ನಾನು ಚಾಮುಂಡೇಶ್ವರಿ ಕ್ಷೇತದಲ್ಲಿ ಮತ್ತೆ ಸ್ಪರ್ಧಿಸುವುದಿಲ್ಲ: ಮಾಜಿ ಸಿಎಂ ಸಿದ್ಧರಾಮಯ್ಯ

ಮಂಡ್ಯ: ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ‌ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಭಾನುವಾರ ಮಂಡ್ಯದ ಮದ್ದೂರಿನಲ್ಲಿ ಮಾಧ್ಯಮದವರ ಮಾತನಾಡಿದ ಅವರು, ನನಗೆ ಈಗಾಗಲೇ ನಾಲ್ಕೈದು ಕ್ಷೇತ್ರದಿಂದ ನಿಲ್ಲಲು ಹೇಳುತ್ತಿದ್ದಾರೆ. ಆದರೆ ನಾನು ಈವರೆಗೂ ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ. ಈ ಬಗ್ಗೆ ಯೋಚನೆ ಮಾಡಿ ತೀರ್ಮಾನ ಮಾಡಲಿದ್ದೇನೆ. ಆದರೆ ಚಾಮುಂಡೇಶ್ವರಿ … Continued

ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು ಎಂಬ ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ

ಬೆಳಗಾವಿ: 2016ರಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು. ಅದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತದೆಯೆಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ಜಾರಿಗೆ ಮುಂದಾಗಲಿಲ್ಲ ಎಂದು ಬಿಜೆಪಿ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ … Continued

ಡಿಕೆಶಿಗೆ ಕಠೋರವಾಗಿಯೇ ಉತ್ತರ ಕೊಡ್ತೇನೆ, ಸಿದ್ದರಾಮಯ್ಯ ವೇಸ್ಟ್ ಬಾಡಿ: ರಮೇಶ್ ಜಾರಕಿಹೊಳಿ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದರಿಂದ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಸಾಹುಕಾರ್ ಸೋದರರು ಇದ್ದರೂ ಕೊನೆ ಕ್ಷಣದಲ್ಲಿ ಲಖನ್ ಜಾರಕಿಹೊಳಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾವಣಾ ಕಣದ ಚಿತ್ರಣ ಬದಲಾಯಿತು. ಕಾಂಗ್ರೆಸ್‌ ಹಾಗೂ ಪಕ್ಷೇತರ ಲಖನ್‌ ಜಾರಕಿಹೊಳಿ ಗೆದ್ದರು., ಆದರೆ ಗೆಲ್ಲುವ ಕುದುರೆಯಾಗಿದ್ದ ಬಿಜೆಪಿ ಸೋಲನುಭವಿಸಿತು. ಈ ಚರ್ಚೆಗಳ ನಡುವೆ ಪಕ್ಷದ ಸೋಲಿನ … Continued

ಈಗ ನಾನ ಇಲಿಯಾಗಿದ್ದೇನೆ..:ಬದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ ಚಿಮ್ಮನಕಟ್ಟಿ..!

ಬಾಗಲಕೋಟೆ: ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಸ್ವಕ್ಷೇತ್ರ ಬದಾಮಿಯಲ್ಲಿ ಪ್ರಚಾರ ನಡೆಸಿದರು. ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಯಿತು. ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಟ್ಟ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮಾತಿನಿಂದ ಇಡೀ ಸಭೆ ಗೊಂದಲಕ್ಕೀಡಾಯಿತು. ವಸಿದ್ದರಾಮಯ್ಯ ಅವರು ವರುಣಾ … Continued

ಕಾರವಾರ: ಕದ್ರಾ ನೆರೆ ಪೀಡಿತ ಪ್ರದೇಶಕ್ಕೆ ಸಿದ್ದರಾಮಯ್ಯ ಭೇಟಿ

ಕಾರವಾರ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾರವಾರ ತಾಲೂಕಿನ ಕದ್ರಾದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು. ಕದ್ರಾ ಜಲಾಶಯದಿಂದ ಸತತ ನೀರು ಬಿಟ್ಟು ಹಾನಿಯಾಗಿರುವ ಸ್ಥಳಗಳಿಗೆ ತೆರಳಿ, ಜನರ ಆಸ್ತಿ-ಪಾಸ್ತಿ, ಮನೆ ಹಾನಿಯಾಗಿರುವುದನ್ನು ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಜನರು ಕದ್ರಾ ಜಲಾಶಯದಿಂದ ಸತತವಾಗಿ ನೀರು ಬಿಟ್ಟಿರುವುದರಿಂದ ತೀವ್ರ ತೊಂದರೆ ಆಗಿದೆ. … Continued

ರಾಜ್ಯ ಸರ್ಕಾರ ತಕ್ಷಣವೇ ಸಚಿವ ಸಂಪುಟ ರಚಿಸಲಿ: ಸಿದ್ದರಾಮಯ್ಯ ಒತ್ತಾಯ

ಹುಬ್ಬಳ್ಳಿ: ರಾಜ್ಯ ಸರ್ಕಾರ ಕೂಡಲೇ ಸಚಿವ ಸಂಪುಟ ರಚಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎರಡು ತಿಂಗಳು ಕಳೆದ ನಂತರ ಸಚಿವ ಸಂಪುಟ ರಚನೆಯಾಗಿತ್ತು. ಇದೀಗ ಅದೇ ಸ್ಥಿತಿ ಮುರುಕಳಿಸದಿರಲಿ. ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಜನರಿಗೆ ಸ್ಪಂದಿಸಲು ಮಂತ್ರಿ ಮಂಡಲದ ಅವಶ್ಯಕತೆಯಿದೆ ಎಂದರು. ಕೊರೊನಾ … Continued

ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ಬಂದ್ರೂ ಕಾಂಗ್ರೆಸ್ ಸಿದ್ಧ, ಆದ್ರೆ ಅವಧಿಪೂರ್ವ ಚುನಾವಣೆ ಸಾಧ್ಯತೆ ಕಡಿಮೆ

ಬೆಂಗಳೂರು: ಯಾವುದೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಿದೆ. ಆದರೆ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸಾಧ್ಯತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಭ್ರಷ್ಟ ಮುಖ್ಯಮಂತ್ರಿಯಿಂದ ರಾಜೀನಾಮೆ ಪಡೆಯುತ್ತಿರುವುದು ಒಳ್ಳೆಯದು” ಎಂದು ಹೇಳಿದ್ದಾರೆ. ಬಿಜೆಪಿ ಆಂತರಿಕ ಬಿಕ್ಕಟ್ಟನ್ನು … Continued

ಮತ್ತೆ ನಾನು ಸಿಎಂ ಆಗಬೇಕೆನ್ನುವುದು ಶಾಸಕರ ವೈಯಕ್ತಿಕ ಅಭಿಪ್ರಾಯ: ಸಿದ್ದರಾಮಯ್ಯ

ಕೊಪ್ಪಳ: ಸಿದ್ದರಾಮಯ್ಯ ಅವರೇ ಮುಂದಿನ ಬಾರಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ಕೆಲ ಶಾಸಕರು ಹೇಳುತ್ತಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದ ಕ್ಷೇತ್ರದಲ್ಲಿ ಜನತೆಗೆ ಕಿಟ್ ವಿತರಿಸಲು  ಸೋಮವಾರ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕೆಲ ಶಾಸಕರು ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು … Continued

ಸಿಎಂ ಬಿಎಸ್‌ವೈ ಕುಳಿತ ಹಡಗು ಮುಳುಗುತ್ತಿದೆ, ಯತ್ನಾಳ ಇದಕ್ಕೆ ಸಾಕ್ಷಿ: ಸಿದ್ದರಾಮಯ್ಯ ಲೇವಡಿ

ಬೆಳಗಾವಿ: ಮುಖ್ಯಮಂತ್ರಿ ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಇದಕ್ಕೆ ಅವರದ್ದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರಕ್ಕೆ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂಬ ಯಡಿಯೂರಪ್ಪ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಕುಳಿತಿರುವ ಹಡಗೇ ಮುಳುಗುತ್ತಿದೆ. ಯತ್ನಾಳ್ ಅವರೇ ಇದಕ್ಕೆ ಸಾಕ್ಷಿಯಾಗಿದ್ದಾರೆ … Continued

ಸಿದ್ದರಾಮಯ್ಯ ಯಾರ ಕಾಲು ಹಿಡಿದು ಸಿಎಂ ಆದ್ರೂ ಎನ್ನುವುದು ಗೊತ್ತಿದೆ:ಕಟೀಲು

ಬೆಳಗಾವಿ: ರಾಜ್ಯದ ಮೂರು ಉಪ ಚುಣಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟಿಲು ಹೇಳಿದರು. ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಪಕ್ಷದ ಪೂರ್ವ ತಯಾರಿ ನಡೆದಿದೆ. ಇಂದು ಮಂಗಲಾ ಅಂಗಡಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು. ಬಿಜೆಪಿ ಸಂಸದರು ಕೇಂದ್ರ ಸರಕಾರ … Continued