ಪ ನಮನ

ನಾಗ್ಪುರ : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ನಾಗ್ಪುರದ ಡಾ.ಹೆಡಗೆವಾರ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ ಮತ್ತು ಮಶಧವ ರಾವ್‌ ಗೋಳ್ವಾಲ್ಕರ್ ಅವರ ಸ್ಮಾರಕಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಆರ್‌ಎಸ್‌ಎಸ್‌ನ ಆಡಳಿತ ಕೇಂದ್ರ ಕಚೇರಿಯಾದ ರೇಶಿಂಬಾಗ್‌ನಲ್ಲಿರುವ ಸ್ಮೃತಿ ಮಂದಿರಕ್ಕೆ ಮೋದಿ ಭೇಟಿ … Continued

ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ: ಆರೆಸ್ಸೆಸ್

ಬೆಂಗಳೂರು : ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ … Continued

ಸೌರ ವಿದ್ಯುತ್‌ ಚಾಲಿತ 3 ಟವರ್‌ಗಳು, 12 ಅಂತಸ್ತಿನ ಕಟ್ಟಡ, 300 ಕೊಠಡಿಗಳು, ಆಸ್ಪತ್ರೆ, ಸಭಾಂಗಣ ; ದೆಹಲಿಯಲ್ಲಿ 150 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಿದ ಆರ್‌ ಎಸ್‌ ಎಸ್ ಕಚೇರಿ

ನವದೆಹಲಿ: 3.75 ಎಕರೆಯಲ್ಲಿ ಹರಡಿರುವ ಆರ್‌ಎಸ್‌ಎಸ್ ಕಚೇರಿಯು ಮೂರು 12 ಅಂತಸ್ತಿನ 3 ಎತ್ತರದ ಕಟ್ಟಡಗಳು, 300 ಕೊಠಡಿಗಳಿಂದ ಕೂಡಿದೆ. ದೆಹಲಿಯ ಜಾಂಡೆವಾಲನ್ ಪ್ರದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೊಸ ಕಚೇರಿಯು ಆರ್‌ಎಸ್‌ಎಸ್‌ನ ಭವಿಷ್ಯದ ಕಾರ್ಯಚಟುವಟಿಕೆಗಳ ನೀಲನಕ್ಷೆಗಳನ್ನು ರಚಿಸುವ ಶಕ್ತಿ ಕೇಂದ್ರವಾಗಲಿದೆ. ಸುಮಾರು 75,000 ಪ್ರೇರಿತ ಸ್ವಯಂಸೇವಕರು ಮತ್ತು ಕಾರ್ಯಕರ್ತರ ಸೇನೆಯಿಂದ 150 ಕೋಟಿ ರೂಪಾಯಿಗಳ … Continued

ʼಇಂಡಿಯನ್‌ ಸ್ಟೇಟ್‌ ವಿರುದ್ಧ ಹೋರಾಟʼದ ಹೇಳಿಕೆ ; ರಾಹುಲ್‌ ಗಾಂಧಿ ವಿರುದ್ಧ ಎಫ್‌ ಐಆರ್ ದಾಖಲು

ಗುವಾಹತಿ: “ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ ಮತ್ತು ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ಸರ್ಕಾರ(Indian State)ದ ವಿರುದ್ಧವೇ ಹೋರಾಡುತ್ತಿದ್ದೇವೆ” ಎಂದು ಹೇಳಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಗುವಾಹತಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೊಂಜಿತ್ ಚೇಟಿಯಾ ಎಂಬವರು ಪನ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ವಿಪಕ್ಷದ ನಾಯಕನ ಸ್ಥಾನದಲ್ಲಿರುವ … Continued

ಡಾ.ಅಂಬೇಡ್ಕರ್ 1940 ರಲ್ಲಿ ಆರ್‌ ಎಸ್‌ ಎಸ್ ʼಶಾಖೆʼಗೆ ಭೇಟಿ ನೀಡಿದ್ದರು ; ಸಂಘದ ಸಂವಹನ ವಿಭಾಗ

ನಾಗ್ಪುರ : ಭಾರತೀಯ ಸಂವಿಧಾನದ ಮುಖ್ಯ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು 85 ವರ್ಷಗಳ ಹಿಂದೆ ಮಹಾರಾಷ್ಟ್ರದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶಾಖೆಗೆ 85 ವರ್ಷಗಳ ಹಿಂದೆ ಭೇಟಿ ನೀಡಿದ್ದರು ಎಂದು ಸಂಘದ ಸಂವಹನ ವಿಭಾಗ ಗುರುವಾರ ಹೇಳಿದೆ. ಕೆಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ವನ್ನು ತಾನು ಆತ್ಮೀಯ ಭಾವನೆಯಿಂದ ನೋಡಿದ್ದೇನೆ … Continued

ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳಲು ನಿಷೇಧ ತೆರವು : ತಪ್ಪು ಸರಿಪಡಿಸಲು ಕೇಂದ್ರಕ್ಕೆ 5 ದಶಕ ಬೇಕಾಯ್ತು ಎಂದ ಮಧ್ಯಪ್ರದೇಶ ಹೈಕೋರ್ಟ್

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದನ್ನು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರಕ್ಕೆ ತಾನು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳಲುಐದು ದಶಕಗಳೇ ಬೇಕಾಯಿತು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ. ತನ್ನ ತಪ್ಪಿನ ಅರಿವಾಗಲು ಕೇಂದ್ರ ಸರ್ಕಾರಕ್ಕೆ ಸುಮಾರು ಐದು ದಶಕಗಳೇ ಬೇಕಾಯಿತು. ಆರ್‌ಎಸ್‌ಎಸ್‌ನಂತಹ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಸಂಸ್ಥೆಯನ್ನು ತಪ್ಪಾಗಿ ನಿಷೇಧಿತ ಸಂಘಟನೆಗಳ ಸಾಲಿನಲ್ಲಿರಿಸಲಾಗಿತ್ತು. ನಿರ್ಬಂಧ … Continued

ಆರ್‌ ಎಸ್‌ ಎಸ್‌ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ಇದ್ದ ನಿಷೇಧ ವಾಪಸ್ : ಕಾಂಗ್ರೆಸ್ ಖಂಡನೆ

ನವದೆಹಲಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ದಶಕಗಳ ಹಿಂದೆ ಜಾರಿಗೊಳಿಸಲಾಗಿದ್ದ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಈ ಕುರಿತು ಕಳೆದ ವಾರವೇ ಆದೇಶ ಹೊರಡಿಸಿದ್ದು, ಆರ್‍ಎಸ್‍ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಲು ಇದ್ದ ನಿಷೇಧ ಹಿಂಪಡೆಯಲಾಗಿದೆ ಎಂದು ಸರ್ಕಾರದ ಉನ್ನತ … Continued

ಕೆಲವರು ʼಸೂಪರ್‌ ಮ್ಯಾನ್‌ʼ ನಂತರ ‘ಭಗವಾನ’, ‘ವಿಶ್ವರೂಪಿ’ ಆಗಲು ಬಯಸ್ತಾರೆ ; ಮೋಹನ ಭಾಗವತ-ಇದು ಮೋದಿ ಮೇಲೆ ಪರೋಕ್ಷ ದಾಳಿ ಎಂದ ಕಾಂಗ್ರೆಸ್

ಗುಮ್ಲಾ : “ಸೂಪರ್‌ಮ್ಯಾನ್” ಆಗಲು ಗುರಿ ಹೊಂದಿದ್ದಾರೆ, ನಂತರ “ದೇವತೆ” (ದೇವರು) “ಭಗವಾನ ” ಮತ್ತು “ವಿಶ್ವರೂಪ” (ಸರ್ವವ್ಯಾಪಿ) ಆಗಲು ಸಹ ಬಯಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ ಭಾಗವತ ಹೇಳಿದ್ದಾರೆ. ಜಾರ್ಖಂಡ್‌ನ ಗುಮ್ಲಾದಲ್ಲಿ ಆರ್‌ಎಸ್‌ಎಸ್ ಸದಸ್ಯ ಅಶೋಕ ಭಗತ್ ನಡೆಸುತ್ತಿರುವ ಲಾಭರಹಿತ ಸಂಸ್ಥೆ ವಿಕಾಸ ಭಾರತಿ ಗುರುವಾರ (ಜುಲೈ 18) … Continued

‘ಬಿಜೆಪಿ ದುರಹಂಕಾರ’ ಹೇಳಿಕೆಯ ಕೋಲಾಹಲದ ನಂತರ ಯೂ-ಟರ್ನ್ ಹೊಡೆದ ಆರ್‌ ಎಸ್‌ ಎಸ್ ನಾಯಕ

ನವದೆಹಲಿ : 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆರ್‌ಎಸ್‌ಎಸ್‌ ಪ್ರಮುಖ ಇಂದ್ರೇಶಕುಮಾರ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಭಗವಾನ್‌ ರಾಮನ ಮಹಿಮೆ ಮರುಸ್ಥಾಪನೆಯ ಗುರಿಯ ಹೊಂದಿದ್ದವರು ಅಧಿಕಾರಕ್ಕೆ ಬಂದಿದ್ದಾರೆ. ಭಗವಾನ್‌ ರಾಮನನ್ನು ವಿರೋಧಿಸಿದವರು ಸೋತಿದ್ದಾರೆ ಎಂದು ಹೇಳಿದ್ದಾರೆ. . ಜೈಪುರ ಬಳಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ … Continued

ವೀಡಿಯೊ..| ದುರಹಂಕಾರಿಯಾದವರನ್ನು ಶ್ರೀರಾಮನೇ 241ಕ್ಕೆ ನಿಲ್ಲಿಸಿದ್ದಾನೆ : ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ನಾಯಕನ ವಾಗ್ದಾಳಿ

ಜೈಪುರ: ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದಿಂದ ಟೀಕೆಗೆ ಒಳಗಾಗಿದೆ, ಆರೆಸ್ಸೆಸ್ ನಾಯಕ ಇಂದ್ರೇಶಕುಮಾರ ಅವರು ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ ಇತ್ತೀಚಿನ ಕಳಪೆ ಪ್ರದರ್ಶನವನ್ನು “ದುರಹಂಕಾರ” ಎಂದು ಟೀಕಿಸಿದ್ದಾರೆ. ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶಕುಮಾರ ಅವರು, “ಶ್ರೀರಾಮನ ಭಕ್ತರು ಕ್ರಮೇಣ ದುರಹಂಕಾರಿಯಾದರು. … Continued