ವೀಡಿಯೊ | ಸಿಕ್ಕಿಂನಲ್ಲಿ ಭಾರಿ ಭೂಕುಸಿತ; 30ಕ್ಕೂ ಹೆಚ್ಚು ಮನೆ, ಸರ್ಕಾರಿ ಕಟ್ಟಡಗಳಿಗೆ ಹಾನಿ

ನವದೆಹಲಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಿಕ್ಕಿಂನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಪಶ್ಚಿಮ ಸಿಕ್ಕಿಂನ ರಿಂಬಿ ಗ್ರಾಮದಲ್ಲಿ ಕನಿಷ್ಠ 30 ಮನೆಗಳು ಹಾಗೂ ಸರ್ಕಾರಿ ವಸತಿಗೃಹಗಳು ಹಾನಿಗೊಳಗಾಗಿವೆ. ಗುರುವಾರ ತಡರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಮಣ್ಣು, ಕಲ್ಲುಗಳು ಹಾಗೂ ಅವಶೇಷಗಳು ವಸತಿ ಪ್ರದೇಶಗಳಿಗೆ ನುಗ್ಗಿವೆ. ಗೆಯ್ಜಿಂಗ್‌ ಜಿಲ್ಲೆಯ ಯುಕ್ಸೋಮ್–ತಾಶಿಡಿಂಗ್ ಪ್ರದೇಶದಲ್ಲಿ ನಿರಂತರ ಮಳೆಯ ನಡುವೆ ಈ ಭೂಕುಸಿತ ಸಂಭವಿಸಿದೆ. … Continued